Weekend with Ramesh : ರಮ್ಯಾ ಇಂಗ್ಲಿಷ್‌ ಎಪಿಸೋಡ್‌ ಬಗ್ಗೆ ಕೊನೆಗೂ ಮೌನ ಮುರಿದ ರಮೇಶ್ ಅರವಿಂದ್. ಹೇಗಿತ್ತು ಫಸ್ಟ್ ರಿಯಾಕ್ಷನ್‌!

Weekend with Ramesh kannada show :ಕನ್ನಡ ಕ ಕಿರುತೆರೆಯ (Kannada Small screen) ಪ್ರಸಿದ್ಧ ರಿಯಾಲಿಟಿ ಶೋ (Reality Show) ವೀಕೆಂಡ್ ವಿತ್ ರಮೇಶ್- 5(Weekend With Ramesh-5) ಶುರುವಾಗಿ ಆರಂಭದಲ್ಲಿಯೇ ವ್ಯಾಪಕವಾದ ಟೀಕೆಗೆ ಗುರಿಯಾಗಿತ್ತು. ಹೌದು ಮೊದಲ ಅತಿಥಿಯಾಗಿ (Guest) ಸ್ಯಾಂಡಲ್​ವುಡ್​ನ (Sandalwood) ಮೋಹಕ ತಾರೆ ರಮ್ಯಾ (Ramya) ಭಾಗವಹಿಸಿ ತಮ್ಮ ಬಾಲ್ಯ, ಸಿನಿಮಾ, ಮೊದಲ ಸಂಪಾದನೆ (Earning) ಎಲ್ಲದರ ಬಗ್ಗೆಯೂ ಮಾತನಾಡಿದ್ದರು. ಆದರೆ ಎಲ್ಲವನ್ನೂ ಅವರು ಇಂಗ್ಲಿಷ್ ಮಿಶ್ರಿತ ಕನ್ನಡ (Kannada) ಭಾಷೆಯಲ್ಲಿ ಮಾತನಾಡಿದ್ದು ಕನ್ನಡಿಗರ ಕೋಪಕ್ಕೆ ಕಾರಣವಾಗಿತ್ತು. ಈ ವಿಚಾರದ ಬಗ್ಗೆ ನಿರೂಪಕ ರಮೇಶ್ ಅರವಿಂದ್ ಮೊದಲ ಸಲ ರಿಯಾಕ್ಷನ್‌ ಕೊಟ್ಟಿದ್ದಾರೆ.

ಹೌದು, ಖಾಸಗಿ ಯುಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ರಮೇಶ್ ಮಾತನಾಡಿದ ರಮೇಶ್ ಅವರು “ಇಂಗ್ಲಿಷ್‌ನಲ್ಲಿ ಮಾತನಾಡಿರವುದಕ್ಕೆ ಟ್ರೋಲ್ ಆಗಿದ್ದಾರೆ. ಹೀಗಾಗಿ ಇಂಗ್ಲಿಷ್ ಮಾತ್ರವಲ್ಲ, ವೀಕೆಂಡ್ ವಿತ್ ರಮೇಶ್ ಮಾತ್ರವಲ್ಲ, ನನ್ನ ಸಿನಿಮಾಗಳ ಬಗ್ಗೆ ಅಥವಾ ನನ್ನ ವೈಯಕ್ತಿಕ ಬದುಕಿನ ಬಗ್ಗೆ ಏನೇ ಇರಬಹುದು….ಅದರಲ್ಲಿ ಸತ್ಯ ಇರಬಹುದು ಅನಿಸಿದ್ದರೆ ನನ್ನನ್ನು ನಾನು ತಿದ್ದುಕೊಂಡಿಲ್ಲ ಅಂದ್ರೆ ನನ್ನಷ್ಟು ದಡ್ಡ ಇನ್ನೊಬ್ಬ ಇಲ್ಲ. ಹಾಗಾಗಿ ಏನೇ ಸಲಹೆ ಬಂದರೂ ಅದನ್ನು ನಾನು ಪರಿಗಣಿಸಬೇಕು ಅದರಲ್ಲಿ ಇರುವ ಸತ್ಯವನ್ನು ಒಪ್ಪಿಕೊಳ್ಳಬೇಕು ತಿದ್ದುಕೊಳ್ಳಬೇಕು. ಅದೊಂದೇ ದಾರಿ ಮೇಲೆ ಬರುವುದಕ್ಕೆ” ಎಂದಿದ್ದಾರೆ.

ಅಲ್ಲದೆ “ಜನರು ಹೇಳಿರುವ ಅಂಶ ನಮಗೆ ಗೊತ್ತಾಗಿದೆ. ನಮಗಿದು ಪಾಠವಿದ್ದಂತೆ. ಇನ್ನು ಮುಂದೆ ನಾನು ಮತ್ತು ತಂಡದವರು ಹುಷಾರ್ ಆಗಿ ಜವಾಬ್ದಾರಿಯಿಂದ ಇರ್ತೀವಿ ಅದರ ಬಗ್ಗೆ ಸಂಶಯವಿಲ್ಲ. ಇನ್ನು 20 ಎಪಿಸೋಡ್‌ಗಳು ಇರುವ ಕಾರಣ ತಿದ್ದಿಕೊಳ್ಳಲು ಅವಕಾಶಗಳಿದೆ. ಇನ್ನೊಂದು ಅವಕಾಶ ಮುಂದಿನ ಎಪಿಸೋಡ್‌ನಲ್ಲಿ ಸಿಕ್ಕಿದೆ. ನಿಮ್ಮ ಸಲಹೆಗಳು ಬರ್ತಾ ಇರಲಿ ಧನ್ಯವಾದಗಳು. ಶೋ ಬಗ್ಗೆ ಮಾತ್ರವಲ್ಲ ನನ್ನ ಬಗ್ಗೆ ಕೂಡ ಗಮನಿಸುತ್ತಾ ಇರಿ ತಿದ್ದುಕೊಳ್ಳಬೇಕು ಅಂದ್ರೆ ತಿಳಿಸಿ ಏಕೆಂದರೆ ನಿರಂತರ ತಿದ್ದುಪಡಿಕೆನೇ ಬೆಳವಣಿಗೆ ರಹಸ್ಯವಾಗಿರುತ್ತದೆ ಅದನ್ನು ನಾನು ಮಾಡಿಕೊಂಡು ಬಂದಿದ್ದೀನಿ. Life is about constant correction ನಾನು ಮಾಡಿಕೊಂಡು ಬರುವೆ” ಎಂದು ಸಕರಾತ್ಮಕವಾಗಿಯೇ ಉತ್ತರಿಸಿದ್ದಾರೆ.

ಇನ್ನು ಡಾಕ್ಟರ್ ಬ್ರೋ ಕುರಿತಂತೆ ಅವರು ಶೋಗೆ ಬರ್ತಾರಾ? ಎಂದು ಕೇಳಿದ್ದಕ್ಕೆ “ಕಾರ್ಯಕ್ರಮಕ್ಕೆ ಯಾರು ಬರಬೇಕು ಅನ್ನೋ ವಿಚಾರದ ಬಗ್ಗೆ ನಾನು ತಂಡದ ಜೊತೆ ಎಂದೂ ಚರ್ಚೆ ಮಾಡುವುದಿಲ್ಲ. ನನ್ನ ಕೆಲಸ ನಿರೂಪಣೆ ಮಾಡುವುದು. ಕರ್ನಾಟಕದಲ್ಲಿ ಇರುವಂತ ಒಳ್ಳೆ ಸಾಧಕರು ಜನರು ಇಷ್ಟ ಪಡುವಂತವರನ್ನು ಆ ಚೇರ್‌ ಮೇಲೆ ಕೂರಿಸಬೇಕು ಎಂಬುದು ನನ್ನ ವೈಯಕ್ತಿಕ ಆಸೆ ಕೂಡ. ಯಾವುದೋ ಒಂದು ಕಾರಣಕ್ಕೆ ಯುವಕರು ನಿಮಗೆ ಇಷ್ಟ ಆಗಿದ್ದಾರೆ ಅಂದ್ರೆ ಅದನ್ನು ಗೌರವಿಸಬೇಕಾಗುತ್ತದೆ. ಆ ಚೇರ್‌ನ ಉದ್ದೇಶವೇ ಅದು. ಯಾರು ಯಾರು ಸಾಧನೆ ಮಾಡಿದ್ದಾರೆ ಅವರ ಕಥೆಯನ್ನು ನಿಮಗೆ ತಿಳಿಸಬೇಕು ಎಂದು ಕಾರ್ಯಕ್ರಮವನ್ನು ಶುರು ಮಾಡಿರುವುದು. ಸದ್ಯ ಅದು ನಡೆಯುತ್ತಿದೆ. ಮುಂದಿನ ವಾರ ಇವ್ರು ಬರಬಹುದು ಎಂದು ನಾನು ಹೇಳುವುದಕ್ಕೆ ಆಗಲ್ಲ ಅದು ಚಾನೆಲ್ ನಿರ್ಧಾರ ಮಾಡುತ್ತೆ’ ಎಂದು ರಮೇಶ್ ಹೇಳಿದ್ದಾರೆ.

ಅಂದಹಾಗೆ Dr Bro ಸಾಮಾಜಿಕ ಜಾಲತಾಣವನ್ನು ಹೆಚ್ಚಾಗಿ ಬಳಸುವವರಿಗೆ ಕನ್ನಡದ ಪ್ರಖ್ಯಾತ ಯೂಟ್ಯೂಬರ್ ಡಾಕ್ಟರ್ ಬ್ರೋ(YouTuber Dr Bro) ಬಗ್ಗೆ ಪ್ರತಿಯೊಬ್ಬರು ಕೂಡ ತಿಳಿದಿರುತ್ತಾರೆ. ಭಾಷೆ ಹಾಗೂ ತಿಳಿಯದೆ ಇರುವಂತಹ ದೇಶಗಳಿಗೆ ಪ್ರವಾಸ ಹೋಗಿ ಅಲ್ಲಿನ ಸ್ಥಳಗಳ ಕುರಿತಂತೆ ನಮ್ಮ ಕನ್ನಡಿಗರಿಗೆ ಇಂಚಿಂಚು ಮಾಹಿತಿ ತಿಳಿಯುವಂತೆ ಅವರು ತಿಳಿಸುವಂತಹ ವಿಧಾನ ಪ್ರತಿಯೊಬ್ಬರಿಗೂ ಕೂಡ ಅಚ್ಚುಮೆಚ್ಚು. ಅವರನ್ನು ವೀಕೆಂಡ್ ವಿತ್ ರಮೇಶ್(Weekend with Ramesh) ಕಾರ್ಯಕ್ರಮಕ್ಕೆ ಕರೆತರುವಂತಹ ಪ್ರಯತ್ನ ಕೂಡ ನಡೆದಿತ್ತು ಎಂಬುದಾಗಿ ಸುದ್ದಿ ಆಗಿತ್ತು ಹೀಗಾಗಿ ಅವರನ್ನು ಆ ಸಾಧಕರ ಸೇಟಿನಲ್ಲಿ ಇಷ್ಟೊಂದು ಚಿಕ್ಕ ವಯಸ್ಸಿನಲ್ಲಿ ನೋಡುವಂತಹ ಕಾತುರತೆ ಅವರ ಅಭಿಮಾನಿಗಳಲ್ಲಿತ್ತು.

ಆದರೆ ಇದೇ ಪ್ರಶ್ನೆಯನ್ನು ಜೀ ಕನ್ನಡ ವಾಹಿನಿಯ ಬಿಜಿನೆಸ್ ಹೆಡ್ ಆಗಿರುವಂತಹ ರಾಘವೇಂದ್ರ(Raghavendra Hunsur) ಹುಣಸೂರು ಅವರ ಬಳಿ ಕೇಳಿದಾಗ ಅವರು ನಿಮ್ಮ ಅಜ್ಜಿ ಹಾಗೂ ತಾಯಿಗೆ ಡಾಕ್ಟರ್ ಬ್ರೋ ಗೊತ್ತಾ ಎಂಬುದಾಗಿ ಕೇಳುವ ಮೂಲಕ ಡಾ. ಬ್ರೋ ಅವರ ಜನಪ್ರಿಯತೆಯನ್ನು ಅನುಮಾನಿಸುವ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು ಟಿವಿ ಮಾಧ್ಯಮದಲ್ಲಿ ಪ್ರೇಕ್ಷಕರಿಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಪರಿಚಿತರಾಗಿರುವಂತಹ ವ್ಯಕ್ತಿಗಳನ್ನು ಮಾತ್ರ ನಾವು ಈ ಕಾರ್ಯಕ್ರಮಕ್ಕೆ ತರುತ್ತೇವೆ ಎಂಬುದಾಗಿ ಹೇಳುವ ಮೂಲಕ ಡಾ. ಬ್ರೋ ವೀಕೆಂಡ್ ವಿತ್ ರಮೇಶ್(Weekend With Ramesh) ಕಾರ್ಯಕ್ರಮಕ್ಕೆ ಬರುತ್ತಿಲ್ಲ ಎಂಬುದನ್ನು ಸ್ಪಷ್ಟೀಕರಿಸಿದ್ದರು. ಈ ಕುರಿತು ವ್ಯಾಪಕ ವಿರೋಧ ಕೂಡ ವ್ಯಕ್ತವಾಗಿತ್ತು.

ಇದನ್ನೂ ಓದಿ: Karnataka Rain: ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವೆಡೆ ಏಪ್ರಿಲ್ 5 ರವರೆಗೆ ಮಳೆ !!

Leave A Reply

Your email address will not be published.