Summer Sail : ಕಡಿಮೆ ಬೆಲೆಯ ಮಿನಿ ಏರ್ ಕೂಲರ್ ! ಇದನ್ನು ಫ್ಯಾನ್ ರೀತಿಯಲ್ಲಿ ಕೂಡಾ ಬಳಸಬಹುದು!
Summer Sail : ಬೇಸಿಗೆಯ ಬೇಗೆಗೆ ಜನರು ತತ್ತರಿಸಿ ಹೋಗಿದ್ದಾರೆ. ರಣ ಬಿಸಿಲಿನ ತಾಪ ತಡೆಯಲಾಗದೆ ಜನರು ತಂತ್ರಜ್ಞಾನದ ಮೊರೆ ಹೋಗುತ್ತಿದ್ದಾರೆ. ದಿನದ 24ಗಂಟೆಯಲ್ಲಿ ಎಸಿ, ಕೂಲರ್ (cooler) ಇಲ್ಲದೆ ಜೀವಿಸಲು ಸಾಧ್ಯವೇ ಇಲ್ಲ ಎಂಬ ಮಟ್ಟಿಗೆ ಬಿಸಿಲಿನ ಝಳ ಜನರನ್ನು ಹೈರಾಣಾಗಿಸಿದೆ. ಗ್ರಾಹಕರಿಗಾಗಿ(customer)ಕೂಲರ್ ಗಿಂತಲೂ ಅಗ್ಗದ ಬೆಲೆಗೆ ಎಸಿ (AC)ಯನ್ನು ಪರಿಚಯಿಸಲಾಗಿದೆ.
ಸಾಮಾನ್ಯವಾಗಿ ಬೇಸಿಗೆ ಸಮೀಪಿಸುತ್ತಿದ್ದಂತೆಯೇ ಎಸಿ ಬೆಲೆ ಗಣನೀಯವಾಗಿ ಏರಿಕೆಯಾಗುವುದು ಸಹಜ. ಹೀಗಾಗಿ, ಹೆಚ್ಚಿನ ಮಂದಿ ಎಸಿ ಬದಲಿಗೆ ಕೂಲರ್ (Cooler) ಆಯ್ಕೆ ಮಾಡುತ್ತಾರೆ. ನೀವೇನಾದರೂ ಬಿಸಿಲಿನ ಝಳದಿಂದ ಪಾರಾಗೋದಾದರೂ ಹೇಗಪ್ಪಾ ಎಂದು ಯೋಚಿಸುತ್ತಿದ್ದರೆ , ನಿಮಗೆ ಸಹಕಾರಿಯಾಗುವ ಮಾಹಿತಿ ಇಲ್ಲಿದೆ ನೋಡಿ. ಕೂಲರ್ ಗಿಂತ ಕಡಿಮೆ ಬೆಲೆಯ ಎಸಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದ್ದು, ಸದ್ಯ ಪೋರ್ಟಬಲ್ ಮಿನಿ ಎಸಿಯನ್ನ ಕೈಗೆಟಕುವ ದರದಲ್ಲಿ ಕೊಂಡುಕೊಳ್ಳಬಹುದಾಗಿದೆ.
ಬೇಸಿಗೆಯಲ್ಲಿ(Summer ) ಸೆಖೆಯ ಝಳದಿಂದ(Hot Weather) ತಪ್ಪಿಸಿಕೊಳ್ಳಲು (Summer Sail)ಏರ್ ಕೂಲರ್ ಅನ್ನು ಕೊಂಡುಕೊಳ್ಳುವ ಯೋಜನೆ ಹಾಕಿದ್ದರೆ ಈ ಮಾಹಿತಿ ತಿಳಿದುಕೊಳ್ಳುವುದು ಉತ್ತಮ. ಈ ಎಸಿಯು ಪೋರ್ಟಬಲ್ ಸಣ್ಣ ಪ್ಲಾಸ್ಟಿಕ್ ಏರ್ ಕಂಡಿಷನರ್ ವಾಟರ್ ಕೂಲರ್( Air Conditioner Water Cooler)ಆಗಿದ್ದು,ಇದು ಭವಾನಿ ಸ್ಟೋರ್ ಬ್ರ್ಯಾಂಡ್ ಏರ್ ಕೂಲರ್ ಆಗಿದೆ. ಫ್ಯಾನ್ (Fan)ಮತ್ತು ಏರ್ ಕೂಲರ್ ಆಗಿ ಕೂಡ ಕೆಲಸ ಮಾಡುವ ವಿಶೇಷತೆಯನ್ನ ಒಳಗೊಂಡಿದೆ.
ಈ ಫ್ಯಾನ್ 2.5 ವ್ಯಾಟ್ಗಳ ವ್ಯಾಟ್ ಅನ್ನು ಹೊಂದಿದ್ದು, ಇದದಲ್ಲಿ ರೆಕ್ಕೆಗಳನ್ನು ನೀಡಲಾಗಿದೆ. ಇದರ ನೆರವಿನಿಂದ ಫ್ಯಾನ್ ಗಾಳಿ ಒದಗಿಸುತ್ತದೆ. ಈ ಫ್ಯಾನ್ ಅಡಿಯಲ್ಲಿ ನೀರಿನ ಟ್ಯಾಂಕ್( Water Tank) ಇದ್ದು, ನೀವು ತಂಪಾದ ನೀರು ಇಲ್ಲವೇ ಐಸ್ ಕೂಡಾ ಹಾಕಬಹುದಾಗಿದೆ ಫ್ಯಾನಿನ ಕೆಳಗಿರುವ ಬಟನ್ ಪ್ರೆಸ್ ಮಾಡಬೇಕಾಗುತ್ತದೆ. ಫ್ಯಾನ್ಗೆ ಬಟನ್ ಇರುವಾಗ ನೀವು ಇದನ್ನು ಫ್ಯಾನ್ ಆಗಿ ಬಳಕೆ ಮಾಡಬಹುದು. ಫ್ಯಾನ್ ಗಾಳಿಗಿಂತ ಹೆಚ್ಚಿನ ಗಾಳಿ, ತಂಪು ಬೇಕು ಎಂದಾದರೆ ನೀವು ಇದನ್ನು AC ಆಗಿ ಕೂಡ ಬಳಕೆ ಮಾಡಬಹುದು.
ಈ ಏರ್ ಕೂಲರ್ ನ ತೂಕ 350 ಗ್ರಾಂ.ಆಗಿದ್ದು, ಒಯ್ಯಬಹುದಾದ ವಿಶೇಷತೆಯನ್ನು ಒಳಗೊಂಡಿದೆ. ಇನ್ನೂ ಇದರ ಬೆಲೆ ಎಷ್ಟು ಎಂದು ಗಮನಿಸಿದರೆ, ರೂ.598ಗಳಿಗೆ ನಿಮಗೆ ಲಭ್ಯವಾಗಲಿದೆ. ಇದರಲ್ಲಿ ಫ್ಯಾನ್ ಸ್ಪೀಡ್ ಹೆಚ್ಚು ಕಡಿಮೆ ಮಾಡಿಕೊಳ್ಳುವ ಸೌಲಭ್ಯ ಕೂಡ ಇದ್ದು, ಈ ಫ್ಯಾನ್ ಅನ್ನು ಚಾರ್ಜ್ ಮಾಡಲು USB ಕೇಬಲ್ ಅನ್ನು ನೀಡಲಾಗಿದೆ. ಇದನ್ನು ಚಾರ್ಜರ್, ಲ್ಯಾಪ್ಟಾಪ್, ಪವರ್ ಬ್ಯಾಂಕ್ ಇತ್ಯಾದಿಗಳಿಂದ ಚಾರ್ಜ್ ಮಾಡಬಹುದಾಗಿದೆ.