Hammer Ace 3.0 : ಹ್ಯಾಮರ್ ಏಸ್ 3.0 ಸ್ಮಾರ್ಟ್‌ವಾಚ್ ಬಿಡುಗಡೆ; ವಾಚ್‌ ಪ್ರಿಯರಿಗೆ ಇಷ್ಟ ಖಂಡಿತ!

Hammer Ace 3.0: ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಸ್ಮಾರ್ಟ್‌ವಾಚ್‌ಗಳಿದ್ದು, (Smartwatch) ಇವುಗಳ ಜೊತೆಗೆ ಈಗ ಹೊಸದಾಗಿ ಹ್ಯಾಮರ್ ಕಂಪೆನಿಯ ಏಸ್ 3.0 ಸ್ಮಾರ್ಟ್ ವಾಚ್ (Hammer Ace 3.0) ಸೇರಿಕೊಳ್ಳಲಿದೆ. ಇತ್ತೀಚಿನ ಯುವಕರು ಹಾಗೂ ಯುವತಿಯರು ಹೆಚ್ಚಾಗಿ ಸ್ಮಾರ್ಟ್ ವಾಚ್ ಪ್ರಿಯರೇ ಆಗಿದ್ದು, ಹೆಚ್ಚಾಗಿ ಅತ್ಯಾಧುನಿಕ ವಾಚ್‌ಗಳನ್ನು ಇಷ್ಟಪಡುತ್ತಿದ್ದಾರೆ. ಹಾಗೆಯೇ ಇನ್ನಿತರ ಸ್ಮಾರ್ಟ್ ವಾಚ್‌ ಗಳ ಜೊತೆಗೆ ಇದೊಂದು ಹೊಸ ರೀತಿಯ ಸ್ಮಾರ್ಟ್ ವಾಚ್ ಬಂದಿದೆ.

ಪ್ರಮುಖ ಸ್ಮಾರ್ಟ್‌ಗ್ಯಾಜೆಟ್‌(smart gadget) ತಯಾರಿಕಾ ಕಂಪೆನಿಯಾದ ಹ್ಯಾಮರ್ ಈಗಾಗಲೇ ಭಾರೀ ಜನಪ್ರಿಯತೆ ಪಡೆದುಕೊಂಡ ವಾಚ್ ಕಂಪೆನಿ ಒಂದಾಗಿದೆ. ಇದರ ನಡುವೆ ಈಗ ಹೊಸದಾಗಿ ಮಾರುಕಟ್ಟೆಗೆ (market) ಸ್ಮಾರ್ಟ್‌ವಾಚ್‌ ಅನ್ನು ಬಿಡುಗಡೆ ಮಾಡಿದೆ. ಹಾಗಾದರೆ ಮಾರುಕಟ್ಟೆಗೆ ಬಂದಿರುವ ಈ ವಾಚ್ (watch)ಯಾವುದು ಎಂದು ನೋಡೋಣ ಬನ್ನಿ.

ಹ್ಯಾಮರ್ ಕಂಪನಿಯ (hammer company)ಏಸ್ 3.0 ಸ್ಮಾರ್ಟ್ ವಾಚ್ (Hammer Ace 3.0) ಮಾರುಕಟ್ಟೆಯಲ್ಲಿ ಅನಾವರಣಗೊಂಡು ನೋಡುಗರ ಕಣ್ಣನ್ನು ಇನ್ನಷ್ಟು ಸೆಳೆಯುತ್ತಿದೆ. ಇದರ ವೈಶಿಷ್ಟ್ಯಗಳು(features) ಯಾವ ರೀತಿ ಇದೆ ಎಂದರೆ ವಾಚ್ ಫೇಸ್‌ ಆಯ್ಕೆಯನ್ನು ಹೊಂದಿದ್ದು, ಬ್ಲೂಟೂತ್(Bluetooth) ಕರೆ ಸೌಲಭ್ಯವನ್ನು ನೀಡಲಿದೆ. ಈ ವಾಚ್‌ 500nits ಬ್ರೈಟ್‌ನೆಸ್‌ (brightness)ಹೊಂದಿದೆ.

ಪ್ರಮುಖ ಫೀಚರ್ಸ್‌ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟು ಎಂದು ನೋಡೋಣ ಬನ್ನಿ;
ಹ್ಯಾಮರ್ ಏಸ್ 3.0 ಸ್ಮಾರ್ಟ್ ವಾಚ್(smart watch) 1.85 ಇಂಚಿನ ದೊಡ್ಡ ಡಿಸ್‌ಪ್ಲೇಯನ್ನು(display) ಹೊಂದಿದ್ದು, ಇದು 500nits ವರೆಗೆ ಬ್ರೈಟ್‌ನೆಸ್‌ ನೀಡಲಿದೆ. ಇದರಿಂದ ನೀವು  ಸೂರ್ಯನ ಅಥವಾ ಯಾವುದೇ ಅತಿ ತೀರವಾದ ಬೆಳಕಿನಲ್ಲಿದ್ದರೂ ಸ್ಪಷ್ಟವಾಗಿ ವಾಚ್‌ ಅನ್ನು ವೀಕ್ಷಣೆ ಮಾಡಬಹುದು. ಈ ಕಾರಣದಿಂದಾಗಿ ನೀವು ರಾತ್ರಿ ಹಗಲೆನ್ನದೇ ಅಥವಾ ಯಾವುದೇ ಸ್ಥಳದಲ್ಲಾದರೂ ಏಸ್ 3.0 ಸ್ಮಾರ್ಟ್ ವಾಚ್ ಅನ್ನು ಬಳಕೆ ಮಾಡಬಹುದಾಗಿದೆ.

ಈ ಸ್ಮಾರ್ಟ್‌ವಾಚ್‌ ಪ್ರಮುಖವಾಗಿ ಬ್ಲೂಟೂತ್‌ ಕಾಲ್ ಫೀಚರ್ಸ್‌ ಹೊಂದಿದೆ ಹಾಗೂ ಈ ವಾಚ್‌ ಧರಿಸಿರುವವರು ನೇರವಾಗಿ ವಾಚ್‌ ಮೂಲಕವೇ ಯಾರಿಗೆ ಬೇಕಾದರೂ ಕರೆಗಳನ್ನು(call) ಕಂಟ್ರೋಲ್‌ ಮಾಡಬಹುದಾಗಿದೆ. ಇದಿಷ್ಟೇ ಅಲ್ಲದೆ 50 ಫೋನ್‌ ನಂಬರ್‌ಗಳನ್ನು(phone number) ಸೇವ್‌ ಮಾಡಿಕೊಳ್ಳಲು ಈ ಏಸ್ 3.0 ಸ್ಮಾರ್ಟ್ ವಾಚ್(smart watch) ಅವಕಾಶ ಇದೆ.ಈ ಮೂಲಕ  ಯಾರಿಗೆ ಬೇಕಾದರೂ ಎಲ್ಲಿಗೆ ಬೇಕಾದರೂ ಕರೆ ಮಾಡಲು ಅವಕಾಶ ಇದೆ.

ಈ ವಾಚ್‌ 60 ಸ್ಪೋರ್ಟ್‌ ಮೋಡ್‌ಗಳನ್ನು (sport mode) ಹೊಂದಿದ್ದು ಹಾಗೂ ಇದರಲ್ಲಿ ಹೃದಯ ಬಡಿತ (heartbeat) ಸೆನ್ಸರ್‌ (sensor) ಹೊಂದಿದ್ದು, ಜೊತೆಗೆ SpO2 ಮಾನಿಟರ್‌ (monitor)ಮಾಡಲಿದೆ. ಮತ್ತು ನಿದ್ರೆಯ ಮೇಲೆ ಸದಾ ನಿಗಾ ಇಡುವ ಈ ವಾಚ್‌ ನಿಮ್ಮ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ. ಇನ್ನುಳಿದಂತೆ ವಾಯ್ಸ್‌ ಅಸಿಸ್ಟೆಂಟ್‌ (voice assistant)ಸೌಲಭ್ಯ ನೀಡಲಾಗಿರುವುದರಿಂದ ಬಳಕೆ ಮಾಡಲು ಬಳಕೆದಾರರಿಗೆ ಸಾಕಷ್ಟು ಸುಲಭವೆನಿಸುತ್ತದೆ. ಮಾರುಕಟ್ಟೆಯಲ್ಲಿ ಜನರು ಈ ವಾಚ್ ಅನ್ನು ತಟ್ಟನೇ ಇಷ್ಟ ಪಡುತ್ತಾರೆ.ಈ ವಾಚ್‌ ಕಪ್ಪು(black) ಬಣ್ಣದಲ್ಲಿ ಮಾತ್ರ ಲಭ್ಯವಿದ್ದು, ಇದನ್ನು ನೀವು Hammeronline.in ಮೂಲಕ ಖರೀದಿ ಮಾಡಬಹುದಾಗಿದೆ.

ಈ ವಾಚ್‌ನ ಬ್ಯಾಟರಿ(battery) ಯಾವ ರೀತಿ ಬಾಳಿಕೆ ಬರುತ್ತದೆ ಎಂದರೆ ಪೂರ್ಣಚಾರ್ಜ್‌ನಲ್ಲಿ(full charge) ಐದು ದಿನಗಳ ಬ್ಯಾಕಪ್‌ ನೀಡಲಿದೆ ಎಂದು e ಮೂಲಕ ಕಂಪೆನಿ ಮಾಹಿತಿ ನೀಡಿದೆ. ಇದರೊಂದಿಗೆ ಈ ವಾಚ್‌ IP67 ರೇಟಿಂಗ್‌(rating) ಹೊಂದಿದ್ದು, ಈ ಮೂಲಕ ಮಳೆ ಹಾಗೂ ಮಂಜಿನಿಂದ ಈ ವಾಚ್ ಯಾವುದೇ ಸಮಸ್ಯೆಗೆ ಒಳಗಾವುದಿಲ್ಲ. ಇದಕ್ಕೆ ಭಯ ಪಡುವ ಅವಶ್ಯಕತೆ ಇರುವುದಿಲ್ಲ. ಜೊತೆಗೆ ಸ್ಮಾರ್ಟ್‌ ನೋಟಿಫಿಕೇಶನ್‌(notification) ಆಯ್ಕೆ ನೀಡಲಾಗಿದ್ದು, ಇದರಿಂದ ಮೊಬೈಲ್‌ ಓಪನ್‌ ಮಾಡುವ ಅವಶ್ಯಕತೆಯೇ ಇರುವುದಿಲ್ಲ.

ಈ ಹ್ಯಾಮರ್ ಏಸ್ 3.0 ಸ್ಮಾರ್ಟ್ ವಾಚ್ ನ ವೆಚ್ಚ ಎಷ್ಟಿದೆ ಎಂದರೆ 1,999 ರೂ. ಗಳ ಬೆಲೆಗೆ ಕಂಪೆನಿ ನಿಗದಿ ಮಾಡಲಾಗಿದೆ. ಇದರ ಮೂಲ ದರ 4,999 ರೂಪಾಯಿ. 666 ರೂಪಾಯಿಗಳಿಗೂ  ವಾಚ್ ಅನ್ನು ಖರೀದಿಸಬಹುದು ಆರು ತಿಂಗಳ ವಾರಂಟಿ (varranty) ಆಯ್ಕೆ ಹೊಂದಿರುವ ಈ ವಾಚ್‌ ಅನ್ನು ನೀವು ಕೇವಲ 666 ರೂಪಾಯಿಗಳಿಗೂ ಖರೀದಿ (purchase) ಮಾಡಬಹುದಾಗಿದೆ. ಅಂದರೆ ಈ ವಾಚ್‌ ಖರೀದಿಯ ಮೇಲೆ ಇಎಮ್‌ಐ (EMI) ಆಫರ್‌ ಸಹ ಘೋಷಣೆ ಮಾಡಲಾಗಿದ್ದು, ಮೂರು ತಿಂಗಳ ವರೆಗೆ 666 ರೂಪಾಯಿಗಳನ್ನು ಪಾವತಿ ಮಾಡಬೇಕಿದೆ. ಜೊತೆಗೆ ಈ ಖರೀದಿಗೆ ಯಾವುದೆ ರೀತಿಯ ಕ್ರೆಡಿಟ್‌ ಕಾರ್ಡ್‌ (credit card) ಅಗತ್ಯ ಇರುವುದಿಲ್ಲ. ಹಾಗಾಗಿ ಇಂದೆ ಈ ಸ್ಮಾರ್ಟ್ ವಾಚ್ ಅನ್ನು ಖರೀದಿ ಮಾಡಿ.

C T Ravi: ಬಿಜೆಪಿ ಅಧಿಕಾರಕ್ಕೆ ಬರಲು ಲಿಂಗಾಯತ ಓಟುಗಳು ಬೇಕಿಲ್ಲ: ಸಿಟಿ ರವಿ! ರಾಜ್ಯಾದ್ಯಂತ ಬುಗಿಲೆದ್ದ ಲಿಂಗಾಯತರ ಆಕ್ರೋಶ! ರವಿ ಕರೆದು ಮಾತನಾಡುತ್ತೇನೆಂದ BSY

Leave A Reply

Your email address will not be published.