Home Interesting Gujarath : ದೇವರಿಗಾಗಿ ತಲೆ ಕತ್ತರಿಸಿಕೊಂಡು ಹೋಮಕುಂಡಕ್ಕೆ ಅರ್ಪಿಸಿದ ದಂಪತಿ! ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

Gujarath : ದೇವರಿಗಾಗಿ ತಲೆ ಕತ್ತರಿಸಿಕೊಂಡು ಹೋಮಕುಂಡಕ್ಕೆ ಅರ್ಪಿಸಿದ ದಂಪತಿ! ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

Gujarath

Hindu neighbor gifts plot of land

Hindu neighbour gifts land to Muslim journalist

Gujarath  : ನಮ್ಮ ಸಂಸ್ಕೃತಿ ಪರಂಪರೆಯಲ್ಲಿ ದೈವ-ದೇವರುಗಳಿಗೆ ಆಗ್ರ ಸ್ಥಾನ. ಅವುಗಳಲ್ಲಿ ನಮಗೆಲ್ಲರಿಗೂ ಅಪಾರ ಭಕ್ತಿ, ನಂಬಿಕೆ. ಅನೇಕರು ತಮ್ಮ ಕೆಲಸ ಕಾರ್ಯಗಳು ನೆರವೇರಲಿ ಎಂದು ವಿವಿಧ ರೀತಿಯಲ್ಲಿ ಹರಕೆಗಳನ್ನು ಹೊರುತ್ತಾರೆ. ಇತ್ತೀಚಿನ ದಿನಗಳಲ್ಲಂತೂ ಕೆಲವರಿಗೆ ಭಕ್ತಿ, ಪರಾಕಾಷ್ಠೆ ಅತಿರೇಕವಾಗಿ ವಿಚಿತ್ರವಾದದಂತಹ ಹರಕೆಗಳನ್ನು ಹೇಳಿಕೊಂಡು ತೀರಿಸುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಂದೆಡೆ ಅತಿಯಾದ ದೈವ ಭಕ್ತಿ ಹೊಂದಿದ್ದ ದಂಪತಿಯೊಂದು ಸಿನಿಮೀಯ ರೀತಿಯಲ್ಲಿ ತಲೆಯನ್ನು ಕತ್ತರಿಸಿಕೊಂಡು ಅದನ್ನು ದೇವರಿಗೆ ಅರ್ಪಿಸಿದ ಭಯಾನಕ ಘಟನೆಯೊಂದು ನಡೆದಿದೆ.

ಹೌದು, ಗುಜರಾತ್‌ನ (Gujarath )ರಾಜ್‌ಕೋಟ್‌ ಜಿಲ್ಲೆಯ ವಿಂಚಿಯ್ಯಾ ಗ್ರಾಮದಲ್ಲಿ ಅಪಾರ ದೈವಭಕ್ತಿ ಹೊಂದಿದ್ದ ಮಧ್ಯವಯಸ್ಕ ಜೋಡಿಯೊಂದು ಸಿನಿಮೀಯ ರೀತಿಯಲ್ಲಿ ತಲೆಯನ್ನು ಕತ್ತರಿಸಿಕೊಂಡು ಅದನ್ನು ದೇವರಿಗೆ ಅರ್ಪಿಸುವ ನಿಟ್ಟಿನಲ್ಲಿ ಯಜ್ಞಕುಂಡಕ್ಕೆ ಹಾಕಿರುವ ಭಯಾನಕ ಘಟನೆ ಸದ್ಯ ಬೆಳಕಿಗೆ ಬಂದಿದ್ದು ಎಲ್ಲರೂ ಬೆಚ್ಚಿಬೀಳುವಂತೆ ಮಾಡಿದೆ. ಈ ದಂಪತಿಯನ್ನು ಹೇಮುಭಾಯ್‌ ಮಕ್ವಾನಾ(Hemubhai Makwana) (38) ಮತ್ತು ಹನ್ಸಾಬೆನ್‌(Hansaben) (35) ಎಂದು ಗುರುತಿಸಲಾಗಿದೆ.

ಅದೂ ಅಲ್ಲದೆ ಹೀಗೆ ತಲೆಯನ್ನು ಕತ್ತರಿಸಿಕೊಳ್ಳಲು ಸ್ವತಃ ದಂಪತಿಯೇ ಮನೆಯಲ್ಲಿ ಶಿರಚ್ಛೇದದ ಯಂತ್ರವನ್ನು ಕೂಡಾ ರೂಪಿಸಿಕೊಂಡಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. ಅಂದಹಾಗೆ ಘಟನಾ ಸ್ಥಳದಲ್ಲಿ ಮರಣ ಪತ್ರವೊಂದು ಸಿಕ್ಕಿದ್ದು, ಅದರಲ್ಲಿ ತಮ್ಮ ವೃದ್ಧ ತಂದೆ ತಾಯಿ ಮತ್ತು ಇಬ್ಬರು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಕುಟುಂಬದ ಸದಸ್ಯರನ್ನು ದಂಪತಿ ಕೋರಿದ್ದಾರೆ.

ಅಂದಹಾಗೆ ಹೇಮುಭಾಯ್‌ ಮತ್ತು ಹನ್ಸಾಬೆನ್‌ ಕಳೆದೊಂದು ವರ್ಷದಿಂದ ತಮ್ಮ ಗುಡಿಸಿಲಿನಲ್ಲೇ ಭಾರೀ ಪ್ರಮಾಣದಲ್ಲಿ ದೇವರ ಪೂಜೆ ಮಾಡುತ್ತಾ ಕಾಲ ಕಳೆಯುತ್ತಿದ್ದರು. ಈ ಪ್ರಾರ್ಥನೆಯ ಮುಂದುವರೆದ ಭಾಗವಾಗಿ ದಂಪತಿ ತಮ್ಮ ದೇಹವನ್ನು ದೇವರಿಗೆ ಅರ್ಪಿಸಿಕೊಳ್ಳಲು ನಿರ್ಧರಿಸಿದ್ದರು.

ವಿಶೇಷ ವ್ಯವಸ್ಥೆ: ತಮ್ಮ ತಲೆಯನ್ನು ಕತ್ತರಿಸಿದ ಬಳಿಕ ಅದನ್ನು ಬೆಂಕಿಯ ಮೂಲಕ ದೇವರಿಗೆ ನೈವೇದ್ಯದ ರೂಪದಲ್ಲಿ ಅರ್ಪಿಸಲು ನಿರ್ಧರಿಸಿದ್ದ ದಂಪತಿ ಅದಕ್ಕೆಂದೇ ಮೊದಲಿಗೆ ಶಿರಚ್ಛೇದ ಸ್ಥಳದ ಮುಂಭಾಗದಲ್ಲೇ ಅಗ್ನಿಜ್ವಾಲೆಯನ್ನು ಹೊತ್ತಿಸಿದ್ದರು. ಬಳಿಕ ಶಿರಚ್ಛೇದದ ಯಂತ್ರಕ್ಕೆ ಇಬ್ಬರೂ ಒಟ್ಟಿಗೆ ತಲೆ ಕೊಟ್ಟಿದ್ದಾರೆ. ನಂತರ ಯಂತ್ರದ ಹಗ್ಗವನ್ನು ಸ್ವಯಂ ಎಳೆದಾಗ ಹರಿತವಾದ ಆಯುಧ ಮೇಲಿನಿಂದ ಕೆಳಗೆ ಜಾರಿ ಒಂದೇ ಹೊಡೆತಕ್ಕೆ ಇಬ್ಬರ ತಲೆಯೂ ತುಂಡಾಗಿದೆ. ಹೀಗಾಗಿ ತುಂಡಾದ ಎರಡೂ ರುಂಡಗಳು ಒಟ್ಟಿಗೆ ಹೋಗಿ ಅಗ್ನಿಜ್ವಾಲೆಗೆ ಸಿಕ್ಕಿ ಆಹುತಿಯಾಗಿದೆ. ಶನಿವಾರ ರಾತ್ರಿ ನಡೆದ ಈ ದುರ್ಘಟನೆ ಬಗ್ಗೆ ಭಾನುವಾರ ಬೆಳಗ್ಗೆ ಕುಟುಂಬ ಸದಸ್ಯರಿಗೆ ಮಾಹಿತಿ ಸಿಕ್ಕಿದೆ.