HP Laptop : ಈ ಲಾಪ್ ಟಾಪ್ ಬೆಲೆಯಲ್ಲಿ ಬರೋಬ್ಬರಿ 74 % ಇಳಿಕೆ, ಯಾರಿಗುಂಟು ಯಾರಿಗಿಲ್ಲ ಅವಕಾಶ
HP Laptop : ಜನರಿಗೆ ಲ್ಯಾಪ್‌ಟಾಪ್(laptop) ಅನ್ನು ಖರೀದಿಸಲು ವಿವಿಧ ರೀತಿಯ ಆಯ್ಕೆಗಳಿದ್ದು, ಬೆಲೆಗೆ ತಕ್ಕಂತಹ ಫೀಚರ್ಸ್‌ಗಳನ್ನು (features)ಹೊಂದಿರುವ ಲ್ಯಾಪ್ ಟಾಪ್ ಅನ್ನು ಕೈಗೆಟಕುವ ಹಣದಲ್ಲಿ ನಮ್ಮದಾಗಿಸಿಕೊಳ್ಳಬಹುದು. ಹಾಗಾದರೆ ದುಬಾರಿ ಬೆಲೆಯ ಲ್ಯಾಪ್‌ಟಾಪ್ ಅನ್ನು ಕಡಿಮೆ ಬೆಲೆಯಲ್ಲಿ ಖರೀದಿ ಮಾಡಬೇಕು ಎಂದರೆ ಸೂಕ್ತ ಸಲಹೆ ಇಲ್ಲಿದೆ ನೋಡಿ.
ಹೌದು, ಜನರು ಹೆಚ್ಚಿನ ಬೆಲೆಯ ಲ್ಯಾಪ್‌ಟಾಪ್‌ಗಳನ್ನು ಕೈಗೆಟಕುವ ರೀತಿಯಲ್ಲಿ ಖರೀದಿ ಮಾಡಲು ಕಷ್ಟಸಾಧ್ಯ. ಏಕೆಂದರೆ ಲ್ಯಾಪ್ ಟಾಪ್ ಗಳು ಹೆಚ್ಚಿನ ಬೆಲೆಯದ್ದಾಗಿರುತ್ತದೆ. ಹಾಗೂ ಕೈಗೆಟಕದಂತ ಡಿವೈಸ್‌ಗಳಾಗಿದ್ದು(device), ಹಲವರಿಗೆ ಇವುಗಳನ್ನು ತೆಗೆದು ಕೊಳ್ಳುವುದು ಕಷ್ಟದ ಮಾತು. ಅದರಲ್ಲಿಯು ಜನರ ಅನುಕೂಲಕ್ಕಾಗಿ ಇ-ಕಾಮರ್ಸ್ ಸೈಟ್‌ಗಳು ಆಗಾಗ್ಗೆ ಆಫರ್ (offer) ಘೋಷಣೆ ಮಾಡುವ ಮೂಲಕ ಈ ರೀತಿಯ ಡಿವೈಸ್‌ಗಳನ್ನು ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಸೇಲ್ ಮಾಡುತ್ತಿರುತ್ತವೆ.
ಆದರೆ, ಇಷ್ಟೊಂದು ದೊಡ್ಡ ಪ್ರಮಾಣದ ಡಿಸ್ಕೌಂಟ್ ಕೆಲವು ಸಂದರ್ಭದಲ್ಲಿ ಮಾತ್ರ ಲಭ್ಯವಾಗುತ್ತದೆ ಬಿಟ್ಟರೆ ಎಲ್ಲಾ ಸಂದರ್ಭದಲ್ಲೂ ದೊರೆಯುದು ಕಷ್ಟ. ಆದರೆ ಎಚ್‌ಪಿ ಲ್ಯಾಪ್‌ಟಾಪ್(HP Laptop) ನಿಮಗೆ ಉತ್ತಮ ಅವಕಾಶ ನೀಡುತ್ತಿದೆ. ಅದೇನೆಂದು ತಿಳಿಯೋಣ ಬನ್ನಿ.
ಹೆಚ್‌ಪಿ255G8 ಲ್ಯಾಪ್‌ಟಾಪ್ (HP255G8 Laptop) 74% ಡಿಸ್ಕೌಂಟ್ (discount) ಪಡೆದುಕೊಡಿದ್ದು, ಹೆಚ್‌ಪಿ255G8 ಲ್ಯಾಪ್‌ಟಾಪ್ ಖರೀದಿಸುವವರಿಗೆ ಸಂತಸದ ಸುದ್ದಿಯನ್ನು ನೀಡಿದೆ.
ಹಾಗಾದರೆ ಇದರ ಫೀಚರ್ಸ್ ಏನು, ಆಪರ್ ಬೆಲೆ ಎಷ್ಟರ ಮಟ್ಟಿಗೆ ಇರಬಹುದು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಈ ಲ್ಯಾಪ್‌ಟಾಪ್ ಅನ್ನು ಅಗತ್ಯ ಬೆಲೆಯಲ್ಲಿ ಖರೀದಿ ಮಾಡುವ ಮುನ್ನ ಇದರ ಫೀಚರ್ಸ್‌ಗಳ ಬಗ್ಗೆ ತಿಳಿದುಕೊಳ್ಳುವುದು ಸೂಕ್ತ. ಹೆಚ್‌ಪಿ 255 G8 ಲ್ಯಾಪ್‌ಟಾಪ್‌ನ ಡಿಸ್‌ಪ್ಲೇ (laptop display) ಯಾವ ರೀತಿ ಆಕರ್ಷಿತವಾಗಿದೆ ಎಂದರೆ 15.6 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 1920 x 1080 ಪಿಕ್ಸೆಲ್ ರೆಸಲ್ಯೂಶನ್ ನೀಡಲಿದೆ.
ಹೆಚ್‌ಪಿ 255 G8 ಲ್ಯಾಪ್‌ಟಾಪ್ ಪ್ರೊಸೆಸರ್ ಹೇಗಿದೆ ಎಂದರೆ ಈ ಲ್ಯಾಪ್‌ಟಾಪ್ 3.2 GHz ಗಡಿಯಾರ ವೇಗದ AMD ಅಥ್ಲಾನ್ ಸಿಲ್ವರ್(atlan silver) 3050U ಪ್ರೊಸೆಸರ್ ಅನ್ನು ಹೊಂದಿದ್ದು, DOS ಆಪರೇಟಿಂಗ್ ಸಿಸ್ಟಮ್ ಪಡೆದಿದೆ. ಜೊತೆಗೆ 8 GB RAM ಹಾಗೂ 256 GB ಇಂಟರ್ ಸ್ಟೋರೇಜ್(storage) ಆಯ್ಕೆ ಪಡೆದುಕೊಂಡಿದೆ.
ಹೆಚ್‌ಪಿ 255 G8 ಲ್ಯಾಪ್‌ಟಾಪ್ ನ ಬ್ಯಾಟರಿ(battery) ಈ ಲ್ಯಾಪ್‌ಟಾಪ್ ಉತ್ತಮ-ಗುಣಮಟ್ಟದ Li-Ion ಬ್ಯಾಟರಿಯನ್ನು ಹೊಂದಿದ್ದು, ನೀವು ಎಷ್ಟೇ ಸಮಯದವರೆಗೂ ಕೆಲಸ ಮಾಡಿದರೂ ಸಹ ಹೆಚ್ಚು ಬಿಸಿಯಾಗುವುದಿಲ್ಲ ಅಥವಾ ಬ್ಯಾಟರಿ ಊದಿಕೊಳ್ಳುವುದಿಲ್ಲ. ಈ ಮೂಲಕ ದೀರ್ಘಸಮಯದ ಬಾಳಿಕೆಯನ್ನು ಈ ಲ್ಯಾಪ್ ಟಾಪ್ ನಿಂದ ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಎರಡು ಯುಎಸ್‌ಬಿ-ಎ(USBA) 3.2 ಜನ್ 1 ಪೋರ್ಟ್‌ಗಳು ಹಾಗೂ ಒಂದು ಯುಎಸ್‌ಬಿ ಟೈಪ್ ಸಿ C 3.2 ಜನ್ 1 ಪೋರ್ಟ್ ಆಯ್ಕೆ ಪಡೆದುಕೊಂಡಿದೆ.
ಹಾಗೆಯೇ ಒಂದು ಹೆಚ್‌ಡಿಎಮ್‌ಐ 1.4b ಪೋರ್ಟ್, ಒಂದು ಆರ್‌ಜೆ-45 ಹಾಗೂ ಎಸಿ ಪವರ್ ಪೋರ್ಟ್ ಸೇರಿದಂತೆ ಹೆಡ್‌ಫೋನ್, ಮೈಕ್ರೊಫೋನ್ ಕಾಂಬೊ ಜ್ಯಾಕ್‌ಗೆ ಇದು ಸಪೋರ್ಟ್ ಆಗಲಿದೆ. ಹಾಗೆಯೇ ಇದರೊಂದಿಗೆ ಪ್ರೀಮಿಯಂ ಕೀಬೋರ್ಡ್ ಆಯ್ಕೆ ಪಡೆದುಕೊಂಡಿದ್ದು, ಇದು ನೋಡಲು ತುಂಬಾನೇ ಆಕರ್ಷಕವಾಗಿದ್ದು ಜನರ ಕಣ್ಣನ್ನು ಬೇಗ ಸೆಳೆಯುತ್ತದೆ. ಇದರ ಜೊತೆಗೆ ಈ ಲ್ಯಾಪ್‌ಟಾಪ್ SD, SDHC ಮತ್ತು SDXC ಅನ್ನು ಬೆಂಬಲಿಸುತ್ತದೆ.
ಈ ಲ್ಯಾಪ್‌ಟಾಪ್ 99,999 ರೂಪಾಯಿಗಳನ್ನು ಹೊಂದಿದ್ದು, ಒಂದು ಲಕ್ಷ ರೂಪಾಯಿಗೆ ಒಂದು ರೂಪಾಯಿ ಕಡಿಮೆ ದರವನ್ನು ಹೊಂದಿದೆ. ಆದರೆ ಇದೀಗ ಜನರಿಗೋಸ್ಕರ ಅಮೆಜಾನ್‌ನಲ್ಲಿ 74% ಡಿಸ್ಕೌಂಟ್ ಘೋಷಣೆ (declared) ಮಾಡಲಾಗಿದ್ದು, ಈ ಮೂಲಕ ನೀವು ಕೇವಲ 25,999 ರೂ. ಗಳಲ್ಲಿ ಈ ಲ್ಯಾಪ್‌ಟಾಪ್ ಖರೀದಿ ಮಾಡಬಹುದಾಗಿದೆ. ಹೀಗಾಗಿ ನೀವು ಹೆಚ್ಚಿನ ವೆಚ್ಚವಾದ 74,000 ರೂಪಾಯಿಗಳನ್ನು ನಿಮ್ಮದಾಗಿಸಿ ಕೊಳ್ಳಬಹುದಾಗಿದೆ.
ಇನ್ನೂ ಹೆಚ್ಚಿನ ಡಿಸ್ಕೌಂಟ್ ಬೇಕು ಎಂದರೆ ಬ್ಯಾಂಕ್ ಆಫರ್‌ಗಳು (Bank offer)ಹಾಗೂ ವಿನಿಮಯ ಆಫರ್ ಗಳನ್ನು ಬಳಕೆ ಮಾಡಿಕೊಂಡು ಈ ಲ್ಯಾಪ್‌ಟಾಪ್ ಖರೀದಿ ಮಾಡಬಹುದಾಗಿದೆ. ಈ ಮೂಲಕ ನೀವು ಈ ಲ್ಯಾಪ್‌ಟಾಪ್ ಮೇಲೆ 16,300 ರೂ. ಗಳ ವರೆಗೂ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಹಾಗೆಯೆ ಇಎಂಐ ಮೂಲಕವೂ ಇದನ್ನು ಖರೀದಿ ಮಾಡಬಹುದು. ಕಡಿಮೆ ಬೆಲೆಯಲ್ಲಿ ಇಂದೇ ಖರೀದಿ ಮಾಡಿ ಲ್ಯಾಪ್ ಟಾಪ್ ನಿಮ್ಮದಾಗಿಸಿಕೊಳ್ಳಿ.