ಎಳ್ಳಿನ ಎಣ್ಣೆಯಲ್ಲೂ ಇದೆ ಕೂದಲನ್ನು ಅಂದಕಾಣಿಸೋ ಮ್ಯಾಜಿಕ್ : ಇದನ್ನು ಬಳಸುವ ವಿಧಾನ ಮತ್ತು ಪ್ರಯೋಜನಗಳು ಇಲ್ಲಿದೆ ನೋಡಿ

Sesame oil : ‘ಅಂದ’ ಎನ್ನುವಂತದ್ದು ಪ್ರತಿಯೊಬ್ಬ ಮನುಷ್ಯನ ಆಕರ್ಷನೀಯ ಭಾಗವಾಗಿರುತ್ತದೆ. ಹೀಗಾಗಿ, ಪ್ರತಿಯೊಬ್ಬರು ಕೂಡ ಸೌಂದರ್ಯಕ್ಕೆ ಹೆಚ್ಚು ಒತ್ತು ಕೊಡುತ್ತಾರೆ. ಮುಖದಲ್ಲಿ ಒಂದು ಕಲೆಯೂ ಆಗದಂತೆ ಆರೈಕೆ ಮಾಡುತ್ತಾರೆ. ಇಂದಿನ ಫ್ಯಾಷನ್ ಯುಗದಲ್ಲಿ ಪ್ರತಿಯೊಬ್ಬರು ಕೂಡ ತಮ್ಮನ್ನು ತಾವು ಚಂದ ಕಾಣಿಸಿಕೊಳ್ಳಲು ಹಲವು ಬ್ಯೂಟಿ ಟಿಪ್ಸ್ ಗಳನ್ನು ಪಾಲಿಸಿಯೇ ಪಾಲಿಸುತ್ತಾರೆ.

ಅದರಲ್ಲೂ ಹುಡುಗಿಯರು ಅಂದ್ರೆ ಒಂದು ಕೈ ಮೇಲೆಯೇ ಎಂಬುದು ಎಲ್ಲರಿಗೂ ತಿಳಿದಿರೋ ವಿಷಯ. ಕೇವಲ ಮುಖದ ಸೌಂದರ್ಯ ಕಾಪಾಡಿ ಕೊಳ್ಳದೆ ಉಗುರು, ತಲೆ ಕೂದಲು ಹೀಗೆ ಆರೈಕೆ ಮಾಡುವುದರ ಮೂಲಕ ತಮ್ಮನ್ನು ತಾವು ಸುಂದರವಾಗಿಸುತ್ತಾರೆ. ಕೇಶರಾಶಿಯನ್ನು ಸುಂದರವಾಗಿ ಇರಿಸಿಕೊಳ್ಳಲು ಯಾರು ತಾನೇ ಇಷ್ಟ ಪಡೋದಿಲ್ಲ ಹೇಳಿ. ಹೀಗಾಗಿ, ಅದರ ಹೊಳಪು ಕಾಪಾಡಿಕೊಳ್ಳಲು ಪ್ರತಿಯೊಬ್ಬರು ಕೂಡ ಪ್ರಯತ್ನಿಸೋದು ಕಾಮನ್. ಆದ್ರೆ, ಅದೆಷ್ಟೇ ಆರೈಕೆ ಮಾಡಿದರು ಕೂದಲು ಉದುರುವ ಸಮಸ್ಯೆ ಮಾತ್ರ ನಿವಾರಣೆ ಆಗೋದೇ ಇಲ್ಲ.

ವಿಷ್ಯ ಏನಪ್ಪಾ ಅಂದ್ರೆ, ನಾವು ಯಾವ ರೀತಿಯ ಔಷಧಿ ಬಳಸುತ್ತೇವೆ ಅದರ ಮೇಲೆ ನಿಂತಿರುತ್ತದೆ. ಹೌದು. ಕೂದಲ ಆರೈಕೆಗೆ ಉತ್ತಮ ಹೇರ್ ಟಾನಿಕ್ ಬಳಸಿದರೆ ಸಮಸ್ಯೆ ನಿಲ್ಲುತ್ತದೆ. ದಪ್ಪ ಮತ್ತು ಹೊಳೆಯುವ ಕೂದಲು ಹೊಂದಲು ನೀವು ಸಹ ಮನೆಯಲ್ಲೇ ಹೇರ್ ಟಾನಿಕ್ ತಯಾರಿಸಿ ಬಳಕೆ ಮಾಡಬಹುದು.

ಹೌದು. ಈವೊಂದು ಎಣ್ಣೆಯನ್ನು ಬಳಸುವುದರಿಂದ ಕೂದಲು ಉದುರುವ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ಅದುವೇ ಎಳ್ಳಿನ ಎಣ್ಣೆ (sesame oil). ಇದರಲ್ಲಿ ಅನೇಕ ವಿಧದ ಪಾಲಿಫಿನಾಲ್‌ಗಳು, ಆಂಟಿಆಕ್ಸಿಡೆಂಟ್‌ಗಳು ಮತ್ತು ವಿಟಮಿನ್ ಇ ಇದೆ. ಇವು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಮತ್ತು ಒಳಗಿನಿಂದ ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ. ಹಾಗಿದ್ರೆ ಬನ್ನಿ ಕೂದಲಿಗೆ ಎಳ್ಳೆಣ್ಣೆ ಬಳಸುವ ವಿಧಾನ ಮತ್ತು ಪ್ರಯೋಜನಗಳನ್ನು ತಿಳಿಯೋಣ.

ರಕ್ತ ಪರಿಚಲನೆ ಸುಧಾರಣೆ:
ಎಳ್ಳಿನ ಎಣ್ಣೆಯು ಕೂದಲಿಗೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಇದು ರಕ್ತ ಪರಿಚಲನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ನೆತ್ತಿಯ ಸೋಂಕು ಮತ್ತು ಕೂದಲಿನ ಅನೇಕ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಈ ಎಣ್ಣೆಯನ್ನು ಹಚ್ಚುವುದರಿಂದ ಕೂದಲಿಗೆ ತಲೆಹೊಟ್ಟು ಸಮಸ್ಯೆ ಇರುವುದಿಲ್ಲ.

ಹಾನಿಗೊಳಗಾದ ಕೂದಲಿಗೆ ಪ್ರಯೋಜನಕಾರಿ:
ಹಾನಿಗೊಳಗಾದ ಕೂದಲಿಗೆ ಎಳ್ಳು ಎಣ್ಣೆಯನ್ನು ಹಲವು ವಿಧಗಳಲ್ಲಿ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಇದು ಕೂದಲಿನ ರಚನೆಯನ್ನು ಸುಧಾರಿಸುತ್ತದೆ ಮತ್ತು ವಿಭಜಿತ ತುದಿಗಳನ್ನು ಕಡಿಮೆ ಮಾಡುತ್ತದೆ. ಇದಲ್ಲದೆ, ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುವುದರೊಂದಿಗೆ, ಅದರ ವಿನ್ಯಾಸವನ್ನು ಸರಿಪಡಿಸುತ್ತದೆ.

ಕಪ್ಪು ಕೂದಲಿಗೆ:
ಎಳ್ಳಿನ ಎಣ್ಣೆಯು ಕಪ್ಪು ಕೂದಲಿಗೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಇದು ಕೂದಲಿನ ಬೇರುಗಳನ್ನು ಸಕ್ರಿಯಗೊಳಿಸುತ್ತದೆ. ಒಳಗಿನಿಂದ ಪೋಷಿಸುತ್ತದೆ. ಇದಲ್ಲದೆ, ಇದು ಬಿಳಿ ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತದೆ. ಇದನ್ನು ಕೂದಲಿಗೆ ನಿಯಮಿತವಾಗಿ ಬಳಸಬಹುದು.

ಕೂದಲಿಗೆ ಎಳ್ಳಿನ ಎಣ್ಣೆಯನ್ನು ಹಲವು ವಿಧಗಳಲ್ಲಿ ಬಳಸಬಹುದು. ಆದರೆ ಇದನ್ನು ಮನೆಯಲ್ಲಿಯೇ ಮಾಡಿ ಉಪಯೋಗಿಸಿದರೆ ಹೆಚ್ಚು ಲಾಭವಾಗುತ್ತದೆ. ಇದಕ್ಕಾಗಿ ಮೊದಲು ಎಳ್ಳನ್ನು ತೆಗೆದುಕೊಂಡು ಸಾಸಿವೆ ಎಣ್ಣೆಯಲ್ಲಿ ಬೇಯಿಸಿಕೊಳ್ಳಬೇಕು. ಬಳಿಕ ಈ ಎಣ್ಣೆಯನ್ನು ಫಿಲ್ಟರ್ ಮಾಡಿ ಕೂದಲಿಗೆ ಹಚ್ಚಿ ಮತ್ತು ಮಸಾಜ್ ಮಾಡಬೇಕು. ಬಳಿಕ ಕೂದಲಲ್ಲಿ ಆಗುವ ಬದಲಾವಣೆಗಳನ್ನು ನೀವೇ ಗಮನಿಸಿಕೊಳ್ಳಿ.

Leave A Reply

Your email address will not be published.