Health Tips : ಕಪ್ಪು ಮೊಣಕೈ ಸಮಸ್ಯೆ ನಿವಾರಣೆಗೆ ಈ ಎಲೆ ರಾಮಬಾಣ!

Curry Leaves Benefits : ಸೌಂದರ್ಯದ (Beauty)ವಿಷಯದಲ್ಲಿ ಮಹಿಳೆಯರಿಗೆ ಹೆಚ್ಚಿನ ಒಲವು ತೋರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ!! ಮೊಗದ ಮೇಲೆ ಹೆಚ್ಚಿನವರು ಕಾಳಜಿ ತೋರುವಷ್ಟು ಕೈ ಪಾದದ ಬಗ್ಗೆ ಗಮನ ವಹಿಸುವುದಿಲ್ಲ. ಹೀಗಾಗಿ, ಕೈ, ಪಾದಗಳಲ್ಲಿ ಕಪ್ಪು ಕಲೆ ಮೂಡುವುದು ಸಹಜ. ಆದರೆ, ನಾವೆಲ್ಲ ಅಡಿಗೆಯಲ್ಲಿ ಬಳಕೆ ಮಾಡುವ ಕರಿಬೇವು ಎಲೆಗಳು ಕೈ ಕಾಲುಗಳ ಸೌಂದರ್ಯ ಕಾಪಾಡುವಲ್ಲಿ ನೆರವಾಗುತ್ತದೆ ಎಂಬ ವಿಚಾರ ಹೆಚ್ಚಿನವರಿಗೆ ತಿಳಿದಿಲ್ಲ. ಹಾಗಿದ್ರೆ, ಮೊಣಕೈ ಕಾಲುಗಳಲ್ಲಿ ಕಪ್ಪು ಕಲೆಗಳನ್ನು ಹೋಗಲಾಡಿಸಲು ಕರಿಬೇವನ್ನು ಹೇಗೆ ಬಳಕೆ ಮಾಡಬೇಕು ಗೊತ್ತೇ?

ಭಾರತೀಯರ ಅಡುಗೆ ಶೈಲಿಯಲ್ಲಿ ಕರಿ ಬೇವಿನ(Curry Leaves) ಎಲೆ ಇಲ್ಲದೇ ಅಡುಗೆಯೇ(Food) ಆಗದು ಎಂಬಷ್ಟರ ಮಟ್ಟಿಗೆ ಕರಿಬೇವು ವಿಶೇಷ ಮಹತ್ವ ಪಡೆದಿದೆ. ಎಲೆಗಳು ಔಷಧೀಯ ಗುಣಗಳನ್ನು(Curry Leaves Benefits) ಹೊಂದಿದೆ. ಕರಿಬೇವಿನಲ್ಲಿ ಕಬ್ಬಿಣ(Iron), ಕ್ಯಾಲ್ಸಿಯಂ(calcium), ವಿಟಮಿನ್ ಎ, ಬಿ, ಸಿ ಇದ್ದು,ಇದು ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ನೆರವಾಗುತ್ತದೆ.ಕರಿಬೇವಿನ ಎಲೆಗಳು ಲಿನೂಲ್, ಆಲ್ಫಾ-ಟೆರ್ಪಿನೆನ್, ಮೈರ್ಸೀನ್, ಮಹಾನಿಂಬೈನ್, ಕ್ಯಾರಿಯೊಫಿಲೀನ್, ಮುರಾಯನಾಲ್, ಮತ್ತು ಆಲ್ಫಾ-ಪಿನೆನ್ ಸೇರಿದಂತೆ ಹಲವು ಪೋಷಕಾಂಶಗಳನ್ನು ಒಳಗೊಂಡಿರುವ ಬಗ್ಗೆ ಸಂಶೋಧನೆಗಳು ಮಾಹಿತಿ ನೀಡಿದೆ. ಇದಲ್ಲದೆ, ಕರಿ ಬೇವನ್ನು ನಿಯಮಿತವಾಗಿ ಸೇವಿಸಿದರೆ ಅತಿಸಾರ, ಮಲಬದ್ದತೆ, ಮಧುಮೇಹ, ತೂಕ ನಷ್ಟದಂತಹ ಸಮಸ್ಯೆಗಳು ನಿವಾರಣೆ ಯಾಗುತ್ತದೆ.

ಎಷ್ಟೋ ಬಾರಿ ನಮ್ಮ ಸುತ್ತಮುತ್ತಲಲ್ಲೇ ದೊರೆಯುವ ಕೆಲವು ವಸ್ತುಗಳ ಬಳಕೆಯಿಂದ ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಕರಿಬೇವಿನ ಸೊಪ್ಪಿನಿಂದ(Curry Leaves Benefits) ಮೊಣಕೈ ಮತ್ತು ಮೊಣಕಾಲುಗಳ ಕಪ್ಪನ್ನು ಹೇಗೆ ಹೋಗಲಾಡಿಸಬಹುದು? ಎಂಬ ಬಗ್ಗೆ ನಾವು ಹೇಳ್ತೀವಿ ಕೇಳಿ!

ಕರಿಬೇವಿನ ಸೊಪ್ಪು ಮತ್ತು ಕಡಲೆ ಹಿಟ್ಟನ್ನು ಕಪ್ಪು ಕಲೆ ಇರುವ ಜಾಗಕ್ಕೆ ಹಚ್ಚಿ ಸಮಸ್ಯೆಯಿಂದ ಪಾರಾಗಬಹುದು.ನೀವು ಮೊದಲು ಕರಿಬೇವಿನ ಎಲೆಗಳನ್ನು ಚೆನ್ನಾಗಿ ತೊಳೆದು ಅವುಗಳನ್ನು ಪುಡಿಮಾಡಿ ರುಬ್ಬಿಕೊಳ್ಳಬೇಕು. ಅದಕ್ಕೆ ಕಡಲೆ ಹಿಟ್ಟನ್ನು ಸೇರಿಸಿ ಮಿಶ್ರಣವನ್ನು ಕಲೆ ಇರುವ ಜಾಗಕ್ಕೆ ಹಚ್ಚಿಕೊಂಡು 15 ರಿಂದ 20 ನಿಮಿಷಗಳ ಬಳಿಕ ಮಿಶ್ರಣವನ್ನು ತೊಳೆಯಬೇಕು. ಹೀಗೆ ಮಾಡುವುದರಿಂದ ಮೊಣಕೈ ಮತ್ತು ಮೊಣಕಾಲಿನ ಕಪ್ಪನ್ನು ಹೋಗಲಾಡಿಸಬಹುದಾಗಿದೆ.

ಕರಿಬೇವಿನ ಎಲೆಗಳನ್ನು (Curry Leaves)ತೊಳೆದು ನಿಂಬೆ ರಸ ಮತ್ತು ತೆಂಗಿನೆಣ್ಣೆಯೊಂದಿಗೆ (Cocount Oil) ರುಬ್ಬಿಕೊಂಡು ನಂತರ ಈ ಪೇಸ್ಟ್ ಅನ್ನು ಮೊಣಕೈ ಕಾಲಿಗೆ ಹಚ್ಚಿ 15 ನಿಮಿಷ ಬಿಟ್ಟು ತೊಳೆಯುವುದರಿಂದ ಚರ್ಮ ಮೃದುವಾಗುವ ಜೊತೆಗೆ ಕಪ್ಪು ಕಲೆ ಮಾಯವಾಗುತ್ತದೆ. ಇದಲ್ಲದೆ, ಕರಿಬೇವಿನ ಎಲೆಗಳ ಜೊತೆಗೆ ನಿಂಬೆ ಮತ್ತು ಸಕ್ಕರೆ ಮಿಶ್ರಣದ ಮೂಲಕ ಕಪ್ಪು ಕಲೆ ಹೋಗಲಾಡಿಸಹುದು. ಇದಕ್ಕಾಗಿ ಮೊದಲು, ಕರಿಬೇವನ್ನು ಚೆನ್ನಾಗಿ ತೊಳೆದು ಎಲೆಗಳನ್ನು ರುಬ್ಬುವ ಮೂಲಕ ಮಿಶ್ರಣವನ್ನು ತಯಾರಿಸಿಕೊಳ್ಳಬೇಕು. ಈ ಮಿಶ್ರಣಕ್ಕೆ ನಿಂಬೆ ಮತ್ತು ಸಕ್ಕರೆಯನ್ನು ಹಾಕಿ ಮಿಶ್ರಣ ಮಾಡಿಕೊಂಡು ಕಲೆ ಇರುವ ಜಾಗಕ್ಕೆ ಹಚ್ಚಿಕೊಂಡು ಕೈಗಳಿಂದ ಮೆಲ್ಲನೆ ಸ್ಕ್ರಬ್ ಮಾಡಿಕೊಳ್ಳಬೇಕು. ಸ್ವಲ್ಪ ಸಮಯದ ಬಳಿಕ ತೊಳೆಯಬೇಕು. ಹೀಗೆ ಮಾಡುವುದರಿಂದ ಮೊಣಕೈ ಕಾಲಿನ ಕಪ್ಪನ್ನು ಹೋಗಲಾಡಿಸಬಹುದು.

ಕರಿಬೇವಿನ ಎಲೆಗಳು(Curry Leaves) ಮತ್ತು ಮೊಸರು (Curd)ಬಳಸಿ ಈ ಸಮಸ್ಯೆಗೆ ಪರಿಹಾರ ಪಡೆಯಬಹುದು. ಕರಿಬೇವಿನ ಎಲೆಗಳನ್ನು ಚೆನ್ನಾಗಿ ತೊಳೆದುಕೊಂಡು, ಎಲೆಗಳನ್ನು ರುಬ್ಬಿಕೊಂಡು ಮಿಶ್ರಣಕ್ಕೆ ಮೊಸರು ಸೇರಿಸಬೇಕು. ಈ ಮಿಶ್ರಣವನ್ನು ಕಪ್ಪು ಇರುವ ಜಾಗಕ್ಕೆ ಮೊಣಕೈ ಹಚ್ಚಿಕೊಂಡು 10 ರಿಂದ 15 ನಿಮಿಷಗಳು ಬಿಟ್ಟು ತೊಳೆದುಕೊಳ್ಳಬೇಕು. ಇದರಿಂದ ಮೊಣಕೈ ಮತ್ತು ಮೊಣಕಾಲುಗಳ ಕಪ್ಪನ್ನು ಹೋಗಲಾಡಿಸಬಹುದು.

Leave A Reply

Your email address will not be published.