

Egg shell: ಇಂದಿನ ಫ್ಯಾಷನ್ ಯುಗದಲ್ಲಿ ಪ್ರತಿಯೊಬ್ಬರು ಕೂಡ ತಮ್ಮನ್ನು ತಾವು ಚಂದ ಕಾಣಿಸಿಕೊಳ್ಳಲು ಹಲವು ಬ್ಯೂಟಿ ಟಿಪ್ಸ್ ಗಳನ್ನು ಪಾಲಿಸಿಯೇ ಪಾಲಿಸುತ್ತಾರೆ. ಅದರಲ್ಲೂ ಹುಡುಗಿಯರು ಅಂದ್ರೆ ಒಂದು ಕೈ ಮೇಲೆಯೇ ಎಂಬುದು ಎಲ್ಲರಿಗೂ ತಿಳಿದಿರೋ ವಿಷಯ. ಕೇವಲ ಮುಖದ ಸೌಂದರ್ಯ ಕಾಪಾಡಿ ಕೊಳ್ಳದೆ ಉಗುರು, ತಲೆ ಕೂದಲು ಹೀಗೆ ಆರೈಕೆ ಮಾಡುವುದರ ಮೂಲಕ ತಮ್ಮನ್ನು ತಾವು ಸುಂದರವಾಗಿಸುತ್ತಾರೆ.
ಆದ್ರೆ, ಸುಂದರವಾದ ಫೇಸ್ ಗೆ ಹಲವು ಪೌಡರ್, ಕ್ರೀಮ್ ಗಳನ್ನು ಖರೀದಿಸುತ್ತಾರೆ. ಮೊಸರು, ಅಲೋವೆರಾ, ಅರಶಿಣ ಹೀಗೆ ಹಲವು ಸೌಂದರ್ಯ ವರ್ಧಕದಿಂದ ಸೌಂದರ್ಯ ವೃದ್ಧಿಸಬಹುದು. ಆದ್ರೆ, ಮೊಟ್ಟೆಯ ಸಿಪ್ಪೆಯಿಂದ ನಿಮ್ಮ ಮುಖವನ್ನು ಸುಂದರವಾಗಿಸಬಹುದು ಎಂಬುದು ನಿಮಗೆ ತಿಳಿದಿದಿಯೇ?.
ಹೌದು. ಮೊಟ್ಟೆಯನ್ನು ಆಮ್ಲೇಟ್ ಮಾಡಿದ ಮೇಲೆ ಅದರ ಸಿಪ್ಪೆಯನ್ನು ಕಸದ ಬುಟ್ಟಿಗೆ ಎಸೆಯುವ ಮುಂಚೆ ಅದರ ಉಪಯೋಗ ತಿಳಿದುಕೊಳ್ಳಿ. ಮೊಟ್ಟೆಯ ಸಿಪ್ಪೆಯಲ್ಲಿ 750-800 ಮಿ.ಗ್ರಾಂ. ಕ್ಯಾಲ್ಸಿಯಂ ಇದೆ. ಇದು ತ್ವಚೆಯ ಸತ್ತ ಕೋಶಗಳನ್ನು ತೆಗೆದು ನಯವಾದ ಚರ್ಮ ಬರುವಂತೆ ಮಾಡುತ್ತದೆ. ಹಾಗೇ ಕಲೆ ಹಾಗೂ ಬಿಸಿಲಿನ ಸುಟ್ಟ ಕಲೆಗಳನ್ನು ತೆಗೆದು ಚರ್ಮದ ಕಾಂತಿ ವೃದ್ಧಿಸುತ್ತದೆ.
ಹಾಗಿದ್ರೆ ಇನ್ಯಾಕೆ ತಡ, ಬನ್ನಿ ಫೇಸ್ ಪ್ಯಾಕ್ ತಯಾರಿ ಹೇಗೆ ಎಂಬುದನ್ನು ತಿಳಿಯೋಣ. ಮೊದಲು 2 ಮೊಟ್ಟೆಯ ಸಿಪ್ಪೆ (Egg shell) ಯನ್ನು ಹುಡಿ ಮಾಡಿ ಮತ್ತು ಇದಕ್ಕೆ ಒಂದು ಅರ್ಧ ಪಿಂಗಾಣಿಯಷ್ಟು ಆಪಲ್ ಸೀಡರ್ ವಿನೇಗರ್ ಹಾಕಿ. ಐದು ದಿನಗಳ ಕಾಲ ಹಾಗೆ ನೆನೆಯಲು ಬಿಡಿ. ನಂತರ ಒಂದು ಹತ್ತಿ ಉಂಡೆಯನ್ನು ಇದರಲ್ಲಿ ಅದ್ದಿಕೊಳ್ಳಿ ಮತ್ತು ಅದನ್ನು ತ್ವಚೆಗೆ ಹಚ್ಚಿಕೊಳ್ಳಿ.
ಕೆಲವು ನಿಮಿಷ ಕಾಲ ಹಾಗೆ ಬಿಟ್ಟು, ಬಳಿಕ ತೊಳೆಯಿರಿ. ಹೀಗೆ ವಾರದಲ್ಲಿ 2 ಸಲ ಮಾಡುವುದರಿಂದ ನೆರಿಗೆ ಮತ್ತು ಗೆರೆ ಮೂಡುವುದನ್ನು ತಡೆಯುತ್ತದೆ. ಅಲ್ಲದೇ ಕಪ್ಪು ಕಲೆ ನಿವಾರಣೆ ಯಾಗುತ್ತದೆ. ಈ ಈಜಿ ಫೇಸ್ ಪ್ಯಾಕ್ ನೀವೂ ತಯಾರಿಸಿಕೊಂಡು ಸೌಂದರ್ಯ ಹೆಚ್ಚಿಸಿಕೊಳ್ಳಿ.













