Beloved husband of 6 wife’s : 6 ಹೆಂಡಿರ ಈ ಮುದ್ದಿನ ಗಂಡನಿಗೆ ಯಾರನ್ನು ಮೊದಲು ಬಸುರು ಮಾಡಬೇಕೆಂಬುದೇ ಚಿಂತೆ! ಇದಕ್ಕಾಗಿ ಆತ ಮಾಡಿದ ಮಾಸ್ಟರ್ ಪ್ಲಾನ್ ಏನು ಗೊತ್ತಾ?

Share the Article

Husband and 6 wife : ಒಬ್ಬ ವ್ಯಕ್ತಿ ಒಬ್ಬಳನ್ನು ಮದುವೆಯಾಗುವುದು ಸಾಮಾನ್ಯ. ಇದರೊಂದಿಗೆ ಒಬ್ಬಾತ ನಾಲ್ಕೈದು ಮಹಿಳೆಯರನ್ನು ಮದುವೆಯಾಗುವುದನ್ನೂ ನಾವು ಹಲವು ಬಾರಿ ಕೇಳಿದ್ದೇವೆ, ನೋಡಿದ್ದೇವೆ. ಹೀಗೆ ಹಲವರನ್ನು ಮದುವೆಯಾದ ವ್ಯಕ್ತಿ ಅವರೆಲ್ಲರನ್ನೂ ನಿಭಾಯಿಸಲು, ಅವರ ಆಸೆ, ಆಕಾಂಕ್ಷೆಗಳನ್ನು ಪೂರೈಸಲು ಒದ್ದಾಡಬೇಕಾಗುತ್ತದೆ. ಅಂತೆಯೇ ಇಲ್ಲೊಬ್ಬ ಆಸಾಮಿ 9 ಹೆಂಡತಿಯರನ್ನು ಹೊಂದಿದ್ದು,(Husband and 6 wife) ಪ್ರತಿಯೊಬ್ಬರೊಂದಿಗೂ ಮಗುವನ್ನು ಹೊಂದಲು ಯೋಜಿಸುತ್ತಿದ್ದಾರೆ. ಆದರೆ ಅವರು ಯಾರು ಮೊದಲು ತಮ್ಮಿಂದ ಗರ್ಭಿಣಿ ಆಗಬೇಕೆಂದು ಚಿಂತಾಮಗ್ನನಾಗಿದ್ದಾರೆ. ಇದು ಸಾಧ್ಯವಾಗದೇ ಅವರೊಂದು ಮಾಸ್ಟರ್​​ ಪ್ಲ್ಯಾನ್​​ ಮಾಡಿದ್ದಾರೆ.

ಹೌದು, ಬ್ರೆಜಿಲ್‌ನ(Brazil) ಸಾವೊ ಪಾಲೊ(Savo Palo) ಮೂಲದ 37 ವರ್ಷದ ಆರ್ಥರ್ ಉರ್ಸೊ(Aarthar Usro) ಒಟ್ಟು ಒಂಬತ್ತು ಪತ್ನಿಯರನ್ನು ಹೊಂದಿದ್ದಾನೆ. ಈ ಪೈಕಿ ಮೂವರಿಗೆ ವಿಚ್ಛೇದನ ನೀಡಿದ್ದಾನೆ. ಅವರು ಈಗ ಲುವಾನಾ ಕಝಾಕಿ, 27, ಎಮೆಲ್ಲಿ ಸೌಜಾ, 21, ವಲ್ಕ್ವಿರಿಯಾ ಸ್ಯಾಂಟೋಸ್, 24, ಒಲಿಂಡಾ ಮರಿಯಾ, 51, ಡಾಮಿಯಾನಾ, 23, ಮತ್ತು ಅಮಂಡಾ ಅಲ್ಬುಕರ್ಕ್28 ಜೊತೆಗೆ ಸಂಸಾರ ನಡೆಸುತ್ತಿದ್ದಾರೆ. ಯಾರೊಂದಿಗೆ ಮೊದಲ ಮಗು ಮಾಡಿಕೊಳ್ಳುವುದು ಎಂಬುದೇ ಆರ್ಥರ್ ಉರ್ಸೊ ಚಿಂತೆಯಾಗಿದೆ.

ಒಟ್ಟು ಒಂಭತ್ತು ಮಂದಿಯನ್ನು ಮದುವೆಯಾದ ಆರ್ಥರ್ ಗೆ ಯಾರೊಂದಿಗೆ ಮೊದಲ ಮಗು ಮಾಡಿಕೊಳ್ಳುವುದು ಎಂಬುದೇ ಚಿಂತೆಯಾಗಿದೆ. ಹೀಗಾಗಿ ಅಂತಿಮವಾಗಿ ಅವರು ಒಂದು ಮಾಸ್ಟರ್ ಪ್ಲಾನ್ ಮಾಡಿ ಯಾರಿಗೂ ಮೋಸವಾಗದಂತೆ, ಬೇಸರವಾಗದಂತೆ ಮಾಡಿದ್ದಾರೆ. ಅದೇನೆಂದರೆ ಬಾಡಿಗೆ ತಾಯ್ತನದ ಯೋಜನೆ ಮೂಲಕ ಎಲ್ಲರೊಂದಿಗೂ ಮೊದಲ ಮಗು ಪಡೆಯುವ ಸ್ಕೀಂ ರೂಪಿಸಿದ್ದಾನಂತೆ. ಈ ಮೂಲಕವಾಗಿ ಆರ್ಥರ್, ಸೋಶಿಯಲ್​​ ಮೀಡಿಯಾದಲ್ಲಿ ಸುದ್ದಿಯಲ್ಲಿದ್ದಾನೆ.

ಈ ಕುರಿತಂತೆ ಮಾತನಾಡಿ ಅವರು “ನಾನು ನನ್ನ ಎಲ್ಲಾ ಹೆಂಡತಿಯರೊಂದಿಗೆ ಮಗುವನ್ನು ಹೊಂದಲು ಬಯಸುತ್ತೇನೆ. ಇದರಿಂದ ಅವರಲ್ಲಿ ಯಾರಿಗೂ ಅಸಮಾಧಾನ ಉಂಟಾಗುವುದಿಲ್ಲ. ನನ್ನ ಆರು ಹೆಂಡತಿಯರಲ್ಲಿ ಯಾರನ್ನು ಮೊದಲು ಗರ್ಭಿಣಿಯಾಗಬೇಕೆಂದು ಆಯ್ಕೆ ಮಾಡುವ ಮೂಲಕ ಅಸಮಾಧಾನಗೊಳ್ಳಲು ನಾನು ಬಯಸುವುದಿಲ್ಲ, ಆದ್ದರಿಂದ ನಾವು ಬಾಡಿಗೆ ತಾಯ್ತನವನ್ನು ಆರಿಸಿಕೊಂಡಿದ್ದೇವೆ. ಆ ಮೂಲಕ ಹುಟ್ಟುವ ನನ್ನ ಮಗುವಿಗೆ ಇವರೆಲ್ಲ ತಾಯಿ ಆಗಲಿದ್ದಾರೆ’ ಎಂದು ಆರ್ಥರ್ ತಿಳಿಸಿದ್ದಾನೆ.

ಅಲ್ಲದೆ ಆರ್ಥರ್ ಅವರು ಈ ಹಿಂದೆ ನಾನು 10 ಹೆಂಡತಿಯರನ್ನು ಹೊಂದಬೇಕು ಮತ್ತು ಅವರಲ್ಲಿ ಪ್ರತಿಯೊಬ್ಬರಿಂದ ಮಗುವನ್ನು ಪಡೆಯಬೇಕು. ಇದು ತನ್ನ ಕನಸು ಎಂದು ಹೇಳಿದ್ದರು. ಸದ್ಯ 9 ರಲ್ಲಿ 6 ಹೆಂಡಿರನ್ನು ಉಳಿಸಿಕೊಂಡಿರುವ ಈತ ಅವರಿಂದಲೇ ಮಕ್ಕಳನ್ನು ಪಡೆಯಲು ಒದ್ದಾಡುತ್ತಿದ್ದಾನೆ.

Leave A Reply