Home News ಯೂಟ್ಯೂಬ್ ಬಳಕೆದಾರರೇ ಎಚ್ಚರ : ವಿಡಿಯೋಗಳನ್ನು ನೋಡುತ್ತಾ ಇರುವಂತೆ ಖಾಲಿ ಆಗಬಹುದು ಬ್ಯಾಂಕ್ ಖಾತೆ!

ಯೂಟ್ಯೂಬ್ ಬಳಕೆದಾರರೇ ಎಚ್ಚರ : ವಿಡಿಯೋಗಳನ್ನು ನೋಡುತ್ತಾ ಇರುವಂತೆ ಖಾಲಿ ಆಗಬಹುದು ಬ್ಯಾಂಕ್ ಖಾತೆ!

Youtube scam

Hindu neighbor gifts plot of land

Hindu neighbour gifts land to Muslim journalist

Youtube scam :ದಿನ ಕಳೆದಂತೆ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇದ್ದು, ಅದರಂತೆಯೇ ವಂಚನೆಗಳು ಕೂಡ ಮುಂದುವರಿಯುತ್ತಲೇ ಇದೆ. ಹೌದು. ಸ್ಕ್ಯಾಮರ್‌ ಗಳ ಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತಿದ್ದು, ಒಂದಲ್ಲ ಒಂದು ಪ್ಲಾನ್ ಮೂಲಕ ಜನರನ್ನು ಮೋಸ ಮಾಡುತ್ತಲೇ ಬಂದಿದ್ದಾರೆ.

ಇಂದು ಹೆಚ್ಚಿನ ಜನರು ಬಳಕೆ ಮಾಡುತ್ತಿರುವ ಯೂಟ್ಯೂಬ್ ಕೂಡ ವಂಚನೆಕಾರರ ಕೈ ಸೇರಿದೆ. ಹೌದು. ಇತ್ತೀಚಿನ ದಿನಗಳಲ್ಲಿ ಮಾಲ್‌ವೇರ್ ಲಿಂಕ್‌ಗಳನ್ನು ಹೊಂದಿರುವ ಯೂಟ್ಯೂಬ್ ವಿಡಿಯೋಗಳು ಬಹಳಷ್ಟು ಯೂಟ್ಯೂಬ್​ನಲ್ಲಿ ಕಂಡುಬರುತ್ತಿದೆ ಎಂದು ಸೈಬರ್‌ಸೆಕ್ಯುರಿಟಿ ಸಂಶೋಧಕರು ಇತ್ತೀಚೆಗೆ ಕಂಡುಕೊಂಡಿದ್ದಾರೆ.

ಇದೀಗ ಯೂಟ್ಯೂಬ್​ ವೀಕ್ಷಕರ ಡೇಟಾ ಹ್ಯಾಕ್​ (Youtube scam) ಮಾಡಲು ತಂಡ ಮುಂದಾಗಿದ್ದಾರೆ. Infostealer ಎಂದು ಕರೆಯಲ್ಪಡುವ ಈ ಮಾಲ್‌ವೇರ್ ಫೇಕ್​ ವೆಬ್‌ಸೈಟ್‌ಗಳು, ಡೌನ್‌ಲೋಡ್‌ಗಳು ಮತ್ತು ಯೂಟ್ಯೂಬ್ ಟ್ಯುಟೋರಿಯಲ್‌ಗಳ ಮೂಲಕ ಬಳಕೆದಾರರ ಕಂಪ್ಯೂಟರ್‌ಗಳನ್ನು ಪ್ರವೇಶಿಸುತ್ತದೆ. ಈ ಮಾಲ್‌ವೇರ್ ಕದ್ದ ಮಾಹಿತಿಯನ್ನು ಹ್ಯಾಕರ್ಸ್​​ಗಳ ಸರ್ವರ್‌ಗೆ ಕಳುಹಿಸುತ್ತದೆ. ನಂತರ ಇದು ಬಳಕೆದಾರರ ಬ್ಯಾಂಕ್ ಖಾತೆಯನ್ನು ಖಾಲಿ ಮಾಡುತ್ತದೆ.

ಸಂಶೋಧನೆಯ ಪ್ರಕಾರ, ಸೈಬರ್ ಅಪರಾಧಿಗಳು ಕ್ರ್ಯಾಕ್ಡ್ ಸಾಫ್ಟ್‌ವೇರ್ ಡೌನ್‌ಲೋಡ್‌ಗಳು, ದುರುದ್ದೇಶಪೂರಿತ ಲಿಂಕ್‌ಗಳನ್ನು ಹೊಂದಿರುವ 5-10 ವಿಡಿಯೋಗಳನ್ನು ಪ್ರತಿ ಗಂಟೆಗೆ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದಾರೆ. ಈ ವಿಡಿಯೋಗಳು ಮಾಲ್‌ವೇರ್​ಗಳನ್ನು ಡೌನ್‌ಲೋಡ್ ಮಾಡಲು ಬಳಕೆದಾರರನ್ನು ಪ್ರೋತ್ಸಾಹಿಸುತ್ತವೆ. ಈ ಅಪರಾಧಿಗಳು ವಿಡಿಯೋಗಳನ್ನು ಅಪ್‌ಲೋಡ್ ಮಾಡುವಾಗ ಯೂಟ್ಯೂಬ್​ ಅಲ್ಗಾರಿದಮ್‌ನಿಂದ ಗಮನಕ್ಕೆ ಬರದಂತೆ ಎಚ್ಚರಿಕೆ ವಹಿಸುತ್ತಾರೆ.

AI ಜನರೇಟರ್ ವಿಡಿಯೋಳಾಗಿದ್ದು, ವಿಡಿಯೋಗಳನ್ನು ಗುರುತಿಸಲು ಅಥವಾ ತೆಗೆದುಹಾಕಲು ಕಷ್ಟವಾಗುತ್ತದೆ. ನವೆಂಬರ್ 2022 ರಿಂದ ಯೂಟ್ಯೂಬ್ ವಿಡಿಯೋಗಳಲ್ಲಿ ವಿಡಾರ್, ರೆಡ್‌ಲೈನ್, ರಕೂನ್‌ನಂತಹ ಇನ್ಫೋಸ್ಟೀಲರ್ ಮಾಲ್‌ವೇರ್ ಅನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಈ ಮಾಲ್‌ವೇರ್ ಕ್ರೆಡಿಟ್ ಕಾರ್ಡ್ ವಿವರಗಳು, ಬ್ಯಾಂಕ್ ಖಾತೆ ಸಂಖ್ಯೆಗಳು, ಪಾಸ್‌ವರ್ಡ್‌ಗಳಂತಹ ಸೂಕ್ಷ್ಮ ಮಾಹಿತಿಯನ್ನು ಕದಿಯುತ್ತದೆ. ಹೀಗಾಗಿ ಎಚ್ಚರ ದಿಂದಿರುವುದು ಸೂಕ್ತ.

AI ಸೈಬರ್-ಸೆಕ್ಯುರಿಟಿ ಸಂಸ್ಥೆ CloudSEK ನ ಸಂಶೋಧನೆಯ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್ ನಲ್ಲಿ ಮಾಲ್‌ವೇರ್ ಲಿಂಕ್‌ಗಳನ್ನು ಹೊಂದಿರುವ ವಿಡಿಯೋಗಳು 200 ರಿಂದ 300 ಪಟ್ಟು ಹೆಚ್ಚಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : CPPRI Recruitment 2023 : ಸೆಂಟ್ರಲ್ ಪಲ್ಪ್ ಹಾಗೂ ಪೇಪರ್ ರಿಸರ್ಚ್ ಇನ್ಸ್ಟಿಟ್ಯೂಟ್ ನಲ್ಲಿ ಉದ್ಯೋಗ : ಒಟ್ಟು ಹುದ್ದೆ : 34