ಲಿಂಬೆ ಕಾಯಿ ಕೆಟ್ಟು ಹೋಗದಂತೆ ಸಂಗ್ರಹಿಸಿಡಲು ಇಲ್ಲಿದೆ ಟಿಪ್ಸ್!

Lemon :ಈಗಿನ ಸೆಕೆ ಭರಿತ ದಿನಗಳಲ್ಲಿ ತಂಪು ಪಾನೀಯ ಕುಡಿಯುತ್ತಾ ಇರಬೇಕು ಎಂದು ಅನಿಸುತ್ತದೆ. ಹಾಗಾಗಿ ಹೆಚ್ಚಿನವರು ಮನೆಯ ಫ್ರಿಡ್ಜ್ ನಲ್ಲಿ ತಂಪು ಪಾನಿಯಗಳನ್ನು ತಂದಿರಿಸುತ್ತಾರೆ. ಇನ್ನೂ ಕೆಲವೊಂದಷ್ಟು ಜನ ಉತ್ತಮ ಆರೋಗ್ಯದ ದೃಷ್ಟಿಯಿಂದ ಲಿಂಬೆಕಾಯಿ (Lemon) ಜ್ಯೂಸ್ ತಯಾರಿಸಿ ಕುಡಿಯುತ್ತಾರೆ.

ಹೀಗಾಗಿ ಒಂದೇ ಬಾರಿಗೆ ತಂಬಾ ಲಿಂಬೆ ಕಾಯಿಗಳನ್ನು ತಂದು ಮನೆಯಲ್ಲಿ ಇರಿಸಿಕೊಳ್ಳುತ್ತಾರೆ. ಆದ್ರೆ, ಸಮಸ್ಯೆ ಅಂದ್ರೆ ಅದು ಎರಡು ಮೂರು ದಿವಸಗಳ ಬಳಿಕ ಕೆಟ್ಟು ಹೋಗುವಂತದ್ದಾಗಿದೆ. ನಿಂಬೆಹಣ್ಣು ಸ್ವಾಭಾವಿಕವಾಗಿ ಆಮ್ಲೀಯ ಗುಣವನ್ನು ಹೊಂದಿರುವುದರಿಂದ ಸರಿಯಾಗಿ ಮತ್ತು ಸರಿಯಾದ ತಾಪಮಾನದಲ್ಲಿ ಸಂಗ್ರಹಿಸದಿದ್ದರೆ ಬೇಗ ಹಾಳಾಗುತ್ತದೆ ಮತ್ತು ಬೇಗ ಒಣಗಿಹೋಗುತ್ತದೆ. ಹಾಗಾಗಿ ನಿಮ್ಮ ಈ ಸಮಸ್ಯೆಗೆ ಪರಿಹಾರ ಕೊಡಲೆಂದೆ ನಿಂಬೆಕಾಯಿಯನ್ನು ಸುರಕ್ಷಿತವಾಗಿರಿಸುವ ಕೆಲವೊಂದು ಟಿಪ್ಸ್ ನಿಮಗೆ ನೀಡುತ್ತೇವೆ ನೋಡಿ.

ಗಾಜಿನ ಜಾರ್:
ನಿಂಬೆಹಣ್ಣನ್ನು ನೀರು ತುಂಬಿಸಿಟ್ಟ ಗಾಜಿನ ಜಾರ್​​ ಒಳಗಡೆ ಸಂಗ್ರಹಿಸಿಡಿ. ಇದು ದೀರ್ಘಕಾಲದ ವರೆಗೆ ತಾಜಾವಾಗಿರಿಸುತ್ತದೆ. ಎಲ್ಲಾ ನಿಂಬೆಹಣ್ಣುಗಳನ್ನು ನೀರಿನಿಂದ ತುಂಬಿದ ಜಾರ್​ನಲ್ಲಿ ಇಟ್ಟು, ರೆಫ್ರಿಜರೇಟರ್ನಲ್ಲಿ ಇರಿಸಿ. ಇದು ತುಂಬಾ ದಿನಗಳವರೆಗೆ ತಾಜಾ ಮತ್ತು ರಸಭರಿತವಾಗಿರಿಸುತ್ತದೆ

ಹಣ್ಣಿನೊಂದಿಗೆ ಇಡಬೇಡಿ:
ಸೇಬು ಮತ್ತು ಬಾಳೆಹಣ್ಣಿನೊಂದಿಗೆ ಎಂದಿಗೂ ನಿಂಬೆಯನ್ನು ಸಂಗ್ರಹಿಸಿ ಇಡಬೇಡಿ. ಸೇಬು ಹಾಗೂ ಬಾಳೆಹಣ್ಣಿನಲ್ಲಿ ಎಥಿಲೀನ್ ಎಂಬ ಹಾರ್ಮೋನ್ ಉತ್ಪತ್ತಿಯಾಗುವುದರಿಂದ ಇದು ಆಮ್ಲೀಯ ಹಣ್ಣುಗಳು ಬೇಗ ಹಾಳಾಗಲು ಕಾರಣವಾಗುತ್ತದೆ.

ಗಾಳಿಯಾಡದ ಚೀಲ ಬಳಸಿ:
ನಿಂಬೆಹಣ್ಣುಗಳನ್ನು ಹಾಳಾಗದಂತೆ ಸಂಗ್ರಹಿಸಿಡಲು ಸೀಲ್ ಮಾಡಿದ ಅಥವಾ ಗಾಳಿಯಾಡದ ಚೀಲದೊಳಗೆ ಇರಿಸಿ. ಇದರಿಂದಾಗಿ ನಿಂಬೆಹಣ್ಣುಗಳು ರಸ ಮತ್ತು ಪರಿಮಳವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.

ಪ್ಲಾಸ್ಟಿಕ್ ಕಂಟೈನರ್ ಬಳಸಿ:
ನಿಂಬೆಹಣ್ಣನ್ನು ಪ್ಲಾಸ್ಟಿಕ್​ನಲ್ಲಿ ಸುತ್ತಿ ಗಾಳಿಯಾಡದ ಕಂಟೇನರ್‌ನಲ್ಲಿ ಹಾಕಿ ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿ. ಇದು ದೀರ್ಘಕಾಲದ ವರೆಗೆ ನಿಂಬೆಹಣ್ಣನ್ನು ತಾಜಾವಾಗಿರಿಸುತ್ತದೆ.

ಅಲ್ಯೂಮಿನಿಯಂ ಫಾಯಿಲ್:
ನಿಂಬೆಹಣ್ಣುಗಳನ್ನು ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಸುತ್ತಿ ಸಂಗ್ರಹಿಸಿಡುವುದರಿಂದ ಅವುಗಳ ತಾಜಾತನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಲ್ಯೂಮಿನಿಯಂ ಫಾಯಿಲ್ ಬಳಸಿ ಪ್ರತಿಯೊಂದು ನಿಂಬೆಯನ್ನು ಪ್ರತ್ಯೇಕವಾಗಿ ಸುತ್ತಿಕೊಳ್ಳುವುದು ಉತ್ತಮ. ಇದು ನಿಂಬೆಹಣ್ಣಿನ ನೈಸರ್ಗಿಕ ತೇವಾಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ಒಣಗುವುದನ್ನು ಮತ್ತು ಗಟ್ಟಿಯಾಗುವುದನ್ನು ತಡೆಯುತ್ತದೆ.

Leave A Reply

Your email address will not be published.