Mango Peel Health Benefits : ಮಾವಿನ ಹಣ್ಣಿನ ಸಿಪ್ಪೆ ಕಸದ ಬುಟ್ಟಿಗೆ ಹಾಕ್ತೀರಾ? ಹಾಗಾದರೆ ಈ ಸುದ್ದಿ ನಿಮಗಾಗಿ!

Mango peel Health benefits : ಮಾವಿನಹಣ್ಣು (mango)ಯಾರಿಗೆ ಇಷ್ಟ ಇಲ್ಲ ಹೇಳಿ. ಎಲ್ಲಾ ಹಣ್ಣುಗಳಲ್ಲಿ(fruits) ನೋಡಿದ್ರೆ ಜಾಸ್ತಿಯಾಗಿ ಮಾವಿನಹಣ್ಣನ್ನು ತುಂಬಾನೇ ಇಷ್ಟ ಪಡುತ್ತಾರೆ. ಅದರಲ್ಲೂ ಬೇಸಿಗೆ ಕಾಲದಲ್ಲಂತೂ ಕೇಳೋದೇ ಬೇಡ ಬಿಡಿ ಮಾರುಕಟ್ಟೆಯಲ್ಲಿ(market) ಮಾವಿನಹಣ್ಣಿದ್ದೇ ಹಾವಳಿ ಆಗಿಬಿಟ್ಟಿದೆ. ಪ್ರತಿಯೊಬ್ಬರೂ ಈ ಹಣ್ಣನ್ನು ತಿನ್ನಲು ಬಹಳ ಇಷ್ಟಪಡುತ್ತಾರೆ. ಆದರೆ ಕೆಲವೊಬ್ಬರು ಮಾವಿನ ಹಣ್ಣನ್ನು(mango fruits) ತಿನ್ನುವಾಗ ಅದರ ಸಿಪ್ಪೆಯನ್ನು ಬೇರ್ಪಡಿಸಿ ಅದರ ಒಳಗಿನ ಭಾಗವನ್ನು ಮಾತ್ರ ತಿನ್ನುತ್ತಾರೆ. ಹೀಗೆ ಸಿಪ್ಪೆ ತೆಗೆದು ಮಾವಿನಹಣ್ಣನ್ನು ತಿಂದರೆ (Mango peel Health benefits) ನಿಮ್ಮ ಆರೋಗ್ಯಕ್ಕೆ ಏನು ಪ್ರಯೋಜನವಿರುವುದಿಲ್ಲ. ಹಾಗಾದರೆ ಮಾವಿನ ಹಣ್ಣಿನ ಸಿಪ್ಪೆಯನ್ನು (peel)ತಿಂದರೆ ನಿಮ್ಮ ಆರೋಗ್ಯಕ್ಕೆ ಹೇಗೆ ಉಪಯುಕ್ತ ಇದೆ ಎಂಬುದನ್ನು ಇಷ್ಟರ ತನಕ ಯೋಚಿಸಿದ್ದೀರಾ?

ಹೌದು, ನೀವೂ ಕೂಡ ಮಾವಿನಹಣ್ಣು ತಿಂದ ನಂತರ ಅದರ ಸಿಪ್ಪೆಯನ್ನು ಕಸದ ಬುಟ್ಟಿಗೆ ಹಾಕುತ್ತಿದ್ದರೆ, ಈ ತಪ್ಪನ್ನು ಎಂದಿಗೂ ಇನ್ನೊಮ್ಮೆ ಮರುಕಳಿಸುವಂತೆ ಮಾಡಬೇಡಿ. ಹಾಗಾದರೆ ಮಾವಿನ ಸಿಪ್ಪೆ (mango peel) ನಮಗೆ ಎಷ್ಟರ ಮಟ್ಟಿಗೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ ಎಂಬುದರ ಬಗ್ಗೆ ತಿಳಿಯೋಣ ಬನ್ನಿ.

ಬೇಸಿಗೆ ಕಾಲದಲ್ಲಂತೂ(summer season) ಹೆಚ್ಚಿನ ತಾಪಮಾನ ಇರುವ ಕಾರಣ ಮಾವಿನ ಸಿಪ್ಪೆಯನ್ನು ತಿಂದರೆ ಉಷ್ನ ಆಗುತ್ತದೆ ಎನ್ನುವ ಕಾರಣದಿಂದ ಹೆಚ್ಚಿನ ಜನರು ಸಿಪ್ಪೆಯನ್ನು (peel)ಬಿಸಾಕುತ್ತಾರೆ. ಮತ್ತು ಕೆಲವೊಮ್ಮೆ ಸಿಹಿ ಮತ್ತು ರಸಭರಿತ ಹಣ್ಣಾದ ‘ಮಾವು’ವನ್ನು(mango) ಸೇವಿಸುವಾಗ, ಹೆಚ್ಚಿನ ಜನರು ಅದರ ಸಿಪ್ಪೆಯನ್ನು ಎಸೆಯುತ್ತಾರೆ. ಅದನ್ನು ತಿಂದರೆ ಮಾವಿನಹಣ್ಣಿನ ರುಚಿ ನಮ್ಮ ಬಾಯಿ ಅಲ್ಲಿ ಉಳಿದುಕೊಳ್ಳುದಿಲ್ಲ ಎಂದು ಕೆಲವರು ನಂಬಿರುತ್ತಾರೆ.

ಹಾಗಾದರೆ ಮಾವಿನ ಹಣ್ಣಿನ ಸಿಪ್ಪೆಯನ್ನು(mango peel) ಸೇವಿಸಬಹುದೇ ಎಂಬ ಪ್ರಶ್ನೆ ಕೆಲವರದ್ದಾಗಿರುತ್ತದೆ. ಹೌದು, ಅದನ್ನು ನೀವು ಸೇವಿಸಬಹುದು ಅದನ್ನು ತಿನ್ನುವುದರಿಂದ ನಿಮಗೆ ಯಾವುದೇ ರೀತಿಯ ಆರೋಗ್ಯಕ್ಕೆ ತೊಂದರೆಯಾಗುವುದಿಲ್ಲ. ಮಾವಿನ ಹಣ್ಣಿನ ಸಿಪ್ಪೆಯಲ್ಲಿ ಆಂಟಿ-ಆಕ್ಸಿಡೆಂಟ್ (anti accident) ಗುಣಲಕ್ಷಣಗಳು ತುಂಬಾನೇ ಇರುತ್ತವೆ, ಇದು ಕ್ಯಾನ್ಸರ್ ತೊಂದರೆಯಿಂದ ನಮ್ಮನ್ನು ರಕ್ಷಿಸುತ್ತದೆ, ಮಾವಿನ ಸಿಪ್ಪೆಯು ಶ್ವಾಸಕೋಶದ ಕ್ಯಾನ್ಸರ್, ಕರುಳಿನ ಕ್ಯಾನ್ಸರ್, ಮೆದುಳಿನ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ (cancer)ನಿಂದ ರಕ್ಷಿಸಲು ಇದು ಬಹಳಷ್ಟು ಉಪಯುಕ್ತವಾಗಿದೆ. ಮಾವಿನ ಸಿಪ್ಪೆಯು ಸಸ್ಯಗಳಲ್ಲಿ ಕಂಡುಬರುವ ಫೈಟೊನ್ಯೂಟ್ರಿಯೆಂಟ್ಸ್ ಗಳಿಂದ ಸಮೃದ್ಧವಾಗಿದೆ.

ನೀವೆಲ್ಲಾದರೂ ದಪ್ಪ ಇದ್ದು ತನ್ನ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎಂಬ ಭಾವನೆ ನಿಮ್ಮಲ್ಲಿದ್ದರೆ ಈ ಮಾವಿನ ಕಾಯಿಯ ಸಿಪ್ಪೆಯನ್ನು (peel)ತಿಂದರೆ ನೀವು ನಿಮ್ಮ ತೂಕ ಇಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದರ ಸಿಪ್ಪೆ ನಿಮ್ಮ ತೂಕವನ್ನು(kg) ಇಳಿಕೆ ಮಾಡಲು ತುಂಬಾ ಉಪಯುಕ್ತವಾಗಿದೆ. ಹಾಗೆಯೇ ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ(health) ಬಹಳ ಉಪಯುಕ್ತವಾಗಿದೆ.

 

ಇದನ್ನು ಓದಿ : Credit score : ಸೊನ್ನೆ ಕ್ರೆಡಿಟ್ ಸ್ಕೋರ್‌ನಲ್ಲಿಯೂ ನೀವು ಸಾಲವನ್ನು ಪಡೆಯಬಹುದೇ?

 

 

Leave A Reply

Your email address will not be published.