Home Breaking Entertainment News Kannada Shweta Bachchan Nanda : ಅಮಿತಾಬ್‌ ಬಚ್ಚನ್- ಜಯಾ ದೊಡ್ಡ ನಟರಾದರೂ, ಮಗಳು ಶ್ವೇತಾ ಸಿನಿಮಾದಿಂದ...

Shweta Bachchan Nanda : ಅಮಿತಾಬ್‌ ಬಚ್ಚನ್- ಜಯಾ ದೊಡ್ಡ ನಟರಾದರೂ, ಮಗಳು ಶ್ವೇತಾ ಸಿನಿಮಾದಿಂದ ದೂರ ಉಳಿಯಲು ಬಾಲ್ಯದ ಈ ಘಟನೆಯೇ ಕಾರಣ!‌

Shweta Bachchan Nanda

Hindu neighbor gifts plot of land

Hindu neighbour gifts land to Muslim journalist

Shweta Bachchan Nanda : ಬಾಲಿವುಡ್‌ನ ಶೆಹೆನ್‌ಶಾ ಅಮಿತಾಬ್‌ ಬಚ್ಚನ್‌ ಹಾಗೂ ಅವರ ಹೆಂಡತಿ ಜಯಾ ಬಚ್ಚನ್‌ ಹಿಂದಿ ಚಿತ್ರರಂಗದಲ್ಲಿ ಹೆಚ್ಚು ಪ್ರಸಿದ್ಧಿ ಮತ್ತು ಹೆಸರನ್ನು ಮಾಡಿದಂತವರು. ಅವರ ಮಕ್ಕಳಾದ ಅಭಿಷೇಕ್‌ ಬಚ್ಚನ್‌ ಹಾಗೂ ಶ್ವೇತಾ ಬಚ್ಚನ್‌. ಇವರಿಬ್ಬರಲ್ಲಿ ಅಭಿಷೇಕ್‌ ಫಿಲ್ಮ್‌ಇಂಡಸ್ಟ್ರಿಗೆ ಈಗಾಗಲೇ ಪಾದಾರ್ಪಣೆ ಮಾಡಿದ್ದಾರೆ. ಆದರೆ ಅಮಿತಾಬ್‌ ಮಗಳು ಶ್ವೇತಾ ಯಾಕೆ ಈ ಸೆಲೆಬ್ರೆಟಿ ಪಟ್ಟದಿಂದ ದೂರ ಉಳಿದರು? ಯಾಕೆ ನಟಿಯಾಗಿ ಮಿಂಚಲಿಲ್ಲ? ತನ್ನ ಅಪ್ಪ, ಅಮ್ಮ ಅಷ್ಟು ದೊಡ್ಡ ನಟ ನಟಿಯಾಗಿದ್ದರೂ ಯಾಕೆ ಈ ಲೈಮ್‌ ಲೈಟ್‌ ನಿಂದ ದೂರ ಉಳಿದರು? ಬನ್ನಿ ಇದಕ್ಕೆ ಕಾರಣವೇನೆಂದು ತಿಳಿಯೋಣ.

ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ (Amitabh Bachhan) ಮತ್ತು ನಟಿ ಜಯಾ ಬಚ್ಚನ್(Jaya Bachhan) ಅವರ ಪುತ್ರಿ ಶ್ವೇತಾ ಬಚ್ಚನ್ ನಂದಾ ( Shweta Bachchan Nanda)ಲೈಮ್ ಲೈಟ್ ನಿಂದ ದೂರ ಉಳಿದಿರುವುದು ಎಲ್ಲರಿಗೂ ಗೊತ್ತಿದೆ. ವಾಸ್ತವವಾಗಿ, ಶ್ವೇತಾ ಬಚ್ಚನ್ ಚಿಕ್ಕವಳಿದ್ದಾಗ, ಅವರು ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್ ಅವರೊಂದಿಗೆ ಶೂಟಿಂಗ್ ಸೆಟ್‌ಗಳಿಗೆ ಹೋಗುತ್ತಿದ್ದರಂತೆ. ಒಂದು ದಿನ ಏನಾಯ್ತೆಂದರೆ, ಶ್ವೇತಾ ಅವರ ಕೈ ಸಾಕೆಟ್‌ನಲ್ಲಿ ಸಿಲುಕಿಕೊಂಡಿತ್ತು. ಇದರಿಂದ ತೀವ್ರ ಆಘಾತಕ್ಕೊಳಗಾದ ಶ್ವೇತಾ, ಅನಂತರ ಈ ಆಘಾತವು ಅವರ ಮನಸ್ಸಿನಲ್ಲಿ ಹಾಗೆ ಉಳಿದಿತ್ತು. ಇದರಿಂದ ಹೊರಬರಲಾದರೆ, ಹೆದರಿದ ಶ್ವೇತಾ, ಈ ಘಟನೆಯ ನಂತರ ಆಕೆ ತನ್ನ ತಂದೆ-ತಾಯಿ ಜೊತೆ ಶೂಟಿಂಗ್ ಸೆಟ್‌ಗೆ ಹೋಗೇ ಇಲ್ವಂತೆ.

ಇಷ್ಟು ಮಾತ್ರವಲ್ಲದೇ, ಶ್ವೇತಾ ಅವರು ತನ್ನ ಕಾಲೇಜು ದಿನಗಳಲ್ಲಿ ನಟನೆಯನ್ನು ಇಷ್ಟಪಡುತ್ತಿದ್ದ ಹುಡುಗಿ. ಅಷ್ಟು ಮಾತ್ರವಲ್ಲ ಥಿಯೇಟರ್‌ಗಳಲ್ಲಿ ಕೂಡ ನಟನೆ ಮಾಡುತ್ತಿದ್ದರು. ಅವರು ನಾಟಕವನ್ನು ಮಾಡುತ್ತಿದ್ದರು. ಆದರೆ ಒಂದು ದಿನ ನಾಟಕ ಮಾಡುತ್ತಿರುವಾಗ, ವೇದಿಕೆಯಲ್ಲಿ ತನ್ನ ಕೊನೆಯ ದೃಶ್ಯವನ್ನು ಮರೆತಿದ್ದು, ಇದರಿಂದ ಈ ಘಟನೆಯಿಂದ ಖಿನ್ನತೆಗೆ ಒಳಗಾಗಿದ್ದು, ನಂತರ ಆ ಘಟನೆಯನ್ನು ತನ್ನ ಮನಸ್ಸಿನಿಂದ ತೆಗೆದು ಹಾಕಿದ್ದರಂತೆ. ಅನಂತರ ಈ ಸಿನಿಮಾ ಫೀಲ್ಡ್‌ನಲ್ಲಿ ಮಿಂಚ ಬೇಕೆನ್ನುವ ಆಸೆ ಅವರಿಗೆ ಹೋಗಿತ್ತಂತೆ.

ಈ ಬಗ್ಗೆ ಸಂದರ್ಶನವೊಂದರಲ್ಲಿ ಈ ಘಟನೆಯನ್ನು ನೆನಪಿಸುತ್ತಾ ಶ್ವೇತಾ ಬಚ್ಚನ್ ಹೇಳಿದ್ದರು. ತನ್ನ ಮಕ್ಕಳನ್ನು ಕೂಡಾ ಸಿನಿಮಾ ಮಾಡಿ ಎಂದು ಅವರ ಮೇಲೆ ಒತ್ತಡ ಹೇರಿಲ್ಲ ಎಂದೂ ಈ ಸಂದರ್ಶನದಲ್ಲಿ ಶ್ವೇತಾ ಅವರು ಹೇಳಿದ್ದರು. ಅವರ ಮಗಳು ನವ್ಯಾ ನವೇಲಿ ನಂದಾ ಕೂಡ ನಟನೆಗೆ ಸೇರುವ ಇರಾದೆ ಹೊಂದಿಲ್ಲ. ಅವರ ಮಗ ಅಗಸ್ತ್ಯ ನಂದಾ OTT ನಲ್ಲಿ ಪಾದಾರ್ಪಣೆ ಮಾಡಿದ್ದಾರೆ.

ಶ್ವೇತಾ ಬಚ್ಚನ್ ನಂದಾ ಅವರು ಮಾರ್ಚ್ 17, 1974 ರಂದು ಮುಂಬೈನಲ್ಲಿ ಜನಿಸಿದರು. ಶ್ವೇತಾ ಅಮಿತಾಬ್ ಬಚ್ಚನ್ ಅವರ ಹಿರಿಯ ಮಗಳು ಮತ್ತು ತಂದೆಯ ಅಂದರೆ ಅಮಿತಾಬ್‌ ಅವರ ಪ್ರೀತಿಯ ಮಗಳು ಎಂದೇ ಹೇಳಬಹುದು. ತಂದೆಯ ಆರೋಗ್ಯದ ಬಗ್ಗೆ ಶ್ವೇತಾ ಅತಿಯಾದ ಕಾಳಜಿ ವಹಿಸುತ್ತಾರೆ. ಅಮಿತಾಬ್ ಬಚ್ಚನ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮಗಳ ಹೆಸರಿನ ಮೇಲೆ ಭಾವನಾತ್ಮಕ ಪೋಸ್ಟ್‌ಗಳನ್ನು ಬರೆಯುತ್ತಲೇ ಇರುತ್ತಾರೆ ಮತ್ತು ತಮ್ಮ ಹಳೆಯ ನೆನಪುಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ.

ಇದನ್ನೂ ಓದಿ: Supernova : ನಕ್ಷತ್ರಗಳಿಗೂ ಸಹ ಎಕ್ಸ್‌ಪೈರಿ ಡೇಟ್‌ ಇದೆಯೇ? ನಕ್ಷತ್ರಗಳು ಹೇಗೆ ಸಾಯುತ್ತವೆ, ಕೊನೆಯಲ್ಲಿ ಏನಾಗುತ್ತದೆ?