Electric Bike: ಕೇವಲ 7 ರೂಪಾಯಿಗೆ 100 ಕಿಮೀ ಓಡುವ ಬೈಕ್, ಜಸ್ಟ್ 999 ರೂಪಾಯಿ ಕೊಟ್ಟು E – Bike ಮನೆಗೆ ತನ್ನಿ!

Motovolto Urbn E-Bike : ನೀವು ಕಡಿಮೆ ಬೆಲೆಯ ಆದರೆ ಹೊಸ ಎಲೆಕ್ಟ್ರಿಕ್ ವಾಹನವನ್ನು ಖರೀದಿಸಲು ಪ್ಲ್ಯಾನ್​ ಮಾಡ್ತಿದ್ದೀರಾ? ಹಾಗಿದ್ದರೆ ಈಗ ನಿಮಗಿದೆ ಒಳ್ಳೆಯ ಒಳ್ಳೆಯ ಸುದ್ದಿ. ಅಗ್ಗದ ದರದ ದೀರ್ಘ ಶ್ರೇಣಿಯ ಇಬೈಕ್ ಲಭ್ಯವಿದೆ.

ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಗಳ (Electric Vehicle) ಎಲ್ಲಾ ರೀತಿಯ ವಾಹನಗಳಿಗೂ ಬೇಡಿಕೆ ಹೆಚ್ಚುತ್ತಿದೆ. ಆದರೆ ಕಾರಿನಂತಹ ಎಲೆಕ್ಟ್ರಿಕ್ ವಾಹನಗಳ ಬೆಲೆ ಹೆಚ್ಚು ಇರುವ ಕಾರಣದಿಂದ ಜನರು ಅಗ್ಗದ ಟೂ ವೀಲರ್ ನತ್ತ ಕಣ್ಣು ಹಾಕುತ್ತಿದ್ದಾರೆ. ಆಗ ನಮ್ಮ ಗಮನಕ್ಕೆ ಕಂಡು ಬಂದ ವಾಹನವೇ ಈ ಎಲೆಕ್ಟ್ರಿಕ್ ಸ್ಕೂಟರ್‌. ಅಥವಾ ಶಾರ್ಟ್ ಆಗಿ ಸ್ಟೈಲಿಶ್ ಆಗಿ ಹೇಳಬೇಕೆಂದರೆ E – ಬೈಕುಗಳು !

ಅಂತಹಾ ಈ – ಬೈಕ್ ತಯಾರಿಕಾ ಕಂಪನಿಯೇ ಈ Motovolt ಕಂಪನಿ. ಈ ಮೋಟೋವೋಲ್ಟ್ ಕಂಪನಿಯು Adire e Bike ಅನ್ನು ಮಾರುಕಟ್ಟೆಯಲ್ಲಿ ಲಭ್ಯವಾಗುವಂತೆ ಮಾಡಿದೆ. ಅದರ ಹೆಸರು ಅರ್ಬನ್. ನೀವು ಅದನ್ನು ತೀರಾ ಕಡಿಮೆ ವೆಚ್ಚದಲ್ಲಿ ಖರೀದಿಸಬಹುದು. ಇದರ ಮೂಲ ಬೆಲೆ ಕೇವಲ ರೂ. 49,999 ರಿಂದ ಪ್ರಾರಂಭವಾಗುತ್ತದೆ ಎಂದರೆ ನಿಮಗೆ ಆಶ್ಚರ್ಯ ಆಗಬಹುದು. ಬೆಲೆಯಲ್ಲಿ ಮಾತ್ರವಲ್ಲ ವಿಶಿಷ್ಟ ಫೀಚರ್ ಗಳಲ್ಲಿ ಕೂಡಾ ಈ ಬೈಕ್ ನಿಮ್ಮನ್ನು ಚಕಿತಗೊಳಿಸುತ್ತದೆ. ಈಗ ಈ e-bike ನ ವಿಶೇಷತೆಗಳ ಬಗ್ಗೆ ತಿಳಿಯೋಣ.

ಮೋಟೋವೋಲ್ಟ್ ಅರ್ಬನ್ (Motovolto Urbn E-Bike) ಅನ್ನು ನೀವು ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ ಅದು ಬರೋಬ್ಬರಿ 120 ಕಿಲೋಮೀಟರ್ ವರೆಗೆ ದಿಕ್ಕು ತಪ್ಪಿದ ಕುದುರೆಯಂತೆ ಓಡಬಲ್ಲುದು. ಈ ಬೈಕ್ ಎರಡು ವರ್ಷನ್ ಗಳನ್ನು ಹೊಂದಿದೆ. ಸಿಟಿ STD ಮತ್ತು ಅರ್ಬನ್ ಸ್ಮಾರ್ಟ್ ಪ್ಲಸ್ ಮತ್ತೊಂದು ವರ್ಷನ್. ರೂಪಾಯಿ 49,999 ರಿಂದ ಇದರ ಬೆಲೆ ಪ್ರಾರಂಭ ಆಗುತ್ತಿದ್ದು ಅರ್ಬನ್ ಸ್ಮಾರ್ಟ್ ಪ್ಲಸ್ ಬೆಲೆ ರೂ. 54,999 ನಿಂದ ಶುರುವಾಗುತ್ತದೆ.

ಈಗ ನೀವದನ್ನು ಕೇವಲ ರೂ. 999 ನೀವು ಅದನ್ನು ಬುಕ್ ಮಾಡಬಹುದು. ಉಳಿದ ಮೊತ್ತವನ್ನು ನಂತರ ಪಾವತಿಸಬಹುದು. ಇದಕ್ಕೆ EMI ಕೂಡಾ ಲಭ್ಯ ಆಗತ್ತೆ. ತಿಂಗಳಿಗೆ ಕೇವಲ 2,400 EMI ರೂ. ರಿಂದ ಶುರುವಾಗಲಿದೆ ಈ ಬೈಕ್ ನ ಓಡಾಟ. 40 ಕೆ.ಜಿ. ತೂಕ ಇರುವ ಈ ಇಬೈಕ್ ಗಂಟೆಗೆ 25 ಕಿ.ಮೀ ವೇಗದಲ್ಲಿ ಓಡುತ್ತದೆ. ಕೇವಲ 10 ಸೆಕೆಂಡುಗಳಲ್ಲಿ 0 ರಿಂದ 25 kmph ವೇಗವನ್ನು ಹೆಚ್ಚಿಸಿಕೊಳ್ಳುವ ಈ ಬೈಕ್ 20 Ah ನ ಲಿಥಿಯಂ ಐಯಾನ್ ಬ್ಯಾಟರಿ ಅನ್ನು ಹೊಂದಿದೆ. ಒಂದೂವರೆ ಲಕ್ಷ ಕಿಲೋಮೀಟರ್ ಓಡುವ ತನಕ ಇದರ ಬ್ಯಾಟರಿ ಬದುಕಬಲ್ಲುದು.

2 ರಿಂದ 3 ಗಂಟೆಯಲ್ಲಿ ಈ ಬೈಕ್ ಫುಲ್ ಚಾರ್ಜ್ ಆಗಿ ಬಿಡುತ್ತದೆ. ಈ ಬೈಕ್ ಗೆ BLDC ಮೋಟಾರ್ ಅಳವಡಿಸಲಾಗಿದೆ. ಮುಂಭಾಗ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್​ಗಳು ಸಹ ಇದೆ. ಇದು 120 ಕೆಜಿ ವರೆಗೆ ತೂಕವನ್ನು ಹೊತ್ತೊಯ್ಯಬಲ್ಲ ಕ್ಷಮತೆ ಇದರದು. ಈ ಬೈಕ್ ನಲ್ಲಿ ತ್ರಾಟಲ್ ಮೋಡ್ (Throttle Mode), ಕ್ರಯ್ಸ್ ಅಸಿಸ್ಟ್ (Cruise Mode), ಪೆಡಲ್ ಅಸ್ಸಿಸ್ (Pedal Assist), ಪೆಡಲ್ ಮೋಡ್ (Pedal Mode) ಮುಂತಾದ ನಾಲ್ಕು ಮೋಡ್ ಗಳಲ್ಲಿ ಲಭ್ಯ. ಅಂದರೆ, ಈ ವಾಹನವನ್ನು ನೀವು ಸ್ಕೂಟರ್ ಅಥವಾ ಬೈಕ್ ಥರ ಬೇಕಾದ್ರೆ ಬಳಸಿ, ಅಥವಾ ಒಂದಷ್ಟು ವ್ಯಾಯಾಮ ಸಿಗಲಿ ಎಂದು ಪೆಡಲ್ ತುಳಿದು ಸೈಕಲ್ ಥರ ಬೇಕಾದ್ರೂ ಉಪಯೋಗಿಸಬಹುದು. ಅದೂ ಬೇಡ ಅಂದ್ರೆ, ಬೈಕ್ ಮತ್ತು ಸೈಕಲ್ ನ ಕಾಂಬಿನೇಷನ್ ನಲ್ಲಿ ಗಾಡಿ ಓಡಿಸುತ್ತಾ, ಪೆಡಲ್ ಹೊಡೆದು ಒಂದಷ್ಟು ವೇಗವನ್ನು ಹೆಚ್ಚಿಸಿಕೊಳ್ಳುತ್ತಾ ಕೂಡಾ ಸಾಗಬಹುದು.

ಬಣ್ಣಗಳ ವಾಹನ ಬಯಸುವವರಿಗೆ ಇದೆ ಕೆಂಪು, ನೀಲಿ, ಬಿಳಿ ಮತ್ತು ಹಳದಿ ಬಣ್ಣಗಳ ವಿವಿಧ ಆಯ್ಕೆ. ಇವು ಗ್ರಾಹಕರಿಗೆ ಲಭ್ಯವಿವೆ. ನೀವು ಈ ಬೈಕ್ ಕಂಪನಿಯ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ನಿಮ್ಮ ಆಯ್ಕೆಯ ಅರ್ಬನ್ ರೂಪಾಂತರವನ್ನು ಖರೀದಿಸಬಹುದು. https://www.motovolt.co ವೆಬ್ಸೈಟ್ ಗೆ ನೀವು ಹೋಗಿ ನಿಮ್ಮ ಇಷ್ಟದ ವಾಹನದ ಬಗ್ಗೆ ತಿಳಿದುಕೊಳ್ಳಬಹುದು.

Leave A Reply

Your email address will not be published.