Eye Glasses : ಕನ್ನಡಕ ಹಾಕುವುದರಿಂದ ಮುಖದ ಮೇಲಾಗುವ ಕಲೆ ಹೋಗಲಾಡಿಸುವುದು ಹೇಗೆ?

Eye Glasses: ಪಂಚೆದ್ರೀಯದಲ್ಲಿ ನಮ್ಮ ಕಣ್ಣು ಕೂಡ ಒಂದಾಗಿದೆ. ಆದ್ದರಿಂದ ಕಣ್ಣಿನ ಆರೈಕೆ ಸಹ ಬಹಳ ಮುಖ್ಯವಾದುದು. ಕೆಲವರು ಕಣ್ಣಿನ ಸಮಸ್ಯೆ ಅಥವಾ ಇತರ ಕಾರಣಗಳಿಂದ ಕನ್ನಡಕ ಧರಿಸುತ್ತಾರೆ. ಆದರೆ ಕನ್ನಡಕದ ಆಯ್ಕೆ ಬಗ್ಗೆ ಕಾಳಜಿವಹಿಸುವುದರ ಜೊತೆಗೆ ಅವುಗಳನ್ನು ಧರಿಸುವುದರಿಂದ ಉಂಟಾಗುವ ಪರಿಣಾಮದ ಬಗೆಗಿನ ಮಾಹಿತಿ ಇಲ್ಲಿ ತಿಳಿಸಲಾಗಿದೆ.

 

ನೀವು ಧರಿಸುವ ಕನ್ನಡಕದ (Eye Glasses) ವಿಚಾರದಲ್ಲಿ ಜಾಗೃತೆ ವಹಿಸುವುದು ಅವಶ್ಯಕ. ಅಂದರೆ ಸರಿಯಾಗಿ ದೃಷ್ಟಿ ಕಾಣಲು ಅಥವಾ ಕಾಣಿಸಬೇಕು ಎಂಬ ಕಾರಣದಿಂದ ಸಿಕ್ಕ ಸಿಕ್ಕ ಕನ್ನಡಕಗಳನ್ನು ಆಯ್ಕೆ ಮಾಡುವುದು ನಿಮ್ಮ ಮುಖದ ಅಂದಗೆಡಿಸುತ್ತದೆ. ಅದಲ್ಲದೆ ಇನ್ನಿತರ ಸಮಸ್ಯೆಗಳಿಗೂ ಕಾರಣವಾಗಬಹುದು.

 

ಆದ್ದರಿಂದ ಕನ್ನಡಕ ಆಯ್ಕೆ ಮಾಡುವಾಗ ಮೊದಲು ಅದರ ಲೆನ್ಸ್​ಗಳ ಮೂಲಕ ಸರಿಯಾಗಿ ನೋಡಬಹುದೇ ಎಂಬುದನ್ನು ಗಮನಿಸಿ. ಈ ಲೆನ್ಸ್​ ಹೆಚ್ಚು ಭಾರವಿರದಂತೆಯೂ ಗಮನಿಸುವುದು ಅತ್ಯವಶ್ಯಕ. ಕನ್ನಡಕದ ಲೆನ್ಸ್​ ನಿಮ್ಮ ನೋಟವನ್ನು ಅಂದಗೊಳಿಸಿದರೆ, ಅದರ ಫ್ರೇಂ ನಿಮ್ಮ ಮುಖಕ್ಕೆ ಅಂದ ನೀಡುತ್ತದೆ. ಈ ಹಿನ್ನೆಲೆಯಲ್ಲಿ ನಿಮ್ಮ ಮುಖದ ಆಕಾರಕ್ಕೆ ಹೊಂದುವಂತಹ ಲೆನ್ಸ್​ ಆಯ್ಕೆ ಮಾಡಿಕೊಳ್ಳಿ.

 

ಇನ್ನು ಈ ಎರಡರ ಜೊತೆ ಅಗತ್ಯವಾಗಿರುವ ಮತ್ತೊಂದು ಅಂಶ ಎಂದರೆ, ಕನ್ನಡಕಗಳನ್ನು ಧರಿಸಿದಾಗ ಅವು ನಿಮ್ಮ ಮೂಗಿನ ಮೇಲೆ, ಕಿವಿ ಮೇಲೆ ಒತ್ತಡ ಹಾಕುತ್ತವೆ. ಈ ವೇಳೆ ಉತ್ತಮ ಗುಣಮಟ್ಟವಲ್ಲದ ಅಥವಾ ಚರ್ಮದ ಅಲರ್ಜಿಗೆ ಫ್ರೇಂಗಳ ಮೆಟಲ್​ ಕಾರಣವಾಗುತ್ತದಾ ಎಂಬುದನ್ನು ಪರೀಕ್ಷಿಸಿ. ಈ ಹಿನ್ನೆಲೆಯಲ್ಲಿ ಫ್ರೇಂಗಳ ಆಯ್ಕೆಯಲ್ಲಿ ಮುಖದ ಅಂದದ ಜೊತೆ ಚರ್ಮದ ಸೂಕ್ಷ್ಮತೆ ಕುರಿತೂ ಆಲೋಚಿಸಬೇಕು.

 

ಅದಲ್ಲದೆ ತುಂಬಾ ಸಡಿಲ ಹಾಗೂ ತುಂಬಾ ಬಿಗಿಯಾದ ಕನ್ನಡಕಗಳಿಂದಾಗಿ ಕಿರಿಕಿರಿ ಅನುಭವಿಸಬೇಕಾಗುತ್ತದೆ. ನೀವು ಕನ್ನಡಕವನ್ನು ಅಂತಿಮವಾಗಿ ಕೊಳ್ಳುವಾಗ ಇದು ಸರಿಯಾಗಿ ನಿಮ್ಮ ಕಣ್ಣು ಮತ್ತು ಮುಖಕ್ಕೆ ಫಿಟ್​ ಆಗುತ್ತಿದೆಯೇ ಎಂಬುದನ್ನು ಪರಿಶೀಲಿಸಿ.

 

ಇನ್ನು ಕನ್ನಡಕ ಧರಿಸುವ ಬಹುತೇಕ ಮಂದಿಯನ್ನು ಕಾಡುವ ಸಮಸ್ಯೆ ರಿಂಕಲ್ಸ್​ ಅಥವಾ ಸುಕ್ಕು ಚರ್ಮ. ದೀರ್ಘಕಾಲದವರೆಗೆ ಕನ್ನಡಕ ಧರಿಸುವುದರಿಂದ ಚರ್ಮದ ಕೆಳಗೆ ಸುಕ್ಕುಗಳನ್ನು ಕಾಣಬಹುದು. ಈ ಸುಕ್ಕು ನಿವಾರಣೆಗೆ ಇನ್ನಿಲ್ಲದ ಕಸರತ್ತು ಮಾಡುವುದು ಸಾಮಾನ್ಯ. ಇದರ ನಿವಾರಣೆಗೆ ಮಾಡಬಹುದಾದ ಸರಳ ಸಲಹೆಗಳು ಇಲ್ಲಿವೆ.

 

ಬಾದಾಮಿ ಎಣ್ಣೆ:

ಬಾದಾಮಿ ಎಣ್ಣೆಯಲ್ಲಿ ವಿಟಮಿನ್​ ಇ ಇರುತ್ತದೆ. ಇದು ಮೂಗು ಮತ್ತು ಕಣ್ಣಿನ ಕೆಳಗೆ ಉಂಟಾಗುವ ಕಲೆಗಳನ್ನು ನಿವಾರಿಸುತ್ತದೆ. ಪ್ರತಿ ನಿತ್ಯ ಬಾದಾಮಿ ಎಣ್ಣೆಯಿಂದ ಮಸಾಜ್​ ಮಾಡುವುದರಿಂದ ಉತ್ತಮ ಫಲಿತಾಂಶ ಕಾಣಬಹುದಾಗಿದೆ.

 

ಹಾಲು, ಜೇನು ತುಪ್ಪ, ಓಟ್ಸ್​​:

ಹಾಲು, ಜೇನು ತುಪ್ಪ ಮತ್ತು ಓಟ್ಸ್​ ಅನ್ನು ಚೆನ್ನಾಗಿ ಮಿಕ್ಸ್​ ಮಾಡಿ, ಕಲೆಯಾದ ಜಾಗಕ್ಕೆ ನಯವಾಗಿ ಅಪ್ಲೈ ಮಾಡಿ, ಮಸಾಜ್​ ಮಾಡಿ. ಇದರಿಂದ ಕಲೆ ಕಡಿಮೆಯಾಗುವುದರ ಜೊತೆಗೆ ಚರ್ಮ ತಾಜಾತನದ ಜೊತೆಗೆ ಮೃದುವಾಗುತ್ತದೆ.

 

ನಿಂಬೆ (lemeon ) , ರೋಸ್​ ವಾಟರ್​ (Rose water)ಬಳಕೆ:

ಕನ್ನಡಕದಿಂದ ಉಂಟಾಗಿರುವ ಸುಕ್ಕುಗಳ ಮೇಲೆ ನಿಂಬೆ ರಸವನ್ನು ಹಚ್ಚಿ. ಕೆಲವು ಸಮಯದ ಬಳಿಕ ತೊಳೆಯುವುದರಿಂದ ಈ ಸಮಸ್ಯೆಗೆ ಮುಕ್ತಿ ಸಿಗಬಹುದು. ನಿಂಬೆ ರಸದ ಜೊತೆಗೆ ರೋಸ್​ ವಾಟರ್​ ಮಿಕ್ಸ್​ ಮಾಡಿ ಸುಕ್ಕಿನ ಮೇಲೆ ಹಚ್ಚಿ 15 ನಿಮಿಷ ಬಿಡಿ. ಬಳಿಕ ಅದನ್ನು ಚೆನ್ನಾಗಿ ತೊಳೆಯಿರಿ.

 

ರೋಸ್​ವಾಟರ್​, ವಿನೆಗರ್​:

ರೋಸ್​ ವಾಟರ್​ಗೆ ಒಂದೆರಡು ಹನಿ ವಿನೆಗರ್​ ಹಾಕಿ ಮಿಶ್ರಣ ಮಾಡಿ ಕಪ್ಪು ವರ್ತುಲದ ಮೇಲೆ ಚೆನ್ನಾಗಿ ಮಿಕ್ಸ್​ ಮಾಡಿ. ಇದರಿಂದಾಗಿ ಈ ಕಲೆಗಳು ಹೋಗುತ್ತವೆ.

 

ನೀವು ಇಲ್ಲಿ ಕನ್ನಡಕದ ಆಯ್ಕೆ ಬಗ್ಗೆ ಕಾಳಜಿವಹಿಸುವುದರ ಜೊತೆಗೆ ಅವುಗಳನ್ನು ಧರಿಸುವುದರಿಂದ ಉಂಟಾಗುವ ಪರಿಣಾಮ ಮತ್ತು ಪರಿಹಾರವನ್ನು ತಿಳಿದುಕೊಳ್ಳಬಹುದಾಗಿದೆ.

Leave A Reply

Your email address will not be published.