Maruti Suzuki : ಸಂಚಲನ ಸೃಷ್ಟಿಸಲು ರೆಡಿ ಮಾರುತಿ ಸುಜುಕಿಯ ಈ ಹೊಸ ಗಾಡಿ!

Share the Article

Maruti Suzuki : ಪ್ರಸ್ತುತ ಅಂಕಿ ಅಂಶ ಪ್ರಕಾರ ಕಾರು (car) ಉದ್ಯಮದ ಮಾರುಕಟ್ಟೆಯಲ್ಲಿ (market ) ಭಾರತದಲ್ಲಿ (india )ಅತಿ ಹೆಚ್ಚು ಮಾರಾಟವಾದ ಕಾರುಗಳ ಪೈಕಿ ಮಾರುತಿ ಸುಜುಕಿ ಕೂಡ ಒಂದಾಗಿದೆ. ಸದ್ಯ ಮಾರುತಿ ಸುಜುಕಿ ಇದರ ನಾಲ್ಕು ಮಾದರಿ ಕಾರುಗಳು ಮುಂಚೂಣಿ ಸ್ಥಾನವನ್ನು ಪಡೆದುಕೊಂಡಿದ್ದು, ಇದೀಗ ನೀವು ಹೊಸ ಕಾರು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಮತ್ತೆ ನಿಮಗೊಂದು ಸಿಹಿ ಸುದ್ದಿ ಇದೆ.

ಸದ್ಯ ಹೊಸ ಮಾರುತಿ ಸುಜುಕಿ Fronx ಕಾರು 2023ರ ಏಪ್ರಿಲ್ ತಿಂಗಳಿನಲ್ಲಿ ಮೊದಲ ವಾರದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಈಗಾಗಲೇ ಮಾರುತಿ ಸುಜುಕಿ ತನ್ನ ಬಲೆನೊ ಆಧಾರಿತ Fronx ಕೂಪೆ ಎಸ್‍ಯುವಿಯನ್ನು 2023ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿದ್ದು, ಆದರೆ ಮಾರುತಿ ಸುಜುಕಿ ( Maruti Suzuki) ಕಂಪನಿಯು Fronx ಕೂಪೆ ಎಸ್‌ಯುವಿಯ ಬಿಡುಗಡೆ ದಿನಾಂಕವನ್ನು ಇನ್ನೂ ಕೂಡ ಬಹಿರಂಗಪಡಿಸಿಲ್ಲ.

ಇನ್ನು ಹೊಸ ಮಾರುತಿ ಸುಜುಕಿ Fronx ಕಾರು NEXA ಪ್ರೀಮಿಯಂ ಡೀಲರ್‌ಶಿಪ್ ನೆಟ್‌ವರ್ಕ್ ಮೂಲಕ ಮಾರಾಟ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ. ಅಲ್ಲದೆ ಈ ಹೊಸ Fronx ಎಸ್‍ಯುವಿಯ ಟೆಸ್ಟ್ ಡ್ರೈವ್‌ ಕೂಡ ಶೀಘ್ರದಲ್ಲೇ ಪ್ರಾರಂಭವಾಗುವ ಸಾಧ್ಯತೆಗಳಿದೆ ಎಂದು ತಿಳಿಸಲಾಗಿದೆ.

ಸದ್ಯ ಬಿಡುಗಡೆಗೆ ಸಿದ್ದವಾಗಿರುವ ಹೊಸ ಮಾರುತಿ Fronx ಎಸ್‍ಯುವಿಯು ಮಾರುತಿಯ ಬಲೆನೊ ಹ್ಯಾಚ್‌ಬ್ಯಾಕ್ ಅನ್ನು ಆಧರಿಸಿದೆ. ಇನ್ನು ಹೊಸ Fronx ಕೂಪೆ ಎಸ್‍ಯುವಿಯು ಸಿಗ್ಮಾ, ಡೆಲ್ಟಾ, ಡೆಲ್ಟಾ+, ಝೀಟಾ ಮತ್ತು ಆಲ್ಫಾ ಎಂಬ ಐದು ರೂಪಾಂತರಗಳಲ್ಲಿ ಲಭ್ಯವಿದೆ.

ಮಾರುತಿ ಸುಜುಕಿ Fronx ಎಸ್‍ಯುವಿ ವೈಶಿಷ್ಯ :
ಮಾರುತಿ ಸುಜುಕಿ Fronx ಎಸ್‍ಯುವಿಯಲ್ಲಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಬೂಸ್ಟ್ ಮಾಡಲಾದ ಮೋಟಾರ್, 102 ಬಿಹೆಚ್‍ಪಿ ಪವರ್ ಮತ್ತು 150 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ,

ಈ ಎಸ್‍ಯುವಿ 1.2 ಲೀಟರ್ ಡ್ಯುಯಲ್‌ಜೆಟ್ ಪೆಟ್ರೋಲ್ ಎಂಜಿನ್‌ನೊಂದಿಗೆ ಲಭ್ಯವಿರುತ್ತದೆ. ಗೇರ್ ಬಾಕ್ಸ್ ಆಯ್ಕೆಗಳು 5-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಇದು ಮಾರುತಿ ಫ್ಯೂಚುರೊ-ಇ ಕಾನ್ಸೆಪ್ಟ್ ಮಾದರಿಗೆ ಹೋಲುತ್ತವೆ, ಎಸ್‍ಯುವಿಯ ಮುಂಭಾಗದ ಫಾಸಿಕ ಬ್ರ್ಯಾಂಡ್‌ನ ಹೊಸ ಸಿಗ್ನೇಚರ್ ಗ್ರಿಲ್ ಮತ್ತು ಸ್ಪ್ಲಿಟ್ ಹೆಡ್‌ಲ್ಯಾಂಪ್ ಸೆಟಪ್ ಅನ್ನು ಹೊಂದಿದೆ.

ಈ ಎಸ್‍ಯುವಿಯು ಸ್ಲಿಮ್ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಆಕರ್ಷಕವಾಗಿದೆ. ಈ Fronx ಎಸ್‌ಯುವಿಯು ಫ್ಲೇರ್ಡ್ ವೀಲ್ ಆರ್ಚ್‌ಗಳು, ಅಲಾಯ್ ವೀಲ್‌ಗಳು, ರೈಸ್ಡ್ ವೇಸ್ಟ್‌ಲೈನ್, ಕೂಪ್ ತರಹದ ರೂಫ್‌ಲೈನ್ ಮತ್ತು ಡೋರ್ ಹಿಂಭಾಗದ ಗ್ಲಾಸ್ ಸಹ ಒಳಗೊಂಡಿದೆ.

ಇನ್ನು ಹೊಸ ಮಾರುತಿ ಫ್ರಾಂಕ್ಸ್ ಕಾರಿನಲ್ಲಿ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ. ಈ ಸಿಸ್ಟಂ ವೈರ್‌ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ, ಸುಜುಕಿ ಕನೆಕ್ಟ್ ಮತ್ತು ವಾಯ್ಸ್ ಕಮಾಂಡ್‌ಗಳನ್ನು ಹೊಂದಿದೆ. ಇದರೊಂದಿಗೆ ಡಿಜಿಟಲ್ ಕನ್ಸೋಲ್, ಮಲ್ಟಿ-ಫಂಕ್ಷನಲ್ ಸ್ಟೀರಿಂಗ್ ವೀಲ್, ವೈರ್‌ಲೆಸ್ ಚಾರ್ಜಿಂಗ್, ಹೆಡ್ಸ್-ಅಪ್ ಡಿಸ್ಪ್ಲೇ, 360 ಡಿಗ್ರಿ ಕ್ಯಾಮೆರಾ ಮತ್ತು ಹಿಂದಿನ ಎಸಿ ವೆಂಟ್‌ಗಳನ್ನು ಒಳಗೊಂಡಿದೆ.

ಮುಖ್ಯವಾಗಿ ಹೊಸ ಮಾರುತಿ ಸುಜುಕಿ Fronx ಎಸ್‍ಯುವಿಯು ಆರ್ಕ್ಟಿಕ್ ವೈಟ್, ಗ್ರ್ಯಾಂಡ್ಯೂರ್ ಗ್ರೇ, ಆರ್ಟಿನ್ ಬ್ರೌನ್, ಸ್ಲೈಂಡಿಡ್ ಸಿಲ್ವರ್, ಒಪ್ಯೂಲೆಂಟ್ ರೆಡ್, ಬ್ಲೂಶ್ ಬ್ಲ್ಯಾಕ್ ರೂಪ್ ಹೊಂದಿರುವ ಎರ್ಥ್ ಬ್ರೋ, ಬ್ಲೂಯೆಷ್ ಬ್ಲ್ಯಾಕ್ ರೂಫ್ ನೊಂದಿಗೆ ಒಪೆಲೆಂಟ್ ರೆಡ್ ಮತ್ತು ಬ್ಲೂ ಬ್ಲ್ಯಾಕ್ ರೂಫ್ ನೊಂದಿಗೆ ಸ್ಲೈಂಡಿಡ್ ಸಿಲ್ವರ್ ಬಣ್ಣಗಳಲ್ಲಿ ಲಭ್ಯವಿದೆ. ಇದರಲ್ಲಿ ಗ್ರಾಹಕರು ತಮ್ಮ ಫೇವರೆಟ್ ಬಣ್ಣದ ಮಾದರಿಯನ್ನು ಆಯ್ಕೆ ಮಾಡಬಹುದು.

ಸದ್ಯ ಈ ಮಾರುತಿ ಫ್ರಾಂಕ್ಸ್ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕಿಗರ್ ಕಾರುಗಳಿಗೆ ಪೈಪೋಟಿ ನೀಡಲಿದ್ದು, ತನ್ನ ಹವಾ ತೋರಿಸಲಿದೆ.

Leave A Reply