Health Tips: ವಿಶ್ವದ ಆರೋಗ್ಯಕರ ಹಣ್ಣು ಇದು…ಇದರ ಬೀಜ ತಿನ್ನೋದು ಒಳ್ಳೆಯದಲ್ಲ!

Fruit seed: ಇತ್ತೀಚಿನ ದಿನಗಳಲ್ಲಿ ಜನರು ಹಣ್ಣು ಹಂಪಲು ತಿನ್ನುವುದನ್ನು ಬಿಟ್ಟು ಹೆಚ್ಚಾಗಿ ಜಂಕ್ ಫುಡ್ ಗಳ ಕಡೆಗೆ ತನ್ನ ಸಂಚಾರವನ್ನು ಬೆಳೆಸುತ್ತಿದ್ದಾರೆ. ಈಗೀನ ಮಕ್ಕಳ ಬಾಯಿಯಲ್ಲಿ ಕೇಳೋದೇ ಬೇಡ ಫೀಜಾ(Fiza), ಬರ್ಗರ್ (burger) ಅಂತ ಮೊದಲೇ ಲಿಸ್ಟ್ ನ ಟಾಪ್ ಅಲ್ಲಿ ಇರುತ್ತೆ. ಹಣ್ಣುಗಳು(fruits) ಆರೋಗ್ಯಕ್ಕೆ ಪ್ರಯೋಜನಕಾರಿ ಅಂತ ಗೊತ್ತಿದ್ರು ಯಾರು ಅದನ್ನು ತಿನ್ನೋದೇ ಇಲ್ಲ. ಅನಾರೋಗ್ಯದ ಸಂದರ್ಭದಲ್ಲಿ, ವೈದ್ಯರು ಹಣ್ಣುಗಳನ್ನು ತಿನ್ನಲು ಸಲಹೆ ನೀಡುತ್ತಾರೆ. ಏಕೆಂದರೆ ಜಂಕ್ ಫುಡ್(junk food) ಗಳ ಎಲ್ಲಾ ತಿಂಡಿಗಳಲ್ಲಿ ಕಲಬೆರಕೆ ಜಾಸ್ತಿ ಇರುತ್ತದೆ. ಹಣ್ಣುಗಳಲ್ಲಿ ಕಲಬೆರಕೆ ಸಾಧ್ಯತೆ ಕಡಿಮೆ ಇರುತ್ತದೆ. ಅದೇ ಕಾರಣಕ್ಕಾಗಿ ಜನರು ಹಣ್ಣಿನಿಂದ ಬೇಗನೆ ಪ್ರಯೋಜನವನ್ನು ಪಡೆಯುತ್ತಾರೆ ಮತ್ತು ದೇಹದ ಆರೋಗ್ಯವನ್ನು ಇದರಿಂದಲೂ ನಾವು ಕಾಪಾಡಿಕೊಳ್ಳಬಹುದು.

ಕೆಲವೊಂದು ಹಣ್ಣುಗಳನ್ನು ತಿಂದರೆ ಏನು ಆಗುವುದಿಲ್ಲ ಆರೋಗ್ಯಕ್ಕೆ (Health) ಒಳ್ಳೆಯದು ಎಂಬ ವಿಷಯ ಎಲ್ಲಾರಿಗೂ ತಿಳಿದೇ ಇದೆ. ಆದರೆ ಈ ಒಂದು ಹಣ್ಣನ್ನು ತಿಂದರೆ ನಿಮಿಷಗಳಲ್ಲಿ ಯಾರನ್ನಾದರೂ ಕೊಲ್ಲುತ್ತದೆ ಎಂಬ ವಿಷಯವನ್ನು ನೀವು ನಂಬುತ್ತೀರಾ? ಅಂತಹ ಮನುಷ್ಯರನ್ನೇ ಕೊಲ್ಲುವ ಹಣ್ಣಾದರು ಯಾವುದು ಎಂಬ ಪ್ರಶ್ನೆ ನಿಮ್ಮನ್ನು ಕಾಡುವುದಿಲ್ಲವೇ. ನಿಮ್ಮನ್ನು ಸಾವಿನ (death) ದವಡೆಗೆ ದೂಡಬಲ್ಲ ಅ ಹಣ್ಣು ಯಾವುದು ಎಂಬುದನ್ನು ಎಂದಾದರೂ ಯೋಚಿಸಿದ್ದೀರಾ?

ಈ ಹಣ್ಣನ್ನು ಇಡೀ ವಿಶ್ವದ ಆರೋಗ್ಯಕರ ಹಣ್ಣು ಎಂದು ಪರಿಗಣಿಸಲಾಗಿದ್ದರೂ, ಇದನ್ನು ತಿಂದರೆ ಈ ಹಣ್ಣು ನಿಮಿಷಗಳಲ್ಲಿ ನಿಮ್ಮ ಪ್ರಾಣವನ್ನು ತೆಗೆಯಬಹುದು. ಇದು ಎಷ್ಟು ಅಪಾಯಕಾರಿ ಎಂದರೆ ಒಂದು ನಿರ್ದಿಷ್ಟ ಪ್ರಮಾಣದ ಬೀಜಗಳು (Fruit seed) ಆಕಸ್ಮಿಕವಾಗಿ ದೇಹದೊಳಗೆ ಪ್ರವೇಶಿಸಿದರೆ, ನಿಮಿಷಗಳಲ್ಲಿ ಪ್ರಾಣ ಪಕ್ಷಿ ಹಾರಿ ಹೋಗಬಹುದು. ಆ ಹಣ್ಣು(fruits) ಯಾವುದು ಎಂದು ತಿಳಿಯೋಣ ಬನ್ನಿ.

ಬಗೆ ಬಗೆಯ ಹಣ್ಣಿನಲ್ಲಿ ಸೇಬು ಹಣ್ಣು(Apple) ಕೂಡ ಒಂದು ರುಚಿಕರವಾದ ಹಣ್ಣು. ಆದ್ರೆ ಇದರಲ್ಲಿರುವ ಬೀಜದೊಳಗೆ ಅಮಿಗ್ಡಾಲಿನ್ ಎಂಬ ಅಂಶವಿದೆ. ಇದು ದೇಹದೊಳಗೆ ತಲುಪುವ ಮೂಲಕ ಸಾಕಷ್ಟು ತೊಂದರೆಯಾಗಬಹುದು ಇದರಿಂದ ನಿಮಿಷಗಳಲ್ಲಿ ಸಾಯುವ ಪರಿಸ್ಥಿತಿ ಎದುರಾಗಬಹುದು. ಅಮಿಗ್ಡಾಲಿನ್ ಸೈನೈಡ್(cyanide) ಮತ್ತು ಸಕ್ಕರೆಯಿಂದ ಕೂಡಿದ ಸೈನೋಜೆನಿಕ್ ಗ್ಲೈಕೋಸೈಡ್ ಆಗಿದೆ. ಈ ಎರಡೂ ಜೀರ್ಣಕಾರಿ ಕಿಣ್ವಗಳೊಂದಿಗೆ ಕಾರ್ಯನಿರ್ವಹಿಸುವ ಮೂಲಕ ಹೈಡ್ರೋಜನ್ ಸೈನೈಡ್ (HCN) ಆಗಿ ಪರಿವರ್ತನೆಗೊಳ್ಳುತ್ತವೆ. ಬೀಜಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿದರೆ ಅಷ್ಟರ ಮಟ್ಟಿಗೆ ಏನು ತೊಂದರೆ ಆಗುವುದಿಲ್ಲ. ಆದರೆ ಎಲ್ಲಾದರೂ ನೀವು ಸೇಬು ಹಣ್ಣಿನ ಬೀಜವನ್ನು ಹೆಚ್ಚಾಗಿ ಸೇವಿಸಿದರೆ ನಿಮ್ಮ ಸಾವಿಗೆ ನೀವೇ ಗುಂಡಿ ತೋಡಿದ ಹಾಗೆ.

ಒಂದುವೇಳೆ ಪ್ರತೀದಿನ ಸೇಬು ಸೇವಿಸುವಾಗ ಬೀಜಗಳನ್ನು ತಿಂದರೆ ವಾಂತಿ(vomit), ತಲೆನೋವು(head pain) ಮತ್ತು ಹೊಟ್ಟೆನೋವಿನಂತಹ ಸಮಸ್ಯೆಗಳು ನಿಮಗೆ ಪ್ರಾರಂಭವಾಗುತ್ತವೆ. ಪರಿಸ್ಥಿತಿ ಗಂಭೀರವಾಗಿದ್ದರೆ, ಉಸಿರಾಟದ ತೊಂದರೆ(breath in problem), ಬೆವರುವುದು ಮತ್ತು ಬಿಪಿ ಕಡಿಮೆಯಾಗುವುದು ಮುಂತಾದ ಲಕ್ಷಣಗಳು ಕಂಡುಬರುತ್ತವೆ. ಹಾಗಾಗಿ ಸೇಬಿನ ಬೀಜವನ್ನು ಹೆಚ್ಚಾಗಿ ಸೇವಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ.

ಇದನ್ನೂ ಓದಿ: Rinku Singh : ಕೆಕೆಆರ್ ಗೆ ಗೆಲುವಿಗೆ ಕಾರಣಕರ್ತ ರಿಂಕುವಿನ ಹಿನ್ನೆಲೆ ಏನು? ಇಲ್ಲಿದೆ ವಿವರ!

1 Comment
  1. binance Registrera dig says

    Your article helped me a lot, is there any more related content? Thanks!

Leave A Reply

Your email address will not be published.