ಎಲೆಕ್ಟ್ರಿಕ್‌ ಕಾರು ಹೊಂದಿರುವ ಸೆಲೆಬ್ರಿಟಿಗಳು ಇವರು! ಕ್ರಿಕೆಟ್‌ನಿಂದ ಸಿನಿಮಾವರೆಗೆ, ಫೆವರೇಟ್‌ ಎಲೆಕ್ಟ್ರಿಕ್‌ ಕಾರು ಯಾವುದು?

Electric car : ಹಿಂದಿನಂತೆ ನಡೆದುಕೊಂಡು ಮೈಲುಗಟ್ಟಲೆ ಓಡಾಡುವ ತಾಪತ್ರಯ ಈಗಿಲ್ಲ. ವಾಹನಗಳ ಮೂಲಕ ನಮಗೆ ಬೇಕಾದಲ್ಲಿಗೆ ಓಡಾಟ ನಡೆಸಬಹುದು ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಇಂದು ನಮ್ಮ ಪರಿಸ್ಥಿತಿ ಹೇಗಾಗಿದೆ ಅಂದರೆ ಮನೆಯಿಂದ ಹೊರಗೆ ಕಾಲಿಟ್ಟ ಕೂಡಲೇ ಕಾರು ಬೈಕ್ ಎಂದು ವಾಹನ ಹತ್ತಿದರೆ ಆಫೀಸ್, ಕೆಲಸ ಎಂದು ವಾಹನಗಳಲ್ಲಿ ಸವಾರಿ ನಡೆಸಿ ನಾಲ್ಕು ಹೆಜ್ಜೆ ಇಡಲು ಕೂಡ ನಮ್ಮಲ್ಲಿಗ ಸಮಯವಿಲ್ಲ. ದಿನಂಪ್ರತಿ ಪ್ರತಿ ವಸ್ತುಗಳ ಬೆಲೆ ಏರಿಕೆ ಬಿಸಿ ತಟ್ಟುತ್ತಿರುವ ಜೊತೆಗೆ ಪ್ರೆಟ್ರೋಲ್, ಡೀಸೆಲ್ ಬೆಲೆಗಳು ಕೂಡ ಇದಕ್ಕೆ ಹೊರತಾಗಿಲ್ಲ. ಹೀಗಾಗಿ, ಹೆಚ್ಚಿನ ಮಂದಿ ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ.

ದಿನಂಪ್ರತಿ ಒಂದಲ್ಲ ಒಂದು ಹೊಸ ಮಾದರಿಯ ನವೀನ ವೈಶಿಷ್ಟ್ಯದ ವಾಹನಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ಈ ನಡುವೆ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ (Electric car) ಏನು ಡಿಮ್ಯಾಂಡ್ ಅಂತೀರಾ? ಇತ್ತೀಚೆಗೆ ಭಾರತದ ಸೆಲಬ್ರಿಟೆಗಳು ಕೂಡ ಎಲೆಕ್ಟ್ರಿಕ್ ಕಾರುಗಳತ್ತ ಮುಖ ಮಾಡುತ್ತಿದ್ದಾರೆ. ಸ್ಟಾರ್ ಗಳು ಸೆಲೆಬ್ರಿಟಿಗಳು ಕೂಡ ಡಿಮ್ಯಾಂಡ್ ಮಾಡಿದ ಮೇಲೆ ವಾಹನ ತಯಾರಿಕಾ ಕಂಪನಿಗಳು ಸುಮ್ಮನಿರಲು ಸಾಧ್ಯವೇ ಇಲ್ಲ!! ಬೇಡಿಕೆ ಹೆಚ್ಚುತ್ತಾ ಹೋದಂತೆ ಕಾರು ತಯಾರಿಕಾ ಕಂಪೆನಿಗಳು ಕೂಡ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿವೆ. ಹಾಗಿದ್ರೆ, ಯಾವೆಲ್ಲ ಸೆಲೆಬ್ರಿಟಿಗಳ (Celebrity)ಬಳಿ ಎಲೆಕ್ಟ್ರಿಕ್ ಕಾರುಗಳಿವೆ? ಅನ್ನೋದು ಗೊತ್ತಾ?

ಮಹೇಂದ್ರ ಸಿಂಗ್ ಧೋನಿ: ಕ್ರಿಕೆಟ್ ಎಂಬ ಮಾಂತ್ರಿಕ ಲೋಕದ ಕ್ಯಾಪ್ಟನ್ ಕೂಲ್ ಎಂದೇ ಖ್ಯಾತಿ ಪಡೆದ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅತ್ಯಾಧುನಿಕ ವಾಹನಗಳೊಂದಿಗೆ ವಿಂಟೇಜ್ ಕ್ಲಾಸಿಕ್ ವಾಹನಗಳನ್ನು ಹೊಂದಿದ್ದಾರೆ. ಧೋನಿ ಇತ್ತೀಚೆಗೆ Kia EV6 ಎಲೆಕ್ಟ್ರಿಕ್ ಕಾರ್ ಅನ್ನು ಖರೀದಿ ಮಾಡಿದ್ದು, ಈ Kia EV6 ಎಲೆಕ್ಟ್ರಿಕ್ ಕಾರು ಎರಡು ವಿಭಿನ್ನ ರೂಪಾಂತರಗಳನ್ನು ಒಳಗೊಂಡಿದ್ದು, ಈ ಕಿಯಾ ಎಲೆಕ್ಟ್ರಿಕ್ ಕಾರು ರೂ.59.95 ಆರಂಭಿಕ ಬೆಲೆಯು ಎಕ್ಸ್ ಶೋರೂಂ. ಲಕ್ಷವಾಗಿದೆ. ಫೆರಾರಿ 599 GTO,ಆಡಿ Q7,(Audi Q7)ಲ್ಯಾಂಡ್ ರೋವರ್ ಫ್ರೀಲ್ಯಾಂಡರ್ 2(Land Rover Freelander 2),ನಿಂಜಾ ZX-14R ಈ ಎಲ್ಲ ವಾಹನಗಳನ್ನು ಧೋನಿ ಹೊಂದಿದ್ದಾರೆ.

ಪೂಜಾ ಬಾತ್ರಾ: ಬಾಲಿವುಡ್ನ ಜನಪ್ರಿಯ ಸೆಲಬ್ರೆಟಿಯಾಗಿರುವ ಪೂಜಾ ಬಾತ್ರಾ ಅವರು ಟೆಸ್ಲಾ ಮಾಡೆಲ್ 3 ಎಲೆಕ್ಟ್ರಿಕ್ ಕಾರ್ ಅನ್ನು ಹೊಂದಿದ್ದಾರೆ. ಇದು ಪ್ರಸ್ತುತ ಟೆಸ್ಲಾ ಜಾಗತಿಕ ಶ್ರೇಣಿಯಲ್ಲಿ ಕೈಗೆ ಎಟಕುವ ದರದಲ್ಲಿ ಲಭ್ಯವಾಗುವ ಮಾದರಿಯಾಗಿದೆ. ಯುಎಸ್ನಲ್ಲಿ ಬ್ಲ್ಯಾಕ್ ಬಣ್ಣದ ಮಾಡೆಲ್ 3 ಅನ್ನು ಹೊಂದಿದ್ದಾರೆ.

ವಿರಾಟ್ ಕೊಹ್ಲಿ: ಭಾರತದ ಕ್ರಿಕೆಟ್ ಆಟಗಾರ ಕಿಂಗ್ ಕೊಹ್ಲಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಸದ್ಯಕ್ಕೆ ವಿಶ್ವ ಕ್ರಿಕೆಟ್ ರಂಗದಲ್ಲಿ ಕೊಹ್ಲಿಯಷ್ಟು ಜನಪ್ರಿಯತೆ ಹೊಂದಿರುವ ಆಟಗಾರ ಬೇರೆ ಯಾರೂ ಇಲ್ಲವೆಂದರೆ ತಪ್ಪಾಗದು. ಕ್ರಿಕೆಟ್ನಷ್ಟೇ ಕೊಹ್ಲಿ ಇಷ್ಟಪಡುವ ಇನ್ನೊಂದು ವಿಷಯವೆಂದರೆ ಅದು ಕಾರುಗಳಂತೆ. ವಿರಾಟ್ ಕೊಹ್ಲಿ ಬಳಿ ಇರುವ ಕಾರು ಕಲೆಕ್ಷನ್ಗಳಲ್ಲಿಯೇ ಅತ್ಯಂತ ವೇಗದ ಕಾರು ಎಂದರೆ ಆಡಿ ಆರ್ 8 ಎಲ್ಎಂಎಕ್ಸ್ ( Audi R8 LMX )ಸೂಪರ್ ಕಾರ್ ನ ಬೆಲೆ ಬರೋಬ್ಬರಿ 2.97 ಕೋಟಿ ರೂಪಾಯಿಗಳು. ಆಡಿ ಇಂಡಿಯಾದ ಮೂಲ ಕಂಪನಿಯಾಗಿರುವ ಸ್ಕೋಡಾ ಆಡಿ ಫೋಕ್ಸ್ವ್ಯಾಗನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ಎರಡು ಕಾರುಗಳನ್ನು ನೋಂದಾವಣಿ ಮಾಡಲಾಗಿದೆ. ಇ-ಟ್ರಾನ್ ಎಸ್ಯುವಿ ಶ್ರೇಣಿಯ ಅಗ್ರಸ್ಥಾನದಲ್ಲಿರುವ ಇ-ಟ್ರಾನ್ 55 ರೂಪಾಂತರವಾಗಿದೆ. ಇ-ಟ್ರಾನ್ ಜಿಟಿ ಸರಣಿಯ ಇ-ಟ್ರಾನ್ ಜಿಟಿ RS ರೂಪಾಂತರವಾಗಿದೆ. . ಕೊಹ್ಲಿ ಆಡಿ ಇ-ಟ್ರಾನ್ ಮತ್ತು ಇ-ಟ್ರಾನ್ ಜಿಟಿ ಎಂಬ ಎಲೆಕ್ಟ್ರಿಕ್ ಕಾರುಗಳನ್ನು ನೆಚ್ಚಿಕೊಂಡಿದ್ದಾರೆ. Audi Q7,ಆಡಿ S6,(Range Rover Vogue)ರೇಂಜ್ ರೋವರ್ ವೋಗ್, ರಾಟ್ ಕೊಹ್ಲಿ ಗ್ಯಾರೇಜ್ನಲ್ಲಿ ಕೇವಲ ಆಡಿ, ರೇಂಜ್ ರೋವರ್ ಮಾತ್ರವಲ್ಲದೇ ಫಾರ್ಚ್ಯೂನರ್ (Toyota Fortuner)ಸಹ ಇದೆ.

ರಿತೇಶ್ ಮತ್ತು ಜೆನಿಲಿಯಾ ದೇಶಮುಖ್: ಅಮೆರಿಕದಲ್ಲಿ ಈ ಮೊದಲೇ ಟೆಸ್ಲಾವನ್ನು ಹೊಂದಿದ್ದ ನಟ ರಿತೇಶ್ ದೇಶಮುಖ್ ದಂಪತಿಗಳು ಭಾರತದಲ್ಲಿ ಇತ್ತೀಚೆಗೆ ತಮ್ಮ ಮೊದಲ ಎಲೆಕ್ಟ್ರಿಕ್ ಕಾರ್ ಖರೀದಿ ಮಾಡಿದ್ದಾರೆ. ನಟ ರಿತೇಶ್ ದೇಶಮುಖ್ BMW iX xDrive 40 ಕಾರಿನಲ್ಲಿ ಆಗಾಗ ಎಲ್ಲರ ಗಮನ ಸೆಳೆದಿದ್ದಾರೆ. ಈ BMW ಎಲೆಕ್ಟ್ರಿಕ್ ಕಾರು 200 ಕಿ.ಮೀ ಟಾಪ್ ಸ್ಪೀಡ್ ಅನ್ನು ಒಳಗೊಂಡಿದೆ.

ಮಹೇಶ್ ಬಾಬು: ಐಷಾರಾಮಿ ಆಡಿ ಇ-ಟ್ರಾನ್ ಕಾರ್ ಅನ್ನು ಮಹೇಶ್ ಬಾಬು ಖರೀದಿ ಮಾಡಿದ್ದು, ಆಡಿ ಇಂಡಿಯಾದ ಮುಖ್ಯಸ್ಥ ಬಲ್ಬೀರ್ ಸಿಂಗ್ ಧಿಲ್ಲೋನ್ ಫೇಮಸ್ ನಟ ಮಹೇಶ್ ಬಾಬು ಅವರಿಗೆ ಐಷಾರಾಮಿ ಆಡಿ ಇ-ಟ್ರಾನ್ ಕಾರ್ ವಿತರಿಸಿದ್ದಾರೆ. ನಟ ಮಹೇಶ್ ಬಾಬು ಅವರು ಆಡಿ ಇ-ಟ್ರಾನ್ ಎಲೆಕ್ಟ್ರಿಕ್ ಕಾರಿನ ಟಾಪ್ ವೆರಿಯೆಂಟ್ ಇ-ಟ್ರಾನ್ 55 ಅನ್ನು ಹೊಂದಿದ್ದು, ಈ ಎರಡು ಎಲೆಕ್ಟ್ರಿಕ್ ಮೋಟಾರ್ಗಳ ಸಂಯೋಜನೆಯೊಂದಿಗೆ ಆಲ್-ವೀಲ್-ಡ್ರೈವ್ ಸಿಸ್ಟಂ ಅನ್ನು ಒಳಗೊಂಡಿದೆ.ಮರ್ಸಿಡಿಸ್ ಜಿಎಲ್ಎಸ್ 350 ಡಿ(Mercedes GLS 350d),1.3 ಕೋಟಿ ಮೌಲ್ಯದ ಬಿಎಂಡಬ್ಲ್ಯು 730 ಎಲ್ಡಿ, 1.5 ಕೋಟಿ ಬೆಲೆಯ ಟೊಯೋಟಾ ಲ್ಯಾಂಡ್ ಕ್ರೂಸರ್ ವಿ8,ರೇಂಜ್ ರೋವರ್ ವೋಗ್,(Range Rover Vogue)BMW 730Ld , 50 ಲಕ್ಷದ ಮರ್ಸಿಡಿಸ್ ಇ 280, 1.09 ಕೊಟಿಯ ಮರ್ಸಿಡಿಸ್ ಜಿಎಲ್ಎಸ್ 450( Mercedes GL Class 450)ಕೋಟಿ ಮೌಲ್ಯದ ವ್ಯಾನಿಟಿ ವ್ಯಾನ್ ಸಹ ಇದೆ.

ಮಧುರ್ ದೀಕ್ಷಿತ್ ಮತ್ತು ಡಾ ಶ್ರೀರಾಮ್ ನೆನೆ: ಮಾಧುರಿ ದೀಕ್ಷಿತ್ ಮತ್ತು ಅವರ ಪತಿ ಡಾ ಶ್ರೀರಾಮ್ ನೆನೆ ಅವರು ಕಾರುಗಳ ಕುರಿತು ವಿಶೇಷ ಕ್ರೇಜ್ ಹೊಂದಿದ್ದು, ಈ ಹೊಸ ಕಾರ್ ನೆಕ್ಸಾನ್ EV ಡಾರ್ಕ್ ಎಡಿಷನ್ ಹೊಂದಿದ್ದಾರೆ.

ಮಂಜು ವಾರಿಯರ್: ಮಿನಿ ಕೂಪರ್ ಎಲೆಕ್ಟ್ರಿಕ್ ಕಾರ್ ಮಿನಿ ಕಂಪನಿಯ ಮೊದಲ ಆಲ್-ಎಲೆಕ್ಟ್ರಿಕ್ ಕಾರ್ (electric car) ಆಗಿದ್ದು, ಮಲಯಂ ಚಲನಚಿತ್ರ ನಟಿ ಮಂಜು ವಾರಿಯರ್ ಇದೀಗ ಟ್ರೆಂಡ್ ಮಾಡುತ್ತಿರುವ ಮಿನಿ ಕೂಪರ್ SE ಎಲೆಕ್ಟ್ರಿಕ್ ಹ್ಯಾಚ್ಬ್ಯಾಕ್ ಅನ್ನು ಖರೀದಿ ಮಾಡಿದ್ದಾರೆ. ಈ ಎಲೆಕ್ಟ್ರಿಕ್ ಕಾರಿನ ಬೆಲೆಯು ಸುಮಾರು 50 ಲಕ್ಷ ರೂ. ಎನ್ನಲಾಗಿದ್ದು, ಈ ಐಷಾರಾಮಿ ಎಲೆಕ್ಟ್ರಿಕ್ ಕಾರಿಗೆ ಕಸ್ಟಮ್ ಪೇಂಟ್ ಕೂಡ ಮಾಡಿಸಿದ್ದಾರೆ.ಮಂಜು ವಾರಿಯರ್ ಕೊಚ್ಚಿಯಲ್ಲಿ BMW GS1250 ಕೂಡ ಖರೀದಿಸಿದ್ದಾರೆ.

ಇದನ್ನೂ ಓದಿ ಎಲೆಕ್ಟ್ರಿಕ್‌ ಕಾರು ಹೊಂದಿರುವ ಸೆಲೆಬ್ರಿಟಿಗಳು ಇವರು!

Leave A Reply

Your email address will not be published.