Maruti Suzuki Fronx Jimny : ಮಾರುತಿ ಸುಜುಕಿ ಫ್ರಾಂಕ್ಸ್‌ ಜಿಮ್ನಿ ಎಸ್‌ಯುವಿಗಳಿಗೆ ಜನರಿಂದ ಅತ್ಯಧಿಕ ಬೇಡಿಕೆ! ಎಲ್ಲೆಡೆ ಬುಕಿಂಗ್‌ಗಳ ಸುರಿಮಳೆ!

Share the Article

Maruti Suzuki Fronx Jimny : ಭಾರತದಲ್ಲಿ (india )ಅತಿ ಹೆಚ್ಚು ಮಾರಾಟವಾದ ಕಾರುಗಳ ಪೈಕಿ ಮಾರುತಿ ಸುಜುಕಿ (Maruti Suzuki) ಕೂಡ ಒಂದಾಗಿದೆ. ಇದೀಗ ಮಾರುತಿ ಸುಜುಕಿ ಯ ಜಿಮ್ನಿ(Maruti Suzuki Fronx Jimny) ಹಾಗೂ ಫ್ರಾಂಕ್ಸ್ (Jimny – fronx) ಎಸ್‍ಯುವಿಗಳು ಹೆಚ್ಚಿನ ಬೇಡಿಕೆ ಹೊಂದಿದ್ದು , ಬುಕಿಂಗ್ ವಿಚಾರದಲ್ಲಿ ನಿರೀಕ್ಷೆಗಿಂತಲೂ ಹೆಚ್ಚಿನ ಬುಕಿಂಗ್ ಪಡೆದುಕೊಂಡಿವೆ.

ಈಗಾಗಲೇ 2023 ಮೊದಲ ತಿಂಗಳಲ್ಲಿ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಮಾರುತಿ ಸುಜುಕಿ ಕಂಪನಿ ಆಫ್-ರೋಡ್ ಎಸ್‍ಯುವಿ 5-ಡೋರ್ ಜಿಮ್ನಿ ಹಾಗೂ ಕಾಂಪ್ಯಾಕ್ಟ್ ಎಸ್‍ಯುವಿ ಫ್ರಾಂಕ್ಸ್ ಅನ್ನು ಪರಿಚಯಿಸಿದ್ದು, ಜೊತೆಗೆ ಬುಕಿಂಗ್ ಕೂಡ ಪ್ರಾರಂಭಿಸಿದ್ದು, ಆಸಕ್ತ ಗ್ರಾಹಕರು, ಜಿಮ್ನಿಗಾಗಿ ರೂ.25,000 ಹಾಗೂ ಫ್ರಾಂಕ್ಸ್ ಎಸ್‍ಯುವಿಗಾಗಿ ರೂ.11,000 ಪಾವತಿಸಿ, ಬುಕ್ ಮಾಡಬಹುದು ತಿಳಿಸಲಾಗಿತ್ತು.

ಸದ್ಯ ಫ್ರಾಂಕ್ಸ್ ಹಾಗೂ ಜಿಮ್ನಿ 5-ಡೋರ್ ಎಸ್‍ಯುವಿಗಳು ಒಂದಕ್ಕೊಂದು ಹೋಲುವ ವೈಶಿಷ್ಟ್ಯವನ್ನು ಹೊಂದಿದ್ದು, ಅಂತೆಯೇ 9.0 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ ಪ್ಲೇ, ಆರ್ಕಮಿಸ್ ಟ್ಯೂನ್ಡ್ ಸೌಂಡ್ ಸಿಸ್ಟಮ್, ಆಟೋಮೆಟಿಕ್ ಎಸಿ, 360-ಡಿಗ್ರಿ ಕ್ಯಾಮೆರಾ, ವೈರ್‌ಲೆಸ್ ಚಾರ್ಜಿಂಗ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಹಾಗೂ EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ವೈಶಿಷ್ಟ್ಯಗಳನ್ನು ಹೊಂದಿದೆ.

ಫ್ರಾಂಕ್ಸ್ ಎಸ್‍ಯುವಿ:
ಇದು 1.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್, 98.6 bhp ಗರಿಷ್ಠ ಪವರ್ ಹಾಗೂ 147.6 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 5-ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್, ಸಿಕ್ಸ್ ಸ್ವೀಡ್ ಆಟೋಮೆಟಿಕ್ ಟ್ರಾನ್ಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. 1.2-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 88.5 bhp ಪವರ್, 113 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 5-ಸ್ವೀಡ್ MT/AMT ಗೇರ್ ಬಾಕ್ಸ್ ಪಡೆದಿದೆ.

ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‍ಯುವಿ ಸೈಜ್ ಬಗ್ಗೆ ಹೇಳುವುದಾದರೆ, ಇದು 3995ಎಂಎಂ ಉದ್ದ, 1765ಎಂಎಂ ಅಗಲ, 1550ಎಂಎಂ ಎತ್ತರ ಹಾಗೂ 2520ಎಂಎಂ ಅಳತೆಯ ವೀಲ್ ಬೇಸ್ ಪಡೆದುಕೊಂಡಿದೆ. ಹೆಡ್‌ಲೈಟ್‌ನೊಂದಿಗಿನ ಸ್ಪ್ಲಿಟ್ ಗ್ರಿಲ್ ವಿನ್ಯಾಸ ನೋಡಲು ಆಕರ್ಷಕವಾಗಿದೆ. ಮಾರುತಿ ಸುಜುಕಿ ಜಿಮ್ನಿ 5-ಡೋರ್ ಎಸ್‍ಯುವಿ, ಬಹುತೇಕ 3-ಡೋರ್ ಜಿಮ್ನಿಗೆ ಹೋಲಿಕೆಯಾಗುತ್ತದೆ. ಇದು 3,985ಎಂಎಂ ಉದ್ದ, 1,645ಎಂಎಂ ಅಗಲ, 1,720ಎಂಎಂ ಎತ್ತರ ಹಾಗೂ 210ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ.

ಬಹುನೀರಿಕ್ಷಿತ ಎಸ್‍ಯುವಿ ಜಿಮ್ನಿ 5-ಡೋರ್ ಎಂಜಿನ್ ಕಾರ್ಯಕ್ಷಮತೆ :
ಇದು 1.5-ಲೀಟರ್ ಪೆಟ್ರೋಲ್ ಎಂಜಿನ್, 103 bhp ಗರಿಷ್ಠ ಪವರ್ ಹಾಗೂ 134 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 5-ಸ್ವೀಡ್ ಮ್ಯಾನುವಲ್ ಹಾಗೂ 4 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದುಕೊಂಡಿದೆ. ಪವರ್ ಫುಲ್ ಎಂಜಿನ್ ಹೊಂದಿರುವುದರಿಂದ ಆಫ್ ರೋಡ್ ಚಾಲನೆಗೆ ಸೂಕ್ತ ಮತ್ತು ಉತ್ತಮ.

ಗ್ರಾಹಕರಿಗೆ ಜಿಮ್ನಿ 5-ಡೋರ್ ಕಡಿಮೆ ಬೆಲೆಯಲ್ಲಿ ಖರೀದಿಗೆ ದೊರೆಯಲಿದ್ದು, ರೂ.10 ಲಕ್ಷ ಪ್ರಾರಂಭಿಕ ಬೆಲೆಯಲ್ಲಿ ಮೇ ತಿಂಗಳಲ್ಲಿ ಲಾಂಚ್ ಆಗಲಿದ್ದು, ಅತಿಹೆಚ್ಚು ಗ್ರಾಹಕರನ್ನು ಸೆಳೆಯುವ ನೀರಿಕ್ಷೆಯಿದೆ.

ಇನ್ನು ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‍ಯುವಿ, ರೂ.7.50 ಲಕ್ಷ ಆರಂಭಿಕ ಬೆಲೆಯಲ್ಲಿ (ಎಕ್ಸ್ ಶೋರೂಂ) ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಸಾಧ್ಯತೆ ಇದ್ದು, ಏಪ್ರಿಲ್ ಎರಡನೇ ವಾರದಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಅಧಿಕೃತ ಮಾಹಿತಿ ಪ್ರಕಾರ, ಜಿಮ್ನಿ 23,500, ಫ್ರಾಂಕ್ಸ್ 15,500 ಬುಕಿಂಗ್‌ ಪಡೆದುಕೊಂಡಿದ್ದು, ಮಾರುಕಟ್ಟೆಯಲ್ಲಿ ಹೆಚ್ಚಿನ ನಿರೀಕ್ಷೆಯಲ್ಲಿದೆ.

ಇದನ್ನೂ ಓದಿ: Weird Culture : ಮಗು ಕಪ್ಪಾಗಿದ್ರೆ ಬದುಕು, ಬೆಳ್ಳಗಿದ್ದರೆ ಸಾವು ಖಚಿತ! ಈ ವಿಚಿತ್ರ ಆಚರಣೆ ಇರುವುದು ಭಾರತದಲ್ಲೇ! ಎಲ್ಲಿ, ಯಾಕೆ ಎಂಬುವುದರ ಕಂಪ್ಲೀಟ್‌ ವಿವರ ಇಲ್ಲಿದೆ!

Leave A Reply