Bagalkote: ಬಾಗಲಕೋಟೆಯಲ್ಲಿ ಭೀಕರ ಅಪಘಾತ : ತಡೆಗೋಡೆಗೆ ಬೊಲೆರೋ ಡಿಕ್ಕಿ, ಒಂದೇ ಕುಟುಂಬದ ನಾಲ್ವರ ಸಾವು, ಉಳಿದ ನಾಲ್ಕು ಮಂದಿ ಗಂಭೀರ

Share the Article

Accident in Bagalkote :ಬಾಗಲಕೋಟೆ ಜಿಲ್ಲೆಯ ಇಳಕಲ್‌ ಸಮೀಪ ರಸ್ತೆಯ ಬದಿಯಲ್ಲಿರುವ ತಡೆಗೋಡೆ ಬೊಲೆರೋ ವಾಹನ ಭೀಕರ ಅಪಘಾತಗೊಂಡು (Accident in Bagalkote) ಒಂದೇ ಕುಟುಂಬದ ಮೂವರು ಸಾವು ಸಂಭವಿಸಿದೆ. ಉಳಿದ ನಾಲ್ವರು ಗಂಭೀರ ಸ್ವರೂಪದ ಗಾಯಗೊಂಡ ಘಟನೆ ನಡೆದಿದೆ.

ಬಾಗಲಕೋಟೆಯ ವರಗೇರಿಯವರಾದ ಏಳು ಮಂದಿ ವಿಜಯಪುರದ ಪ್ರಾರ್ಥನಾ ಮಂದಿರಕ್ಕೆ ಹೋಗಿ ಬರುತ್ತಿದ್ದರು. ಇಳಕಲ್‌ ಸಮೀಪ ಬರುವಾಗ ಈ ಅವಘಡ ಸಂಭವಿಸಿದೆ.

ಆಗ ಚಾಲಕನ ನಿಯಂತ್ರಣ ತಪ್ಪಿದ ಬೊಲೆರೋ ರಸ್ತೆ ಬಿಟ್ಟು ಹೊರಕ್ಕೆ ಚಲಿಸಿದೆ. ಅಲ್ಲಿಂದ ರಸ್ತೆಯ ಬದಿಯಲ್ಲಿರುವ ತಡೆಗೋಡೆಗೆ ಬೊಲೆರೋ ವಾಹನವು ಬಲವಾಗಿ ಡಿಕ್ಕಿ ಹೊಡೆದಿದೆ.

ಈ ಅಪಘಾತದಲ್ಲಿ ಒಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದರೆ,n ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮತ್ತಿಬ್ಬರು ಸಾವನ್ನಪ್ಪಿದ್ದಾರೆ. ತಾವರಗೇರಿಯ ಶಾಮಿದಸಾಬ್ ಕಿಡ್ದೂರ ನಾಯಕ್, ಮೌಲಾಸಾಬ್ ಕಿಡ್ದೂರ್ ನಾಯಕ್ (70) ಇಮಾಂಬಿ ಮೌಲಾಸಾಬ್ ಕಿಡ್ದೂರ್ ನಾಯಕ್(67) ಸಾವು ಮೃತಪಟ್ಟವರು ಎಂದು ಗುರುತಿಸಲಾಗಿದೆ. ಇಳಕಲ್ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Leave A Reply