Flute : ವಾಸ್ತು ಪ್ರಕಾರ ಮನೆಯಲ್ಲಿ ಕೊಳಲನ್ನು ಇಟ್ಟರೆ ಈ ಸಮಸ್ಯೆ ಕಾಡುವುದಿಲ್ಲ!

Flute: ಇವಾಗಿನ ಕಾಲದಲ್ಲಿ ಅಂತೂ ಕೇಳುವುದೇ ಬೇಡ ಗಂಡ ಹೆಂಡತಿಯ (husband and wife) ಮದ್ಯೆ ಯಾವುದಾದರೂ ಒಂದು ವಿಷಯಕ್ಕೆ ಬಿರುಕು ಮೂಡಿಯೇ ಮೂಡುತ್ತದೆ. ಈ ತರ ಭಿನ್ನಾಭಿಪ್ರಾಯಗಳು ಉಂಟಾಗಿ ಸಂಬಂಧದಲ್ಲಿ ಅಂತರವಿದ್ದರೆ ಅದಕ್ಕೂ ವೇಣು(Flute)ವಿನಿಂದ ಪರಿಹಾರವಿದೆ. ಅದೆನಂತ ನೀವೇ ಓದಿ

ಅಂತಹ ದಂಪತಿ ತಮ್ಮ ಮಲಗುವ ಕೋಣೆಯ ಚಾವಣಿಯ ಮೇಲೆ ಕೊಳಲನ್ನು ನೇತುಹಾಕಬೇಕು. ಇದರಿಂದ ಯಾವುದೇ ರೀತಿಯ ಗಂಡ ಹೆಂಡತಿಯ ನಡುವೆ ಕಲಹ ಉಂಟಾಗುವುದಿಲ್ಲ. ಗ್ರಂಥಗಳಲ್ಲಿ ಕೊಳಲನ್ನು (Flute) ನೀವು ಎಲ್ಲರೂ ಕೇಳಿರಬಹುದು ಇದು ಶ್ರೀಕೃಷ್ಣನ ಗುರುತು ಎಂದು ಹೇಳಲಾಗುತ್ತದೆ.

ಹಾಗೆಯೇ ಕೊಳಲನ್ನು ದೇವತೆಗಳಿಗೆ ಅತ್ಯಂತ ಪ್ರಿಯವಾದ ವಾದ್ಯ ಎಂದು ಗ್ರಂಥಗಳಲ್ಲಿ ತಿಳಿದು ಬರುತ್ತದೆ. ಹಾಗೆಯೇ ಹಿಂದೂ ಧರ್ಮದಲ್ಲಿ ಕೊಳಲನ್ನು ಪವಿತ್ರವೆಂದು ಪರಿಗಣಿಸಲು ಇದೇ ಕಾರಣ. ವಾಸ್ತು ಶಾಸ್ತ್ರದ ಪುಸ್ತಕಗಳಲ್ಲಿ ಕೊಳಲಿನ(flute) ಬಗ್ಗೆ ಅನೇಕ ಬೇರೆ ಬೇರೆ ರೀತಿಯ ಕ್ರಮಗಳನ್ನು ವಿವರಿಸಲಾಗಿದೆ. ಇದರಿಂದ ಮನೆಯಲ್ಲಿರುವ (house)ಪ್ರಮುಖ ದೋಷಗಳನ್ನೂ ನಿವಾರಿಸಿ ನಿಮ್ಮ ಸಮಸ್ಯೆಯನ್ನು ನೀವು ಸರಿಪಡಿಸಿಕೊಳ್ಳಬಹುದು.

ಹಿಂದೆ ಎಲ್ಲಾ ಹಿಂದೂ ಧರ್ಮದಲ್ಲಿ ಬಿದಿರಿನ ಮರವನ್ನು ಪವಿತ್ರವೆಂದು ಎಲ್ಲಾರೂ ಹೇಳುತ್ತಿದ್ದರು. ಏಕೆಂದರೆ ಬಿದಿರಿನಿಂದ ಸುಮಧುರವಾದ ಸಂಗೀತವನ್ನು ರಚಿಸುವ ಸಾಮರ್ಥ್ಯ ಇರುವುದರಿಂದ ಕೊಳಲನ್ನು ಸಹ ಒಂದು ಪವಿತ್ರವಾದ ವಸ್ತು ಎಂದು ಹೇಳುತ್ತಾರೆ. ಕೊಳಲು ಬಳಸಿದಾರೆ ನಿಮ್ಮ ಮನೆಯಲ್ಲಿ ಯಾವುದೇ ನಕಾರಾತ್ಮಕತೆಯನ್ನು (Positive vibes) ನೀವು ಸುಲಭವಾಗಿ ತೊಲಗಿಸಬಹುದಾಗಿದೆ. ಹಾಗಾದರೆ ವೇಣುವಿನ ಕೆಲವು ವಾಸ್ತು ಪರಿಹಾರಗಳ (Vastu Tips) ಬಗ್ಗೆ ತಿಳಿಯೋಣ ಬನ್ನಿ.

ಫ್ಲ್ಯೂಟ್​​ ನಿಂದ ಈ ಪರಿಹಾರಗಳನ್ನು ಕಂಡುಕೊಳ್ಳಿ:

ಮನೆಯಲ್ಲಿ ಅಥವಾ ಕೆಲಸದಲ್ಲಿ ಏನಾದರೂ ತೊಂದರೆ ಅಥವಾ ಬಗೆಹರಿಸದಂತಹ ಸಮಸ್ಯೆಗಳು ಹುಟ್ಟಿಕೊಂಡರೆ ಅಂತಹ ಸಮಯದಲ್ಲಿ ನೀವು ತನ್ನ ಮನೆ(house) ಮತ್ತು ಕಚೇರಿಯಲ್ಲಿ ತಲಾ ಒಂದು ಕೊಳಲನ್ನು ಇಡಬೇಕು. ಹೀಗೆ ಮಾಡುವುದರಿಂದ ಅವರ ವೃತ್ತಿಯಲ್ಲಿನ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ನಿಮ್ಮ ಕೆಲಸದಲ್ಲಿ (work)ಯಾವಾಗಲೂ ಅಭಿವೃದ್ಧಿಯಾಗುತ್ತದೆ.

ಹಲವು ಬಾರಿ ನೀವು ಬೇರೆ ಬೇರೆ ಪ್ರಯತ್ನ ಮಾಡಿದರೂ ವ್ಯಾಪಾರದಲ್ಲಿ ಯಶಸ್ಸನ್ನು(success) ಹಿಡಿದುಕೊಂಡು ಮುಂದೆ ಬರಲು ನಿಮ್ಮಿಂದ ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ನೀವು ನಿರಾಶಿತರಾಗಬೇಡಿ ಏಕೆಂದರೆ ಇಂತಹ ಸಮಯದಲ್ಲಿ ಕೃಷ್ಣ (Krishna)ದೇವಸ್ಥಾನದಿಂದ ತಂದ ಬಿದಿರಿನ ಕೊಳಲನ್ನು ನಿಮ್ಮ ಮನೆಯಲ್ಲಿ ಅಥವಾ ಕಚೇರಿಯಲ್ಲಿ ಇಟ್ಟರೆ ಖಂಡಿತ ಯಶಸ್ಸು ನಿಮ್ಮದಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಕ್ಷೀಣಿಸುತ್ತಿರುವ ವ್ಯಾಪಾರ ಅದರಿಂದಲೇ ವೃದ್ಧಿಸುತ್ತದೆ. ನಿಮಗೆ ಯಾವಾಗಲೂ ಒಳಿತು ತರುತ್ತದೆ.

ಗಂಡ-ಹೆಂಡತಿಯ(husband and wife) ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಿ ಸಂಬಂಧದಲ್ಲಿ ಅಂತರವಿದ್ದರೆ ಅದಕ್ಕೂ ವೇಣುವಿನಿಂದ ಪರಿಹಾರವಿದೆ. ಅಂತಹ ದಂಪತಿ ತಮ್ಮ ಮಲಗುವ ಕೋಣೆಯ ಚಾವಣಿಯ ಮೇಲೆ ಕೊಳಲನ್ನು ನೇತುಹಾಕಬೇಕು. ಹೀಗೆ ಕೊಳಲನ್ನು ತೂಗು ಹಾಕುವುದರಿಂದ ಅವರ ನಡುವಿನ ಸಂಬಂಧ ಯಾವುದೇ ರೀತಿಯ ತೊಂದರೆ(problems) ಇಲ್ಲದೆ ಅವರ ನಡುವೆ ಪ್ರೀತಿ ಹೆಚ್ಚುತ್ತದೆ.

ಹಾಗೆಯೇ ಕೊಳಲು(flute) ಇಡುವುದರ ಮುಂಚೆ ಒಮ್ಮೆ ಗಮನಿಸಿ ಕೆಲವೊಮ್ಮೆ ಮನೆಯಲ್ಲಿ ಕೊಳಲು ಇಡುವುದು ಶುಭವಲ್ಲ, ಕೊಳಲು ನುಡಿಸುವುದು ಕೂಡ ಮನೆಗೆ ಕೆಟ್ಟದು ಎಂದೂ ಪರಿಗಣಿಸಲಾಗುತ್ತದೆ. ಪ್ರತಿದಿನ ಬೆಳಿಗ್ಗೆ ಅಥವಾ ಸಂಜೆ ಸೂರ್ಯಾಸ್ತದ ಸಮಯದಲ್ಲಿ 5 ರಿಂದ 10 ನಿಮಿಷಗಳ ಕಾಲ ನೀವು ಸುಮಧುರ ಸ್ವರದಲ್ಲಿ ಕೊಳಲನ್ನು ನುಡಿಸಿದರೆ, ಮನೆಯಲ್ಲಿ ಸಮೃದ್ಧಿ ಪ್ರಾರಂಭವಾಗುತ್ತದೆ. ಆ ಮನೆಯಲ್ಲಿ ವಾಸಿಸುವ ಕುಟುಂಬ ಸದಸ್ಯರಲ್ಲಿ ಪರಸ್ಪರ ಪ್ರೀತಿ (love) ಹೆಚ್ಚುತ್ತದೆ ಮತ್ತು ಶಾಂತಿ ನೆಲೆಸುತ್ತದೆ. ನೀವು ನಿಮ್ಮ ಕುಟುಂಬದವರ ಜೊತೆಗೆ ಅನ್ಯೂನ್ಯವಾಗಿ ಜೀವನವನ್ನು(life) ಸಾಗಿಸಬಹುದು.

Leave A Reply

Your email address will not be published.