Henna For Silky Hair : ಮೆಹಂದಿಗೆ ಈ ವಸ್ತು ಬೆರೆಸಿದರೆ ಕೂದಲ ಹೊಳಪು ಇಮ್ಮಡಿ ಗ್ಯಾರಂಟಿ!

Henna For Silky Hair : ಉದ್ದವಾದ ದಷ್ಟ ಪುಷ್ಟವಾದ ಕೂದಲು ಬೇಕು ಎನ್ನುವ ಬಯಕೆ ಯಾರಿಗೆ ಇರಲ್ಲ ಹೇಳಿ. ಎಲ್ಲರಿಗೂ ಇದ್ದೇ ಇರುತ್ತೆ. ಮನುಷ್ಯರು ಸಾಮಾನ್ಯವಾಗಿ ಉದ್ದ ಕೂದಲು (long hair) ಬೇಕು ಎನ್ನುವ ಆಸೆಯನ್ನು ಇಟ್ಟುಕೊಂಡೇ ಇರುತ್ತಾರೆ. ಹಾಗೆಯೇ ಈ ಉದ್ದ ಕೂದಲು ಇದ್ದರೆ ಮನುಷ್ಯನ ಸೌಂದರ್ಯವನ್ನು (beauty) ಹೆಚ್ಚಿಸುತ್ತದೆ. ಈ ಕಾರಣಕ್ಕಾಗಿಯೇ ಉದ್ದ ಮತ್ತು ದಪ್ಪ ಕೂದಲು ಹೊಂದುವ ಆಸೆ ಪ್ರತಿಯೊಬ್ಬರದ್ದಾಗಿರುತ್ತದೆ. ಕೆಲವೊಮ್ಮೆ ಕೂದಲು ಹೋಗಲು (hair fall) ಪ್ರಾರಂಭವಾದಾಗ ನಾನಾ ರೀತಿಯಲ್ಲಿ ಕೂದಲಿನ ಸಂರಕ್ಷಣೆ ಮಾಡುತ್ತಾರೆ. ಅತಿಯಾದ ಉತ್ಪನ್ನವನ್ನು ತಲೆ ಕೂದಲಿಗೆ ಹಾಕಿದಾಗ ಬಲಿಷ್ಠವಾದ ಕೂದಲು ಹಾನಿಗೊಳಗಾಗಬಹುದು.

ಹಾಗೆಯೇ ಇನ್ನೂ ಕೆಲವರು ತನ್ನ ಕೂದಲನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾನಾ ರೀತಿಯ ಪ್ರಯತ್ನಗಳಿಗೆ ಕೈ ಹಾಕುತ್ತಾರೆ. ಅನೇಕ ರೀತಿಯ ಉತ್ಪನ್ನಗಳನ್ನು ಬಳಸುತ್ತಾರೆ. ಈ ಉತ್ಪನ್ನಗಳು ದುಬಾರಿಯಾಗಿದ್ದು, ಕೂದಲಿಗೆ ಹಾನಿಕಾರಕವಾಗಿರುತ್ತದೆ. ಇದು ಅವರಿಗೆ ತಿಳಿದಿರುವುದಿಲ್ಲ. ಆದರೆ ಕೆಲವೊಂದು ವಸ್ತುವನ್ನು ತಲೆಗೆ ಉಪಯೋಗಿಸಿದರೆ ಕೂದಲು(hair) ಬಲಿಷ್ಠವಾಗಿಯೇ ಉಳಿಯುತ್ತಾರೆ. ಅಂತಹ ವಸ್ತುಗಳಲ್ಲಿ ಮೆಹಂದಿ ಕೂಡ ಒಂದು. ಇದು ನೈಸರ್ಗಿಕವಾಗಿರುವುದರ ಜೊತೆಗೆ, ಹಲವಾರು ರೀತಿಯ ಕೂದಲಿನ ಸಮಸ್ಯೆಗಳನ್ನು ನಿವಾರಿಸುತ್ತದೆ. ಹಾಗೆಯೇ ಮೆಹಂದಿಯನ್ನು ಕೂದಲಿಗೆ ಹಾಕಿದರೆ ತುಂಬಾನೇ ಮೃದು ಆಗುತ್ತದೆ (Henna For Silky Hair). ಬಿಳಿ ಕೂದಲಿನ ಸಮಸ್ಯೆಯನ್ನು ಕೂಡಾ ಮೆಹಂದಿ ನಿವಾರಿಸುತ್ತದೆ.

ಈ ವಸ್ತುಗಳನ್ನು ಮೆಹಂದಿಗೆ ಮಿಶ್ರಣ ಮಾಡಿ ನಿಮ್ಮ ಕೂದಲಿಗೆ ಹಚ್ಚಿದರೆ ಕೂದಲು ಬಲಿಷ್ಠ ವಾಗಿರುತ್ತೆ. ಹಾಗಾದರೆ ಅ ವಸ್ತು ಆದರೂ ಯಾವುದು ನೋಡಿ :

ಬಾಳೆಹಣ್ಣು :

ದೇಹದಲ್ಲಿ ಉಷ್ಣಾಂಶ ಹೆಚ್ಚಾದಾಗ ಎಲ್ಲರೂ ಬಾಳೆಹಣ್ಣು(banana) ತಿನ್ನಲು ಇಷ್ಟಪಡುತ್ತಾರೆ. ಆದರೆ ಈ ಬಾಳೆಹಣ್ಣನ್ನು ತಿನ್ನುವ ಜೊತೆಗೆ ಬಾಳೆಹಣ್ಣಿನ ಪೇಸ್ಟ್(banana pest) ಅನ್ನು ಸಹ ಮೆಹಂದಿಯಲ್ಲಿ ಬೆರೆಸಿ ಕೂದಲಿಗೆ ಹಚ್ಚುವುದರಿಂದ ರೇಷ್ಮೆಯಂತೆ ಹೊಳೆಯುವ ಬಲಿಷ್ಠ ಕೂದಲು ನಿಮ್ಮದಾಗುತ್ತದೆ. ಹಾಗೆಯೇ ಬಾಳೆಹಣ್ಣಿನಲ್ಲಿ ತಲೆಹೊಟ್ಟು ಹೋಗಲಾಡಿಸುವ ಗುಣವಿದೆ. ತಲೆಹೊಟ್ಟು ಸಮಸ್ಯೆಯಿಂದ ಕೂದಲಿಗೆ ತೊಂದರೆಯಾಗಿದ್ದರೆ, ಬಾಳೆಹಣ್ಣನ್ನು ಮೆಹಂದಿ (Henna) ಜೊತೆ ಬೆರೆಸಿ ಪೇಸ್ಟ್ ಮಾಡಿ ಕೂದಲಿಗೆ ಹಚ್ಚಿದರೆ ಕೂದಲು ಹೋಗುವ ಸಾದ್ಯತೆ ಇರುವುದಿಲ್ಲ.

ಆಲಿವ್ ಎಣ್ಣೆ :

ಆಲಿವ್ ಎಣ್ಣೆ(olive oil) ದೇಹಕ್ಕೆ ಬಹಳಷ್ಟು ಪ್ರಯೋಜನಕಾರಿ. ಇದಕ್ಕಾಗಿ ಮೆಹಂದಿಯಲ್ಲಿ ಆಲಿವ್ ಎಣ್ಣೆಯನ್ನು ಬೆರೆಸಿ ಕೂದಲಿಗೆ ಸಂಪೂರ್ಣವಾಗಿ ಹಚ್ಚಬೇಕು. ಹೀಗೆ ಮಾಡುವುದರಿಂದ ನಿಮ್ಮ ಕೂದಲು ಮೃದುವಾಗಿ(nice) ಆದಷ್ಟು ಬೇಗ ಹೊಳೆಯುತ್ತದೆ.

ಮೊಟ್ಟೆ:

ಮೊಟ್ಟೆ (egg)ತಿನ್ನುದರಿಂದ ನೀವು ತುಂಬಾನೇ ಶಕ್ತಿಯನ್ನು ಪಡೆಯುತ್ತೀರಿ ಹಾಗೆ ಇದು ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಆದರೆ, ಮೆಹಂದಿಗೆ ಮೊಟ್ಟೆಯನ್ನು ಬೆರೆಸಿ ಹಚ್ಚುವುದರಿಂದ ಕೂದಲು ಹೊಳಪು (bright) ಪಡೆಯುವುದರ ಜೊತೆಗೆ ಸ್ಟ್ರಾಂಗ್ ಆಗುತ್ತದೆ ಅಂದರೆ ಕೂದಲು ದಷ್ಟ ಪುಷ್ಟವಾಗುತ್ತದೆ. ಆದರೆ ನೆನಪಿರಲಿ ಮೆಹಂದಿ ಜೊತೆ ಮೊಟ್ಟೆಯ ಬಿಳಿ(white) ಭಾಗವನ್ನು ಮಾತ್ರ ಕೂದಲಿಗೆ ಹಚ್ಚಬೇಕು.ಹಳದಿ ಭಾಗವನ್ನು ಹಚ್ಚಿದರೆ ಕೂದಲು ಉದುರುವ ಸಾದ್ಯತೆ ಇದೆ. ಹಾಗಾಗಿ ನಿಮ್ಮ ಕೂದಲಿನ ಬಗ್ಗೆ ನೀವೇ ಜಾಗರೂಕತೆವಹಿಸಿ.

ಇದನ್ನು ಓದಿ :Vivo X90: ಮಾರುಕಟ್ಟೆಯಲ್ಲಿ ಬೆಸ್ಟ್ ಕ್ಯಾಮೆರಾ ಸೆಟಪ್ ಜೊತೆಗೆ ಹವಾ ಸೃಷ್ಟಿ ಮಾಡಲು ಸಜ್ಜಾಗುತ್ತಿದೆ ಪ್ರೀಮಿಯಂ ವಿವೋ X90 ಫೋನ್!

Leave A Reply

Your email address will not be published.