Koila Farm : ಕೊಯಿಲ ಫಾರ್ಮ್‌ನಲ್ಲಿ ಹಬ್ಬಿದ ಬೆಂಕಿ, ಫಾರ್ಮ್ ಸುತ್ತ ಆವರಿಸಿದ ಬೆಂಕಿ

Share the Article

Koila Farm : ಕಡಬ: ತಾಲೂಕಿನ ರಾಮಕುಂಜ ಸಮೀಪದ ಕೊಯಿಲ(Koila Farm) ಪಶು ಸಂಗೋಪನ ಕೇಂದ್ರದಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದೆ. ಸುತ್ತಲೂ ಹಸಿರಿನಿಂದಲೇ ತುಂಬಿದ್ದ, ಪ್ರಕೃತಿ ಮನಸೂರೆಗೊಳ್ಳುವಂತೆ ಇದ್ದ ಈ ಹಸಿರು ಹುಲ್ಲುಗಾವಲಿಗೆ ಬೇಸಿಗೆ ಕಾಲವಾದುದರಿಂದ ಒಣ ಹುಲ್ಲು ಹೆಚ್ಚಿಗೆ ಇತ್ತು.

ಇಂದು ಮಧ್ಯಾಹ್ನ ಸುಮಾರು ಒಂದು ಗಂಟೆಗೆ ಈ ಘಟನೆ ನಡೆದಿದ್ದು, ಬೆಂಕಿ ತಗುಲಿದ ಕೆಲವೇ ಕೆಲವು ನಿಮಿಷದಲ್ಲಿ ಸುಮಾರು 3 ಎಕರೆಗೆ ಬೆಂಕಿಯ ಕೆನ್ನಾಲಿಗೆ ಹಬ್ಬಲು ತೊಡಗಿತ್ತು. ಬೆಂಕಿಯ ಕೆನ್ನಾಲಿಗೆಯ ಜೊತೆಗೆ ದಟ್ಟ ಹೊಗೆ ನೋಡಲು ನಿಜಕ್ಕೂ ಭಯ ಬೀಳಿಸುವಂತೆ ಆಗುತ್ತಿತ್ತು.

ವಿಷಯ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಫಾರ್ಮ್‌ ಸಿಬ್ಬಂದಿ ಮತ್ತು ಮೆಸ್ಕಾಂ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.

ಇತ್ತೀಚೆಗೆ ಬಿಸಿಲಿನ ತಾಪಕ್ಕೆ ಕಾಡುಗಳು ಕೂಡಾ ಬೆಂಕಿಯ ಕೆನ್ನಾಲಿಗೆಗೆ ಸಿಲುಕುತ್ತಿರುವ ಘಟನೆ ನಡೆದಿದೆ.

Leave A Reply