Palm Itching : ಅಂಗೈ ತುರಿಸಿದರೆ ದುಡ್ಡು ಸಿಗುತ್ತದಂತೆ! ಜ್ಯೋತಿಷ್ಯ ಏನು ಹೇಳುತ್ತೆ!

Palm Itching :ಅಂಗೈಯಲ್ಲಿ ತುರಿಕೆಯ (Palm Itching) ಸ್ವಭಾವ ಕಾಣಿಸಿಕೊಂಡರೆ ಯಾರಿಗಾದರೂ ಮೊದಲನೆಯದಾಗಿ ನೆನಪಾಗುವುದು ನನಗೆ ಇವತ್ತು ಧನಲಕ್ಷ್ಮಿ(money) ಬರಬಹುದೇ ಅಥವಾ ನಮ್ಮ ಮನೆಗೆ ಇವತ್ತು ಹಣದ ಸುರಿಮಳೆ ಬಿದ್ದು ನನ್ನ ಕೆಲಸ (work) ಒಳ್ಳೆದಾಗಬಹುದೇ ಎಂದು ಯೋಚನೆ ಬರುವುದು ಎಲ್ಲಾರಿಗೂ ಸಹಜ.

 

ಆದರೆ ಯಾವ ಅಂಗೈ, ಎಡಗೈಯೋ (left hand) ಬಲಗೈಯೋ (right hand), ಯಾವ ಹೊತ್ತಿನಲ್ಲಿ ತುರಿಸಿತು, ಇವೆಲ್ಲವನ್ನು ಆಧರಿಸಿ ಹಣ ಬರಲಿದೆಯಾ ಹೋಗಲಿದೆಯಾ ಎಂಬುದು ನಿರ್ಧಾರವಾಗುತ್ತದೆ.

ಭಾರತದಲ್ಲಿ, ನಾವು ಎಂದಿಗೂ ನಮ್ಮ ಎಡಗೈಯಿಂದ ಹಣವನ್ನು(money) ಸ್ವೀಕರಿಸುವುದಿಲ್ಲ ಅದು ಒಳ್ಳೆಯದಲ್ಲ ಎಂದು ಹೇಳುತ್ತೇವೆ. ಯಾಕೆಂದರೆ ನಾವು ಎಡಗೈಯಿಂದ ನೀಡುವ ಹಣ ಒಳ್ಳೆಯದಾಗುವುದಿಲ್ಲ ಎಂಬ ನಂಬಿಕೆ (belief). ನಾವು ನಮ್ಮ ಬಲಗೈಯಿಂದ ಯಾರಿಗಾದರೂ ಹಣವನ್ನು ನೀಡಿದರೆ, ಅದು ಬೇರೆ ರೀತಿಯಲ್ಲಿ ನಮಗೆ ಮರಳುತ್ತದೆ ಎಂದು ಎಲ್ಲರೂ ನಂಬುತ್ತಾರೆ. ಹಾಗಾದರೆ ಬನ್ನಿ ನಿಮ್ಮ ಕೈ ತುರಿಕೆಯ ವಿಶೇಷ ಏನಿದೆ ಅಂತ ನೋಡೋಣ ಬನ್ನಿ.

ಪುರುಷರ ಬಲ ಅಂಗೈ ತುರಿಕೆ ಕಂಡರೆ ಹೇಗೆಲ್ಲಾ ಲಾಭ ಇರಬಹುದು? ಇಲ್ಲಿದೆ ಮಾಹಿತಿ

ಪುರುಷರಿಗೆ, ಅವರ ಬಲಗೈ ತುರಿಕೆಯಾದರೆ, ಅದು ಒಳ್ಳೆಯ ಸುದ್ದಿ (good news) ಎಂದು ಅರ್ಥ. ಬಲ ಅಂಗೈ ತುರಿಕೆ ತೃಪ್ತಿ ಮತ್ತು ಉತ್ಸಾಹವನ್ನು ಸೂಚಿಸುತ್ತದೆ. ಇದು ನಿಮ್ಮ ಜೀವನದಲ್ಲಿ ಹಣದ ಸುರಿಮಳೆಯನ್ನೇ ಸೂಚಿಸುತ್ತದೆ. ವ್ಯಕ್ತಿಗೆ ಅನಿರೀಕ್ಷಿತ ಸಂಪತ್ತನ್ನು ಸೂಚಿಸುತ್ತದೆ. ಲಾಟರಿ (lottery) ಗೆಲ್ಲಬಹುದು, ಕಳೆದುಹೋದ ಹಣವನ್ನು ಪಡೆಯಬಹುದು, ಉಡುಗೊರೆಯ (gift) ಮೂಲಕ ಹೆಚ್ಚಿನ ಹಣವನ್ನು ಪಡೆಯಬಹುದು ಅಥವಾ ಇತರ ವಿಧಾನಗಳಲ್ಲಿ ಹಣ ಸಿಗಬಹುದಾದ ಚಾನ್ಸ್ ಇದೆ. ವಿಳಂಬ ಪಾವತಿಯನ್ನು ಪಡೆಯಬಹುದು. ಬಹಳಷ್ಟು ವಿಷಯಗಳಿಂದ ಲಾಭ ಪಡೆಯಬಹುದು, ಷೇರು ಮಾರುಕಟ್ಟೆಯಲ್ಲಿ (market) ಲಾಭ ಗಳಿಸಬಹುದು. ನಾವು ನೆನೆದುಕೊಂಡಿರುದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ನಾವು ಹಣವನ್ನು ಗಳಿಸಬಹುದು.

ಪುರುಷರ ಎಡ ಅಂಗೈ ತುರಿಕೆಯಲ್ಲಿ ಭವಿಷ್ಯ ಹೇಗಿರಬಹುದು.

ಪುರುಷರಿಗೆ, ಎಡಗೈ ಅಂಗೈ ತುರಿಕೆಯಾದರೆ, ಅವರ ಪ್ರಸ್ತುತ ಹಣದ(Economic status) ಸ್ಥಿತಿಗತಿ ತುಂಬಾನೇ ಹದಗೆಟ್ಟು ಹೋಗುತ್ತದೆ. ಒಂದೋ ಅವರು ಎಲ್ಲವನ್ನೂ ಖರ್ಚು ಮಾಡುತ್ತಾರೆ, ಅಥವಾ ಹಣದ ನಷ್ಟ (Lose) ಅನುಭವಿಸಬಹುದು. ಉದಾಹರಣೆಗೆ ಹೇಳಬೇಕೆಂದರೆ ಅತಿಯಾದ ಸಾಲ(debt) ಅಥವಾ ಹೆಚ್ಚಿನ ರೀತಿಯಲ್ಲಿ ಹಣವನ್ನು ಖರ್ಚು ಮಾಡುವುದು. ನೀವು ಪುರುಷರಾಗಿದ್ದು(gents) ನಿಮ್ಮ ಎಡಗೈ ಪದೇ ಪದೇ ತುರಿಸುತ್ತಿದ್ದರೆ ದೇವಿಯು ನಿಮ್ಮ ಪರವಾಗಿಲ್ಲ ಎಂದು ಜೋತಿಷ್ಯರು ಹೇಳುತ್ತಾರೆ.

ಮಹಿಳೆಯರ ಎಡ ಅಂಗೈ ತುರಿಸಿದರೆ ಏನಿದರ ಅರ್ಥ ಎಂದು ನೋಡುವ ಬನ್ನಿ

ಮಹಿಳೆ ತನ್ನ ಎಡ ಅಂಗೈಯನ್ನು ತುರಿಸುತ್ತದೆ ಎಂದರೆ ಅವರು ಹೆಚ್ಚಿನ ಮಟ್ಟದಲ್ಲಿ ಯಶಸ್ವಿಯಾಗುತ್ತಾರೆ (Sucsessful). ಇದು ಸಮೃದ್ಧಿಯನ್ನು ಸೂಚಿಸುತ್ತದೆ. ಹಣವು ಅಂತಿಮವಾಗಿ ಅವರ ಕೈಗೆ ಬರುತ್ತದೆ. ಅವರ ಎಡ ಅಂಗೈ (left hand) ತುರಿಸಿದರೆ, ಅವಳು ಅದೃಷ್ಟಶಾಲಿ ಎಂದು ಪರಿಗಣಿಸಲಾಗುತ್ತದೆ. ಮಹಿಳೆಯ ಎಡಗೈ ತುರಿಕೆ ಅವಳ ಯಶಸ್ಸು ಮತ್ತು ಸಂಪತ್ತನ್ನು (money) ತರುತ್ತದೆ ಹಾಗೆಯೇ ಅವರಿಗೆ ಜೀವನದಲ್ಲಿ ಸುಖ ದೊರಕುತ್ತದೆ ಎನ್ನಬಹುದು.

ಮಹಿಳೆಯರಿಗೆ ಬಲ ಅಂಗೈ ತುರಿಕೆಯ ಅರ್ಥ;

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಬಲ ಅಂಗೈಯು (right side) ಆಗಾಗ್ಗೆ ತುರಿಕೆಗೆ ಒಳಗಾಗುವ ಮಹಿಳೆ ತನ್ನ ಭವಿಷ್ಯದ ಸಂಪತ್ತನ್ನು ಕಳೆದುಕೊಳ್ಳುತ್ತಾಳೆ ಹೆಚ್ಚಿನ ರೀತಿಯಲ್ಲಿ. ಇದು ಎಡ ಅಂಗೈಯ ವಿರುದ್ಧ ದಿಕ್ಕಿನಲ್ಲಿ ಇರುತ್ತದೆ. ಬಹಳಷ್ಟು ಹಣವನ್ನು (Money) ಕಳೆದುಕೊಳ್ಳಬಹುದು. ಸುಮ್ಮನೆ ಬೇಡದ ರೀತಿಯಲ್ಲಿ ಹಣವನ್ನು ಖರ್ಚು ಮಾಡಬಹುದು. ಹೀಗಾಗಿ ತುರಿಕೆ ಉಂಟಾದಾಗ ಸ್ಕ್ರಾಚಿಂಗ್ ಮಾಡುವುದನ್ನು ತಡೆಯಬಹುದು. ಮಹಿಳೆಯರು ತಮ್ಮ ಬಲ ಅಂಗೈಗಳನ್ನು ಉಜ್ಜುವುದರ ವಿರುದ್ಧ ಜಾಗರೂಕರಾಗಿರಬೇಕು ಎಂದು ಜೋತಿಷ್ಯ ಹೇಳುತ್ತದೆ.

ಎರಡೂ ಅಂಗೈಗಳಲ್ಲಿ ತುರಿಕೆ ಹೊಂದಿದ್ದರೆ ಏನಾಗಬಹುದು?

ನೀವು ಎರಡೂ ಅಂಗೈಗಳಲ್ಲಿ ತುರಿಕೆ ಅನುಭವಿಸಿದರೆ ನಿಮ್ಮ ಆಧ್ಯಾತ್ಮಿಕ ಶಕ್ತಿಯು ಉಕ್ಕಿ ಹರಿಯುತ್ತದೆ ಎಂದರ್ಥ. ಇದರಿಂದ ಜೀವನದಲ್ಲಿ(life)ಒಳ್ಳೆದಾಗುತ್ತೆ ಎಂದರ್ಥ. ಎರಡೂ ಕೈಗಳಲ್ಲಿ ತುರಿಕೆಯಾಗುವುದು ನಿಮ್ಮ ಜೀವನದ ಒಳಬರುವ ಮತ್ತು ಹೊರಹೋಗುವ ಶಕ್ತಿಯು ಸಮತೋಲನದಲ್ಲಿದೆ ಎಂದು ಸೂಚಿಸುತ್ತದೆ. ಅಂದರೆ, ನೀವು ಜಗತ್ತಿಗೆ ಚೈತನ್ಯವನ್ನು ಸಮಾನವಾಗಿ ಪಡೆಯುತ್ತಿರುವಿರಿ ಮತ್ತು ನೀಡುತ್ತೀರ. ಆಗ ಹಣವು (money) ನಿಮ್ಮ ಮನಸ್ಸಿನಲ್ಲಿದ್ದರೆ ನೀವು ಶ್ರೀಮಂತರಾಗುವ (rich) ಸಾಧ್ಯತೆಯಿದೆ. ಜ್ಯೋತಿಷ್ಯದ ಪ್ರಕಾರ ಹೇಳಬೇಕೆಂದರೆ ಎರಡು ಕೈಗಳು (both hand) ತುರಿಕೆಯನ್ನು ಹೊಂದಿರುವುದು ಕೆಲವು ಸಮಯದಲ್ಲಿ ಮಾತ್ರ.

Leave A Reply

Your email address will not be published.