Pakistan: ವಿಲಕ್ಷಣ ಆಡಿಷನ್ ಗೆ ಸಾಕ್ಷಿಯಾಯ್ತು ಪಾಕಿಸ್ತಾನಿಯ ಅಡುಗೆ ಶೋ! ವೈರಲ್ ಆದ ಕ್ಲಿಪ್ ನೋಡಿ ನೆಟ್ಟಿಗರು ಗರಂ!

Pakistan: ಇಂದಿನ ದಿನಗಳಲ್ಲಂತೂ ಅಡುಗೆ ಪ್ರದರ್ಶನ ಸ್ಪರ್ಧೆಗಳು ಭಾರತ ಮತ್ತು ಪಾಕಿಸ್ತಾನದಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿವೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸೋ ಬಾಣಸಿಗರಿಗೆ ಮೊದಲು ಆಡಿಷನ್‌ಗಳನ್ನು ಏರ್ಪಡಿಸಲಾಗುತ್ತದೆ. ಕೆಲವೊಮ್ಮೆ ಇಂತಹ ಆಡಿಷನ್‌ಗಳು ಅತ್ಯಂತ ಮನರಂಜನೆಯ ಘಟನೆಗಳಾಗಿ ಹೊರಹೊಮ್ಮುತ್ತವೆ. ಇದೀಗ ಇಂತದೇ ಒಂದು ಅಡುಗೆ ಕಾರ್ಯಕ್ರಮದ ಆಡಿಷನಲ್ಲಿ ವಿಲಕ್ಷಣವೆನಿಸಿದರೂ, ನಗುತರಿಸುವಂತಹ ಪ್ರಸಂಗವೊಂದು ನಡೆದಿದೆ.

ಹೌದು, ಪಾಕಿಸ್ತಾನ(Pakistan) ಮೂಲದ ಎಕ್ಸ್‌ಪ್ರೆಸ್ ಎಂಟರ್‌ಟೈನ್‌ಮೆಂಟ್‌ನಲ್ಲಿ ನಡೆಯುವ ದಿ ಕಿಚನ್ ಮಾಸ್ಟರ್‌ ಅಡುಗೆ ಕಾರ್ಯಕ್ರಮದ ಆಡಿಷನ್ ಒಂದು ಇಂತಹ ವಿಲಕ್ಷಣ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಸದ್ಯ ಅದರಿಂದ ಪಡೆದ ವಿಡಿಯೋ ಕ್ಲಿಪ್ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿದೆ. ಇದರಲ್ಲಿ ಬಾಣಸಿಗರಾದ ಸಮಿಯಾ ಜಮಿಲ್, ರಬಿಯಾ ಅನುಮ್ ಮತ್ತು ಅಮ್ಮಾರ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ.

ಈ ಆಡಿಷನ್ ವೈರಲ್ ವಿಡಿಯೋ ಕ್ಲಿಪ್‌ನಲ್ಲಿ ಮಹಿಳೆಯೊಬ್ಬರು ತೀರ್ಪುಗಾರರಿಗೆ ಬಿರಿಯಾನಿ ನೀಡುತ್ತಿರುವುದನ್ನು ನೋಡಬಹುದು. ಆ ತೀರ್ಪುಗಾರರು ಒಮ್ಮೆ ಬೆರಗಾಗಿ ಖಾದ್ಯವನ್ನು ಸಾದಾ ಸ್ಟೈರೋಫೊಮ್ ಕಂಟೇನರ್‌ನಲ್ಲಿ ಏಕೆ ತಂದಿದ್ದೀರಿ, ನೀವು ತಯಾರಿಸಿದ ಅಡುಗೆಯನ್ನು ನಮಗೆ ನೀಡಬೇಕು ಅನ್ನುತ್ತಾರೆ. ಇದಕ್ಕೆ ಆ ಸ್ಪರ್ಧಿ ‘ತಾನು ನೇರವಾಗಿ ರೆಸ್ಟೋರೆಂಟ್‌ನಿಂದ ಬಿರಿಯಾನಿಯನ್ನು ತಂದಿದ್ದೇನೆ, ಇದು ತನ್ನ ಪ್ರದೇಶದಲ್ಲಿ ಸಿಗುವ ಅತ್ಯುತ್ತಮ ಬಿರಿಯಾನಿ ಎಂದು ಆಕೆ ಹೇಳುತ್ತಾಳೆ

ಇದಕ್ಕೆ ತೀರ್ಪುಗಾರರು ಕಸಿವಿಸಿಗೊಂಡು, ನೀವು ಪ್ರಸ್ತುತಪಡಿಸಬೇಕಾದ ಭಕ್ಷ್ಯವನ್ನು ಸ್ವತಃ ಇಲ್ಲೇ ತಯಾರಿಸ ಬೇಕು ಎನ್ನುತ್ತಾರೆ. ಅದಕ್ಕೆ ಆ ಸ್ಪರ್ಧಿ, ಪ್ರಸ್ತುತಪಡಿಸಬೇಕಾದ ಖಾದ್ಯವನ್ನು ಇಲ್ಲೇ ತಯಾರಿಸಬೇಕೆಂದು ತನಗೆ ಯಾರೂ ಹೇಳಲಾಗಿಲ್ಲ ಎಂದು ಒತ್ತಾಯಿಸುತ್ತಾಳೆ. ನಂತರ ಅವಳನ್ನು ಕಾರ್ಯಕ್ರಮದಿಂದ ಹೊರಡಲು ಹೇಳಲಾಗುತ್ತದೆ. ಆದರೆ ಅದನ್ನು ವಿರೋಧಿಸುವ ಸ್ಪರ್ಧಿಯು, ತೀರ್ಪುಗಾರರು ತಾನು ಕಷ್ಟಪಟ್ಟು ತಂದ ಆಹಾರವನ್ನು ರುಚಿ ನೋಡಬೇಕೆಂದು ವಿನಂತಿಸುತ್ತಾಳೆ.

ಪತ್ರಕರ್ತ ಅಂಬರ್ ಜೈದಿ (@Amberological) ಎಂಬುವವರು ಸೋಮವಾರ ಟ್ವಿಟರ್‌ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವೀಡಿಯೊವನ್ನು ಪೋಸ್ಟ್ ಮಾಡಿದಾಗಿನಿಂದ, ಈ ಅಡುಗೆ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸುವ ಅಡಿಗೆಯನ್ನು ತಯಾರಿಸುವ ಹಂತವನ್ನು ಸಂಪೂರ್ಣವಾಗಿ ವಿವರಿಸಬೇಕು. ಅದು ಇಲ್ಲಿ ನಡೆದಿಲ್ಲ, ಅದನ್ನು ತಪ್ಪಿಸಲಾಗಿದೆ ಎಂದು ನೆಟ್ಟಿಗರು ಭಿನ್ನಾಭಿಪ್ರಾಯ ಹೊಂದಿದ್ದಾರೆ.

ಅಲ್ಲದೆ ಈ ಸಂವಹನವು TRP ಲಾಭಕ್ಕಾಗಿ ತಯಾರಿಸಿದ ಸ್ಕ್ರಿಪ್ಟ್ ಆಗಿರಬಹುದು ಎಂದು ಹಲವರು ಹೇಳುತ್ತಿದ್ದಾರೆ.
ಅದರ ಬಗ್ಗೆ ಪ್ರತಿಕ್ರಿಯಿಸಿದ ಟ್ವಿಟರ್ ಬಳಕೆದಾರರು, ‘ಇದು ಉಲ್ಲಾಸಕರ. ಅಂಬರ್, ಸೋಮವಾರ ಮಧ್ಯಾಹ್ನ ನನ್ನನ್ನು ತುಂಬಾ ನಗಿಸಿದ್ದಕ್ಕಾಗಿ ಧನ್ಯವಾದಗಳು’ ಎಂದು ಹೇಳಿದ್ದರೆ ಇನ್ನೊಬ್ಬ ವ್ಯಕ್ತಿ ಇದು ‘ಯೋಜಿತ ತಮಾಷೆಯಂತೆ ತೋರುತ್ತಿದೆ’ ಎಂದಿದ್ದಾರೆ.

Leave A Reply

Your email address will not be published.