iPhone Users: ಕೇಂದ್ರ ಸರಕಾರದಿಂದ ಐಫೋನ್ ಬಳಕೆದಾರರಿಗೆ ಬಿಗ್ ವಾರ್ನಿಂಗ್!
iPhone users : ಕೊರೋನಾ(corona) ಬಂದ ನಂತರ ಕೇಳೋದೇ ಬೇಡ ಜಗತ್ತಿನಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಮೊಬೈಲ್(mobile) ಬಳಕೆ ಅತಿಯಾಗಿ ಬಿಟ್ಟಿದೆ. ಯಾವುದಕ್ಕೂ ಕಮ್ಮಿಇಲ್ಲದಂತಾಗಿದೆ. ಹಾಗೆಯೇ ನಮ್ಮ ಮೊಬೈಲ್ ಅನ್ನು ಬಳಸಿಕೊಂಡು ಆಕ್ರಮಣಕಾರಿಗಳು ನಮ್ಮ ವಿಷಯಗಳನ್ನು ತಿಳಿದುಕೊಂಡು ಹಣವನ್ನು ವಂಚಿಸುವುದು ಈಗಾಗಲೇ ತುಂಬಾ ಕಡೆ ನಡೆದಿದೆ. ಹಾಗಾಗಿ ಆ್ಯಪಲ್ ಸೆಕ್ಯುರಿಟಿ(Apple security) ಅಪ್ಡೇಟ್ ಗಳಲ್ಲಿ ಸೂಕ್ತವಾದ ಅಪ್ಡೇಟ್ ಗಳೊಂದಿಗೆ ನಿಮ್ಮ ಫೋನ್ ಬಳಸುವುದು ಉತ್ತಮ ಎನ್ನುವ ರೀತಿ ಕೇಂದ್ರ ಸರ್ಕಾರ ಮಹತ್ವದ ವಾರ್ನಿಂಗ್(warning) ಒಂದನ್ನು ನೀಡಿದೆ.
ಇದೀಗ ಆ್ಯಪಲ್ (Apple) ಕಂಪನಿ ತಮ್ಮ ಬಳಕೆದಾರರಿಗೆ (iPhone users) ನೀಡುವ ಭದ್ರತಾ ಫೀಚರ್ ಗಳು ಮತ್ತು ಬಹಳಷ್ಟು ಉತ್ತಮ ರೀತಿಯ ಬಾಳಿಕೆಯಿಂದಾಗಿ ಜಗತ್ತಿನಾದ್ಯಂತ ಜನಪ್ರಿಯರಾಗಿದ್ದಾರೆ. ಕ್ಯುಪರ್ಟಿನೊ (Cupertiino) ಆಧಾರಿತ ಟೆಕ್ ದೈತ್ಯ ಬಳಕೆದಾರರು ತಮ್ಮ ಐಫೋನ್ ಗಳಲ್ಲಿ ಹೆಚ್ಚು ಸುರಕ್ಷಿತ ಮತ್ತು ಅತ್ಯುತ್ತಮ ಆಪರೇಟಿಂಗ್ ಸಿಸ್ಟಮ್ ಹೊಂದಲು iOS ಇತ್ತೀಚಿನ ನಿರ್ಮಾಣಗಳನ್ನು ಚಲಾಯಿಸಲು ಹೊಸ ರೀತಿಯ ಅಪ್ಡೇಟ್(update) ಅನ್ನು ತರುತ್ತಿದೆ. ಆದರೆ ಇದೀಗ ಕೇಂದ್ರ ಸರ್ಕಾರ ದೊಡ್ಡ ಮಟ್ಟದ ವಾರ್ನಿಂಗ್ ಒಂದನ್ನು ಕೊಟ್ಟಿದೆ.
ಆ್ಯಪಲ್ ಐಒಎಸ್ (iOS) ನಲ್ಲಿ ಹಲವಾರು ದೋಷಗಳನ್ನು ಗುರುತಿಸಲಾಗಿದ್ದು ಭಾರತ ಸರ್ಕಾರವು ಐಫೋನ್ ಬಳಕೆ ಮಾಡುವವರಿಗೆ ಈ ವಿಷಯದ ಬಗ್ಗೆ ಎಚ್ಚರಿಕೆಯನ್ನು ನೀಡಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) ಐಒಎಸ್ನಲ್ಲಿ ದುರ್ಬಲತೆಗಳು ಇರುವುದು ತಿಳಿದು ಬಂದಿದೆ ಎಂದು ತಿಳಿಸಿದ್ದಾರೆ. ಇದು ಗುರಿಪಡಿಸಿದ ಸಮಯದಲ್ಲಿ ಆಕ್ರಮಣಕಾರರಿಗೆ ಅನಿಯಂತ್ರಿತ ಕೋಡ್ ಅನ್ನು ಕಾರ್ಯಗತಗೊಳಿಸಲು ಅನುವು ಮಾಡಿಕೊಡುತ್ತದೆ.
CERT-In ನಿಂದ ಉಲ್ಲೇಖಿಸಲಾದ ದೋಷಗಳು 16.4.1 ಕ್ಕಿಂತ ಮೊದಲು Apple iOS ಆವೃತ್ತಿಗಳ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುತ್ತವೆ. ಆದರೆ 15.7.5 ಕ್ಕಿಂತ ಹಿಂದಿನ ಬಿಲ್ಡ್ ಗಳು CERT-In ಪ್ರಕಾರ 10SurfaceAccelerator ಕಾಂಪೊನೆಂಟ್ ನಲ್ಲಿನ ಔಟ್-ಆಫ್-ಬೌಂಡ್ಸ್ ರೈಟ್ ಸಮಸ್ಯೆ ಮತ್ತು ವೆಬ್ಕಿಟ್ ಕಾಂಪೊನೆಂಟ್ ನಲ್ಲಿ ಉಚಿತ ಸಮಸ್ಯೆಯ ನಂತರ ಬಳಸಿದ ಕಾರಣ ಈ ದೋಷಗಳು Apple ಪ್ರಾಡಕ್ಟ್ ನಲ್ಲಿ ಕಾಣಿಸಿಕೊಳ್ಳುತ್ತದೆ.
ಕೆಲವೊಮ್ಮೆ ಆಕ್ರಮಣಕಾರರು ಕೆಲವೊಂದು ಅಪ್ಲಿಕೇಶನ್ (application)ಅನ್ನು ಫೋನ್ ಗಳಿಗೆ ಕಳುಹಿಸುವ ಮೂಲಕ ನಮ್ಮ ವೈಯಕ್ತಿಕ ವಿಷಯವನ್ನು ಬಳಸಿಕೊಳ್ಳಬಹುದು. ಈ ನಮ್ಮ ಮೊಬೈಲ್ ನಲ್ಲಿ ಇದ್ದ ವೈಯಕ್ತಿಕ ವಿಷಯ ತಿಳಿದ ನಂತರ ಅನಿಯಂತ್ರಿತ ಕೋಡ್(code) ಅನ್ನು ಕಾರ್ಯಗತಗೊಳಿಸಲು ಆಕ್ರಮಣಕಾರರಿಗೆ ಅವಕಾಶವಿರುತ್ತದೆ. ಆದ್ದರಿಂದ ಇಂತಹ ನಷ್ಟಗಳಿಂದ ನಾವು ತಪ್ಪಿಸಿಕೊಳ್ಳಬೇಕಾದರೆ ಮತ್ತು ವಂಚನೆಯಿಂದ ತಪ್ಪಿಸಿಕೊಳ್ಳಬೇಕಾದರೆ ಆ್ಯಪಲ್ ಸೆಕ್ಯುರಿಟಿ ಅಪ್ಡೇಟ್ (Apple security update) ಗಳಲ್ಲಿ ಸೂಕ್ತವಾದ ಅಪ್ಡೇಟ್ ಗಳೊಂದಿಗೆ ನಿಮ್ಮ ಫೋನ್ ಬಳಸುವುದು ಉತ್ತಮ ಎನ್ನುವ ರೀತಿ ಕೇಂದ್ರ ಸರ್ಕಾರ ಈ ರೀತಿಯ ಮಾಹಿತಿಯನ್ನು ನೀಡಿದೆ.
ಇದನ್ನೂ ಓದಿ : Car loan: ನೀವು ಕಾರ್ ಲೋನ್ ಮಾಡಿಸ್ತೀರಾ? ಹಾಗಾದ್ರೆ ಈ 5 ವಿಷಯಗಳು ನೆನಪಿನಲ್ಲಿ ಇರಲೇಬೇಕು