Tirumala: ತಿರುಮಲ ಬೆಟ್ಟ ಹತ್ತುವಾಗ ಕಾಲು ನೋವಾಗುವುದಿಲ್ಲ ; ಯಾಕೆ? ನೋಡಿ ಇದೇ ಕಾರಣ!

Tirumala : ಚಿತ್ತೂರು ಜಿಲ್ಲೆಯ (Chittoor district) ಆಂಧ್ರಪ್ರದೇಶದಲಿರುವ (Andhra Pradesh) ತಿರುಪತಿಯು (Tirupati) ಹಿಂದೂ ಧರ್ಮದವರು (Hindu religion) ಮೊದಲಿನಿಂದಲು ಆರಾಧನೆ ಮಾಡಿಕೊಂಡು ಬಂದ ಬೃಹತ್ ದೇವಾಲಯವಾಗಿದೆ (temple). ತಿರುಪತಿ ತಿಮ್ಮಪ್ಪನ ದೇವಾಲಯವು (tirupati timmappa temple) ಅತ್ಯಂತ ಜನಪ್ರಿಯ ದೇವಾಲಯವಾಗಿದೆ. ಭಕ್ತಿಯಿಂದ ಶ್ರೀ ವೆಂಕಟರಮಣ ದೇವರ ಆಶೀರ್ವಾದವನ್ನು ಪಡೆದುಕೊಳ್ಳಲು ಇಲ್ಲಿಗೆ ಪ್ರತಿ ವರ್ಷ ಲಕ್ಷಾಂತರ ಭಕ್ತಾಭಿಮಾನಿಗಳು ಭೇಟಿ ನೀಡುತ್ತಾರೆ. ಈ ದೇವಾಲಯ ಹೆಚ್ಚಿನ ಪ್ರಮಾಣದ ದಾನಗಳನ್ನು ಪಡೆದುಕೊಳ್ಳುವ ದೇವಾಲಯಗಳಲ್ಲಿ ಒಂದಾಗಿದೆ. ಭಕ್ತರು ತಮ್ಮೆಲ್ಲಾ ಇಚ್ಛೆಯನ್ನು ಈಡೇರಿಸುವಂತೆ ಭಗವಂತನಲ್ಲಿ ಬೇಡಿಕೊಳ್ಳುತ್ತಾರೆ. ಮತ್ತು ಇಚ್ಛೆ ಫಲಿಸಿದ ನಂತರ ದೇವಾಲಯದ (tirupati temple) ಹುಂಡಿಯಲ್ಲಿ ತಮ್ಮ ದಾನವನ್ನು ನೀಡುವುದು ವಾಡಿಕೆ. ಇಲ್ಲಿನ ತಿರುಮಲ (Tirumala) ಬೆಟ್ಟ ಏರುವಾಗ ಭಕ್ತರಿಗೆ ಕಾಲು ನೋಯುವುದಿಲ್ಲ. ಯಾಕೆ ಗೊತ್ತಾ?

ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಆಂಜನೇಯ ಸ್ವಾಮಿಗೆ ಮಂಡಿಯೂರಿ ನಮಸ್ಕರಿಸಿ ತಿರುಮಲಕ್ಕೆ ಕಾಲಿಟ್ಟರೆ ಕಾಲು ನೋವು ಬರುವುದಿಲ್ಲ ಎಂಬುದು ಭಕ್ತರ ನಂಬಿಕೆ. ಈ ದೇವಾಲಯಕ್ಕೆ ಪ್ರತಿ ದಿನ 80 ಸಾವಿರದಿಂದ 100,000 ಜನರು ಸ್ವಾಮಿಯ ದರ್ಶನಕ್ಕೆ ಬರುತ್ತಾರೆ. ಹೆಚ್ಚಿನವರು ಬಹಳ ಭಕ್ತಿಯಿಂದ ತಿರುಮಲ ಬೆಟ್ಟವನ್ನು ಏರುತ್ತಾರೆ. ಬೆಟ್ಟ ಹತ್ತುವಾಗ ಕರ್ಪೂರವನ್ನು ಬೆಳಗುತ್ತಾರೆ. ಗೋವಿಂದನ ನಾಮವನ್ನು ಜಪಿಸುತ್ತಾರೆ.

ಭಕ್ತಾದಿಗಳು ಕಷ್ಟಪಟ್ಟು ಏಳು ಬೆಟ್ಟಗಳನ್ನು ಏರಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದರೆ ತಮ್ಮ ಕಷ್ಟಗಳೆಲ್ಲ ಕಳೆಯುತ್ತವೆ ಎಂಬ ನಂಬಿಕೆ. ಹೀಗೆ ಬೆಟ್ಟ ಹತ್ತುವಾಗ ಅಲಿಪಿರಿ ಪಾದ ಮಂಟಪವನ್ನು ದಾಟಿದ 100 ಮೀಟರ್ ನಂತರ ಬಲಭಾಗದಲ್ಲಿ ತಲೆಯೇರು ಬಂಡೆ ಕಾಣಿಸುತ್ತದೆ.
ಈ ಬಂಡೆಯಲ್ಲಿ ಆಂಜನೇಯ ಸ್ವಾಮಿ ಇರುವುದಾಗಿ ಭಕ್ತರು ನಂಬಿಕೆ. ಅಲ್ಲದೆ, ಈ ಬಂಡೆಗೆ ತಲೆಬಾಗಿ ನಮಸ್ಕರಿಸಿ, ಪ್ರಾರ್ಥಿಸಿದರೆ ಕಾಲು ನೋವು ನಿವಾರಣೆಯಾಗುತ್ತದೆ ಎಂದು ಭಕ್ತರು ಹೇಳುತ್ತಾರೆ. ಹಾಗಾಗಿ ಇಂದಿಗೂ ಇಲ್ಲಿನ ಭಕ್ತರು ಆಂಜನೇಯನಿಗೆ ಮಂಡಿಯೂರಿ, ತಲೆಬಾಗಿ ನಮಸ್ಕರಿಸಿ ತಿರುಮಲ ಬೆಟ್ಟ ಏರುತ್ತಾರೆ. ಈ ಕಾರಣದಿಂದ ತಿರುಮಲ ಬೆಟ್ಟ ಏರುವಾಗ ಭಕ್ತರಿಗೆ ಕಾಲು ನೋಯುವುದಿಲ್ಲ.

ಹಿಂದೆ ಆಳ್ವಿಕೆ ನಡೆಸಿದ ವಿಜಯನಗರದ ಅರಸ ಶ್ರೀಕೃಷ್ಣದೇವರಾಯರು ಕೂಡ ಈ ಬಂಡೆಗೆ ನಮಸ್ಕರಿಸಿ ನಂತರ ತಿರುಮಲ ಬೆಟ್ಟ ಏರಿದ್ದರು ಎಂಬ ಐತಿಹ್ಯ.

Leave A Reply

Your email address will not be published.