Maruti Swift Car : ಅತಿ ಹೆಚ್ಚು ಮೈಲೇಜ್ , ಸೂಪರ್ ಲುಕ್ ನಿಂದ ಸೆಳೆಯೋ ಈ ಮಾರುತಿಗೆ ಕೇವಲ 1 ಲಕ್ಷ ಕೊಟ್ಟು ಖರೀದಿಸಿ!!!
Maruti swift car : ಭಾರತೀಯ ಮಾರುಕಟ್ಟೆಯಲ್ಲಿ 2023 ಹೊಸ ವರ್ಷದ ಆರಂಭ ತಿಂಗಳು, ಜನವರಿಯಲ್ಲಿ ಅಂಕಿ ಅಂಶ ಪ್ರಕಾರ ಮಾರುತಿ ಸ್ವಿಫ್ಟ್ (maruti swift car) ಅತಿ ಹೆಚ್ಚು ಮಾರಾಟವಾದ ಕಾರುಗಳ ಪೈಕಿ ಮೂರನೇ ಸ್ಥಾನವನ್ನು ಉಳಿಸಿಕೊಂಡಿದೆ. ಅದಲ್ಲದೆ ಭಾರತೀಯ (india ) ಮಾರುಕಟ್ಟೆಯಲ್ಲಿ ಸಾಮಾನ್ಯ ಜನರ ನೆಚ್ಚಿನ ಕಾರು ಮಾರುತಿ ಸುಜುಕಿ ಕಂಪನಿಯ ಸ್ವಿಫ್ಟ್ ಅನ್ನುವುದರಲ್ಲಿ ಸಂಶಯವಿಲ್ಲ.
ಮುಖ್ಯವಾಗಿ ಕಳೆದ ವರ್ಷ ಈ ಕಾರಿನ ಸಿಎನ್ಜಿ ವೆರಿಯಂಟ್ ಕೂಡ ಲಾಂಚ್ ಆಗಿದ್ದು, ನೀವು ಕೂಡ ಸ್ವಿಫ್ಟ್ ಖರೀದಿ ಮಾಡುವ ಯೋಚನೆ ಮಾಡಿದಲ್ಲಿ ಭರ್ಜರಿ ಆಫರ್ ಲಭ್ಯವಿದೆ. ಕೇವಲ 1 ಲಕ್ಷ ರೂಪಾಯಿ ಕೊಟ್ಟು ಈ ಕಾರನ್ನು ನೀವು ಮನೆಗೆ ತೆಗೆದುಕೊಂಡು ಹೋಗಬಹುದು.
ಆದರೆ ಈ ಕಾರಿನ ಬೆಲೆ 1 ಲಕ್ಷ ಅಲ್ಲ. ನೀವು ಒಂದು ಲಕ್ಷ ಡೌನ್ ಪೇಮೆಂಟ್ ಮಾಡಿ ಈ ಕಾರನ್ನು ಮನೆಗೆ ತೆಗೆದುಕೊಂಡು ಹೋಗಬಹುದು. ನಂತರ ಇಎಂಐ ರೂಪದಲ್ಲಿ ನೀವು ಉಳಿದ ಹಣವನ್ನು ಕಟ್ಟಬಹುದು.
ಮಾರುತಿ ಸ್ವಿಫ್ಟ್ ಅನ್ನು Lxi, Vxi, Zxi ಮತ್ತು Zxi+ ಎಂಬ 4 ಟ್ರಿಮ್ಗಳ 11 ವೆರಿಯಂಟ್ಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಇವುಗಳ ಎಕ್ಸ್ ಶೋ ರೂಮ್ ಬೆಲೆ 6 ಲಕ್ಷ ರೂಪಾಯಿಗಳಿಂದ ಆರಂಭವಾಗಿ, 8.98 ಲಕ್ಷ ರೂಪಾಯಿಗಳವರೆಗೂ ಇದೆ. ಈ ಹ್ಯಾಚ್ಬ್ಯಾಕ್ ಕಾರಿನಲ್ಲಿ 1197 ಸಿಸಿಯ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ.
ಇನ್ನು ಮಾರುತಿ ಸುಜುಕಿ ಸ್ವಿಫ್ಟ್ LXI ವೆರಿಯಂಟ್ನ ಎಕ್ಸ್ ಶೋ ರೂಮ್ ಬೆಲೆ 6 ಲಕ್ಷ ರೂಪಾಯಿ. ಆನ್ ರೋಡ್ ಬೆಲೆ 6,58,298 ರೂಪಾಯಿಗಳಾಗಿದೆ. ಈ ಕಾರನ್ನು ನೀವು ಒಂದು ಲಕ್ಷ ರೂಪಾಯಿ ಡೌನ್ ಪೇಮೆಂಟ್ ಮಾಡಬಹುದು. ಉಳಿದ 5,58,298 ರೂಪಾಯಿಗಳನ್ನು ಲೋನ್ ಸೌಲಭ್ಯ ಪಡೆಯಬೇಕಾಗುತ್ತೆ. ಈ ಮೊತ್ತಕ್ಕೆ ನೀವು 5 ವರ್ಷಗಳ ಅಂಧರೆ 60 ಕಂತುಗಳಲ್ಲಿ ಪ್ರತಿ ತಿಂಗಳು 11,600 ರೂಪಾಯಿ ಇಎಮ್ಐ ಮೂಲಕ ಕಟ್ಟಬೇಕಾಗುತ್ತದೆ.
ಸದ್ಯ ಹೆಚ್ಚಿನ ಮಾರಾಟ ಆಗುತ್ತಿರುವ ಕಾರುಗಳಲ್ಲಿ ಮಾರುತಿ ಸ್ವಿಫ್ಟ್ ಕೂಡ ಒಂದಾಗಿದ್ದು, ಮೈಲೇಜ್ ಕಾರಣದಿಂದ ಸಾಮಾನ್ಯ, ಜನರಿಗೆ ಬಹಳ ಇಷ್ಟವಾಗಬಹುದು.