Film News: ವೇಶ್ಯಾವಾಟಿಕೆಯಲ್ಲಿ ಸಿಲುಕಿ ಭಾರೀ ಸುದ್ದಿಯಾದ ಭಾರತೀಯ ಚಿತ್ರರಂಗದ ಖ್ಯಾತ ನಟಿಯರು ಇವರು!
Film News : ಚಿತ್ರರಂಗದಲ್ಲಿ ನಟಿಮಣಿಯರು ಎದುರಿಸುತ್ತಿರುವ ದೊಡ್ಡ ಸಮಸ್ಯೆ ಎಂದರೆ ಅದು ಕಾಸ್ಟಿಂಗ್ ಕೌಚ್. ಇದು ಇಂದು ನಿನ್ನೆಯದಲ್ಲ, ತುಂಬಾ ಹಿಂದಿನಿಂದನೂ ನಟಿಯರು ಎದುರಿಸುತ್ತಿರುವ ಸಮಸ್ಯೆಯಾಗಿದೆ. ಸಿನಿಮಾಗಳಲ್ಲಿ ಅಭಿನಯಿಸಲು, ಅವಕಾಶ ಪಡೆಯಲು ನಾಯಕ ನಟಿಯರು ಇಂತಹ ಸಾಕಷ್ಟು ಕಷ್ಟ ಪಡಬೇಕಾಗುತ್ತದೆ. ಕೆಲವು ನಟಿಯರು ಇಂತಹ ಸಂಕಷ್ಟಗಳಲ್ಲಿ ಸಿಲುಚಿಕೊಂಡರೆ, ಎನ್ನು ಕೆಲವು ನಟಿ ನಾರಿಯರು ದಾರಿ ತಪ್ಪಿ ವೇಶ್ಯಾವಾಟಿಕೆಗೆಗಿಳಿದು ತಮ್ಮ ಜೀವನವನ್ನು ಹಾಳು ಮಾಡಿಕೊಂಡಿದ್ದಾರೆ. ಅಂತಹ ನಟಿಯರು ಯಾರೆಂಬುದು ನಿಮಗೆ ಗೊತ್ತಾ? ಇಲ್ಲಿದೆ ನೋಡಿ ಕೆಲವಿಷ್ಟು ಮಾಹಿತಿ.
ತೆಲುಗು(Telugu) ಸಿನಿಮಾಗಳ (Film News) ಖ್ಯಾತ ನಟಿಯಾಗಿದ್ದ ನೀತು ಅಗರ್ವಾಲ್(Neetu Aggerwal) ರವರ ಹೆಸರು ಕ ದಂಧೆಯಲ್ಲಿ ಕಂಡುಬಂದಿತ್ತು. ಈ ಆರೋಪದ ಮೇಲೆ ಅವರನ್ನು ಆಂಧ್ರಪ್ರದೇಶದ ಪೊಲೀಸರು ಅರೆಸ್ಟ್ ಮಾಡಿದ್ದರು. ಬಾಲಿವುಡ್ ಚಿತ್ರರಂಗದ ಖ್ಯಾತ ನಟಿಯಾಗಿರುವ ಶ್ವೇತಾ ಬಸುಪ್ರಸಾದ್(Shwetha Basu Prasad) ಅವರು ಕೂಡ ಇದೇ ವಿಚಾರದಲ್ಲಿ ಅರೆಸ್ಟ್ ಆಗಿದ್ದರು. ಈ ವೇಳೆ ಅವರು ನಾನು ಕೇವಲ ಅಲ್ಲಿ ಅವಾರ್ಡ್ ಫಂಕ್ಷನ್ಗಾಗಿ ಹೋಗಿದ್ದೆ ಎಂಬುದಾಗಿ ಮೊಸಳೆ ಕಣ್ಣೀರು ಹಾಕಿದ್ದರು.
ರಾಜಸ್ಥಾನದ ನಟಿ ಐಷ್ ಅನ್ಸಾರಿ(Aish Ansari) ರವರನ್ನು 2011 ರಲ್ಲಿ ಪೊಲೀಸರು ಇದೇ ಕಾರ್ಯದಲ್ಲಿ ಭಾಗಿಯಾಗಿದ್ದಕ್ಕೆ ಅರೆಸ್ಟ್ ಮಾಡಿದ್ದರು. ಬಿ ಗ್ರೇಡ್ ಸಿನಿಮಾಗಳಲ್ಲಿ ಹೆಜ್ಜೆ ಹಾಕುವ ಮೂಲಕ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದ ಭುವನೇಶ್ವರಿ(Actress Bhuvaneshwari) ಅವರನ್ನು ಕೂಡ ಚೆನ್ನೈ ಪೋಲೀಸರು ಇದೇ ಕಾರಣಕ್ಕಾಗಿ ಅರೆಸ್ಟ್ ಮಾಡಿದ್ದರು.
ದಕ್ಷಿಣ ಭಾರತ ಚಿತ್ರರಂಗದ ಇನ್ನಿಬ್ಬರು ನಟಿಯರಾಗಿರುವ ಕೆರೋಲಿನ್ ಹಾಗೂ ಸೈರಾಬಾನು ಇಬ್ಬರನ್ನು ಕೂಡ ಇದೇ ವಿಚಾರದ ಮೇಲೆ 2010 ಹಾಗೂ 12ರಲ್ಲಿ ಬಂಧಿಸಲಾಗಿತ್ತು. ಶಿಲ್ಪ ಶೆಟ್ಟಿ ಅವರ ಪತಿ ರಾಜ್ ಕುಂದ್ರ ರವರು ಕೂಡ ಇಂತಹ ಸಿನಿಮಾಗಳನ್ನು ಮಾಡುತ್ತಾರೆ ಎಂಬ ಕಾರಣಕ್ಕಾಗಿ ಅದರಲ್ಲಿ ಶರ್ಲಿನ್ ಚೋಪ್ರಾ ಕೂಡ ಭಾಗವಹಿಸಿದ್ದರು ಎನ್ನುವ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು.
ಅಂದಹಾಗೆ ಸಿನಿಮಾ ರಂಗಕ್ಕೆ ಬಂದ ನಂತರ ಖ್ಯಾತಿಗಳಿಸಿದ ಬಳಿಕ ಕೋಟ್ಯಾಂತರ ರೂಪಾಯಿಯನ್ನು ಸಂಪಾದಿಸಬಹುದು. ಆದರೆ ಹಣಕ್ಕಾಗಿ ಇಂತಹ ಅನ್ಯ ಮಾರ್ಗಗಳನ್ನು ಹಿಡಿಯುವುದು ಸರಿಯಲ್ಲ. ಸೆಲೆಬ್ರಿಟಿಗಳಾಗಿ ಸಮಾಜದ ನಾಲ್ಕರು ಮಂದಿಗೆ ಮಾದರಿಯಾಗುವವರು ಇಂತಹ ಒಂದು ನೀಚ ಕೃತ್ಯಗಳಲ್ಲಿ ಭಾಗಿಯಾಗುವುದು ನಿಜಕ್ಕೂ ದುರಾದೃಷ್ಟಕರ ಸಂಗತಿಯಾಗಿದೆ.
ಅಂದಹಾಗೆ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ಅಭಿನಯಿಸಿರುವ ನಟಿ ಯಮುನಾ ಕೂಡ 12 ವರ್ಷಗಳ ಹಿಂದೆ ಈ ವೇಶ್ಯವಾಟಿಕೆಯ ಬಲೆಯಲ್ಲಿ ಸಿಲುಕಿಕೊಂಡಿದ್ದರು. ಬೆಂಗಳೂರಿನ ಐಷಾರಾಮಿ ಹೋಟೆಲ್‌ನಲ್ಲಿ ನಾಲ್ಕು ಮಹಡಿಗಳನ್ನು ಬಾಡಿಗೆ ಪಡೆದುಕೊಂಡು, ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬ ಆರೋಪದಡಿ ಪೊಲೀಸರು ರೇಡ್ ಮಾಡಿ, ನಟಿ ಯಮುನಾರನ್ನು ವಶಕ್ಕೆ ಪಡೆದಿದ್ದರು. ಕೊನೆಗೆ ಈ ಘಟನೆಯಲ್ಲಿ ನಾನು ನಿರಪರಾಧಿ ಎಂದು ಯಮುನಾ ಸಾಬೀತು ಮಾಡಿದ್ದರು. ಆದರೆ ಜನರು ಪದೆ ಪದೇ ಸಾಮಾಜಿಕ ಜಾಲತಾಣದಲ್ಲಿ ನನ್ನನ್ನು ಟಾರ್ಗೆಟ್ ಮಾಡುತ್ತಿರುವುದು ತಪ್ಪು ಎಂದು ಹೇಳಿಕೊಂಡು ಬೇಸರವನ್ನು ವ್ಯಕ್ತಪಡಿಸಿದ್ದರು.