Hair Waxing : ಅನಗತ್ಯ ರೋಮಗಳನ್ನು ತೊಡೆದು ಹಾಕಲು ಇಲ್ಲಿದೆ ಹಲವು ವಿಧಾನ!

Hair Waxing : ಮುಖದ ಅಂದ ಹೆಚ್ಚಿಸಲು ಮತ್ತು ಕಾಪಾಡಲು ಕೂದಲು ತೆಗೆಯುವುದು ಸಹಜ ಸಂಗತಿಯಾಗಿದೆ. ಸ್ವಚ್ಛ (Clean) ಮತ್ತು ಸುಂದರ ನೋಟ ಪಡೆಯಲು ಮಹಿಳೆಯರು ತಮ್ಮ ಮುಖದಿಂದ ಅನಗತ್ಯ ಕೂದಲು ತೆಗೆದು ಹಾಕುತ್ತಾರೆ. ಸಾಮಾನ್ಯವಾಗಿ ಹುಬ್ಬು, ಕೆನ್ನೆ, ತುಟಿಯ ಮೇಲ್ಭಾಗ, ಗಡ್ಡ , ಹಣೆ ಭಾಗಗಳು ಬಳಿ ಹೆಚ್ಚು ಕೂದಲು ಬೆಳೆಯುತ್ತದೆ.

ಒಟ್ಟಿನಲ್ಲಿ ಮುಖದ ಮೇಲೆ ಮೂಡುವ ಕೂದಲು ಆಗಿರಬಹುದು , ಕಾಲು, ಕೈ, ಬಿಕನಿ ಲೈನ್ ಅಥವಾ ದೇಹದ ಬೇರೆ ಯಾವುದೇ ಭಾಗದಲ್ಲಿ ಮೂಡುವ ಕೂದಲಾಗಿರಬಹುದು ಕೆಲವರಿಗೆ ಕಿರಿಕಿರಿ ಎನಿಸುತ್ತವೆ. ಅಂತಹ ಕೂದಲನ್ನು ನಿವಾರಿಸಲು ಮಹಿಳೆಯರು ಹಾಗೂ ಇತ್ತೀಚೆಗೆ ಪುರುಷರು ಸಹ ನಿವಾರಣೆ ಮಾಡಿಕೊಳ್ಳಲು ಯತ್ನಿಸುತ್ತಾರೆ.

ಸದ್ಯ ಬೇಡದ ರೋಮಗಳ ನಿವಾರಣೆಗೆ (Hair Waxing) ಹಲವು ವಿಧಾನಗಳನ್ನು ಅನುಸರಿಸಲಾಗುತ್ತದೆ. ಆದರೆ, ಕೆಲವೇ ವಿಧಾನಗಳು ಶಾಶ್ವತವಾಗಿ ರೋಮಗಳನ್ನು ನಿವಾರಿಸಬಲ್ಲವು. ಅತಿ ಕಡಿಮೆ ವೆಚ್ಚದ ಶೇವಿಂಗ್ ನಿಂದ ಹಿಡಿದು ದುಬಾರಿ ಎನಿಸುವ ಲೇಸರ್ ಹೇರ್ ರಿಮೂವಲ್ ವಿಧಾನದವರೆಗೆ ಹಲವು ವಿಧಾನಗಳು ಇವೆ.

• ಬ್ಲೀಚಿಂಗ್ (Bleaching) ಇದು ರೋಮವನ್ನು ನಿವಾರಣೆ ಮಾಡುವುದಿಲ್ಲ. ಆದರೆ, ರೋಮ ಚರ್ಮದ ಬಣ್ಣಕ್ಕೆ ತಿರುಗಿ ಹೆಚ್ಚು ಗೋಚರಿಸದಂತೆ ಮಾಡುತ್ತದೆ. ವಿರಳವಾಗಿ ರೋಮಗಳಿರುವ ಕಡೆ ಇದು ಸೂಕ್ತ. ಆದರೆ, ತ್ವಚೆಗೆ ಹೊಂದಾಣಿಕೆ ಆಗುತ್ತದೆಯಾ ಎಂದು ನೋಡಿಕೊಳ್ಳಬೇಕು.

• ಲೇಸರ್ ಹೇರ್ ರಿಮೂವಲ್ (Laser Hair Removal) ಲೇಸರ್ ತಂತ್ರಜ್ಞಾನದ ಮೂಲಕ ರೋಮಗಳನ್ನು ನಿವಾರಣೆ ಮಾಡಿಕೊಳ್ಳುವುದು ಸಾಮಾನ್ಯ. ಇಲ್ಲಿ ಕೂದಲುಗಳು ನಾಶವಾಗುತ್ತವೆ, ಆದರೆ ಹುಟ್ಟುತ್ತಿರುತ್ತವೆ. ಪದೇ ಪದೆ ಚಿಕಿತ್ಸೆ (Treatment) ಪಡೆದುಕೊಂಡಾಗ ಕ್ರಮೇಣ ರೋಮಗಳ ಬೆಳವಣಿಗೆ ಕಡಿಮೆಯಾಗುತ್ತದೆ.

• ವನಿಕಾ (Vaniqa)ಎಪ್ ಡಿಎ ಅನುಮೋದನೆ ನೀಡಿರುವ ಈ ವಿಧಾನದಲ್ಲಿ, ಕ್ರೀಮನ್ನು (Cream) ಮುಖಕ್ಕೆ ಮಾತ್ರ ಬಳಕೆ ಮಾಡಲಾಗುತ್ತದೆ. ಇದು ಎಂಜೈಮುಗಳ ಮೇಲೆ ಪರಿಣಾಮ ಬೀರುತ್ತದೆ. ದಿನಕ್ಕೆ 2 ಬಾರಿಯಂತೆ 8 ವಾರಗಳ ಕಾಲ ಬಳಕೆ ಮಾಡಿದಾಗ ರೋಮಗಳ ಬೆಳವಣಿಗೆ ಕುಂಠಿತವಾಗುತ್ತದೆ. ಆದಾಗ್ಯೂ ಇದು ಲೇಸರ್ ವಿಧಾನದೊಂದಿಗೆ ಬಳಕೆಯಾದರೆ ಹೆಚ್ಚು ಪರಿಣಾಮಕಾರಿ (Effective) ಎನ್ನಲಾಗಿದೆ.

• ಶೇವಿಂಗ್ (Shaving) ಇದು ಅತ್ಯಂತ ತಾತ್ಕಾಲಿಕ ವಿಧಾನ. ಶೇವಿಂಗ್ ರೋಮವನ್ನು (Hair) ಚರ್ಮದ (Skin) ಬುಡದಿಂದ ಕಿತ್ತೊಗೆಯುವುದಿಲ್ಲ, ಬರೀ ಕತ್ತರಿಸುತ್ತದೆ. ಆದರೆ, ದಟ್ಟವಾಗಿ ಬೆಳೆಯುವಂತೆ ಮಾಡುತ್ತದೆ. ಒಂದೊಮ್ಮೆ ಮುಖದ ಶೇವಿಂಗ್ ಮಾಡುವುದು ನಿಮ್ಮ ಆಯ್ಕೆಯಾದರೆ, ಮೊದಲು ಮುಖವನ್ನು ಮಾಯಿಶ್ಚರೈಸ್ ನಿಂದ ತೇವಗೊಳಿಸಿಕೊಳ್ಳಬೇಕು.

• ಕೀಳುವುದು (Physical Method)
ಹೀಗೆ ಮಾಡುವುದರಿಂದ ಕೂದಲು ಇನ್ನಷ್ಟು ಉದ್ದಕ್ಕೆ ಬೆಳೆಯಬಲ್ಲದು. ಅಲ್ಲದೆ, ಹೇರ್ ಫಾಲಿಕಲ್ (Follicle) ಗಳಿಗೆ ಹಾನಿಯುಂಟಾಗಬಹುದು. ದೇಹದ ಯಾವುದಾದರೂ ಭಾಗದ ರೋಮಗಳನ್ನು ಪದೇ ಪದೆ ಎಳೆದು ಕೀಳುವ ಗೀಳು ನಿಮಗಿದ್ದರೆ ಅದೊಂದು ರೀತಿಯ ಸಮಸ್ಯೆಯೂ ಹೌದು.

• ಟ್ವೀಸರ್ (Tweezers) ಮೂಲಕ ಪ್ಲಕ್ ಮಾಡಿ ಬೇಡದ ಕೂದಲನ್ನು ತೆಗೆಯುವ ವಿಧಾನ ಉತ್ತಮ . ಆದರೆ, ಇದಕ್ಕೆ ತುಂಬ ಸಮಯ ಬೇಕು. ಹುಬ್ಬು, ಮುಖ, ಮೂಗಿನ ಭಾಗದ ರೋಮಗಳನ್ನು ಟ್ವೀಸರ್ ಮೂಲಕ ಸುಲಭವಾಗಿ ತೆಗೆಯಬಹುದು.

• ವ್ಯಾಕ್ಸಿಂಗ್ (Waxing) ಒಂದೇ ಬಾರಿ ಹೆಚ್ಚು ರೋಮಗಳನ್ನು ತೆಗೆಯುವುದಕ್ಕೆ ವ್ಯಾಕ್ಸಿಂಗ್ ಉತ್ತಮ. ಆದರೆ, ತ್ವಚೆಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು. ಕೆಲವರಿಗೆ ವ್ಯಾಕ್ಸಿಂಗ್ ಮಾಡಿದರೆ ಕೆಂಪು ಗುಳ್ಳೆಗಳೇಳುತ್ತವೆ. ಇನ್ನು, ಶುಗರ್ (Sugar) ವ್ಯಾಕ್ಸಿಂಗ್ ಕೂಡ ಜನಪ್ರಿಯ ವಿಧಾನವಾಗಿದೆ. ಸಕ್ಕರೆಯ ಪಾಕವನ್ನು ಸಿದ್ಧಪಡಿಸಿ ವ್ಯಾಕ್ಸ್ ನಂತೆ ಮಾಡಿಕೊಂಡು ಕೂದಲನ್ನು ತೆಗೆಯಲಾಗುತ್ತದೆ.

• ಡೆಪಿಲೇಟರಿ (Depilatory)ಇದು ಥಿಯೋಗ್ಲೈಕೋಲೇಟ್ ಎನ್ನುವ ಕೆಮಿಕಲ್ (Chemical) ಅನ್ನು ಒಳಗೊಂಡಿರುತ್ತದೆ. ಸೋಡಿಯಂ ಹೈಡ್ರಾಕ್ಸೈಡ್ ಅಥವಾ ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಅಂಶವಿರುವ ಡೆಪಿಲೇಟರಿ ಕ್ರೀಮ್ ರೋಮಗಳನ್ನು ಅಕ್ಷರಶಃ ಕರಗಿಸುತ್ತದೆ.

• ಥ್ರೆಡಿಂಗ್ (Threading)
ಸಾಮಾನ್ಯವಾಗಿ ಹುಬ್ಬುಗಳನ್ನು (Eyebrow) ಶೇಪ್ ಮಾಡಲು ಈ ವಿಧಾನ ಬಳಕೆಯಲ್ಲಿದೆ. ಅನೇಕ ರೋಮಗಳು ಒಟ್ಟಿಗೆ ನಿವಾರಣೆಯಾಗುವುದು ಇದರ ಲಾಭ.

• ಎಲೆಕ್ಟ್ರೊಲಿಸಿಸ್ (Electrolysis)
ಈ ವಿಧಾನದ ಮೂಲಕ ಹೇರ್ ಫಾಲಿಕಲ್ ನ ಬೇರುಗಳ (Root) ಮೇಲೆ ವಿದ್ಯುತ್ ಹರಿಸಲಾಗುತ್ತದೆ. ಇದು ರೋಮಗಳ ಬುಡವನ್ನು ಸುಟ್ಟುಹಾಕುತ್ತದೆ. ಬಳಿಕ ಹೆಚ್ಚಿನ ರೋಮ ಹುಟ್ಟುವುದಿಲ್ಲ. ಪ್ರತಿಯೊಂದು ಹೇರ್ ಫಾಲಿಕಲ್ ಅನ್ನೂ ಪ್ರತ್ಯೇಕವಾಗಿ ಟ್ರೀಟ್ ಮಾಡಬೇಕು.

• ಇದಲ್ಲದೆ ಮನೆಯಲ್ಲಿ ಸುಲಭವಾಗಿ ವ್ಯಾಕ್ಸಿಂಗ್ಮಾಡಿಕೊಳ್ಳಬಹುದು. ಒಂದು ಪಾತ್ರೆಯಲ್ಲಿ ಸಕ್ಕರೆ ಮತ್ತು ನೀರನ್ನು ಹಾಕಿ ಮತ್ತು ಕಡಿಮೆ ಉರಿಯಲ್ಲಿ ಇರಿಸಿ. ಸಕ್ಕರೆ ಕರಗಿದ ನಂತರ, ನಿಂಬೆ ರಸ ಮತ್ತು ಜೇನುತುಪ್ಪವನ್ನು ಸೇರಿಸಿ. ಮಿಶ್ರಣವನ್ನು ಸುಡದಂತೆ ನೋಡಿಕೊಳ್ಳಿ. ಮಿಶ್ರಣವು ಸ್ವಲ್ಪ ದಪ್ಪವಾಗಲು ಪ್ರಾರಂಭಿಸಿದಾಗ ಗ್ಯಾಸ್ ಆಫ್ ಮಾಡಿ. ಈಗ ನಿಮ್ಮಸಾಫ್ಟ್ ವ್ಯಾಕ್ಸ್ ಸಿದ್ಧವಾಗಿದೆ. ಮೇಣವು ತುಂಬಾ ದಪ್ಪವಾಗಿದ್ದರೆ, ನೀವು ಸ್ವಲ್ಪ ನೀರನ್ನು ಕೂಡ ಸೇರಿಸಬಹುದು. ನಂತರ ಕೈಗಳು, ಕಾಲುಗಳು ಅಥವಾ ಸೊಂಟದ ಮೇಲಿನ ಅನಗತ್ಯ ಕೂದಲನ್ನು ತೆಗೆದುಹಾಕಲು, ಮೊದಲು ಚರ್ಮವನ್ನು ಸ್ವಚ್ಛಗೊಳಿಸಿ. ಇದರ ನಂತರ, ಸಾಫ್ಟ್ ವ್ಯಾಕ್ಸ್ ಅನುಕೂಲಕರ ಮಟ್ಟಕ್ಕೆ ಬಿಸಿ ಮಾಡಿ. ಈಗ ಸಾಫ್ಟ್ ವ್ಯಾಕ್ಸ್ ಹಚ್ಚಿ, ವ್ಯಾಕ್ಸಿಂಗ್ ಸ್ಟ್ರಿಪ್ ಅನ್ನು ಇರಿಸಿ ಮತ್ತು ಸ್ವಲ್ಪ ಒತ್ತಡದಿಂದ ಉಜ್ಜಿಕೊಳ್ಳಿ. ಈಗ ಒಂದು ಬದಿಯಿಂದ ಚರ್ಮವನ್ನು ಹಿಡಿದುಕೊಂಡು, ಕೂದಲಿನ ವಿರುದ್ಧ ದಿಕ್ಕಿನಲ್ಲಿ ವ್ಯಾಕ್ಸಿಂಗ್ ಸ್ಟ್ರಿಪ್ ಅನ್ನು ವೇಗವಾಗಿ ಎಳೆಯಿರಿ. ಈ ವಿಧಾನ ಕೂಡ ಅನುಸರಿಸಬಹುದು.

ಮುಖದ ಚರ್ಮವು ತುಂಬಾ ಸೂಕ್ಷ್ಮವಾಗಿರುತ್ತದೆ. ಮುಖದ ವ್ಯಾಕ್ಸಿಂಗ್ ಅನ್ನು ನೀವೇ ಮಾಡಿಕೊಳ್ಳಬೇಡಿ. ಮುಖದ ಚರ್ಮವು ಎಡವಿದರೂ ಸುಟ್ಟು ಹೋಗುವ ಸಾಧ್ಯತೆ ಇದೆ. ಆದ್ದರಿಂದ ಯಾವಾಗಲೂ ಹೆಚ್ಚು ಜಾಗ್ರತೆ ವಹಿಸಿ.

ಮುಖ್ಯವಾಗಿ ನಮ್ಮ ದೇಹದ ಪ್ರತಿಯೊಂದೂ ರೋಮವೂ ಪಿಲೊಸೆಬಾಸಿಯಸ್ ಎನ್ನುವ ಘಟಕದೊಂದಿಗೆ ಲಿಂಕ್ ಹೊಂದಿರುತ್ತವೆ. ಇದು ಹೇರ್ ಫಾಲಿಕಲ್, ಮೇದಸ್ಸಿನ ಗ್ರಂಥಿ ಮತ್ತು ಪಿಲಿ ಮಾಂಸಖಂಡವನ್ನು ಒಳಗೊಂಡಿರುತ್ತದೆ. ರೋಮಗಳ ಬೆಳವಣಿಗೆ ನಿರಂತರವಾಗಿ ನಡೆಯುತ್ತಿರುತ್ತದೆ. ಮೂರು ಹಂತಗಳಲ್ಲಿ ಕೂದಲು ಬೆಳೆಯುತ್ತದೆ. ಬೇಡದ ಭಾಗದ ಮೇಲೆ ಇವುಗಳನ್ನು ನಿವಾರಣೆ ಮಾಡಿಕೊಳ್ಳುವುದು ಒಂದು ದೊಡ್ಡ ಸವಾಲು ಕೂಡ ಆಗಿದೆ. ಆದರೆ ನಿಯಮಿತವಾಗಿ ವ್ಯಾಕ್ಸಿಂಗ್ ಮಾಡಿದಾಗ ಚರ್ಮವು ಮೃದುವಾದಂತ ಅನುಭವವನ್ನು ಪಡೆಯಬಹುದು ಮತ್ತು ಕೊನೆಗೆ ಕೂದಲು ಕೂಡ ತೆಳುವಾಗಿ ಬೆಳೆಯಲು ಆರಂಭವಾಗಬಹುದು.

ಇದನ್ನೂ ಓದಿ : ಪುರುಷರೇ ಈ ರೀತಿಯಾಗಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿ, ಚಿಟಿಕೆ ಹೊಡೆಯುವುದರಲ್ಲಿ ನೀವು ಮಿಂಚಿಂಗ್‌!

 

Leave A Reply

Your email address will not be published.