Xiaomi Smart Audio Glasses Launch: ಶಿಯೋಮಿಯಿಂದ ಹೊಸ ಕನ್ನಡಕ ಬಿಡುಗಡೆ! ಇದರ ಪ್ರಯೋಜನ ಕೇಳಿದರೆ ನೀವೇ ಅಚ್ಚರಿ ಪಡ್ತೀರ!
Xiaomi Smart Audio Glasses: ಇತ್ತೀಚೆಗೆ ನಾವು ಬಳಕೆಯ ಮಾಡುವ ವಸ್ತುಗಳು ಸ್ಮಾರ್ಟ್ ರೂಪ ಪಡೆದುಕೊಳ್ಳುತ್ತಿವೆ. ಸ್ಮಾರ್ಟ್ ವಾಚ್, ಸ್ಮಾರ್ಟ್ ಟಿವಿ, ಸ್ಮಾರ್ಟ್ ಫಿಟ್ನೆಸ್ ಬ್ಯಾಂಡ್, ಸ್ಮಾರ್ಟ್ ಪ್ಲಗ್, ಸ್ಮಾರ್ಟ್ ಹಿಡನ್ ಕ್ಯಾಮೆರಾಗಳು ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇವುಗಳ ಲಿಸ್ಟ್ ನಲ್ಲಿ ಸ್ಮಾರ್ಟ್ ಗ್ಲಾಸ್ (Smart Glass) ಕೂಡ ಬಳಕೆಯ ವಸ್ತುಗಳಲ್ಲಿಯು ಒಂದಾಗಿದೆ.
ಪ್ರಸ್ತುತ ನಾನಾ ರೀತಿಯ ಗ್ಲಾಸ್ ಗಳು (glasses) ಮಾರುಕಟ್ಟೆಯಲ್ಲಿ (market )ಸಿಗುತ್ತವೆ. ಟೆಕ್ನಾಲಜಿ ಯುಗದಲ್ಲಿ ಸ್ಮಾರ್ಟ್ ಗ್ಲಾಸ್‌ಗಳು ಸಾಕಷ್ಟು ಪ್ರಸಿದ್ದಿಯನ್ನು ಪಡೆದುಕೊಂಡಿವೆ. ಕೂಲಿಂಗ್ ಗ್ಲಾಸ್‌ಗಳು ಕೇವಲ ಕಣ್ಣಿಗೆ ತಂಪು ಮಾತ್ರವಲ್ಲ ಮನಸ್ಸಿಗೆ ಮುದ ನೀಡುವ ಆಡಿಯೋ ಡಿವೈಸ್‌ಗಳಾಗಿ ಕೂಡ ಕಾರ್ಯನಿರ್ವಹಿಸುತ್ತಿವೆ. ಇದೇ ಕಾರಣಕ್ಕೆ ಜನಪ್ರಿಯ ಶಿಯೋಮಿ ಕಂಪೆನಿ ಸ್ಮಾರ್ಟ್ ಆಡಿಯೋ ಗ್ಲಾಸ್‌ಗಳ ಸಾಲಿಗೆ ಶಿಯೋಮಿ ಮತ್ತೊಂದು ಸ್ಮಾರ್ಟ್ ಗ್ಲಾಸ್ ಸೇರ್ಪಡೆ ಮಾಡಿದೆ. ಸದ್ಯ ಶಿಯೋಮಿ ಹೊಸ ಮಿಜಿಯಾ ಆಡಿಯೋ ಗ್ಲಾಸ್ ಅನ್ನು ಅನಾವರಣಗೊಳಿಸಿದೆ.
ಶಿಯೋಮಿ ಮಿಜಿಯಾ ಸ್ಮಾರ್ಟ್ ಆಡಿಯೋ ಗ್ಲಾಸ್ (Xiaomi Smart Audio Glasses)ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಹೊಸ ಅವತಾರದಲ್ಲಿ ಬಂದಿರುವ ಸ್ಮಾರ್ಟ್ ಆಡಿಯೋ ಗ್ಲಾಸ್ ತನ್ನ ಮಲ್ಟಿ ಪಂಕ್ಷನ್ ಕಾರಣಕ್ಕೆ ಟೆಕ್ ವಲಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.
ಈ ಸ್ಮಾರ್ಟ್ ಆಡಿಯೋ ಗ್ಲಾಸ್ ಒಪನ್ ಸೌಂಡ್ ಫೀಲ್ಡ್, ಡಬಲ್ ಆಂಟಿ-ಲೀಕೇಜ್, ಕರೆಗಳ ಸಮಯದಲ್ಲಿ ಶಬ್ದ ಕಡಿತಗೊಳಿಸುವ ಫೀಚರ್ಸ್‌ಗಳನ್ನು ಒಳಗೊಂಡಿದೆ.
ಈ ಸ್ಮಾರ್ಟ್ ಆಡಿಯೋ ಗ್ಲಾಸ್ ತನ್ನ ಎರಡೂ ಬದಿಗಳಲ್ಲಿ ಅಲ್ಫಾ- ಲಾಂಗ್ ಟಚ್ ಅನ್ನು ಹೊಂದಿದೆ. ಇದರಿಂದಸ್ಮಾರ್ಟ್ ಗ್ಲಾಸ್ ನಿಮ್ಮ ಕಣ್ಣಿಗೆ ಅಂದವನ್ನು ನೀಡಲಿದೆ. ಇನ್ನು ಸ್ಮಾರ್ಟ್‌ವಾಚ್ ಎರಡೂ ಬದಿಗಳಲ್ಲಿ 30 ಮಿಮೀ ಉದ್ದದ ಟಚ್ ಏರಿಯಾ ಹೊಂದಿದ್ದು, ಕುರುಡು ಕಾರ್ಯಾಚರಣೆಗೆ ಅವಕಾಶ ಮಾಡಿಕೊಡಲಿದೆ.
ಇನ್ನು ಈ ಗ್ಲಾಸ್‌ಗಳು 128mm 2 ಅಲ್ವಾ – ಡೈನಾಮಿಕ್ ಬ್ಯಾಲೆನ್ಸ್ ಯೂನಿಟ್ ಆಗಿದ್ದು, SBS2.0 ಡಬಲ್-ಸಸ್ಪೆನ್ಯನ್ ಬ್ಯಾಲೆನ್ಸ್ ಸ್ಟಕ್ಟರ್ ಪಡೆದುಕೊಂಡಿವೆ. ಇದರಿಂದ ಸ್ಮಾರ್ಟ್ ಗ್ಲಾಸ್‌ನಲ್ಲಿ ನಿಮ್ಮ ಮನಸ್ಸಿಗೆ ಮುದ ನೀಡುವ ಆಡಿಯೋ ಅನುಭವಕ್ಕಾಗಿ ಸೌಂಡ್ ಸರೌಂಡ್ ಅಲ್ಗಾರಿದಮ್ ಅನ್ನು ಬಳಸಲಿವೆ. ಅಲ್ಲದೆ ಶಿಯೋಮಿ ಮಿಜಿಯಾ ಸ್ಮಾರ್ಟ್ ಆಡಿಯೋ ಡ್ಯುಯಲ್-ಮೈಕ್ರೋಫೋನ್ ಬೀಮ್ AI ಕಾಲ್ ನಾಯ್ಸ್ ಕ್ಯಾನ್ಸಲೇಶನ್ ಅನ್ನು ಹೊಂದಿದೆ. ಇದರಿಂದ ನೀವು ಕರೆ ಸ್ವೀಕರಿಸಿದಾಗ ಸುತ್ತಲಿನ ಶಬ್ದ ಬೀಳದಂತೆ ಮಾಡಲಿದೆ.
ಶಿಯೋಮಿ ಮಿಜಿಯಾ ಸ್ಮಾರ್ಟ್‌ಗ್ಲಾಸ್ ಅತ್ಯುತ್ತಮವಾದ ಬ್ಯಾಟರಿ ಬ್ಯಾಕ್ ಅಪ್ ಅನ್ನು ನೀಡಲಿದೆ. ಇದರಿಂದ ಸ್ಮಾರ್ಟ್ ಗ್ಲಾಸ್ ದಿನಪೂರ್ತಿ ಬ್ಯಾಟರಿ ಬಾಳಿಕೆಯನ್ನು ಬೆಂಬಲಿಸಲಿದೆ ಎಂದು ಹೇಳಲಾಗಿದೆ. ಇದರಲ್ಲಿ ಏಳು ಗಂಟೆಗಳ ಕಂಟಿನ್ಯೂ ಟಾಕ್, ಹತ್ತು ಗಂಟೆಗಳ ನಿರಂತರ ಸಂಗೀತ ಆಲಿಸುವಿಕೆ ಮತ್ತು 22 ಗಂಟೆಗಳ ದೈನಂದಿನ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ.
ಇದರಲ್ಲಿ ನೀಡಿರುವ ಟಚ್ ಏರಿಯಾವನ್ನು ಲಾಂಗ್ ಪ್ರೆಸ್ ಮಾಡುವ ಮೂಲಕ ವಾಯ್ಸ್ ಅಸಿಸ್ಟೆಂಟ್ ಅನ್ನು ಆನ್ ಮಾಡಬಹುದು. ಈ ಸ್ಮಾರ್ಟ್‌ಗ್ಲಾಸ್‌ನ ಮುಖ್ಯವಾದ ಅಂಶವೆಂದರೆ ಇದರಲ್ಲಿ ಹಸ್ತಚಾಲಿತ ಸ್ವಿಚಿಂಗ್ ಇಲ್ಲದೆ ಡ್ಯುಯಲ್-ಡಿವೈಸ್ ಕನೆಕಟಿವಿಟಿಯನ್ನು ಬೆಂಬಲಿಸುವುದು. ಇದರಿಂದ ಒಂದೇ ಸಮಯದಲ್ಲಿ ಸ್ಮಾರ್ಟ್ ಗ್ಲಾಸ್ ಅನ್ನು ನೀವು ಎರಡು ಬ್ಲೂಟೂತ್ ಡಿವೈಸ್‌ಗಳಿಗೆ ಕನೆಕ್ಟ್ ಮಾಡಲಿದೆ.
ಸದ್ಯ ಶೀಯೋಮಿ ಮಿಜಿಯಾ ಸ್ಮಾರ್ಟ್ ಆಡಿಯೊ ಗ್ಲಾಸ್ ಏಪ್ರಿಲ್ 12 ರಿಂದ ಏಪ್ರಿಲ್ 26 ರವರೆಗೆ ಕ್ರೌಡ್‌ಫಂಡಿಂಗ್‌ಗೆ ಲಭ್ಯವಾಗಲಿದೆ. ಇನ್ನು ಇದರ ಕ್ರೌಡ್‌ಫಂಡಿಂಗ್ ಬೆಲೆ 799 ಯುವಾನ್ (ಅಂದಾಜು 9,519ರೂ) ಆಗಿದೆ.
ಮುಖ್ಯವಾಗಿ ಇದರ ತೂಕ ಕೇವಲ 38.1g ಆಗಿದ್ದು, ಈ ಹೊಸ ಸ್ಮಾರ್ಟ್ ಆಡಿಯೋ ಗ್ಲಾಸ್ ಡಿಸೈನ್ ಹಾಗೂ ವಿನ್ಯಾಸ ಅತ್ಯಾಕರ್ಷಕವಾಗಿದ್ದು, ತುಂಬಾ ಹಗುರವಾಗಿದ್ದು ಉಪಯೋಗಿಸಲು ಸೂಕ್ತ ಕನ್ನಡಕ ಆಗಿದೆ.
ಇದನ್ನು ಓದಿ : Rain Forecast: ರೈತರಿಗೆ ಭಾರೀ ಆತಂಕದ ಸುದ್ದಿ!