WhatsApp and Facebook : ವಾಟ್ಸಪ್, ಫೇಸ್ಬುಕ್ ಬಳಕೆದಾರರಿಗೆ ಗುಡ್ ನ್ಯೂಸ್ : ಇನ್ಮುಂದೆ ಫೇಸ್ಬುಕ್ ಸ್ಟೋರಿಗೂ ಅಟೋ ಅಪ್ಲೋಡ್ ಆಗಲಿದೆ ವಾಟ್ಸಪ್ ಸ್ಟೇಟಸ್

WhatsApp and Facebook users : ವಾಟ್ಸಪ್ ಹೊಸ-ಹೊಸ ಫ್ಯೂಚರ್ ಗಳನ್ನು ಜಾರಿಗೊಳಿಸುತ್ತಲೇ ಬಂದಿದ್ದು, ಈ ಮೂಲಕ ಬಳಕೆದಾರರನ್ನು (WhatsApp and Facebook users )ತನ್ನತ್ತ ಸೆಳೆಯುತ್ತಲೇ ಬಂದಿದೆ. ಇದೀಗ ಮತ್ತೆ ಹೊಸ ಫೀಚರ್ ನೊಂದಿಗೆ ವಾಟ್ಸಪ್ ಲಗ್ಗೆ ಇಟ್ಟಿದ್ದು, ವಾಟ್ಸಪ್ ಬಳಕೆದಾರರ ಜೊತೆಗೆ ಫೇಸ್ಬುಕ್ ಬಳಕೆದಾರರಿಗೂ ಸಿಹಿ ಸುದ್ದಿ ನೀಡಿದೆ.

ಈ ಬಾರಿ ವಾಟ್ಸಪ್, ಇತರ ಸಾಮಾಜಿಕ ಜಾಲತಾಣ ಬಳಕೆದಾರರಿಗೂ ಸಹಕಾರಿಯಾಗುವಂತೆ ಹೊಸ ಅಪ್ಡೇಟ್ ಮಾಡಿದೆ. ಹೌದು. ವಾಟ್ಸ್ಆಪ್ ಕೆಲವೇ ದಿನಗಳಲ್ಲಿ ತನ್ನ ಸ್ಟೇಟಸ್ ವಿಭಾಗದಲ್ಲಿ ಬದಲಾವಣೆ ಮಾಡಲಿದ್ದು, ಇನ್ಮುಂದೆ ವಾಟ್ಸ್ಆಪ್ನಲ್ಲಿ ಹಾಕೋ ಸ್ಟೇಟಸ್ ಫೇಸ್ಬುಕ್ ಸ್ಟೇಟಸ್ನಲ್ಲೂ ಕಾಣಿಸಲಿದೆ.
ಈ ಹಿಂದೆ ವಾಟ್ಸ್ಆಪ್ನಲ್ಲಿ ಸ್ಟೇಟಸ್ ಹಂಚಿಕೊಂಡರೆ ಅದನ್ನು ಎಫ್ಬಿಗೂ ಶೇರ್ ಮಾಡಬೇಕಿತ್ತು. ಆದರೀಗ ಹೊಸ ಫೀಚರ್ ಪ್ರಕಾರ ಅಟೋಮೆಟ್ ಆಗಿ ವಾಟ್ಸ್ಆಯಪ್ನಲ್ಲಿ ಶೇರ್ ಮಾಡಿದ ಸ್ಟೇಟಸ್ ಫೇಸ್ಬುಕ್ ಸ್ಟೇಟಸ್ಗೂ ಅಪ್ಲೋಡ್ ಆಗಲಿದೆ. ಈ ಅಪ್ಡೇಟ್ ಅಗತ್ಯವಿದ್ದಾಗ ಮಾತ್ರ ಬಳಸಬಹುದಾಗಿದ್ದು, ಆನ್-ಆಫ್ ಮಾಡುವ ಮೂಲಕ ಇದನ್ನು ಬಳಸಬಹುದು.
ವಾಟ್ಸ್ಆಯಪ್ ಕುರಿತ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳುವ Wabetainfo ಈ ಬಗ್ಗೆ ವರದಿ ಮಾಡಿದ್ದು, ಇನ್ನು ಸದ್ಯದಲ್ಲೇ ಬಳಕೆದಾರರು ವಾಟ್ಸ್ಆಯಪ್ನಲ್ಲಿ ತಮಗೆ ಬೇಕಾದ ಚಾಟ್ ಅನ್ನು ಲಾಕ್ ಮಾಡಬಹುದು ಅಥವಾ ಹೈಡ್ ಮಾಡಬಹುದು. ವಾಟ್ಸ್ಆಯಪ್ನಲ್ಲಿ ಚಾಟ್ ಅನ್ನು ಲಾಕ್ ಮಾಡಿದಾಗ ಬಳಕೆದಾರರು ತಮ್ಮ ಫಿಂಗರ್‌ಪ್ರಿಂಟ್ ಅಥವಾ ಪಾಸ್‌ಕೋಡ್ ಅನ್ನು ಬಳಸಿಕೊಂಡು ಮಾತ್ರ ತೆರೆಯಲು ಸಾಧ್ಯವಾಗುತ್ತಂತೆ.
ಈ ಆಯ್ಕೆ ಚಾಟ್ನ ಕಾಂಟೆಕ್ಟ್ ಅಥವಾ ಗ್ರೂಪ್ನ ಇನ್ಫೋದಲ್ಲಿ ಇರುತ್ತದೆ. ಇದನ್ನು ಆಯಕ್ಟಿವ್ ಮಾಡಿದ ತಕ್ಷಣ ಆ ಚಾಟ್ ಹೈಡ್ ಆಗಿ ಹೊಸ ಸೆಕ್ಷನ್ಗೆ ಹೋಗುತ್ತದೆ. ಸದ್ಯಕ್ಕೆ ಈ ಫೀಚರ್ಸ್ ಅಭಿವೃದ್ಧಿ ಹಂತದಲ್ಲಿದೆ. ಆಂಡ್ರಾಯ್ಡ್ ಬೀಟಾ ಆವೃತ್ತಿಯ 2.23.8.2 ಅಪ್ಡೇಟ್ನಲ್ಲಿ ಪರೀಕ್ಷಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮೊದಲಿಗೆ ಆಂಡ್ರಾಯ್ಡ್ ಬಳಕೆದಾರರು ಈ ಫೀಚರ್ಸ್ ಅನ್ನು ಬಳಕೆ ಮಾಡಬಹುದು ಎಂದು ತಿಳಿದುಬಂದಿದೆ. ಈ ಮೂಲಕ ವಾಟ್ಸಪ್ ಬಳಕೆದಾರರಿಗೆ ಮತ್ತಷ್ಟು ಖುಷಿ ವಿಚಾರ ದೊರಕಿದೆ.
ಇದನ್ನು ಓದಿ : Sleeping Tips : ನಿದ್ರೆ ಮಾತ್ರೆಗಳನ್ನು ಬಳಸಿದರೂ ನಿದ್ರೆ ಬರುವುದಿಲ್ಲಈ ತಂತ್ರವನ್ನು ಅನುಸರಿಸಿ