Home Interesting Odisha: ಇಲ್ಲಿದ್ದಾರೆ ನೋಡಿ ಆಧುನಿಕ ಶಹಜಹಾನ್! ತನ್ನ ಪತ್ನಿಗಾಗಿ 7 ಕೋಟಿ ವೆಚ್ಚದಲ್ಲಿ ಭವ್ಯ ದೇವಾಲಯ...

Odisha: ಇಲ್ಲಿದ್ದಾರೆ ನೋಡಿ ಆಧುನಿಕ ಶಹಜಹಾನ್! ತನ್ನ ಪತ್ನಿಗಾಗಿ 7 ಕೋಟಿ ವೆಚ್ಚದಲ್ಲಿ ಭವ್ಯ ದೇವಾಲಯ ನಿರ್ಮಿಸಿದ ಪತಿ!

Hindu neighbor gifts plot of land

Hindu neighbour gifts land to Muslim journalist

Modern Shahajan :ಶಹಜಹಾನ್(Shahajan) ತನ್ನ ಪತ್ನಿ ಮುಮ್ತಾಜ್​( Mumthaj)ಗಾಗಿ ತಾಜ್​ ಮಹಲ್(Thajmahal) ಕಟ್ಟಿಸಿದ ಪ್ರೇಮ ಕಥೆಯನ್ನು ಎಲ್ಲರೂ ಕೇಳಿದವರೇ ಅಲ್ವಾ? ಇಂದಿಗೂ ಕೂಡ ಪ್ರೀತಿಯ ವಿಷಯ ಬಂದಾಗ ಪ್ರಿಯತಮೆಯಾಗಲಿ ಅಥವಾ ಸ್ನೇಹಿತರಾಗಲಿ ಈ ವಿಚಾರವನ್ನೇ ಹಿಡಿದು ‘ನೀನೇನು ಶಹಜಹಾನ್ ನೋಡು, ಪ್ರೀತಿಗಾಗಿ ತಾಜ್ ಮಹಲ್ ಕಟ್ಟೇ ಬಿಡ್ತೀಯಾ’ ಅಂತ ಕಾಲೆಳೆಯುತ್ತಿರುತ್ತಾರೆ. ಯಾರಾದ್ರೂ ಇಂತ ಸಾಹಸಕ್ಕೆ ಕೈ ಹಾಕಲು ಸಾಧವೇ ಹೇಳಿ? ಆದ್ರೆ ಇಲ್ಲೊಬ್ಬರು ಉದ್ಯಮಿ ಇದನ್ನು ಸಾಧ್ಯವಾಗಿಸಿದ್ದಾರೆ. ತನ್ನ ಪತ್ನಿಯ ಆಸೆ ಈಡೇರಿಸುವ ಸಲುವಾಗಿ ಬರೋಬ್ಬರಿ 7 ಕೋಟಿ ರೂ. ವೆಚ್ಚದಲ್ಲಿ ದೇಗುಲವೊಂದನ್ನು (Temple) ನಿರ್ಮಿಸಿ ಗಮನ ಸೆಳೆದಿದ್ದಾರೆ. ಅರೆ! ಯಾರೀತ ಆಧುನಿಕ ಶಹಜಹಾನ್ ಅಂತ ಯೋಚಿಸ್ತಿದೀರಾ? ಹಾಗಿದ್ರೆ ಈ ಸ್ಟೋರಿ ನೋಡಿ

ಹೌದು, ಒಡಿಶಾದ(Odisha) ಜೈಪುರ (Jajpur) ಜಿಲ್ಲೆಯ ಬಿಂಝಾರ್​ಪುರದ (Binjharpur) ಚಿಕಾನ ಗ್ರಾಮದಲ್ಲಿ ದೇವಿ ‘ಮಾ ಸಂತೋಶಿ’ (Goddess Maa Santoshi) ಎಂಬ ಭವ್ಯ ದೇಗುಲ ನಿರ್ಮಾಣವಾಗಿದ್ದು, ಸದ್ಯ ಇದು ಎಲ್ಲರ ಗಮನ ಬೆಳೆಯುತ್ತಿದೆ. ಈ ದೇಗುಲವನ್ನು ದಕ್ಷಿಣ ಭಾರತದ ವಾಸ್ತುಶಿಲ್ಪದ ಪ್ರಕಾರ ನಿರ್ಮಾಣ ಮಾಡಲಾಗಿದೆ. ಪ್ರಸ್ತುತ ಹೈದರಾಬಾದ್​(Hydrabad) ನಲ್ಲಿ ನೆಲೆಸಿರುವ ಖೇತ್ರಬಾಸಿ ಲೆಂಕಾ(Khetrabasi) ಎಂಬ ಉದ್ಯಮಿಯೇ ತನ್ನ ಪತ್ನಿ ಬೈಜಂತಿ(Bijanti) ಅವರಿಗಾಗಿ ಈ ದೇಗುಲ ಕಟ್ಟಿಸಿ ಆಕೆಯ ಪಾಲಿಗೆ ನಿಜವಾಗಿಯೂ ಶಹಜಹಾನ್ (Modern Shahajan) ಆಗಿದ್ದಾರೆ.

ಪತ್ನಿ ಬೈಜಂತಿ ತನ್ನ ತವರು ಗ್ರಾಮದಲ್ಲಿ, ಗ್ರಾಮದೇವತೆ ಸಂತೋಷಿ ಮಾತೆಯ ಮಂದಿರ ನಿರ್ಮಾಣವಾಗಬೇಕು ಎಂದು ಆಸೆ ವ್ಯಕ್ತಪಡಿಸಿದ್ದರು. ಇದು ಆಕೆಯ ಬಹಳ ದಿನಗಳ ಕನಸಂತೆ. ನಂತರ ಆಕೆಯ ಆಸೆಯನ್ನು ಈಡೇರಿಸಲು ಪತಿ ನಿರ್ಧರಿಸಿ, 2008ರಲ್ಲಿ ದೇವಾಲಯದ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದರು. ಈಗ ಸುಮಾರು 7ಕೋಟಿ ವೆಚ್ಚದಲ್ಲಿ, ಚೆನ್ನೈ ಯಿಂದ ಕರೆಸಲಾದ ಕುಶಲಕರ್ಮಿಗಳಿಂದ ಈ ಭವ್ಯ ದೇವಾಲಯವು ನಿರ್ಮಾಣವಾಗಿದೆ.

ಉದ್ಯಮಿ ಖೇತ್ರವಾಸಿ ಲೆಂಕ ಅವರು ದೇವಾಲಯದ ನಿರ್ಮಾಣದ ವಿವರಗಳನ್ನು ಮತ್ತು ಅದರ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅವರು 1992ರಲ್ಲಿ ವಿವಾಹವಾದರು. ಅವರ ಪತ್ನಿ ವೈಜಯಂತಿ ಸಂತೋಷಿ ಮಾ ಭಕ್ತರಾಗಿದ್ದರು. ಮದುವೆಯಾದ ಬಳಿಕ ತಮ್ಮ ಗ್ರಾಮದಲ್ಲಿ ಸಂತೋಷಿ ಮಾತೆಯ ಚಿಕ್ಕ ದೇವಸ್ಥಾನವನ್ನು ನಿರ್ಮಿಸೋಣ ಎಂದು ಅವರು ಅಂದುಕೊಂಡಿದ್ದರಂತೆ. ಈ ಸಣ್ಣ ದೇವಾಲಯವು ತುಂಬಾ ದೊಡ್ಡದಾಗುತ್ತದೆ ಎಂದು ಯಾರೂ ಯೋಚಿಸಿರಲಿಲ್ಲ. ಆದರೀಗ ಎಂತವರೂ ಆಶ್ಚರ್ಯ ಪಡುವಂತೆ ದೇವಾಲಯ ನಿರ್ಮಾಣವಾಗಿದ್ದು, ಇದರಿಂದ ಉದ್ಯಮಿ ದಂಪತಿಗಳಿಬ್ಬರೂ ಹಾಗೂ ಗ್ರಾಮಸ್ಥರೆಲ್ಲರೂ ಅತೀವ ಸಂತೋಷವಾಗಿದ್ದಾರಂತೆ.

ಅಲ್ಲದೆ ಪತ್ನಿ ಬೈಜಂತಿ ಸಂತೋಷ ವ್ಯಕ್ತಪಡಿಸಿ, ತನ್ನ ಪತಿ ತನಗಾಗಿ ದೇವಾಲಯವನ್ನು ನಿರ್ಮಿಸಿದ್ದಾನೆ ಎಂದು ಬಹಿರಂಗಪಡಿಸಿದ್ದಾರೆ. ‘ಈ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿರುವ ದೇವಿಯ ಮೂರ್ತಿಯನ್ನು ಗ್ರಾಮ ಮಾತ್ರವಲ್ಲದೆ ದೇಶದಾದ್ಯಂತ ಜನರು ಪೂಜಿಸಿ ಸಂತೋಷಿ ಮಾತೆಯ ಆಶೀರ್ವಾದವನ್ನು ಪಡೆಯಬೇಕೆಂದು ನಾನು ಪ್ರಾಮಾಣಿಕವಾಗಿ ಬಯಸುತ್ತೇನೆ’ ಎಂದು ಅವರು ಹೇಳುತ್ತಾರೆ.