NASA: ಚಂದಿರ ಭೂಮಿಗೆ ಇನ್ನಷ್ಟು ಹತ್ತಿರ! ವಿಜ್ಞಾನಿಗಳು ಫುಲ್ ಟೆನ್ಷನ್
NASA :ಕಳೆದ ವಾರದಿಂದ ನಾಸಾ ವಿಜ್ಞಾನಿಗಳು (NASA scientist) ಕ್ಷುದ್ರ ಗ್ರಹಗಳ (asteroids)ಬಗ್ಗೆ ಹೆಚ್ಚಿನ ಮಾಹಿತಿ ಕಂಡುಹಿಡಿದಿದ್ದು ಅದರಲ್ಲಿ ಕ್ಷುದ್ರ ಗ್ರಹಗಳು ಭೂಮಿಯ ಕಡೆಗೆ ಬಂದಾಗ ಅವು ತುಂಬಾ ಸಾಮಾನ್ಯವಾಗಿದೆ ಎಂಬ ವಿಷಯದ ಬಗ್ಗೆ ಯಾವ ರೀತಿ ವಿಜ್ಞಾನಿಗಳು (scientist) ಸಂಶೋಧಿಸಿದ್ದಾರೆ ಎಂದು ತಿಳಿಯೋಣ ಬನ್ನಿ.
ಕ್ಷುದ್ರಗ್ರಹಗಳಿಂದ (asteroids) ಭೂಮಿಯು (Earth) ಪ್ರತಿ ಸಲವೂ ಅಪಾಯದಲ್ಲಿದೆ. ಆಗಾಗ ಕ್ಷುದ್ರ ಗ್ರಹಗಳು ಭೂಮಿಯ ಕಡೆಗೆ ಬರುತ್ತಲೇ ಇರುತ್ತವೆ. ಆದರೆ ಯಾವುದೂ ನೆಲಕ್ಕೆ ಅಪ್ಪಳಿಸಿ ಗಂಭೀರ ಸ್ಥಿತಿಗೆ ತಲುಪಲಿಲ್ಲ ಈಗ ಈ ಕ್ಷುದ್ರ ಗ್ರಹಗಳ ಪಟ್ಟಿಗೆ ಮತ್ತೊಬ್ಬರು ಸೇರ್ಪಡೆಯಾಗುತ್ತಿದೆ. ಅದು ಯಾವುದೆಂಬರ ಬಗ್ಗೆ ತಿಳಿಯೋಣ ಬನ್ನಿ.
ಲಂಡನ್ನ ಬಿಗ್ ಬೆನ್ ಗಾತ್ರದ ಬೃಹತ್ ಕ್ಷುದ್ರಗ್ರಹ (big asteroids) ಇಂದು ಭೂಮಿಯ ಸಮೀಪ ಬರಲಿದೆ ಅಂತೆ. ಬಹಳ ಭಯ ಪಡುವ ವಿಷಯ ಏನೆಂದರೆ ಚಂದಿರನಿಗಿಂತ (moon) ಹತ್ತಿರ (near) ಬರುತ್ತಿದೆ ಎಂದು. ಈ ಕ್ಷುದ್ರಗ್ರಹವು ಭೂಮಿಯ ಕಕ್ಷೆಯಿಂದ (orbit) ಹೊರಹೋಗಲಿದೆ. ಇದು ತುಂಬಾನೇ ಆಘಾತಕಾರಿ ವಿಷಯವಾಗಿದೆ.
ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ) ಈ ಕ್ಷುದ್ರಗ್ರಹಕ್ಕೆ 2023 DZ2 ಎಂಬ ಹೆಸರಿನಿಂದ ಕರೆಯುತ್ತಾರೆ. ಮಾರ್ಚ್ 25 ರ ಶನಿವಾರ (Saturday) ಅಂದರೆ ಇಂದು ಈ ಕ್ಷುದ್ರ ಗ್ರಹವು ಚಂದ್ರನು ಭೂಮಿಗೆ ಎರಡು ಪಟ್ಟು ಸಮೀಪಕ್ಕೆ (near) ಬರಲಿದೆ ಎಂದು ನಾಸಾ ವಿಜ್ಞಾನಿಗಳು (NASA scientist) ತಿಳಿಸಿದ್ದಾರೆ. ಇದು ಭೂಮಿಗೆ ಹತ್ತಿರ ಬಂದಾಗ ಸುಮಾರು 107,500 ಮೈಲುಗಳು (173,004 ಕಿಲೋಮೀಟರ್) ದೂರದಲ್ಲಿದೆ ಎಂದು ತಿಳಿಸಿದ್ದಾರೆ. ಈ ಕ್ಷುದ್ರ ಗ್ರಹವನ್ನು (asteroids) ಜನರು ಬರಿಗಣ್ಣಿನಿಂದ ನೋಡಿ ಕಣ್ತುಂಬಿಕೊಳ್ಳಬಹುದು.
ಈ ಕ್ಷುದ್ರ ಗ್ರಹಗಳು ಆಗ್ನೇಯ ಏಷ್ಯಾದ ದೇಶಗಳಲ್ಲಿ ಮಾತ್ರ ಕಂಡುಬರುತ್ತದೆ. ಈ ಕ್ಷುದ್ರ ಗ್ರಹಗಳನ್ನು ಭಾರತದ (India) ಜನರು ನೋಡಲು ನಾಸಾದ ಕ್ಷುದ್ರಗ್ರಹ ತಂಡವು 300 ಅಡಿ ಅಗಲದ ಬಂಡೆಯನ್ನು ತನಿಖೆ ನಡೆಸುತ್ತಿದ್ದಾರೆ. ಪ್ರತಿ ಹತ್ತು ವರ್ಷಗಳಿಗೊಮ್ಮೆ (10 years) ಈ ಕ್ಷುದ್ರಗ್ರಹವು ಇದರ ಹತ್ತಿರ ಬರುತ್ತದೆ. ಅವುಗಳ ಗಾತ್ರ 140 ರಿಂದ 310 ಅಡಿಗಳಿದ್ದು ಇನ್ನಷ್ಟು ಸಮೀಪ ಬರುತ್ತಿರುವಾಗ ಇದರ ಬಗ್ಗೆ ವಿಜ್ಞಾನಿಗಳು (scientist) ಅದನ್ನು ವೀಕ್ಷಿಸಿ ಕಣ್ತುಂಬಿಕೊಳ್ಳಲು ಅಪರೂಪದ ಅವಕಾಶವೆಂದು ತಿಳಿಸಿದ್ದಾರೆ.
ಇಂದು ಭೂಮಿಗೆ ಕ್ಷುದ್ರಗ್ರಹ ಅಪ್ಪಳಿಸುವ ಸಾಧ್ಯತೆ ಇಲ್ಲ. ಆದರೆ ಇದು ಹತ್ತಿರವಾಗುತ್ತಿದ್ದು ಅದನ್ನು ಹಗುರವಾಗಿ ಪರಿಗಣಿಸಬಾರದು ಎನ್ನುತ್ತಾರೆ ವಿಜ್ಞಾನಿಗಳು. ಅಂತಹ ಕ್ಷುದ್ರಗ್ರಹಗಳನ್ನು ಬಾಹ್ಯಾಕಾಶದಲ್ಲಿ ಸ್ಫೋಟಿಸುವ ತಂತ್ರಜ್ಞಾನವನ್ನು ನಾವು ಮತ್ತಷ್ಟು ಅಭಿವೃದ್ಧಿಪಡಿಸಬೇಕು ಎಂದು ವಿಜ್ಞಾನಿಗಳು ಹೇಳುತ್ತಾರೆ. ಈಗಾಗಲೇ, ನಾಸಾ ಒಂದು ಸಣ್ಣ ಕ್ಷುದ್ರಗ್ರಹವನ್ನು ಸ್ಫೋಟಿಸಿತು.
ಈ ಕ್ಷುದ್ರಗ್ರಹವನ್ನು ಮೊದಲು ಫೆಬ್ರವರಿ 27 (February 27) ರಂದು ಕಂಡುಹಿಡಿಯಲಾಯಿತು. ಇದನ್ನು ಯುರೋಪಿಯನ್ (European) ನಿಯರ್ ಅರ್ಥ್ ಕ್ಷುದ್ರಗ್ರಹಗಳ ಸಂಶೋಧನಾ ಯೋಜನೆಯ ಭಾಗ ಎಂದು ಗುರುತಿಸಿದ್ದಾರೆ. ಆ ಸಂದರ್ಭದಲ್ಲಿ ಇದು ಭೂಮಿಯಿಂದ 159 ಮಿಲಿಯನ್ ಕಿಲೋಮೀಟರ್ ದೂರದಲ್ಲಿದೆ ಎಂದು ವಿಜ್ಞಾನಿಗಳು ತಿಳಿಸುತ್ತಾರೆ. ಈ ಕ್ಷುದ್ರ ಗ್ರಹಗಳು ಸೂರ್ಯನ(sun) ಸುತ್ತ ಒಂದು ಸುತ್ತು ಸುತ್ತಲೂ ಬೇಕಾದರೂ ಇದು 3.16 ವರ್ಷಗಳನ್ನು ತೆಗೆದುಕೊಳ್ಳುತ್ತದೆ ಎಂದು ವಿಜ್ಞಾನಿಗಳು (scientist)ಸಂಶೋಧನೆಯ ಪ್ರಕಾರ ತಿಳಿಸಿದ್ದಾರೆ.
ಅದೇ ರೀತಿ ಈ ಕ್ಷುದ್ರ ಗ್ರಹಗಳು ಇನ್ನು ಮುಂದೆ 2026 ರಲ್ಲಿ ಮತ್ತೆ ಭೂಮಿಯ ಸಮೀಪಕ್ಕೆ (Earth near) ಬಂದು ಕಾಣಿಸಿಕೊಳ್ಳಲಿದೆ. ಮಿಂಚಿನ ಹೊಡೆತ ಆಗದಿದ್ದರೆ 2029ರಲ್ಲಿ ಭೂಮಿಗೆ ಹತ್ತಿರ ಬರಲಿದೆ ಎಂದು ವಿಜ್ಞಾನಿಗಳು (scientist) ಸಂಶೋಧನೆಯಲ್ಲಿ ತಿಳಿದ ಮಾಹಿತಿಯ ಪ್ರಕಾರ ಇದನ್ನು ತಿಳಿಸಿದ್ದಾರೆ.