Relationship: ಹುಡುಗಿ ನಿಮ್ಮನ್ನು ಇಷ್ಟಪಡುತ್ತಿದ್ದಾಳೆ ಎಂದು ತಿಳಿದುಕೊಳ್ಳೋದು ಹೇಗೆ? ಈ ಸನ್ನೆಗಳನ್ನು ತಿಳ್ಕೊಂಡ್ರೆ ಸಾಕು!

Relationship: ಒಂದು ಮಾತೇ ಇದೆ ಮೀನಿನ ಹೆಜ್ಜೆನಾದ್ರೂ ಕಂಡುಹಿಡಿಬೋದು ಆದ್ರೆ ಹೆಣ್ಣಿನ (girl) ಮನಸ್ಸಲ್ಲೇನಿದೆ ಅಂತ ಕಂಡುಹಿಡಿಯೋದಿಕ್ಕೆ ಸಾಧ್ಯ ಇಲ್ಲ ಅಂತ. ಬಹುಶಃ ಇದು ನಿಜವೇ ಇರಬಹುದು. ಯಾಕಂದ್ರೆ ಹೆಣ್ಣಿನ ಮನಸ್ಸು ಪ್ರತೀಕ್ಷಣ ಬದಲಾಗುತ್ತಲೇ ಇರುತ್ತದೆ. ಆದರೆ, ಹೆಣ್ಣಿನ ಮನಸ್ಸಿನಲ್ಲೇನಿದೆ (Relationship) ಅನ್ನೋದನ್ನ ತಿಳ್ಕೋಳ್ಳೋದಿಕ್ಕೆ ಒಂದು ಉಪಾಯ ಇದೆ. ಏನು? ಈ ಸನ್ನೆಗಳು (signs) ಮೂಲಕ ತಿಳಿದುಕೊಳ್ಳಬಹುದು. ಇಲ್ಲಿದೆ ನೋಡಿ ಮಾಹಿತಿ.

 

ಒಬ್ಬ ಮಹಿಳೆ ಪುರುಷನನ್ನು (boy) ಇಷ್ಟಪಟ್ಟಾಗ ಆಕೆಯ ಬಾಡಿ ಲ್ಯಾಂಗ್ವೇಜ್ ಸಂಪೂರ್ಣವಾಗಿ ಬದಲಾಗುತ್ತದೆ. ಮಾತನಾಡುವ ರೀತಿ ಬದಲಾಗುತ್ತದೆ. ತನಗಿಷ್ಟವಾದ ಪುರುಷನ ಜೊತೆಗೆ ವರ್ತಿಸುವ ರೀತಿಗೂ ಇತರರೊಂದಿಗೆ ವರ್ತಿಸುವ ರೀತಿಗೂ ವ್ಯತ್ಯಾಸವಿರುತ್ತದೆ.

ಮುಖ್ಯವಾಗಿ, ಮೊದಲು ಮಹಿಳೆ ತನಗೊಬ್ಬ ಪುರುಷ ಇಷ್ಟವಾದರೆ ಆತನೊಡನೆ ಕಣ್ಣಿನ ಸಂಪರ್ಕ (eye contact) ಹೊಂದಿರುತ್ತಾಳೆ. ಅಂದ್ರೆ, ಪದೇ ಪದೇ ತನಗಿಷ್ಟವಾದ ಹುಡುಗನನ್ನು ನೋಡುತ್ತಿರುತ್ತಾಳೆ. ಈ ರೀತಿ ನಿಮಗೂ ಅನಿಸಿದ್ದರೆ ಆಕೆ ನಿಮ್ಮನ್ನು ಇಷ್ಟಪಡುತ್ತಾಳೆ ಎಂದರ್ಥ. ಕಣ್ಣಿನ ಸನ್ನೆಯೊಂದಿಗೆ ನಿಮ್ಮನ್ನು ಮಾತನಾಡಲು ಪ್ರಯತ್ನಿಸುತ್ತಿದ್ದಾರೆ ಎಂದರ್ಥ.

ಮಹಿಳೆ ತನ್ನ, ತನಗೆ ಸಂಬಂಧಿಸಿದ ಪ್ರತಿಯೊಂದು ವಿಷಯವನ್ನು ಹಂಚಿಕೊಂಡರೆ, ಮಾತನಾಡಿದರೆ ಆಕೆಯ ಜೀವನದಲ್ಲಿ ನೀವು ಎಷ್ಟು ಮುಖ್ಯ ಎಂದು ಅರ್ಥಮಾಡಿಕೊಳ್ಳಿ. ಇದರಿಂದ ಆಕೆ ನಿಮ್ಮನ್ನು ಇಷ್ಟ ಪಡುತ್ತಾಳೆ ಎಂದು ತಿಳಿದುಕೊಳ್ಳಿ.

ಮಹಿಳೆ ನಿಮಗೆ ಪದೇ ಪದೇ ಕರೆ (call) ಮಾಡಿದರೆ. ನೀವು ಎಲ್ಲಿದ್ದೀರಿ ಮತ್ತು ಏನು ಮಾಡುತ್ತಿದ್ದೀರಿ ಎಂದು ಯಾವಾಗಲೂ ತಿಳಿದುಕೊಳ್ಳಲು ಬಯಸುತ್ತಾಳೆ. ನಿಮ್ಮ ಬಗ್ಗೆ ಕಾಳಜಿ ವಹಿಸಿದರೆ ಅವಳು ನಿಮ್ಮನ್ನು ತುಂಬಾ ಇಷ್ಟಪಡುತ್ತಾಳೆ.

ನಿಮ್ಮ ದುಃಖವನ್ನು ತನ್ನ ದುಃಖವೆಂದು. ಅಥವಾ ನೀವು ಬೇಸರದಲ್ಲಿದ್ದಾಗ ಹುಡುಗಿಯು ನಿಮಗೆ ಸಂತೈಸಿದರೆ, ಕೆಟ್ಟ ಸಮಯದಲ್ಲಿ ನಿಮಗೆ ಬೆಂಬಲವನ್ನು ನೀಡಿದರೆ, ನಿಮ್ಮ ಕುಟುಂಬದ ಸಮಸ್ಯೆಗಳನ್ನು ಅವಳ ಸಮಸ್ಯೆ ಎಂದು ಪರಿಗಣಿಸಲು ಪ್ರಾರಂಭಿಸಿದರೆ, ಆಗ ನೀವು ಅವಳಿಗೆ ಸ್ನೇಹಿತರಿಗಿಂತ ಹೆಚ್ಚು ಎಂದು ನೀವು ಅರ್ಥಮಾಡಿಕೊಳ್ಳಬಹುದು.

ಇದನ್ನು ಓದಿ : Birth And Death Certificate : ಇನ್ಮುಂದೆ ಮನೆ ಬಾಗಿಲಿಗೇ ರವಾನೆಯಾಗಲಿದೆ ಜನನ-ಮರಣ ಪ್ರಮಾಣ ಪತ್ರ!

Leave A Reply

Your email address will not be published.