Bajaj Pulsar NS 200 : ಯುವಕರ ಹಾಟ್ ಫೆವರೇಟ್ ‘ಬಜಾಜ್ ಪಲ್ಸರ್ NS200’ ಬಿಡುಗಡೆ!

Bajaj Pulsar NS 200 : ಬೈಕ್ ಅಂದರೆ ಸಾಕು!!! ಹುಡುಗರ ಪಾಲಿನ ಗರ್ಲ್ ಫ್ರೆಂಡ್ ಇದ್ದಂತೆ. ಎಲ್ಲೇ ಹೋದರು ಬಂದರೂ ಯುವಜನತೆಗೆ ಬೈಕ್ ಮೇಲಿನ ವ್ಯಾಮೋಹ ಕಡಿಮೆ ಅಗುವಂತಹದಲ್ಲ. ಅದರಲ್ಲಿಯೂ ಯುವಕರ ಹಾಟ್ ಫೇವರೆಟ್ ಬೈಕ್ ಗಳಲ್ಲಿ ಬುಲೆಟ್ ಅಗ್ರ ಸ್ಥಾನದಲ್ಲಿದ್ದರೆ, ಅಷ್ಟೆ ಕ್ರೇಜ್ ಹೊಂದಿರುವ ಮತ್ತೊಂದು ಬೈಕ್ ಬಜಾಜ್ ಪಲ್ಸಾರ್ (Bajaj Pulsar NS200) ಆಕರ್ಷಕ ಲುಕ್ ಹಾಗೂ ತನ್ನ ವಿಶೇಷತೆಯ ಮೂಲಕ ಗ್ರಾಹಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಭಾರತ ಮಾರುಕಟ್ಟೆಯಲ್ಲಿ ತನ್ನ ಟ್ರೆಂಡ್ ಸೃಷ್ಟಿ ಮಾಡಲು ‘ಬಜಾಜ್ ಪಲ್ಸರ್ NS200’ ರೆಡಿಯಾಗಿದೆ.

ಬಜಾಜ್ ಕಂಪನಿ ‘ಪಲ್ಸರ್ NS200’ ಬೈಕ್ ಜೊತೆಗೆ USD ಪೋರ್ಕ್ಸ್, ಡ್ಯುಯಲ್-ಚಾನೆಲ್ ABS ಸೇರಿದಂತೆ ಭರ್ಜರಿ ವೈಶಿಷ್ಟ್ಯಗಳೊಂದಿಗೆ ರೂ.1.35 ಲಕ್ಷ ಬೆಲೆಯಲ್ಲಿ ‘ಪಲ್ಸರ್ NS160’ ಬೈಕ್‌ ಅನ್ನು ಕೂಡ ಬಿಡುಗಡೆ ಮಾಡಿದೆ. ಹಿಂದಿನ ಮಾದರಿಗೆ ಹೋಲಿಕೆ ಮಾಡಿದರೆ, ರೂ.10,000 ಹೆಚ್ಚಿನ ಬೆಲೆಯನ್ನು ಒಳಗೊಂಡಿದ್ದು, 160.3 ಸಿಸಿ ಸಿಂಗಲ್-ಸಿಲಿಂಡರ್ ಎಂಜಿನ್, 17 bhp ಪವರ್, 14.6 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 5-ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಾಗಲಿದೆ.

ಹೊಸ ಬಜಾಜ್ ಪಲ್ಸರ್ NS200(Bajaj Pulsar NS 200 ) ನವೀಕರಿಸಿದ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ ಅನ್ನು ಒಳಗೊಂಡಿದ್ದು, ಇದು DTE (ಡಿಸ್ಟೆನ್ಸ್ ಟು ಎಂಪ್ಟಿ), ನೈಜ ಸಮಯದ ಇಂಧನ ದಕ್ಷತೆ (real-time fuel efficiency), ಗೇರ್ ಪೊಜಿಷನ್ ಮಾಹಿತಿಯನ್ನು ಪ್ರದರ್ಶಿಸುತ್ತದೆ. ಕೆಲವೊಂದು ಹೊಸ ವೈಶಿಷ್ಟ್ಯಗಳನ್ನು ಹೊಂದಿರುವ ಬೈಕ್, ಅತ್ಯಾಧುನಿಕ 33 ಎಂಎಂ USD ಪೋರ್ಕ್ಸ್, ಡ್ಯುಯಲ್-ಚಾನೆಲ್ ABS(Anti-lock braking system)ಅನ್ನು ಹೊಂದಿದೆ. ಹಿಂದಿನ ಮಾದರಿಗೆ ಹೋಲಿಕೆ ಮಾಡಿದರೆ 1.5 kg (ಒಟ್ಟು 158 kg) ಕಡಿಮೆ ತೂಕವನ್ನು ಒಳಗೊಂಡಿದೆ. ಬಜಾಜ್ ಪಲ್ಸರ್ NS200 2,017 ಎಂಎಂ ಉದ್ದ, 804 ಎಂಎಂ ಅಗಲ, 1,075 ಎಂಎಂ ಎತ್ತರ ಹಾಗೂ 1,363 ಎಂಎಂ ವ್ಹೀಲ್‌ಬೇಸ್ ಅನ್ನು ಹೊಂದಿದೆ. ಇದಲ್ಲದೆ, ಉತ್ತಮ ಇಂಧನ ದಕ್ಷತೆಯನ್ನು ಒಳಗೊಂಡಿದ್ದು, 36 kmpl ಮೈಲೇಜ್ ನೀಡುವ ಸಾಮರ್ಥ್ಯವನ್ನು ಒಳಗೊಂಡಿದೆ.

ಈ ಬೈಕಿನ ಟೈಯರ್ಸ್ ಹಾಗೂ ಬ್ರೇಕಿಂಗ್ ವ್ಯವಸ್ಥೆ ಗಮನಿಸಿದರೆ, ಇದು 17 ಇಂಚಿನ ಅಲಾಯ್ ವೀಲ್ಸ್ ಒಳಗೊಂಡಿದೆ. ಫ್ರಂಟ್ 100/80, ರೇರ್ 130/70 ಅಳತೆಯ ಟೈಯರ್ಸ್ ಅನ್ನು ಹೊಂದಿದ್ದು, ಫ್ರಂಟ್ 300 ಎಂಎಂ ಹಾಗೂ ರೇರ್ 230 ಎಂಎಂ ಡಿಸ್ಕ್ ಬ್ರೇಕ್ ಅನ್ನು ಒಳಗೊಂಡಿದೆ. ಇದು 199.5 ಸಿಸಿ ಸಾಮರ್ಥ್ಯದ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೋಲ್ಡ್ ಎಂಜಿನ್ ಹೊಂದಿದ್ದು, 24 bhp ಗರಿಷ್ಠ ಪವರ್ ಹಾಗೂ 14.6 Nm ಪೀಕ್ ಟಾರ್ಕ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ. ಇದಲ್ಲದೆ, 6 ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಖರೀದಿಗೆ ಗ್ರಾಹಕರಿಗೆ ದೊರೆಯಲಿದೆ.

ಇದಲ್ಲದೆ, ಹಿಂದಿನ ಮಾದರಿ ಒಳಗೊಂಡ ಬಹುತೇಕ ಎಲ್ಲ ವಿಶೇಷತೆಯನ್ನು ಬೈಕ್ ಒಳಗೊಂಡಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಧೊಳೆಬ್ಬಿಸಲು ಫೆವರೇಟ್ ಬಜಾಜ್ ಪಲ್ಸರ್ NS200 ಅಣಿಯಾಗಿದೆ.ಈ ಬೈಕ್‌ನ ಬೆಲೆ ಎಷ್ಟು ಎಂದು ಗಮನಿಸಿದರೆ, ನವೀಕರಿಸಿದ ‘ಬಜಾಜ್ ಪಲ್ಸರ್ NS200’ ರೂ.1.47 ಲಕ್ಷ (Ex- Showroom) ದರದಲ್ಲಿ ಖರೀದಿ ಮಾಡಬಹುದು. ಹಿಂದಿನ ಮಾದರಿಗೆ ಹೋಲಿಸಿದರೆ, ರೂ.7,000 ಹೆಚ್ಚಿನ ಬೆಲೆಯನ್ನು ಒಳಗೊಂಡಿದೆ.

‘ಬಜಾಜ್ ಪಲ್ಸರ್ NS200’ ಎಂಜಿನ್ ಅನ್ನು ಮುಂಬರಲಿರುವ ಎಮಿಷನ್ ಮಾನದಂಡಗಳ (Emission)ಅನುಸಾರವಾಗಿ ನವೀಕರಣ ಮಾಡಲಾಗಿದೆ. ಇನ್ನೂ ಹೊಸ ಹೊಚ್ಚ ಪಲ್ಸರ್ NS200 ಬೈಕ್, ಅತ್ಯುತ್ತಮ ಕಾರ್ಯಕ್ಷಮತೆಯನ್ನು ಹೊಂದಿದ್ದು, ಗ್ರಾಹಕರ ಮನಗೆಲ್ಲಲಿದೆ. USD ಪೋರ್ಕ್ಸ್, ಡ್ಯುಯಲ್ ಚಾನೆಲ್ ABS ಪಡೆದಿರುವುದರಿಂದ ಆಕರ್ಷಕ ಲುಕ್ ಅನ್ನು ಹೊಂದಿದ್ದು, ಮಾರುಕಟ್ಟೆಯಲ್ಲಿ ಜನ ಮನ ಸೆಳೆಯುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ: Telecom Recharge: ಏರ್​​ಟೆಲ್ ಗ್ರಾಹಕರಿಗೆ ಬಿಗ್​ ಶಾಕಿಂಗ್‌ ನ್ಯೂಸ್‌!!!

Leave A Reply

Your email address will not be published.