Cheeta And Black Panther: ಒಟ್ಟೊಟ್ಟಿಗೇ ಹೆಜ್ಜೆಹಾಕುತ್ತಾ ಖಡಕ್ ಲುಕ್ ಕೊಟ್ವು ಚಿರತೆ ಹಾಗೂ ಬ್ಲಾಕ್ ಪಾಂಥೆರ್! ಇಲ್ಲಿದೆ ನೋಡಿ ಈ ಅಪರೂಪದ ವಿಡಿಯೋ!

Cheeta And Black Panther :ನೀವು ಡಿಸ್ಕವರಿ(Discovery)ಚಾನೆಲ್ ನಲ್ಲಿ ಅಥವಾ ಮೃಗಾಲಯ(Zoo)ಗಳಲ್ಲಿ ಸಾಮಾನ್ಯವಾಗಿರು ಚಿರತೆಗಳು, ಅಂದರೆ ಮೈ ಮೇಲೆ ಕಪ್ಪು ಚುಕ್ಕಿಗಳಿರುವ ಚಿರತೆಗಳು ಒಟ್ಟೊಟ್ಟಾಗಿ ಓಡಾಡುವುದನ್ನು ನೋಡಿರಬಹುದು. ಆದರೆ ಕಪ್ಪು ಬಣ್ಣದ ಬ್ಲಾಕ್ ಪಾಂಥೆರ್(Black Panther-ಕರಿ ಚಿರತೆ) ಹಾಗೂ ಈ ಕಪ್ಪು ಚುಕ್ಕಿಗಳಿರುವ ಚಿರತೆಗಳೆರಡೂ ಜೊತೆಯಾಗಿ (Cheeta And Black Panther) ಓಡಾಡುವುದನ್ನು ಎಲ್ಲಾದರು ನೋಡಿದ್ದೀರಾ? ಆದರೆ ಈ ಎರಡೂ ರೀತಿಯ ಚಿರತೆಗಳು ಒಟ್ಟೊಟ್ಟಿಗೆ ಹೆಜ್ಜೆ ಹಾಕುತ್ತಾ ತಿರುಗಾಡುವ ಸುಂದರ ದೃಶ್ಯವೊಂದು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ಹೌದು, ಪ್ರಸಿದ್ಧ ವೈಲ್ಡ್‌ಲೈಫ್ ಫೋಟೋಗ್ರಾಫರ್( Wildlife Photographer) ಶಾಜ್ ಜುಂಗ್(Shaj Jung) ಅವರ ಕ್ಯಾಮರಾದಲ್ಲಿ ಈ ಅಪರೂಪದ ವಿಡಿಯೋ ಸೆರೆ ಆಗಿದ್ದು, ಇದನ್ನವರು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ(Instagram) ಪೋಸ್ಟ್ ಮಾಡಿದ್ದಾರೆ. ಈ ದೃಶ್ಯವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡ ಬಳಿಕ ಕೆಲವೇ ಸಮಯದಲ್ಲಿ ಬರೋಬ್ಬರಿ 5 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಬಗೆ ಬಗೆಯಾಗಿ ಕಮೆಂಟಿಸುತ್ತಿದ್ದಾರೆ.

ಇನ್ನು ಶಾಜ್ ಅವರು ತಮ್ಮ ಪೋಸ್ಟ್ ನಲ್ಲಿ ‘ನೀವು ವನ್ಯಜೀವಿಗಳ ಬಗ್ಗೆ ಆಸಕ್ತಿ ಹೊಂದಿರುವವರಾದರೆ ಈ ವಿಡಿಯೋ ನಿಮಗೆ ಸಾಕಷ್ಟು ಇಷ್ಟವಾಗಬಹುದು. ವಿಶ್ವ ವನ್ಯಜೀವಿ ದಿನದ ಅಂಗವಾಗಿ ನಾನು ಇದುವರೆಗೆ ಸೆರೆ ಹಿಡಿದ ಅತ್ಯಂತ ವೈವಿಧ್ಯಮಯವೆನಿಸಿದ ದೃಶ್ಯ ಇದಾಗಿದೆ. ಜೊತೆಯಾಗಿ ಹೆಜ್ಜೆ ಹಾಕುತ್ತಿರುವ ಇವುಗಳು ಒಮ್ಮೆಗೆ ಕ್ಯಾಮರಾದತ್ತ ಗಂಭೀರ ದೃಷ್ಟಿ ಹರಿಸುವುದನ್ನು ನೋಡಿದರೆ ಒಂದು ಕ್ಷಣ ಮೈ ರೋಮಗಳೆಲ್ಲಾ ನವಿರೇಳುತ್ತವೆ’ ಎಂದು ಬರೆದುಕೊಂಡಿದ್ದಾರೆ.

ಅಂದಹಾಗೆ ಮೃಗಾಲಯ, ರಾಷ್ಟ್ರೀಯ ಉದ್ಯಾನವನಗಳಲ್ಲಿ ಕಾಣಿಸಿಕೊಂಡ ಅಪರೂಪದ ಕಾಡು ಪ್ರಾಣಿಗಳ ಫೋಟೋ, ವಿಡಿಯೋಗಳನ್ನು ಜನರು ಸಫಾರಿಗೆ ಹೋದಾಗ ತೆಗೆಯುತ್ತಾರೆ. ಅಲ್ಲದೆ, ಅಪರೂಪಕ್ಕೆ ಕಾಣಸಿಗುವ ಪ್ರಾಣಿಗಳ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಶೇರ್‌ ಮಾಡಲಾಗುತ್ತದೆ.

ಇದೇ ರೀತಿ ಇತ್ತೀಚೆಗೆ ಮಧ್ಯಪ್ರದೇಶದ(Madhyapradesh) ಪೆಂಚ್‌ ಹುಲಿ(Pench National Park) ಸಂರಕ್ಷಿತ ಪ್ರದೇಶದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಪೆಂಚ್‌ ಹುಲಿ ಸಂರಕ್ಷಿತ ಪ್ರದೇಶದ ಟ್ವಿಟ್ಟರ್‌ ಅಧಿಕೃತ ಹ್ಯಾಂಡಲ್‌ನಲ್ಲಿ ಇತ್ತೀಚೆಗೆ ಈ ಪೊಸ್ಟ್‌ ಅನ್ನು ಶೇರ್‌ ಮಾಡಲಾಗಿತ್ತು. ಇದರಲ್ಲಿ ಸಫಾರಿಯಲ್ಲಿದ್ದ ಜನರು ದೂರದಲ್ಲೇ ತಮ್ಮ ವಾಹನಗಳನ್ನು ನಿಲ್ಲಿಸಿ ಸುತ್ತಲೂ ವೀಕ್ಷಿಸುತ್ತಿದ್ದಾಗ ಕಪ್ಪು ಪ್ಯಾಂಥರ್ ಒಂದು ರಸ್ತೆ ದಾಟುತ್ತಿರುವ ವಿಡಿಯೋವನ್ನು ಹಾಕಲಾಗಿತ್ತು. ಇದರೊಂದಿಗೆ ‘ವಿಶ್ವದೆಲ್ಲೆಡೆ ನೀವು ಇದನ್ನು ನೋಡಲು ತಿಂಗಳುಗಳ ಕಾಲ ಹಿಡಿಯುತ್ತದೆ, ಒಮ್ಮೊಮ್ಮೆ ಅಪರೂಪದ ಪ್ರಾಣಿಗಳನ್ನು ನೋಡಲು ಹಲವು ವರ್ಷಗಳ ಕಾಲ ಹಿಡಿಯುತ್ತದೆ, ಆದರೆ ಪೆಂಚ್‌ನಲ್ಲಿ ನೀವು ನೈಸರ್ಗಿಕ ಪ್ರಪಂಚದ ಅದ್ಭುತಗಳನ್ನು ಹೆಚ್ಚಾಗಿ ವೀಕ್ಷಿಸಬಹುದು’ ಎಂದು ಬರೆಯಲಾಗಿತ್ತು.

ಇದನ್ನೂ ಓದಿ :Komal New Movie – Yala Kunni: ವಜ್ರಮುನಿಯವರ ಫೇಮಸ್ ಬೈಗುಳ ‘ಯಲಾ ಕುನ್ನಿ’ ಯೇ ಈ ಚಿತ್ರದ ಟೈಟಲ್ ! ಹಾಸ್ಯ ಪಾತ್ರದಲ್ಲಿ ನಗಿಸಲು ಬರ್ತಿದ್ದಾರೆ ನಟ ಕೋಮಲ್ !

Leave A Reply

Your email address will not be published.