Man ordered idlis :ಅಬ್ಬಾಬ್ಬಾ! 8,428 ಪ್ಲೇಟ್‌ ಇಡ್ಲಿಯನ್ನು ಒಬ್ಬನೇ ಆರ್ಡರ್ ಮಾಡಿದನೀತ! ಇದಕ್ಕಾಗಿ ಆತ ಪಾವತಿಸಿದ್ದು ಎಷ್ಟು ಲಕ್ಷ ಗೊತ್ತಾ?

A man ordered 8,428 plates of idlis within a year : ಮೊನ್ನೆ ತಾನೆ ಮಾರ್ಚ್ 30 ರಂದು ವಿಶ್ವ ಇಡ್ಲಿ ದಿನ (World Idli Day) ಆಚರಣೆ ಆಗಿದೆ. ಅದರ ಜತೆಗೆ ನಿನ್ನೆ ಆರ್ಥಿಕ ವರ್ಷದ ಅಂತ್ಯ ಬೇರೆ. ಈ ಪ್ರಯುಕ್ತ ಆನ್‌ಲೈನ್ ಫುಡ್ ಡೆಲಿವರಿ ಆಪ್ ಸ್ವಿಗ್ಗಿ ಕಳೆದ ಒಂದು ವರ್ಷದಲ್ಲಿ ತಮ್ಮ ಮೂಲಕ ಆರ್ಡರ್ ಮಾಡಲಾಗಿರುವ ತಿನಿಸುಗಳ ವಿವರ ತೆಗೆಯುವಾಗ ಕೈಗೆ ಸಿಕ್ಕಿದ್ದು ರಾಶಿ ರಾಶಿ ಇಡ್ಲಿ ಬಿಲ್ಲುಗಳು (Man ordered idlis).

ಸಾಮಾನ್ಯವಾಗಿ ದಕ್ಷಿಣ ಭಾರತದಲ್ಲಿ ಇಡ್ಲಿ ಹೆಚ್ಚಿನವರ ಅಚ್ಚು ಮೆಚ್ಚಿನ ಉಪಹಾರ. ರಾತ್ರಿಯ ಖಾರದ ಅಡುಗೆ ತಿಂದು ಸುಡುವ ಹೊಟ್ಟೆಗೆ ತಣ್ಣಗಿನ ಉಪಹಾರ ಆಗುವ ಮತ್ತು ಹೊಟ್ಟೆ ಹಾಗೂ ಜೇಬಿಗೆ ಕೂಡಾ ಭಾರವಾಗದ ಆಹಾರ ಅಂತ ಇದ್ರೆ ಅದರಲ್ಲಿ ಇಡ್ಲಿಗೆ ಅಗ್ರಸ್ಥಾನ. ಆದ್ರೆ ವಾರದಲ್ಲಿ ಒಂದು ಅಥವಾ ಎರಡು ದಿನ ಇಡ್ಲಿ ತಿನ್ನಬಹುದು. ಆದ್ರೆ ಇಲ್ಲೊಬ್ಬ ವರ್ಷದ 365 ದಿನದಲ್ಲಿ ಬರೋಬ್ಬರಿ 8,428 ಪ್ಲೇಟ್‌ ಇಡ್ಲಿ ಆರ್ಡರ್ ಮಾಡಿರುವುದು ತಿಳಿದು ಬಂದಿದೆ. ಸ್ವಿಗ್ಗಿ ಆರ್ಡರ್ ಹಿಸ್ಟರಿ ಪ್ರಕಾರ ಒಬ್ಬರೇ ವ್ಯಕ್ತಿ ಕಳೆದ ಒಂದು ವರ್ಷದಲ್ಲಿ ಎಂಟು ಸಾವಿರಕ್ಕೂ ಹೆಚ್ಚು ಪ್ಲೇಟ್ ಇಡ್ಲಿಗಳನ್ನು ಆರ್ಡರ್ ಮಾಡಿರುವುದು ಗಮನಕ್ಕೆ ಬಂದಿದೆ. ಆತ ಬರೋಬ್ಬರಿ 8,428 ಪ್ಲೇಟ್‌ ಇಡ್ಲಿ ಆರ್ಡರ್ ಮಾಡಿ ಒಂದು ರೀತಿಯ ದಾಖಲೆಯನ್ನೇ ಸೃಷ್ಟಿಸಿದ್ದಾನೆ ಎನ್ನಬಹುದು. ಆತ ಅಷ್ಟು ಪ್ಲೇಟ್ ಇಡ್ಲಿಯನ್ನು ಯಾಕೆ ಯಾವಾಗ ತರಿಸಿ ಅದ್ಯಾರಿಗೆ ತಿನ್ನಿಸಿದನೋ ಗೊತ್ತಿಲ್ಲ,

ಹೌದು, ಹೈದರಾಬಾದ್ ನ ಈ ವ್ಯಕ್ತಿ ಒಂದು ವರ್ಷದಲ್ಲಿ ತನ್ನ ಗೆಳೆಯರು ಮತ್ತು ಹಲವು ಕುಟುಂಬ ಸದಸ್ಯರಿಗಾಗಿ ಒಂದು ವರ್ಷದಲ್ಲಿ ಬರೋಬ್ಬರಿ 8,428 ಪ್ಲೇಟ್ ಇಡ್ಲಿ ಆರ್ಡರ್ ಮಾಡಿದ್ದು, ಇದಕ್ಕಾಗಿ ಆತ ವ್ಯಯಿಸಿದ ಮೊತ್ತ ನೋಡಿದರೆ ನೀವು ಬೆಚ್ಚಿಬೀಳೋದು ಖಚಿತ. ಆತ ಒಟ್ಟು ಆರು ಲಕ್ಷ ರೂಪಾಯಿಗಳನ್ನು ಇಡ್ಲಿ ಖರೀದಿಸಲು ಪಾವತಿಸಿರುವುದಾಗಿ ಸ್ವಿಗ್ಗಿ ವಿವರಿಸಿದೆ. ಅದರ ಜೊತೆಗೆ ಸ್ವಿಗ್ಗಿ ಡಾಟಾ ಪ್ರಕಾರ ಇಡ್ಲಿಯನ್ನು ಹೆಚ್ಚಾಗಿ ಆರ್ಡರ್ ಮಾಡುವ ವಿಶ್ವದ ಮೂರು ಪ್ರಮುಖ ನಗರಗಳೆಂದರೆ ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈ ಎಂದು ತಿಳಿದುಬಂದಿದೆ.

2022ರ ಅಂತ್ಯದ ವೇಳೆಗೆ ಸ್ವಿಗ್ಗಿ ಬಿಡುಗಡೆಗೊಳಿಸಿದ ವರದಿಯ ಪ್ರಕಾರ ಈ ವರ್ಷ ಅತೀ ಹೆಚ್ಚು ಗ್ರಾಹಕರು ಆರ್ಡರ್ ಮಾಡಿರುವ ಫುಡ್ಗಳ ವಿವರದಲ್ಲಿ ಬಿರಿಯಾನಿ ಮೊದಲ ಸ್ಥಾನದಲ್ಲಿತ್ತು. ಆದರೆ ಇದೀಗ ಈ ವ್ಯಕ್ತಿ ಒಂದು ವರ್ಷದಲ್ಲಿ ಬರೋಬ್ಬರಿ ಕೇವಲ ಇಡ್ಲಿಗಾಗಿಯೇ ಈತ ಒಂದು ವರ್ಷದಲ್ಲಿ 6 ಲಕ್ಷದಷ್ಟು ಹಣವನ್ನು ಖರ್ಚು ಮಾಡಿದ್ದು, ಸ್ವಿಗ್ಗಿ ಬಿಡುಗಡೆ ಮಾಡಿದ ಸಮೀಕ್ಷೆಯ ಕೆಲ ಹೊತ್ತಿಗೆ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಕುತೂಹಲಕಾರಿ ಸಂಗತಿ ಎಂದರೆ ಮಸಾಲಾ ದೋಸೆಯ ನಂತರ ಇಡ್ಲಿ ಸ್ವಿಗ್ಗಿಯಲ್ಲಿ ಎರಡನೇ ಅತಿ ಹೆಚ್ಚು ಆರ್ಡರ್ ಮಾಡಿದ ಉಪಹಾರವಾಗಿದೆ ಎಂದು ಸ್ಕಿಗ್ಗಿ ಫುಡ್ ಆರ್ಡರ್ ರಿಪೋರ್ಟ್ ಹೇಳಿದೆ. ಜನರು ಇಡ್ಲಿಯನ್ನು ಬೆಳಿಗ್ಗೆ ಎಂಟರಿಂದ 10 ಗಂಟೆಯ ಒಳಗೆ ಹೆಚ್ಚಿನ ಪ್ರಮಾಣದಲ್ಲಿ ತರಿಸಿಕೊಂಡಿದ್ದಾರೆ. ಇಡ್ಲಿ ಮಾತ್ರವಲ್ಲದೆ ಸಾಂಬಾರ್ ಕೋಕೋನಟ್ ಚಟ್ನಿ, ಚಾಯ್, ಕಾಫಿ ಮತ್ತಿತರ ಸಾಮಾನ್ಯ ವಸ್ತುಗಳನ್ನು ಕೂಡ ಆರ್ಡರ್ ಮೂಲಕ ಮನೆ ಬಾಗಿಲಿಗೆ ತರಿಸಿಕೊಂಡು ಸವಿದಿದ್ದಾರೆ ಸ್ವಿಗ್ಗಿಯ ಗ್ರಾಹಕರು.

ಇದನ್ನೂ ಓದಿ: Marriage Viral News : ಮದುವೆ ಸಂದರ್ಭ ತನ್ನ ಹೆಂಡತಿಯ ಕೋಪ ತಣಿಸಲು ವರ ಈ ರೀತಿ ಮಾಡುವುದಾ?

Leave A Reply

Your email address will not be published.