Driving test : ಭರ್ಜರಿ 960 ಬಾರಿ ಡ್ರೈವಿಂಗ್ ಟೆಸ್ಟ್ ಗೆ ಒಳಗಾದ ಮಹಿಳೆ; ಈಕೆ ಕಥೆ ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡ್ತೀರ!

Driving test : ವಾಹನ ಚಲಾಯಿಸಲು ನಮಗೆ ತರಬೇತಿ ಬೇಕೇ ಬೇಕಾಗುತ್ತದೆ. ತರಬೇತಿ ಪಡೆದ ನಂತರ ಪರವಾನಿಗೆ ಪಡೆಯಲು ಸುಲಭ ಆಗುತ್ತದೆ . ಆದರೆ ಕೆಲವರ ಪಾಲಿಗೆ ಪರವಾನಿಗೆ ಪಡೆಯುವಷ್ಟರಲ್ಲಿ ಸಾಕೋ ಸಾಕಾಗುತ್ತದೆ.

ಯಾಕೆಂದರೆ ಆರ್​ಟಿಒ ಕಚೇರಿಗೆ (RTO office ) ಹೋಗಿ, ಡ್ರೈವಿಂಗ್ ಟೆಸ್ಟ್​​ನಲ್ಲಿ (driving test ) ಪಾಸಾಗಲೇಬೇಕು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಮ್ಮ ಬೈಕ್​/ಕಾರ್​ ಅಥವಾ ಯಾವುದೇ ವಾಹನವನ್ನು ಡ್ರೈವ್ ಮಾಡಿ ತೋರಿಸಬೇಕು. ಲಿಖಿತ ಪರೀಕ್ಷೆಯನ್ನೂ ಬರೆಯಬೇಕು. ಇದರಲ್ಲೇನಾದರೂ ಎಡವಟ್ಟು ಮಾಡಿದರೆ ಅಥವಾ ನಮ್ಮ ಡ್ರೈವಿಂಗ್ ಪರಿಪೂರ್ಣವಾಗಿಲ್ಲ ಎಂದು ಆರ್​ಟಿಒ ಅಧಿಕಾರಿಗಳಿಗೆ ಅನ್ನಿಸಿದರೆ ನಮಗೆ ಲೈಸೆನ್ಸ್ ಸಿಗೋದಿಲ್ಲ. ಮತ್ತೆ ಬನ್ನಿ ಎನ್ನುತ್ತಾರೆ. ಹೀಗೆ ಹತ್ತು ಹಲವು ಬಾರಿ ಡ್ರೈವಿಂಗ್ ಟೆಸ್ಟ್​​ನಲ್ಲಿ ಸೋತು ನಂತರ ಗೆದ್ದಿರಬಹುದು.

ಆದರೆ ಇಲ್ಲೊಬ್ಬಳು ಮಹಿಳೆ ಬರೋಬ್ಬರಿ 960 ಪ್ರಯತ್ನಗಳ ನಂತರ ಡ್ರೈವಿಂಗ್ ಲೈಸೆನ್ಸ್ ಪಡೆದಿದ್ದಾರಂತೆ. ಹೌದು, ದಕ್ಷಿಣ ಕೊರಿಯಾದ ಈ ಮಹಿಳೆಯ ಹೆಸರು ಚಾ ಸಾ ಸೂನ್​. 2005ರಲ್ಲಿ ಈಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದರು.

ಈ ಮಹಿಳೆ ಡ್ರೈವಿಂಗ್ ಟೆಸ್ಟ್​​ನಲ್ಲಿ ಅದೆಷ್ಟು ಸಲ ವಿಫಲಗೊಂಡರೂ, ಹಠ ಬಿಡದೆ ಕೊನೆಗೂ ಲೈಸೆನ್ಸ್ ಪಡೆದ ಅವರ ಕಥೆ ಈಗ ​​ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral News)ಆಗುತ್ತಿದೆ.

2005ರಲ್ಲಿ ಚಾ ಸಾ ಸೂನ್​ ಅವರು ಮೊಟ್ಟಮೊದಲು ಕಾರು ಲೈಸೆನ್ಸ್​ಗಾಗಿ ಡ್ರೈವಿಂಗ್ ಟೆಸ್ಟ್​ ಕೊಟ್ಟಿದ್ದರು. ಆದರೆ ಮೊದಲ ಪ್ರಯತ್ನದಲ್ಲಿ ವಿಫಲರಾದರು. ಹೀಗೆ ದಿನಬಿಟ್ಟು ದಿನ ಚಾಲನಾ ಪರೀಕ್ಷೆಗೆ ಹಾಜರಾದರು. ವಾರದಲ್ಲಿ ಐದು ದಿನ ಇದನ್ನೇ ಮಾಡಿದ್ದರು. ಬರುಬರುತ್ತ ವಾರದಲ್ಲಿ ಎರಡು ದಿನ ಟೆಸ್ಟ್​ಗೆ ಹಾಜರಾಗಲು ಶುರು ಮಾಡಿದರು.

ಸುಮಾರು ಮೂರು ವರ್ಷ ಹೀಗೇ ಮಾಡಿದರು. ಅವರು ಚಾಲನಾ ಟೆಸ್ಟ್​ ಮತ್ತು ಲಿಖಿತ ಪರೀಕ್ಷೆ ಎರಡರಲ್ಲೂ ವಿಫಲರಾಗುತ್ತಿದ್ದರು. ಅಥವಾ ಒಂದರಲ್ಲಿ ಪಾಸ್ ಆದರೆ ಇನ್ನೊಂದರಲ್ಲಿ ಅನುತ್ತೀರ್ಣರಾಗುತ್ತಿದ್ದರು. ಕೊನೆಗೂ 2010ರಲ್ಲಿ ಅವರು ಡ್ರೈವಿಂಗ್​ ಟೆಸ್ಟ್​ನಲ್ಲಿ ಪಾಸ್​ ಆದರು.

ವಿಶೇಷವೆಂದರೆ ಈ 960 ಟೆಸ್ಟ್​ನಲ್ಲಿ ಅವರು ಲಿಖಿತ ಪರೀಕ್ಷೆ ಬರೆದಿದ್ದು 860 ಬಾರಿ ಎನ್ನಲಾಗಿದೆ. ಇಷ್ಟೆಲ್ಲ ಆಗಿ ಚಾ ಸಾ ಸೂನ್ ಅವರು ಚಾಲನಾ ಪರವಾನಗಿ ಪಡೆದಾಗ ಅವರ ವಯಸ್ಸು 69 ಆಗಿತ್ತು.

ಇನ್ನು 2010ರಲ್ಲಿ ಚಾ ಸಾ ಸೂನ್​ ಲೈಸೆನ್ಸ್ ಪಡೆದಾಗ, ಆಕೆಯ ಚಾಲನಾ ಮಾರ್ಗದರ್ಶಕ ಕೂಡ ಪ್ರತಿಕ್ರಿಯೆ ನೀಡಿದ್ದರು. ಚಾ ಸಾ ಸೂನ್​ ಪರವಾನಗಿ ಪಡೆಯುತ್ತಿದ್ದಂತೆ ನಮಗೆಲ್ಲ ಸಿಕ್ಕಾಪಟೆ ಖುಷಿಯಾಗಿತ್ತು. ಓಡಿಹೋಗಿ ಅವರನ್ನು ತಬ್ಬಿಕೊಂಡೆವು. ಪದೇಪದೆ ಡ್ರೈವಿಂಗ್ ಟೆಸ್ಟ್​ನಲ್ಲಿ ವಿಫಲರಾಗುತ್ತಿದ್ದರೂ, ಹಠ ಬಿಡದೆ ಪ್ರಯತ್ನಿಸಿದರು. ಪ್ರಯತ್ನವನ್ನೇ ಬಿಡಿ ಎಂದು ಅವರಿಗೆ ಹೇಳುವ ಧೈರ್ಯ ನಮಗೆ ಇರಲಿಲ್ಲ. ಕೊನೆಗೂ ಪ್ರಯತ್ನ ಫಲಿಸಿತು ಎಂದು ಅವರು ಹೇಳಿದ್ದರು.

ಆ ಸಮಯದಲ್ಲಿ ದಕ್ಷಿಣ ಕೊರಿಯಾದಲ್ಲಂತೂ ಚಾ ಸಾ ಸೂನ್​ ಸೆಲೆಬ್ರಿಟಿ ಆಗಿಹೋಗಿದ್ದರು. ಅದಲ್ಲದೆ ದಕ್ಷಿಣ ಕೊರಿಯಾದ ಕಾರು ಉತ್ಪಾದಕ ಕಂಪನಿ ಹುಂಡಾಯಿ, ಚಾ ಸಾ ಸೂನ್​ರಿಗೆ ಒಂದು ಕಾರನ್ನು ಕೂಡ ಉಡುಗೊರೆಯನ್ನಾಗಿ ಕೊಟ್ಟಿತ್ತು ಎನ್ನಲಾಗುತ್ತಿದೆ.

 

ಇದನ್ನೂ ಓದಿ: Hyundai Mufasa : ಹ್ಯುಂಡೈ ಕ್ರೆಟಾಗಿಂತ ದೊಡ್ಡದಾದ SUV ಶೀಘ್ರ ಮಾರುಕಟ್ಟೆಗೆ!

Leave A Reply

Your email address will not be published.