BJP : 20ಕ್ಕೂ ಹೆಚ್ಚು ಹಾಲಿ ಶಾಸಕರಿಗೆ ಕೊಕ್‌ ಕೊಡಲು ಮುಂದಾದ ಬಿಜೆಪಿ – ಯಾರ್ಯಾರಿಗೆ ಟಿಕೆಟ್ ಇಲ್ಲ ಗೊತ್ತಾ?

BJP Election tickets : ಕರ್ನಾಟಕದಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಈಗಾಗಲೇ ಕಾಂಗ್ರೆಸ್‌(Congress) ಹಾಗೂ ಜೆಡಿಎಸ್‌(JDS) ಮೊದಲ ಪಟ್ಟಿ ಬಿಡುಗಡೆ ಮಾಡಿ ಚುನಾವಣೆ ತಯಾರಿಯಲ್ಲಿ ಮುಂದಿವೆ. ಬಿಜೆಪಿ(BJP) ಕೂಡ ತನ್ನ ಅಭ್ಯರ್ಥಿಗಳ ಆಯ್ಕೆಗೆ ತೀವ್ರ ಕಸರತ್ತು ನಡೆಸುತ್ತಿದ್ದು ಇಂದು ತನ್ನ ಮೊದಲ ಪಟ್ಟಿ ಪ್ರಕಟಿಸುತ್ತಿದೆ (BJP Election tickets). ಈ ವೇಳೆ ಸುಮಾರು 20 ಹಾಲಿ ಶಾಸಕರಿಗೆ ಕೋಕ್ ನೀಡಲು ಪಕ್ಷ ಮುಂದಾಗಿದೆ. ಆ ಶಾಸಕರು ಯಾರ್ಯಾರು ಗೊತ್ತಾ?

ಹೌದು, ಇಂದು ಮಧ್ಯಾಹ್ನದ ವೇಳೆಗೆ 175 ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಿದೆ. ಭಾನುವಾರ ಚುನಾವಣಾ ಸಮಿತಿ ಸಭೆ ನಡೆಸಿರುವ ವರಿಷ್ಠರು ಸಚಿವರು ಸೇರಿದಂತೆ 85ಕ್ಕೂ ಹೆಚ್ಚು ಹಾಲಿ ಶಾಸಕರ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇದರ ಎಡಿಯಲ್ಲಿ ಸರ್ವೆ ವರದಿಗಳಲ್ಲಿ ಖುಣಾತ್ಮಕ ವರದಿ ಬಂದಿರುವ ಹಿನ್ನಲೆಯಲ್ಲಿ ಅನಿವಾರ್ಯವಾಗಿ ಸುಮಾರು 20 ಹಾಲಿ ಶಾಸಕರಿಗೆ ಟಿಕೆಟ್ ತಪ್ಪಬಹುದು ಎನ್ನಲಾಗಿದೆ.

ಅಂದಹಾಗೆ ಕರ್ನಾಟಕದಲ್ಲಿ ಗುಜರಾತ್(Gujarat), ಉತ್ತರ ಪ್ರದೇಶದ(Uttar Pradesh) ಮಾದರಿಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಹಿಂದೇಟು ಹಾಕಿರುವ ಬಿಜೆಪಿ ಹೈಕಮಾಂಡ್‌ (BJP High Command) ಬಹುತೇಕ ಸಚಿವರು ಮತ್ತು ಹಾಲಿ ಶಾಸಕರಿಗೆ ಟಿಕೆಟ್ ನೀಡಲು ನಿರ್ಧರಿಸಿದೆ. ಆದರೂ ಈ ಬಾರಿ ಎರಡು ಡಜನ್‌ಗೂ ಹೆಚ್ಚು ಶಾಸಕರನ್ನು ಕೈ ಬಿಡುವ ಸಾಧ್ಯತೆ ಇದ್ದು, ಆಡಳಿತ ವಿರೋಧಿ ಅಲೆ, ಭ್ರಷ್ಟಾಚಾರ ಆರೋಪ, ಚಾರಿತ್ರ್ಯ ಕಾರಣದಿಂದ ಇಮೇಜ್ ಕಳೆದುಕೊಂಡ ನಾಯಕರಿಗೆ ಗೇಟ್ ಪಾಸ್ ನೀಡಲು ಸಭೆ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.

ಈ ಶಾಸಕರಿಗೆ ಟಿಕೆಟ್‌ ಕೈತಪ್ಪುತ್ತಾ?
ಕನಕಗಿರಿ – ಬಸವರಾಜ ದಡೇಸುಗೂರು
ಶಿವಮೊಗ್ಗ – ಕೆ ಎಸ್ ಈಶ್ವರಪ್ಪ
ಅಥಣಿ – ಮಹೇಶ್ ಕುಮಟಳ್ಳಿ
ರಾಣೆಬೆನ್ನೂರು – ಅರುಣ್ ಕುಮಾರ್ ಪೂಜಾರ್
ರಾಯಚೂರು – ಡಾ.ಶಿವರಾಜ್ ಪಾಟೀಲ್
ಪುತ್ತೂರು – ಸಂಜೀವ್ ಮಠಂದೂರು
ಚನ್ನಗಿರಿ – ಮಾಡಾಳ್ ವಿರೂಪಾಕ್ಷಪ್ಪ
ಹಾವೇರಿ – ನೆಹರೂ ಓಲೆಕಾರ್
ಮೂಡಿಗೆರೆ – ಎಂ ಪಿ ಕುಮಾರಸ್ವಾಮಿ
ಚಿತ್ರದುರ್ಗ – ಜಿ ಎಚ್ ತಿಪ್ಪಾರೆಡ್ಡಿ
ಯಾದಗಿರಿ – ವೆಂಕಟರೆಡ್ಡಿ ಮುದ್ನಾಳ

ಧಾರವಾಡ – ಅಮೃತ ದೇಸಾಯಿ
ದಾವಣಗೆರೆ ಉತ್ತರ – ಎಸ್ ಎ ರವೀಂದ್ರನಾಥ್
ಕಾಪು – ಲಾಲಾಜಿ ಮೆಂಡನ್
ಚಿಕ್ಕಪೇಟೆ – ಉದಯ್ ಗರುಡಾಚಾರ್
ಎಸ್.ಎ.ರವೀಂದ್ರನಾಥ್– ದಾವಣಗೆರೆ ಉತ್ತರ
ಉಡುಪಿ – ರಘುಪತಿ ಭಟ್
ಭಟ್ಕಳ – ಸುನೀಲ್ ನಾಯ್ಕ
ಸೊರಬ – ಕುಮಾರ್ ಬಂಗಾರಪ್ಪ
ಆಳಂದ – ಸುಭಾಷ್ ಗುತ್ತೇದಾರ್
ಹೊಸದುರ್ಗ – ಗೂಳಿಹಟ್ಟಿ ಶೇಖರ್
ಲಿಂಗಣ್ಣ– ಮಾಯಕೊಂಡ
ಅಥಣಿ – ಮಹೇಶ್ ಕುಮಟಳ್ಳಿ
ಕಾಗವಾಡ- ಶ್ರೀಮಂತ ಪಾಟೀಲ್
ಬೈಂದೂರು- ಸುಕುಮಾರ್ ಶೆಟ್ಟಿ

Leave A Reply

Your email address will not be published.