Ugadi Hosatodaku : ಹೊಸತೊಡಕು ಆಚರಿಸೋ ಜನರಿಗೆ ಬಿಗ್‌ ಶಾಕ್! ಗಗನಕ್ಕೇರಿದ ಮಾಂಸಗಳ ಬೆಲೆ, ತಲೆಎತ್ತಿದ 18 ಜಟ್ಕಾ ಕಟ್ ಅಂಗಡಿಗಳು!!!

Ugadi Hosatodaku: ಬೆಂಗಳೂರು : ರಾಜ್ಯದೆಲ್ಲೆಡೆ ಯುಗಾದಿ ಹಬ್ಬದ ಮಾರನೇ ದಿನ ಅಂದರೆ, ಚೈತ್ರ ಶುದ್ಧ ದ್ವಿತೀಯದಂದು ಹೊಸತೊಡಕು ಆಚರಿಸಲು ಸಜ್ಜಾಗಿದ್ದಾರೆ. ಹಬ್ಬದ ಭರದಲ್ಲಿ ಖರೀದಿಸುವ ಗ್ರಾಹಕರಿಗೆ ಕೊಂಚ ಮಾಂಸ ದರ ಶಾಕ್‌ ನೀಡುವುದಂತೂ ಗ್ಯಾರಂಟಿ.

ಹೊಸ ತೊಡಕು (Ugadi Hosatodaku)  ಆಚರಣೆಯ ವೇಳೆಯೆ ಮಾಂಸಗಳ ದರ ಭಾರೀ ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುವಂತಾಗಿದೆ. ಹೊಸತೊಡಕು ಆಚರಣೆ ಸಂಭ್ರಮದಲ್ಲಿ ಬಿರಿಯಾನಿ, ಚಿಕನ್ ಬಿರಿಯಾನಿ, ಚಿಲ್ಲಿ ಚಿಕನ್, ಪೆಪ್ಪರ್ ಚಿಕನ್, ಫಿಶ್ ಕರಿ, ಫಿಶ್ ಫ್ರೈ, ತಲೆ ಕಾಲ್ ಮಾಂಸ, ಕಾಲ್ ಸೂಪ್ ಹೇಗಪ್ಪಾ ಮಾಡುವುದು ಎಂದು ನಾನ್ ವೆಜ್ ಪ್ರಿಯರು ಯೋಚನೆ ಮಾಡತ್ತಿದ್ದಾರೆ. ಇದರ ನಡುವೆ ಒಂದಷ್ಟು ಜನರು ಹಬ್ಬದ ನೆಪದಲ್ಲಿ ಮಾಂಸ ಖರೀದಿಗಾಗಿ ಬೆಳಗ್ಗೆ 6 ಗಂಟೆಯಿಂದಲೂ ಮಾಂಸದಂಗಡಿಗಳ ಎದುರು ಸರದಿ ಸಾಲಿನಲ್ಲಿ ನಿಂತೂ ಮಾಂಸ ಖರೀದಿಸುತ್ತಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ ಕುರಿ‌ಮಾಂಸ ದುಬಾರಿ ಬೆಲೆಗೆ ಮಾರಾಟವಾಗುತ್ತಿದೆ ಎಂದು ವರದಿಯಾಗಿದೆ.
ಇಂದು 2 ಕೆಜಿ ಮಟನ್, 2 ಕೆಜಿ ಚಿಕನ್, 6 ಮೊಟ್ಟೆ 1999 ರೂ ಕಾಂಬೋ ನೀಡಲಾಗುತ್ತಿದೆ. ಹಿಂದವೀ ಮೀಟ್ ಮಾರ್ಟ್ 1200 ಸಾವಿರ ಕೆಜಿ ಜಟ್ಕಾ ಕಟ್ ರೆಡಿ ಮಾಡಿದೆ. ಗುಡ್ಡೆ ಮಾಂಸ ಕೆಜಿ- 650, ಕೆಜಿ ಮಟನ್- 700, ಚಿಕನ್- 130 ರಿಂದ 140 ರುಪಾಯಿಗೆ ಮಾರಾಟ ಮಾಡಲಾಗುತ್ತಿದೆ.

ಹಬ್ಬ ಸಂದರ್ಭದಲ್ಲೂ ಮಾಂಸ ಮಾರಾಟಕ್ಕೂ ಧರ್ಮ ಸಂಘರ್ಷ ಎಫೆಕ್ಟ್‌ ತಟ್ಟಿದ್ದು ಕಳೆದ ಬಾರಿ ನಾಲ್ಕು ಜಟ್ಕಾ ಕಟ್ ಶಾಪ್​ಗಳನ್ನು ತೆರೆಯಲಾಗಿತ್ತು. ಆದರೆ ಈ ಬಾರಿ 18 ಜಟ್ಕಾ ಕಟ್ ಅಂಗಡಿಗಳು ಓಪನ್‌ ಮಾಡುವ ಮೂಲಕ ಮುಸ್ಲಿಂ ಸಮುದಾಯದ ಮಾಂಸ ವ್ಯಾಪಾರಿಗಳಿಗೆ ಠಕ್ಕರ್‌ ನೀಡಲಾಗಿದೆ. 18 ಜಟ್ಕಾ ಕಟ್ ಅಂಗಡಿಗಳನ್ನು ಸಿಲಿಕಾನ್‌ ಸಿಟಿ ಬೆಂಗಳೂರಿನ ಹಲವು ಭಾಗಗಳಾದ ಕಮ್ಮನಹಳ್ಳಿ, ಇಟ್ಟಮಡು, ದಾಸರಹಳ್ಳಿ, ಸಂಜಯ್ ನಗರ, ಗೆದ್ದಲಹಳ್ಳಿ, ಯಲಹಂಕ, ಇಂದಿರಾನಗರ, ಟ್ಯಾನರಿ ರಸ್ತೆ, ಹೊರಮಾವು, ಅನ್ನಪೂರ್ಣೇಶ್ವರಿನಗರ ತೆರೆಯಲಾಗಿದೆ ಎಂದು ವರದಿಯಾಗಿದೆ.

Leave A Reply

Your email address will not be published.