Hasin Jahan: ಭಾರತವನ್ನು ‘ಇಂಡಿಯಾ’ ಅನ್ನೋದು ಬೇಡ! ಖ್ಯಾತ ಕ್ರಿಕೆಟಿಗನ ಪತ್ನಿಯಿಂದ ಮೋದಿಗೆ ಹೀಗೊಂದು ಮನವಿ
Hasin jahan :ಪ್ರಪಂಚದಲ್ಲಿರೋ ಎಲ್ಲಾ ರಾಷ್ಟ್ರಗಳಿಗೆ ಒಂದೊಂದೇ ಹೆಸರಿ(Name)ರೋದನ್ನು ನಾವು ನೋಡಿದ್ದೇವೆ. ಆದರೆ ನಮ್ಮ ದೇಶಕ್ಕೆ ಮಾತ್ರ ವಿಶ್ವಾದ್ಯಂತ ಹಲವು ಹೆಸರುಗಳು ಪ್ರಚಲಿತದಲ್ಲಿವೆ. ಭಾರತ(Bharata), ಹಿಂದೂಸ್ತಾನ(Hindusthana), ಇಂಡಿಯಾ(India) ಹೀಗೆ ಬೇರೆ ಬೇರೆ ನಾಮದೇಯಗಳಿರುವುದು ಕಾಣಬಹುದು. ಇದರಲ್ಲೂ ನಮ್ಮಲ್ಲಿ ಭಾರತ ಅನ್ನೋ ಹೆಸರಿದ್ದರೆ, ಹೊರಗಡೆ ಇಂಡಿಯಾ ಅನ್ನೋ ಹೆಸರಿಂದಲೇ ಭಾರತವನ್ನು ಗುರುತಿಸುತ್ತಾರೆ. ಆದರೀಗ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗನ ಪತ್ನಿಯೊಬ್ಬರು ಭಾರತವನ್ನು ಇಂಡಿಯಾ ಅಂತ ಕರೆಯೋದು ಬೇಡವೆಂದು ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ.
ಹೌದು, ಟೀಂ ಇಂಡಿಯಾ(Team India) ಬೌಲರ್ ಮೊಹಮ್ಮದ್ ಶಮಿ(Mohammed Shami) ಅವರ ಪತ್ನಿ ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ತುಂಬಾ ಸಕ್ರಿಯರಾಗಿರುವ ಹಸೀನ್ ಜಹಾನ್(Hasin Jahan) ಇನ್‌ಸ್ಟಾಗ್ರಾಮ್(Instagram) ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi)ಮತ್ತು ಗೃಹ ಸಚಿವ ಅಮಿತ್ ಶಾ(Amith Sha) ಅವರಿಗೆ ವಿಶೇಷ ಮನವಿ ಮಾಡಿದ್ದು, ಭಾರತವನ್ನು ಭಾರತವೆಂದೇ ಕರೆಯೋಣ. ದಯವಿಟ್ಟು ಇದರ ಕುರಿತು ಪರಿಶೀಲನೆ ನಡೆಸಿ ಎಂದು ಹೇಳಿದ್ದಾರೆ.
ಅಲ್ಲದೆ ಅವರು ತಮ್ಮ ಪೋಸ್ಟ್ ನಲ್ಲಿ ‘ಗೌರವಾನ್ವಿತ ಪ್ರಧಾನ ಮಂತ್ರಿಯವರಿ(Prime Minister) ಗೆ ಹಾಗೂ ಗೌರವಾನ್ವಿತ ಗೃಹ ಸಚಿವರಿ(Home Minister) ಗೆ ನನ್ನದೊಂದು ಮನವಿ. ನಿಮ್ಮಲ್ಲಿ ಭಾರತದ ಹೆಸರನ್ನು ಬದಲಾಯಿಸಲು ನಾನು ವಿನಂತಿಸುತ್ತಿರುವೆ. ನಮ್ಮ ದೇಶದ ಹೆಸರನ್ನು ಇಂಡಿಯಾ ಎಂದು ಕರೆಯುವ ಬದಲು ಭಾರತ ಅಥವಾ ಹಿಂದುಸ್ತಾನ್ ಎಂದು ಕರೆಯುವಂತೆ ಮಾಡಿ. ಇಡೀ ಪ್ರಪಂಚವೇ ನಮ್ಮ ದೇಶವನ್ನು ಭಾರತ ಅಥವಾ ಹಿಂದೂಸ್ತಾನ್ ಎಂಬ ಹೆಸರಿನಿಂದ ಮಾತ್ರ ಗುರುತಿಸಬೇಕು. ‘ಇಂಡಿಯಾ'(India) ಎಂಬ ಹೆಸರಿನಿಂದ ಕರೆಯುವುದು ಬೇಡ ಎಂದು’ ಬರೆದುಕೊಂಡಿದ್ದಾರೆ.
ಹಸೀನ್ ಜಹಾನ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ದೇಶಭಕ್ತಿ ಗೀತೆ ದೇಶ್ ರಂಗೀಲಾದಲ್ಲಿ ನೃತ್ಯ ಮಾಡುತ್ತಿರುವ ವೀಡಿಯೊವನ್ನು ಹಂಚಿಕೊಂಡು ಈ ರೀತಿಯಾಗಿ ತಮ್ಮ ಮನದ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ನಮ್ಮ ದೇಶ, ನಮ್ಮ ಗೌರವ. ನಾನು ಭಾರತವನ್ನು ಪ್ರೀತಿಸುತ್ತೇನೆ ನಮ್ಮ ದೇಶದ ಹೆಸರು ಹಿಂದೂಸ್ತಾನ್ ಅಥವಾ ಭಾರತ ಎಂದು ಮಾತ್ರ ಇರಬೇಕು. ಇದನ್ನು ಪ್ರಪಂಚವೂ ಹೇಳಬೇಕು, ಹಾಗೆಯೇ ಕರೆಯಬೇಕು ಎಂದಿದ್ದಾರೆ.
ಇನ್ನು ಹಸೀನ್ ಜಹಾನ್ ಇನ್‌ಸ್ಟಾಗ್ರಾಮ್‌ನಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದಾರೆ. ಪ್ರಧಾನಿಗೆ ವಿಶೇಷ ಮನವಿ ಮಾಡಿದ ನಂತರ, ಜನರು ಕೂಡ ಹಸೀನ್ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಜೊತೆಗೆ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಸದ್ಯ ಈ ಈ ಫೋಸ್ಟ್ ಸಖತ್ ವೈರಲ್ ಆಗುತ್ತಿದೆ.