Pushpa 2 Promo : ಪುಷ್ಪ 2 ಪ್ರೋಮೊ ರಿಲೀಸ್, ಅಭಿಮಾನಿಗಳಿಗೆ ಇನ್ನಷ್ಟು ಕುತೂಹಲ ಹೆಚ್ಚಿಸಿದ ಪುಷ್ಪ ಟೀಮ್!

Share the Article

Allu Arjun :ತೆಲುಗು ಚಿತ್ರದಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟ ಅಲ್ಲು ಅರ್ಜುನ್(Allu Arjun) ಎಂದು ಹೇಳಿದರು ತಪ್ಪಾಗಲಾರದು. ಹಲವಾರು ಸಿನಿಮಾಗಳ ಮೂಲಕ ತನ್ನ ಪ್ರತಿಭೆಯನ್ನು ತೋರ್ಪಡಿಸಿ ಅಭಿಮಾನಿಗಳ ಮನಸ್ಸನ್ನು ಗೆದ್ದಿರುವಂತಹ ಅಲ್ಲು.

ಇದೀಗಾಗಲೇ ಸುಕುಮಾರ್(Sukumar) ಬರೆದು ನಿರ್ದೇಶಿಸಿರುವ ಆಕ್ಷನ್ ಡ್ರಾಮಾ(action drama) ಚಲನಚಿತ್ರ ವಾದಂತಹ ‘ಪುಷ್ಪ’ ಚಲನಚಿತ್ರವು ಅಭಿಮಾನಿಗಳ ಮನಸನ್ನು ಗೆದ್ದಿದೆ. ಪುಷ್ಪ ಚಲನಚಿತ್ರದಲ್ಲಿ ಮಾಸ್ ಆಗಿ ಎಂಟ್ರಿ ಕೊಟ್ಟಂತಹ ಅಲ್ಲು ಅರ್ಜುನ್ ಅಭಿಮಾನಿಗಳ ಮನಸ್ಸಲ್ಲಿ  ಇದೀಗ ಮನೆ ಮಾಡಿಬಿಟ್ಟಿದ್ದಾರೆ. ಪುಷ್ಪ(Pushpa) ಚಲನಚಿತ್ರದ ನಂತರ ಇದೀಗ ಫ್ಯಾನ್ಸ್ ಗಳು ಪುಷ್ಪ 2 ಬಗ್ಗೆ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಅಲ್ಲು ಅರ್ಜುನ ನಟನೆಯನ್ನು ನೋಡಲು ಅಭಿಮಾನಿಗಳು ತುದಿಕಾಲಲ್ಲಿ ಕಾತುರದಿಂದ ಕಾಯುತ್ತಿದ್ದಾರೆ.

ಪಾರ್ಟ್ 2 ಶೂಟಿಂಗ್ ಆರಂಭವಾಗಿದ್ದರು ಚಿತ್ರತಂಡ ಮಾತ್ರ ಯಾವುದೇ ರೀತಿಯ ಮಾಹಿತಿಯನ್ನೂ ಬಿಟ್ಟುಕೊಟ್ಟಿರಲಿಲ್ಲ. ಪುಷ್ಪ 2 ಚಲನಚಿತ್ರದ ಮೊದಲ ಟೀಸರ್ ಅನ್ನು ಅಲ್ಲು ಅರ್ಜುನ್ ಹುಟ್ಟುಹಬ್ಬದಂದು ರಿಲೀಸ್ ಮಾಡಲು ‘ಪುಷ್ಪ 2’ ಟೀಮ್(Pushpa 2 team) ದೊಡ್ಡ ಮಟ್ಟದ ಪ್ಲಾನ್ ಹಾಕಿದ್ದು. ಟೀಸರ್ ರಿಲೀಸ್‌ ಡೇಟ್ ಅನ್ನು ಕೂಡ ಬಹಳ ವಿಶಿಷ್ಠವಾಗಿ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಘೋಷಣೆ ಮಾಡಿದೆ.

ಪುಷ್ಪ 2 ಚಲನಚಿತ್ರದ ಬಗ್ಗೆ ಸಣ್ಣ ಪ್ರೋಮೋವೊಂದನ್ನು ಐದು ಭಾಷೆಗಳಲ್ಲಿ ಚಿತ್ರತಂಡ ತನ್ನ ಅಭಿಮಾನಿಗಳ ಕಾತುರಕ್ಕೋಸ್ಕರ ರಿಲೀಸ್ (release) ಮಾಡಿದ್ದು, ಅದರಲ್ಲಿ ‘ತಿರುಪತಿ ಜೈಲಿನಿಂದ ಬುಲೆಟ್‌ ಗಾಯಗಳೊಂದಿಗೆ ತಪ್ಪಿಸಿಕೊಂಡ ಪುಷ್ಪ’ ಎಂದು ವಾರ್ತಾ ನಿರೂಪಕರೊಬ್ಬರು ಹೇಳುವ ಡೈಲಾಗ್ ಇದೆ. ಹೀಗಾಗಿ ವ್ಯಕ್ತಿ ಬೈಕ್‌ನಲ್ಲಿ ಹೋಗುತ್ತಿರುವ ಸೀನ್‌ ಇದೆ. ಅದಲ್ಲದೆ ಪ್ರತಿಭಟನೆಗಳು ಆಗುತ್ತಿರುವ ದೃಶ್ಯನೂ ಇದೆ. ಇದನ್ನು ನೋಡಿದ ಅಭಿಮಾನಿಗಳು ಚಲನಚಿತ್ರವನ್ನು(movie) ನೋಡಲು ಕಾತುರದಿಂದ ಕಾಯುತ್ತಿದ್ದಾರೆ.

Leave A Reply