Fish : ಈ ಮೀನಿನ ಬೆಲೆ ಕೋಟಿ ರೂಪಾಯಿ! ನಾವು ನೀವು ತಿನ್ನಕ್ಕೋಗಾಲ್ಲ ಬಿಡಿ!

Bluefin Tuna fish : ತರಕಾರಿ (vegetable) ಪದಾರ್ಥ ಯಾರಿಗೆ ಇಷ್ಟ ಇರುತ್ತೆ ಹೇಳಿ. ಎಲ್ಲರೂ ಇಷ್ಟ ಪಡೋದು ಹೆಚ್ಚಾಗಿ ನಾನ್ ವೆಜ್(non veg) ಅನ್ನೇ ಅಲ್ವಾ. ಅದ್ರಲ್ಲೂ ಕೆಲವರಿಗೆ ಈ ಕೋಳಿ(chicken) ಎಲ್ಲಾ ಅಷ್ಟಕ್ಕೇ ಅಷ್ಟೇ ಇರುತ್ತೇ. ಇನ್ನೂ ಕೆಲವರಿಗೆ ತುಂಬಾನೇ ಇಷ್ಟ ಇರುತ್ತೇ. ಆದ್ರೆ ಮೀನು(fish) ಅಂದ್ರೆ ಕೇಳೋದೇ ಬೇಡ ಬಿಡಿ ಸಖತ್​ ಆಗಿ ಇಷ್ಟ ಇರುತ್ತೆ. ಜಗತ್ತಲ್ಲಿ ಶೇಕಡ 10 ರಷ್ಟು ಜನರು ಈ ಮೀನನ್ನು ಹೇಟ್​(hate) ಮಾಡ್ಬೋದು. ಇನ್ನೂ 90 ಶೇಕಡ ಜನ ಮೀನನ್ನು ಬಹಳ ಇಷ್ಟಪಡುತ್ತಾರೆ. ಹಾಗಾದರೆ ನೀವು ಮೀನು ತಿನ್ನೋವಾಗ ಯಾವತ್ತಾದರೂ ಯೋಚಿಸಿದ್ದೀರಾ ಜಗತ್ತಿನ ದೊಡ್ಡದಾದ ಮೀನು(fish) ಯಾವುದು ಇರಬಹುದು ಅಂತ. ಇಂದು ಜಗತ್ತಿನ ಅತ್ಯಂತ ದೊಡ್ಡ ಮೀನು ಯಾವುದು ಎಂಬುದರ ಬಗ್ಗೆ ತಿಳಿಸಿಕೊಡ್ತೀವಿ. ಇದರ ಬಗ್ಗೆ ಕೇಳ್ತಾ ಇದ್ರೆ ನಿಜಕ್ಕೂ ನೀವು ಶಾಕ್​(shock) ಆಗ್ತೀರ ನೋಡಿ.

ಹೌದು, ಬ್ಲೂಫಿನ್ ಟ್ಯೂನ ಮೀನುಗಳನ್ನು(bluefin tuna fish) ವಿಶ್ವದ ಅತ್ಯಂತ ದುಬಾರಿ ಮೀನು ಎಂದು ಕರೆಯಲಾಗುತ್ತದೆ. ಈ ಮೀನು ಟ್ಯೂನ ಜಾತಿಗಳಲ್ಲಿ ತುಂಬಾನೇ ದೊಡ್ಡದಾಗಿದೆ. ಹಾಗೆಯೇ ಬಾಕಿಯ ಮೀನು ಈಜುದಕ್ಕಿಂತ ಈ ಮೀನು ನೀರಿನಲ್ಲಿ ಈಜುವ ವೇಗ ಬಹಳ ವೇಗವಾಗಿರುತ್ತದೆ. ಈ ಮೀನು 3 ಮೀಟರ್ ಉದ್ದ ಮತ್ತು 250 ಕೆಜಿ ವರೆಗೆ ತೂಕ ಇರುತ್ತದೆ.

ಹಾಗೆಯೇ ಈ ಮೀನು ತನ್ನ ಆಹಾರಕ್ಕಾಗಿ ಇತರ ಸಣ್ಣ ಮೀನುಗಳನ್ನು ಬೇಟೆಯಾಡಿ ತನ್ನ ಹೊಟ್ಟೆಯನ್ನು ತುಂಬಿಸುತ್ತದೆ. ಹಾಗೆಯೇ ಈ ಮೀನು ಬೆಚ್ಚಗಿನ ರಕ್ತವನ್ನು ಹೊಂದಿದೆ. ಪ್ರೋಟೀನ್(protein) ಮತ್ತು ಒಮೆಗಾ-3 ಯಲ್ಲಿ ಸಮೃದ್ಧವಾಗಿರುವ ಈ ಮೀನನ್ನು ಹೆಚ್ಚಿನ ಜನರು ಔಷಧಿ ತಯಾರಿಸಲು ಉಪಯೋಗಿಸುತ್ತಾರೆ.ಬ್ಲೂಫಿನ್ ಟ್ಯೂನವು(bluetin tuna) ಅದರ ವೇಗ ಮತ್ತು ಸಮುದ್ರದ ಆಳಕ್ಕೆ ಧುಮುಕುವ ಸಾಮರ್ಥ್ಯ ಇದಕ್ಕೆ ಬಹಳಷ್ಟು ಇದೆ.

ಈ ಮೀನಿನ ವಯಸ್ಸು(age) ಎಷ್ಟು ಗೊತ್ತಾ ನಿಮಗೆ. ಸುಮಾರು 40 ವರ್ಷ ಬದುಕುತ್ತದೆ ಅಂತೆ ಇದು. ಬ್ಲೂಫಿನ್ ಟ್ಯೂನ ಮೀನುಗಳು ಸಮುದ್ರದ (sea)ಒಳಗೆ ಬಹಳ ದೂರದಲ್ಲಿ ಇದ್ದು ಮತ್ತು ಅಪರೂಪವಾಗಿ ಸಿಗುವ ಕಾರಣ ಈ ಮೀನನ್ನು (fish)ಬೇಟೆಯಾಡುವು ನಿಷೇಧಿಸಲಾಗಿದೆ. ಈ ಮೀನನ್ನು ಹಿಡಿದಿದ್ದಾರೆ ಎಂದು ಸಿಕ್ಕಿಬಿದ್ದರೆ ಜೈಲು ಶಿಕ್ಷೆ ಹಾಗೂ ದಂಡ ಕಟ್ಟಿಟ್ಟ ಬುತ್ತಿ. ಬ್ಲೂಫಿನ್ ಟ್ಯೂನ (bluefin tuna)ಮೀನುಗಳು ಹಾಗೆಯೇ ಎಲ್ಲೂ ನೋಡಲು ಸಿಗೋದಿಲ್ಲ. ಆದರೆ, ಹೇಳಬೇಕಂದ್ರೆ ಹಲವಾರು ಜನರು ಇದನ್ನು ಹಿಡಿಯಲು ತುದಿಗಾಲಿನಲ್ಲಿ ಕಾಯುತ್ತಾ ಇದ್ದಾರೆ.

Leave A Reply

Your email address will not be published.