ಜಿಮ್‌ಗೆ ಹೋಗಿ ನಾಪತ್ತೆಯಾದ ವ್ಯಕ್ತಿ : ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆ

Share the Article

Murder :ಬೆಂಗಳೂರು : ಜಿಮ್‌ಗೆ ಹೋಗಿ ನಾಪತ್ತೆಯಾಗಿದ್ದ ಯುವಕ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ (Murder)ಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಲಿಯಾಕತ್ ಅಲೀ ಖಾನ್ ಎಂಬವರೇ ದುಷ್ಕರ್ಮಿಗಳಿಂದ ಹತ್ಯೆಗೀಡಾದ ವ್ಯಕ್ತಿ.

ಬೆಂಗಳೂರಿನ ನಾಯೆಂಡಹಳ್ಳಿ ಚೆಟೀಸ್ ಪೆಟ್ರೋಲ್ ಬಂಕ್ ಬಳಿಯ ಮನೆಯೊಂದರಲ್ಲಿ ಲಿಯಾಕತ್ ಅಲೀ ಖಾನ್ ಅವರನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೆಯ್ಯಲಾಗಿದೆ. ಸೋಮವಾರ ರಾತ್ರಿ ಜಿಮ್ ಗೆ ಹೋಗಿದ್ದ ಲಿಯಾಕತ್ ಬಳಿಕ ನಾಪತ್ತೆಯಾಗಿದ್ದ.

ಆ ಬಳಿಕ ಮನೆಯವರು ಹುಡುಕಾಟ ನಡೆಸಿದಾಗ ಮಂಗಳವಾರ ಬೆಳಗಿನ ಜಾವ ಬೇರೊಂದು ಮನೆಯಲ್ಲಿ ಮೃತ ದೇಹ ಪತ್ತೆಯಾಗಿದೆ.

ಈ ಕುರಿತು ಚಂದ್ರ ಲೇ ಔಟ್ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Leave A Reply