Kangana ranavat: ಉತ್ತರ ಪ್ರದೇಶದ ಸಿಎಂ ಯೋಗಿ ಅದಿತ್ಯಾನಾಥ್ ನನ್ನ ಅಣ್ಣ! ಶಾಕಿಂಗ್ ಹೇಳಿಕೆ ನೀಡಿದ ನಟಿ ಕಂಗನಾ ರಣಾವತ್!
CM Yogi-Kangana ranavat : ಉತ್ತರ ಪ್ರದೇಶದ (Uttar Pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಎನ್ ಕೌಂಟರ್ ಕಾರಣದಿಂದಾಗಿ ಸಖತ್ ಸುದ್ದಿ ಆಗುತ್ತಿದ್ದಾರೆ. ಇದರ ಬೆನ್ನಲೇ ನಟಿ ಕಂಗನಾ ರಣಾವತ್(Kangana Ranavat) ಯೋಗಿ (CM Yogi-Kangana ranavat) ಅವರನ್ನು ತಮ್ಮ ಅಣ್ಣ ಎಂದು ಕರೆದಿರುವುದು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.
ಹೌದು, ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಮಾಫಿಯಾಕ್ಕೆ ಸಂಬಂಧಿಸಿದಂತೆ ನಡೆದ ಆರೋಪಿಗಳ ಎನ್‌ಕೌಂಟರ್ ಘಟನೆ ಸಂಬಂಧ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಿಧಾನಸಭೆಯಲ್ಲಿ ಹೇಳಿದ ‘ಮಿಟ್ಟಿ ಮೇ ಮಿಲಾ ದೂಂಗಾ’ (ಮಣ್ಣು ಮುಕ್ಕಿಸುತ್ತೇನೆ) ಎಂಬ ಹೇಳಿಕೆ ಸದ್ಯ ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಟ್ರೆಂಡಿಂಗ್‌ನಲ್ಲಿದೆ. ಆದಿತ್ಯನಾಥ್ ಅವರ ಈ ಹೇಳಿಕೆ ಬೆನ್ನಲ್ಲೆ ನಟಿ ಕಂಗನಾ ರಣಾವತ್ ಪ್ರತಿಕ್ರಿಯೆ ನೀಡಿ ಮೆಚ್ಚುಗೆ ವ್ಯಕ್ತಪಡಿಸಿರುವುದಲ್ಲದೆ ಆದಿತ್ಯನಾಥ್ ಅವರನ್ನು ನನ್ನ ಅಣ್ಣ ಎಂದು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಅಂದಹಾಗೆ ಉತ್ತರ ಪ್ರದೇಶವನ್ನು ರೌಡಿಗಳಿಂದ ಮುಕ್ತಗೊಳಿಸುತ್ತೇನೆ ಎಂದು ಹೊರಟಿರುವ ಯೋಗಿ ಆದಿತ್ಯನಾಥ್ ಅವರನ್ನು ಬಾಯ್ತುಂಬಾ ಹೊಗಳಿದ್ದಾರೆ ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut). ಯೋಗಿ ಕೈಗೊಂಡಿರುವ ಈ ಕ್ರಮದ ಬಗ್ಗೆ ಮೆಚ್ಚುಗೆಯ ಮಾತುಗಳನ್ನೂ ಆಡಿರುವ ಕಂಗನಾ, ‘ಯೋಗಿ ಆದಿತ್ಯನಾಥ್ ನನ್ನ ಸಹೋದರ. ಅವರನ್ನು ನನ್ನಷ್ಟು ಪ್ರೀತಿಸುವವರೂ ಯಾರೂ ಇಲ್ಲ’ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವುದು ನಕಲಿ ಎನ್ ಕೌಂಟರ್ ಎಂದು ಪ್ರಗತಿಪರರು ವಿರೋಧಿಸುತ್ತಿದ್ದರೆ ಮತ್ತೊಂದು ಕಡೆ ಎನ್ ಕೌಂಟರ್ ಅನ್ನು ಸ್ವಾಗತಿಸಿಯೂ ಬೆಂಬಲ ಸೂಚಿಸಿದ್ದಾರೆ. ಕಂಗನಾ ರಣಾವತ್ ಈ ವಿಷಯದಲ್ಲಿ ಯೋಗಿ ಆದಿತ್ಯನಾಥ್ ಪರವಾಗಿ ಬ್ಯಾಟ್ ಬೀಸಿದ್ದಾರೆ.
ಏನಿದು ಘಟನೆ: 2005ರಲ್ಲಿ ಅಲಹಾಬಾದ್ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿ ನಾಯಕ ರಾಜು ಪಾಲ್ ಗೆದ್ದಿದ್ದರು. ಇದಾದ 1 ತಿಂಗಳಲ್ಲಿ ಅವರನ್ನು ಹತ್ಯೆ ಮಾಡಲಾಗಿತ್ತು. ಬಿಎಸ್‌ಪಿ ಶಾಸಕ ರಾಜು ಪಾಲ್(Raju pal) ಅವರ ಕೊಲೆಯ ಪ್ರತ್ಯಕ್ಷದರ್ಶಿ ಹಾಗೂ ವಕೀಲ ಉಮೇಶ್ ಪಾಲ್ ಅವರನ್ನು ಅವರ ನಿವಾಸದ ಹೊರಭಾಗದಲ್ಲಿ ಹಾಡಹಗಲೇ ಅತಿಕ್ ಅಹಮ್ಮದ್ ಗ್ಯಾಂಗ್ ಗುಂಡಿನ ದಾಳಿ ನಡೆಸಿ ಕೊಲ್ಲಲಾಗಿತ್ತು.
ಉಮೇಶ್ ಪಾಲ್(Umesh pal) ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದ ಅಸಾದ್ ಮತ್ತು ಗುಲಾಂ ತಲೆಗೆ 5 ಲಕ್ಷ ರೂ. ಬಹುಮಾನ ಘೋಷಣೆಯಾಗಿತ್ತು. ನಾಪತ್ತೆಯಾಗಿದ್ದ ಈ ಇಬ್ಬರನ್ನು ಝಾನ್ಸಿಯಲ್ಲಿ ಎನ್‌ಕೌಂಟರ್ ಮಾಡಿ ಹತ್ಯೆ ಮಾಡಲಾಗಿದೆ. ಉಮೇಶ್ ಪಾಲ್ ಹತ್ಯೆ ಬಳಿಕ ವಿವಿಧ ಜಿಲ್ಲೆಗಳಲ್ಲಿ ತಲೆಮರೆಸಿಕೊಂಡಿದ್ದ ಅಸಾದ್ ಹಾಗೂ ಆತನ ಸಹಚರ ಶೂಟರ್ ಗುಲಾಂ, ದಿಲ್ಲಿಯಿಂದ ಝಾನ್ಸಿಗೆ ತೆರಳುತ್ತಿರುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ವಿಶೇಷ ಕಾರ್ಯಪಡೆಯ ತಂಡವು ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಪೊಲೀಸರು 42 ಸುತ್ತುಗಳ ಗುಂಡು ಹಾರಿಸಿ ಅವರಿಬ್ಬರನ್ನೂ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: K S Eshwarappa: ಈಶ್ವರಪ್ಪನವರನ್ನು ಹತ್ಯೆ ನಡೆಸಲು ಜೈಲಿನಿಂದಲೇ ಸ್ಕೆಚ್ ? ವಿವರ ಬಿಚ್ಚಿಟ್ಟ ಈಶ್ವರಪ್ಪ !