Bumrah Injury : ಐಪಿಎಲ್‌, ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಬುಮ್ರಾ ಅಲಭ್ಯ?!

Share the Article

Bumrah Injury: ಈಗಾಗಲೇ ಬೆನ್ನುನೋವಿನಿಂದ ಚೇತರಿಕೆಯಾಗಿ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ (Indian Premier League) ಮರಳುತ್ತಾರೆ, ಎನ್ನಲಾಗಿದ್ದ ಟೀಮ್​ ಇಂಡಿಯಾ ಸ್ಟಾರ್​ ಬೌಲರ್​​ ಜಸ್​ಪ್ರಿತ್​ ಬೂಮ್ರಾ (Jasprit Bumrah ) ಅವರು, ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಜೊತೆಗೆ ಸಂಭವನೀಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡುವುದು ಅನುಮಾನವೆನಿಸಿದೆ.

ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​​​​​ ಅಕಾಡೆಮಿಯಲ್ಲಿ ಪುನಃಶ್ಚೇತನ ತರಬೇತಿಗೆ ಒಳಗಾಗಿದ್ದ ಬೂಮ್ರಾ(Bumrah Injury) ಬಹುತೇಕ ಫಿಟ್​ ಆಗಿದ್ದರು. IPL​​ಗೆ ಕಂಬ್ಯಾಕ್​ ಮಾಡುತ್ತಾರೆ ಎಂದು ಬಿಸಿಸಿಐ ಅಧಿಕಾರಿಗಳು ಖಚಿತಪಡಿಸಿದ್ದರು. ಆದರೆ ಗಾಯ ಮತ್ತಷ್ಟು ಉಲ್ಭಣಗೊಂಡಿದೆ. ಹಾಗಾಗಿ ಮತ್ತೆ ಎನ್​ಸಿಎ ವೈದ್ಯರ ಬಳಿ ಚಿಕಿತ್ಸೆಗೆ ಒಳಗಾಗಿದ್ದು, ಕೆಲವು ತಿಂಗಳ ಕಾಲ ಕ್ರಿಕೆಟ್​​ ಸೇವೆಗೆ ದೂರವಾಗುವಂತೆ ವೈದ್ಯರು ಸೂಚಿಸಿದ್ದಾರೆ.

ಹೌದು ಗಾಯದ ಸಮಸ್ಯೆ ಎದುರಿಸುತ್ತಿರುವ ಟೀಮ್ ಇಂಡಿಯಾ ಬಲಗೈ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ, ಪೂರ್ಣ ಫಿಟ್‌ನೆಸ್ ಮರಳಿ ಪಡೆಯದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಇದೆ.

ಬೂಮ್ರಾ, ಕಳೆದ ವರ್ಷ ಸೆಪ್ಟೆಂಬರ್‌ 25ರಂದು ಆಸ್ಟ್ರೇಲಿಯಾ ವಿರುದ್ಧ ಕೊನೆಯದಾಗಿ ಟಿ20 ಪಂದ್ಯ ಆಡಿದ್ದರು. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ಫಿಟ್‌ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕವಷ್ಟೇ ಅವರಿಗೆ ತಂಡವನ್ನು ಸೇರುವ ಅವಕಾಶ ಸಿಗಲಿದೆ.

ಅದಲ್ಲದೆ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಿಂದಲೂ ಬೂಮ್ರಾ ಹೊರಗುಳಿಯಲಿದ್ದಾರೆ. ಸದ್ಯ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ಇನ್ನೊಂದು ಜಯ ಗಳಿಸಿದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ಪ್ರವೇಶಿಸುವುದು ಖಚಿತವೆನಿಸಲಿದೆ.

Leave A Reply