R Chandru: ತೆಲುಗು ಇಂಡಸ್ಟ್ರಿಯಲ್ಲಿ ತಾನು ಅನುಭವಿಸಿದ್ದ ಅವಮಾನ ಬಿಚ್ಚಿಟ್ಟ ಕಬ್ಜ ಡೈರೆಕ್ಟರ್ ಚಂದ್ರು!

R Chandru: ತಾಜ್ ಮಹಲ್(Thaj Mahal), ಪ್ರೇಮ್ ಕಹಾನಿ(Prem Kahani), ಚಾರ್ಮಿನಾರ್​(Charminar) ಅಂಥಹಾ ಹಿಟ್​ ಸಿನಿಮಾಗಳನ್ನು ಕನ್ನಡಕ್ಕೆ ನೀಡಿದ ಆರ್ ಚಂದ್ರು(R Chandru) ಅವರು ಸದ್ಯ ಮತ್ತೊಂದು ಸೂಪರ್ ಡೂಪರ್ ಸಿನೆಮಾ ‘ಕಬ್ಜ’ (Kabzaa) ವನ್ನು ಸ್ಯಾಂಡಲ್ ವುಡ್ ಗೆ ನೀಡೀದ್ದು, ಅದರ ಗೆಲುವಿನ ಮೂಲಕ ಕನ್ನಡ ಚಿತ್ರರಂಗದ ಯಶಸ್ವಿ ಪ್ಯಾನ್ ಇಂಡಿಯಾ (Pan India) ನಿರ್ದೇಶಕರ ಸಾಲಿಲ್ಲಿ ತಾವೂ ಒಬ್ಬರಾಗಿದ್ದಾರೆ. ಈ ಸಿನಿಮಾ ಯಶಸ್ವಿಯಾದ ಬೆನ್ನಲ್ಲೆ ಚಿತ್ರತಂಡವು ಸಂಭ್ರಮಾಚರಣೆ ಮಾಡಿದ್ದು, ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಚಂದ್ರು, ತಮಗೆ ತೆಲುಗು ಚಿತ್ರರಂಗದಲ್ಲಿ ಆಗಿದ್ದ ಅವಮಾನವನ್ನು ನೆನಪು ಎಲ್ಲರೆದುರು ತೆರೆದಿಟ್ಟಿದ್ದಾರೆ.

ಹೌದು, ಕೆಲವು ವರ್ಷಗಳ ಹಿಂದೆ ಆರ್.ಚಂದ್ರು ಅವರು ‘ಕಬ್ಜ’ ಮೂಲಕ ಬಿಗ್ ಬಜೆಟ್, ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಹೊರಟಾಗ ಹಲವರು ಅನುಮಾಸಿದ್ದರು, ಆದರೆ ಅದೆಲ್ಲವನ್ನೂ ಮೀರಿ ಈಗ ಆರ್.ಚಂದ್ರು ಯಶಸ್ವಿಯಾಗಿದ್ದಾರೆ. ಸಿನಿಮಾದ ಯಶಸ್ವಿಯಾದ ಬೆನ್ನಲ್ಲೆ ಚಿತ್ರತಂಡವು ಸಂಭ್ರಮಾಚರಣೆ ಮಾಡಿದ್ದು, ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಚಂದ್ರು, ತಮಗೆ ತೆಲುಗು ಚಿತ್ರರಂಗದಲ್ಲಿ ಆಗಿದ್ದ ಅವಮಾನವನ್ನು ನೆನಪು ಮಾಡಿಕೊಂಡಿದ್ದಾರೆ.

ಕನ್ನಡಕ್ಕೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಚಂದ್ರು ಅವರು ಕೆಲ ಸಮಯ ತೆಲುಗು(Telugu) ಚಿತ್ರರಂಗಕ್ಕೆ ಹೋಗಿದ್ದರು. ಅದ್ಭುತವಾದ ಸಿನಿಮಾ ಮಾಡುವ ಆಸೆಯಿಂದಲೇ ಚಂದ್ರು ಅವರು ತೆಲುಗು ಇಂಡಸ್ಟ್ರಿಯನ್ನು ಪ್ರವೇಶಿಸಿದ್ದರು. ಆದರೆ ಚಂದ್ರುಗೆ ಕನ್ನಡದ ನಿರ್ದೇಶಕ ಎಂಬ ಕಾರಣಕ್ಕೆ 3 ಕೋಟಿಯ ಸಣ್ಣ ಬಜೆಟ್ ನೀಡಿ ಸಿನಿಮಾ ಮಾಡುವಂತೆ ಸೂಚಿಸಲಾಯ್ತಂತೆ. ಇದನ್ನೇ ಛಾಲೆಂಜ್ ಆಗಿ ಸ್ವೀಕರಿಸಿದ ಚಂದ್ರು ಅದೇ ಬಜೆಟ್​ನಲ್ಲಿ ‘ಕೃಷ್ಣಮ್ಮ ಕಲಿಪಿಂದಿ ಇದ್ದರನಿ’ ಎಂಬ ಸಿನಿಮಾ ಮಾಡಿದರು. 2015 ರಲ್ಲಿ ಬಿಡುಗಡೆ ಆದ ಆ ಸಿನಿಮಾ ಒಳ್ಳೆ ಹಿಟ್ ಕೂಡ ಆಯಿತು. ಇದರೊಂದಿಗೆ ಚಲನಚಿತ್ರೋತ್ಸವದಲ್ಲಿ ಉತ್ತಮ ನಿರ್ದೇಶಕ ಪ್ರಶಸ್ತಿಯನ್ನೂ ಚಂದ್ರು ಪಡೆದುಕೊಂಡರು.

ಘಟಾನುಘಟಿ ನಿರ್ದೇಶಕರುಗಳಿರುವ ಇಂಡಸ್ಟ್ರಿಯಲ್ಲಿ ಹೀಗೆ ಮೊದಲ ಗೆಲುವು ಪಡೆದ ಚಂದ್ರು ಅವರಿಗೆ ಅಲ್ಲು ಅರ್ಜುನ್(Allu Arjun) ಗೆ ಡೈರೆಕ್ಟ್ ಮಾಡುವ ಆಸೆಯಿತ್ತಂತೆ. ತಮ್ಮ ಮೊದಲ ತೆಲುಗು ಸಿನಿಮಾ ಹಿಟ್ ಆದ ಬಳಿಕ ಒಬ್ಬ ನಿರ್ಮಾಪಕರಿಗೆ ಅವರು ಈ ವಿಷಯ ಹೇಳಿದರಂತೆ. ಆದರೃ ಅವರು, ‘ಯಾರು ಕನ್ನಡದ ನಿರ್ದೇಶಕರಾ? ಅವರಿಂದ ಆಗಲ್ಲ ಬಿಡಿ’ ಎಂದು ಬಹಳ ಅಸಡ್ಡೆಯಿಂದ ಹೇಳಿ, ಚಂದ್ರು ಸಿದ್ಧಪಡಿಸಿಟ್ಟುಕೊಂಡಿದ್ದ ಕತೆಯನ್ನೂ ಸಹ ಕೇಳಲಿಲ್ಲಂತೆ. ‘ಅದು ನನಗೆ ವಿಪರೀತ ಬೇಸರ ತರಿಸಿತು. ಆಗಲೇ ಅಂದುಕೊಂಡೆ ನಾವು ಟೆಕ್ನಿಕಲಿ ಸ್ಟ್ರಾಂಗ್ ಆಗಬೇಕೆಂದು. ಅವರು ಹಾಗೆ ಹೇಳಿದ್ದು ನನಗೆ ಬಹಳ ನೋವಾಗಿತ್ತು. ಆದರೆ ನನ್ನ ಈ ಸಕ್ಸಸ್ ಗೆ ಅದುವೇ ಮಾರ್ಗವಾಯಿತು. ಅಂದು ಆದ ಆ ನೋವನ್ನು ನಮ್ಮ ಕನ್ನಡದ ಕೆಜಿಎಫ್ ತಂಡ ಹೋಗಲಾಡಿಸಿತು’ ಎಂದು ಚಂದ್ರು ಅವರು ತಮ್ಮ ಮನ ಬಿಚ್ಚಿ ಮಾತಾಡಿದ್ದಾರೆ.

ಇದೆಲ್ಲವೂ ಆದ ಬಳಿಕ ನಾನು ಇಂಥಹಾ ಸಿನಿಮಾ ಮಾಡಬೇಕೆಂದು ಕನಸು ಕಂಡೆ. ಅದನ್ನು ಉಪೇಂದ್ರ(Upendra) ಅವರ ಬಳಿ ಹೇಳಿಕೊಂಡಾಗ ಬೆನ್ನಿಗೆ ನಿಂತು ಮೂರು ವರ್ಷ ನನಗೆ ಡೇಟ್ಸ್ ನೀಡಿದರು. ಸುದೀಪ್(Sudeep) ಸಹ ಬೆಂಬಲ ನೀಡಿದರು. ಶಿವಣ್ಣ(Shivraj Kumar)ನಂತೂ ಇಂಥಹಾ ಒಳ್ಳೆಯ ಸಿನಿಮಾಕ್ಕೆ ಬೆಂಬಲಿಸಬೇಕು ಎಂದು ಜೊತೆಗೆ ಬಂದರು. ಎಲ್ಲರಿಗೂ ನಾನು ಋಣಿ, ಅದರಲ್ಲಿಯೂ ಉಪೇಂದ್ರ ಅವರಿಗೆ ಜೀವನಪರ್ಯಂತ ಋಣಿಯಾಗಿರುತ್ತೇನೆ. ಈ ಸಿನಿಮಾದ ಯಶಸ್ಸು ಉಪೇಂದ್ರ ಅವರಿಗೆ ಸಲ್ಲಬೇಕು ಎಂದರು.

ಈ ಕಬ್ಜ ಸಿನಿಮಾಕ್ಕಾಗಿ ಬಹಳ ಕಷ್ಟಪಟ್ಟಿದ್ದೇವೆ. ಮೂರು ವರ್ಷ ನಾವು ಬರೀ ದೂಳಲ್ಲೇ ಉಸಿರಾಡಿದ್ದೇವೆ. ನಮಗೆ ಚಿತ್ರೀಕರಣ ಮಾಡಲು ಮೂರು ವರ್ಷ ಬೇಕಾಗಲಿಲ್ಲ. ಮಧ್ಯದಲ್ಲಿ ಬಂದ ಎರಡು ಕೋವಿಡ್ ಹೊಡೆತಗಳಿಂದ ತಡವಾಯ್ತು. ನಿರ್ಮಾಪಕನಾಗಿ ಬಹಳ ಜರ್ಜರಿತನಾಗಿದ್ದೆ. ಹತಾಶನಾಗಿದ್ದೆ, ಹಾಕಿದ್ದ ಸೆಟ್ ಒಂದು ಮಳೆಯಲ್ಲಿ ಕೊಚ್ಚಿಹೋಯಿತು ಎಲ್ಲವನ್ನೂ ತಡೆದುಕೊಂಡೆ ಈಗ ಸಿನಿಮಾ ಯಶಸ್ಸು ಗಳಿಸಿರುವುದು ಬಹಳ ಖುಷಿಯಾಗಿದೆ ಎಂದು ತಮ್ಮ ಸಂತೋಷವನ್ನು ತೆರೆದಿಟ್ಟಿದ್ದಾರೆ.

ಇದನ್ನೂ ಓದಿ: Prime Minister Modi : ಸಿರಿಧಾನ್ಯಗಳು ರೈತರಿಗೆ ವರದಾನ, ಇದಕ್ಕಾಗಿ ಸರ್ಕಾರ ಹಗಲಿರುಳು ಶ್ರಮಿಸಿದೆ ಎಂದ ಪ್ರಧಾನಿ ಮೋದಿ

Leave A Reply

Your email address will not be published.