Home Health Natural Remedies for Long Hair : ಉದ್ದವಾದ ಕೂದಲು ನಿಮ್ಮದಾಗಬೇಕಿದ್ದರೆ, ದಾಸವಾಳ ಹೂವನ್ನು ಈ...

Natural Remedies for Long Hair : ಉದ್ದವಾದ ಕೂದಲು ನಿಮ್ಮದಾಗಬೇಕಿದ್ದರೆ, ದಾಸವಾಳ ಹೂವನ್ನು ಈ ರೀತಿ ಉಪಯೋಗಿಸಿ!

Natural Remidies for Long Hair

Hindu neighbor gifts plot of land

Hindu neighbour gifts land to Muslim journalist

Natural Remedies for Long Hair : ಪ್ರತಿಯೊಬ್ಬರಿಗೂ ದಟ್ಟವಾದ ಕಪ್ಪು ಕೂದಲು (black hair )ತಮ್ಮದಾಗಬೇಕೆಂದು ಆಸೆ ಇದ್ದೇ ಇರುತ್ತದೆ. ಆದರೆ ಇತ್ತೀಚಿನ ಕಲಬೆರಕೆ ಆಹಾರ (food )ಸೇವನೆ ಮತ್ತು ಒತ್ತಡದ ಜೀವನ ಶೈಲಿ(lifestyle )ನಡುವೆ ಕೂದಲಿನ ಬೆಳವಣಿಗೆಯ ಸಮಸ್ಯೆಯಿಂದ ತೊಂದರೆಗೊಳಗಾಗಿದ್ದಾರೆ. ಆದ್ದರಿಂದ ನೀವು ನಿಮ್ಮ ಕೂದಲು ವೇಗವಾಗಿ ಬೆಳೆಯಲು ಬಯಸಿದರೆ ಈ ಕೆಳಗಿನ ಟಿಪ್ಸ್ ನ್ನು (Natural Remedies for Long Hair) ಅನುಸರಿಸಿ.

ಮುಖ್ಯವಾಗಿ ದಾಸವಾಳವು ವಿಟಮಿನ್ ಸಿ, ಅಮೈನೋ ಆಮ್ಲಗಳು ಮತ್ತು ಇತರ ಪೋಷಕಾಂಶಗಳಿಂದ ಸಮೃದ್ಧವಾಗಿದೆ, ಇದು ಕೂದಲನ್ನು ಪೋಷಿಸುತ್ತದೆ ಮತ್ತು ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಉದ್ದ ಮತ್ತು ಹೊಳೆಯುವ ಕೂದಲನ್ನು ಪಡೆಯಲು ದಾಸವಾಳವನ್ನು ವಿವಿಧ ರೀತಿಯಲ್ಲಿ (Hibiscus For Hair Care)ಬಳಸಬಹುದು.

ದಾಸವಾಳ ಮತ್ತು ಕರಿಬೇವು :
ನೀವು ತಾಜಾ ಕೆಂಪು ದಾಸವಾಳದ 8-10 ಹೂಗಳನ್ನು ತೆಗೆದುಕೊಂಡು ದಳಗಳನ್ನು ಬೇರ್ಪಡಿಸಿ. ಕೆಲವು ಎಲೆಗಳನ್ನು ಸಹ ತೆಗೆದುಕೊಳ್ಳಿ. ಬಳಿಕ ಒಂದು ಹಿಡಿ ಕರಿಬೇವಿನ ಎಲೆಗಳನ್ನು ತೆಗೆದುಕೊಂಡು ಎಲ್ಲವನ್ನೂ ಚೆನ್ನಾಗಿ ತೊಳೆದು ರುಬ್ಬಿಕೊಳ್ಳಿ. ಈ ಹೇರ್ ಪ್ಯಾಕ್ ಅನ್ನು ನೆತ್ತಿ ಕೂದಲಿಗೆ ಅಪ್ಪ್ಲೈ ಮಾಡಿ ಒಂದು ಗಂಟೆ ಬಳಿಕ ಸೌಮ್ಯವಾದ ಶಾಂಪೂವಿನಿಂದ ತೊಳೆಯಿರಿ.

ದಾಸವಾಳ ಮತ್ತು ಕೊಬ್ಬರಿ ಎಣ್ಣೆ :
ಒಂದು ಹಿಡಿ ತಾಜಾ ದಾಸವಾಳದ ಎಲೆಗಳನ್ನು ತೆಗೆದುಕೊಳ್ಳಿ. ಮತ್ತು ಒಂದು ಹೂವಿನ ದಳಗಳನ್ನು ಬೇರ್ಪಡಿಸಿ, ಎಲೆಗಳೊಂದಿಗೆ ಚೆನ್ನಾಗಿ ತೊಳೆಯಿರಿ. ಇದನ್ನು ನುಣ್ಣಗೆ ರುಬ್ಬಿ, ಅದರೊಂದಿಗೆ ಕೊಬ್ಬರಿ ಎಣ್ಣೆಯನ್ನು ಮಿಶ್ರಣ ಮಾಡಿ. ಬಳಿಕ ಇದನ್ನು ಬುಡದಿಂದ ತುದಿಯವರೆಗೆ ಅನ್ವಯಿಸಿ 45-60 ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ಹೇರ್ ವಾಶ್ ಮಾಡಿ.

ದಾಸವಾಳ ಮತ್ತು ಮೊಸರು :
ಇನ್ನೊಂದು ಉಪಾಯವೆಂದರೆ 3-4 ತಾಜಾ ಕೆಂಪು ದಾಸವಾಳದ ಹೂವಿನ ದಳಗಳನ್ನು ತೆಗೆದುಕೊಂಡು ಅದನ್ನು ತೊಳೆದು ಪೇಸ್ಟ್ ಮಾಡಿ. ದಾಸವಾಳ ಹೂಗಳ ಪೇಸ್ಟ್‌ಗೆ 2-3 ಚಮಚ ತಾಜಾ, ಸುವಾಸನೆಯಿಲ್ಲದ ಮೊಸರನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಕೂದಲಿಗೆ ಅನ್ವಯಿಸಿ ಬಳಿಕ ಮಸಾಜ್ ಮಾಡಿ. ಒಂದು ಗಂಟೆ ಬಳಿಕ ಸೌಮ್ಯವಾದ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ

ದಾಸವಾಳ ಮತ್ತು ಆಮ್ಲ ಪುಡಿ:
ದಾಸವಾಳ ಹೂವಿನ ಪುಡಿ ಮತ್ತು ಆಮ್ಲ ಪುಡಿ ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು ಸ್ವಲ್ಪ ನೀರು ಸೇರಿಸಿ ಪೇಸ್ಟ್ ತಯಾರಿಸಿ. ಪರ್ಯಾಯವಾಗಿ, ಹೇರ್ ಪ್ಯಾಕ್ ತಯಾರಿಸಲು ನೀವು ನೀರಿನ ಬದಲಿಗೆ ಮೊಸರು ಅಥವಾ ತೆಂಗಿನ ಎಣ್ಣೆಯನ್ನು ಸೇರಿಸಬಹುದು. ಇದನ್ನು ಕೂದಲು ಮತ್ತು ನೆತ್ತಿಯ ಮೇಲೆ ಅನ್ವಯಿಸಿ. 40-45 ನಿಮಿಷಗಳ ಕಾಲ ಹಾಗೆ ಬಿಡಿ ಮತ್ತು ನಂತರ ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ.

ಈ ರೀತಿಯಾಗಿ ನೀವು ನೈಸರ್ಗಿಕವಾಗಿ ತಯಾರು ಮಾಡಿದ ಪೇಸ್ಟ್ ಅನ್ನು ಕೂದಲಿಗೆ ಅಪ್ಲೈ ಮಾಡುವ ಮೂಲಕ ಕ್ರಮೇಣ ಕೂದಲ ಬೆಳವಣಿಗೆ ವೇಗವಾಗಿ ಮತ್ತು ದಪ್ಪವಾಗಿ ಬೆಳೆಯಲು ಸಹಾಯ ಆಗುತ್ತದೆ.

ಇದನ್ನೂ ಓದಿ: Coconut Water : ಎಳನೀರು ಕುಡಿಯುವುದರಿಂದ ಪುರುಷರ ಈ ಎಲ್ಲಾ ಸಮಸ್ಯೆಗಳಿಗಿದೆ ಪರಿಹಾರ!