Maruti Suzuki Nexa : ಭರ್ಜರಿ 20 ಲಕ್ಷ ಕಾರುಗಳ ಮಾರಾಟ ಕಂಡ Nexa!!!

Maruti Suzuki Nexa: ಭಾರತದಲ್ಲಿ (india )ಅತಿ ಹೆಚ್ಚು ಮಾರಾಟವಾದ ಕಾರುಗಳ ಪೈಕಿ ಮಾರುತಿ ಸುಜುಕಿ ಕೂಡ ಒಂದು ಎಂಬುದನ್ನು ಇದೀಗ ಮತ್ತೇ ಸಾಬೀತು ಪಡಿಸಿದೆ. ಹೌದು, ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ(Maruti Suzuki Nexa) ತನ್ನ NEXA ಡೀಲರ್‌ಶಿಪ್ ನೆಟ್‌ವರ್ಕ್ ಮೂಲಕ ದೇಶದಲ್ಲಿ 2 ಮಿಲಿಯನ್ ಸಂಚಿತ ಮಾರಾಟದ ಮೈಲಿಗಲ್ಲನ್ನು ಸಾಧಿಸಿದೆ ಎಂದು ಘೋಷಿಸಿದೆ.

ಪ್ರಸ್ತುತ ಮಾರುತಿ ಸುಜುಕಿ NEXA ಪ್ರಸ್ತುತ 280+ ನಗರಗಳಲ್ಲಿ 440 ಶೋರೂಂಗಳನ್ನು ಹೊಂದಿದೆ. ಮಾಹಿತಿ ಪ್ರಕಾರ 50% NEXA ಗ್ರಾಹಕರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂದು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಹೇಳಿಕೊಂಡಿದ್ದು, ಇದು ಯುವ ಪೀಳಿಗೆಯ ನಡುವೆ ಬ್ರ್ಯಾಂಡ್ ಬೆಳೆಯುತ್ತಿದೆ ಎನ್ನಲಾಗಿದೆ. ಮಾರುತಿ ಸುಜುಕಿ ಪ್ರಸ್ತುತ NEXA ಡೀಲರ್‌ಶಿಪ್‌ಗಳ ಮೂಲಕ ಇಗ್ನೀಸ್, ಬಲೆನೊ, ಸಿಯಾಜ್, XL6 ಮತ್ತು ಗ್ರ್ಯಾಂಡ್ ವಿಟಾರಾ ಕಾರುಗಳನ್ನು ಮಾರಾಟ ಮಾಡುತ್ತಿದೆ. ಇವುಗಳಲ್ಲಿ ಮಾರುತಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿ ಪ್ರಸ್ತುತ ದೇಶದಲ್ಲಿ 27.84 ಕಿ.ಮೀ ಮೈಲೇಜ್ ನೀಡುವ ಅತ್ಯಂತ ಉತ್ತಮ ಮೈಲೇಜ್ ನೀಡುವ ಎಸ್‍ಯುವಿಯಾಗಿದೆ.

ಸದ್ಯ ಮಾರುತಿ ಸುಜುಕಿ ಶೀಘ್ರದಲ್ಲೇ ಎರಡು ಹೊಸ ಎಸ್‌ಯುವಿಗಳನ್ನು ನೆಕ್ಸಾ ಶೋರೂಮ್‌ಗಳಿಗೆ ಪರಿಚಯಿಸಲಿದೆ. ಮುಂಬರುವ ಏಪ್ರಿಲ್‌ನಲ್ಲಿ ಫ್ರಾಂಕ್ಸ್ ಕ್ರಾಸ್‌ಒವರ್ ಬಿಡುಗಡೆಯಾಗಲಿದ್ದು, ಈ ಹೊಸ ಕೂಪೆ ಎಸ್‍ಯುವಿಯು ಸಿಗ್ಮಾ, ಡೆಲ್ಟಾ, ಡೆಲ್ಟಾ+, ಝೀಟಾ ಮತ್ತು ಆಲ್ಫಾ ಎಂಬ ಐದು ರೂಪಾಂತರಗಳಲ್ಲಿ ಲಭ್ಯವಿದೆ.

ಇನ್ನು ಮಾರುತಿ ಸುಜುಕಿ ಕಂಪನಿಯು ಫ್ರಾಂಕ್ಸ್ ಕೂಪೆ ಎಸ್‌ಯುವಿಯ ಬಿಡುಗಡೆ ದಿನಾಂಕವನ್ನು ಇನ್ನೂ ಕೂಡ ಬಹಿರಂಗಪಡಿಸಿಲ್ಲ.

ಫ್ರಾಂಕ್ಸ್ ಕೂಪೆ ಎಸ್‍ಯುವಿ 1.2 ಲೀಟರ್ ಡ್ಯುಯಲ್‌ಜೆಟ್ ಪೆಟ್ರೋಲ್ ಎಂಜಿನ್‌ನೊಂದಿಗೆ ಲಭ್ಯವಿರುತ್ತದೆ. ಗೇರ್ ಬಾಕ್ಸ್ ಆಯ್ಕೆಗಳು 5-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಇನ್ನು ಈ ಮಾರುತಿ ಸುಜುಕಿ ಜಿಮ್ನಿ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಇದು ಝೀಟಾ ಮತ್ತು ಆಲ್ಫಾ ಎಂಬ ಎರಡು ಟ್ರಿಮ್‌ಗಳಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ. Arkamys ಸರೌಂಡ್ ಸೆನ್ಸ್‌ನೊಂದಿಗೆ 9-ಇಂಚಿನ SmartPlay Pro+ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ. ಇದರೊಂದಿಗೆ ಈ ಮಾರುತಿ ಜಿಮ್ನಿ 5 ಡೋರ್ ಎಸ್‍ಯುವಿಯಲ್ಲಿ ಇತ್ತೀಚಿನ ಸ್ಮಾರ್ಟ್‌ಫೋನ್ ಸಂಪರ್ಕ, ಲೆದರ್ ಸುತ್ತುವ ಸ್ಟೀರಿಂಗ್ ವೀಲ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಪುಶ್ ಸ್ಟಾರ್ಟ್/ಸ್ಟಾಪ್, ಎಲೆಕ್ಟ್ರಿಕಲ್ ಅಡ್ಜಸ್ಟ್ ಮಾಡಬಹುದಾದ ಗ್ಲಾಸ್ ಅನ್ನು ಹೊಂದಿದೆ. ಈ ವಾಷರ್, ಫಾಗ್ ಜೊತೆ LED ಆಟೋ ಹೆಡ್‌ಲ್ಯಾಂಪ್‌ಗಳಂತಹ ವೈಶಿಷ್ಟ್ಯಗಳು ಲ್ಯಾಂಪ್‌ಗಳನ್ನು ಹೊಂದಿವೆ. ಇನ್ನು ಬಾಡಿ ಬಣ್ಣದ ORMVಗಳು, ಅಲಾಯ್ ವ್ಹೀಲ್ ಗಳು ಮತ್ತು ಟಾಪ್-ಎಂಡ್ ಆಲ್ಫಾ ಟ್ರಿಮ್‌ನಲ್ಲಿ ಪ್ರತ್ಯೇಕವಾಗಿ ನೀಡಲಾಗುತ್ತದೆ.

ಇನ್ನು ಸ್ಟ್ಯಾಂಡರ್ಡ್ ಫೀಚರ್ ಕಿಟ್ ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಂಪರ್ಕದೊಂದಿಗೆ ಸ್ಮಾರ್ಟ್‌ಪ್ಲೇ ಪ್ರೊ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಈ ಎಸ್‍ಯುವಿಯಲ್ಲಿ 1.5 ಲೀಟರ್ ಡ್ಯುಯಲ್ ಜೆಟ್ ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತದೆ, ಅದು 5-ಸ್ಪೀಡ್ ಮ್ಯಾನುವಲ್ ಅಥವಾ 4-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಹೊಂದಬಹುದು. ಈ ಎಂಜಿನ್ 102 ಬಿಹೆಚ್‍ಪಿ ಪವರ್ ಮತ್ತು 137 Nm ಟಾರ್ಕ್ ಉತ್ಪಾದಿಸುತ್ತದೆ.

ಸದ್ಯ ಬಿಡುಗಡೆಗೆ ಸಜ್ಜಾದ ಹೊಸ ಮಾರುತಿ ಫ್ರಾಂಕ್ಸ್ ಎಸ್‍ಯುವಿಯು ಮಾರುತಿಯ ಬಲೆನೊ ಹ್ಯಾಚ್‌ಬ್ಯಾಕ್ ಅನ್ನು ಆಧರಿಸಿದ್ದು, ಹೊಸ ಮಾರುತಿ ಫ್ರಾಂಕ್ಸ್ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕಿಗರ್ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಈ ಹೊಸ ಮಾರುತಿ ಕೂಪೆ ಎಸ್‌ಯುವಿಯನ್ನು ಪ್ರೀಮಿಯಂ ನೆಕ್ಸಾ ಡೀಲರ್‌ಶಿಪ್‌ಗಳ ಮೂಲಕ ಮಾರಾಟ ಮಾಡಲಾಗುತ್ತದೆ ಎಂಬ ಮಾಹಿತಿ ಇದೆ.

Leave A Reply

Your email address will not be published.